AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಆ ರೀತಿ ಮಾಡಬಾರದಿತ್ತು’; ಹಳೆಯ ನಿರ್ಧಾರಕ್ಕೆ ಈ ಮರುಗಿದ ಸಮಂತಾ

ಸಮಂತಾ ರುತ್ ಪ್ರಭು ಅವರು ಚಿತ್ರರಂಗಕ್ಕೆ ಕಾಲಿಟ್ಟು 15 ವರ್ಷಗಳು ಪೂರ್ಣಗೊಂಡಿದ್ದು, ಅವರ ಯಶಸ್ವಿ ಹಾಗೂ ಕೆಲವು ವಿವಾದಾತ್ಮಕ ಪಾತ್ರಗಳನ್ನು ಅವರು ನೆನಪಿಸಿಕೊಂಡಿದ್ದಾರೆ. ‘ಯೇ ಮಾಯ ಚೇಸಾವೆ’ ಚಿತ್ರದಿಂದ ಆರಂಭವಾದ ಅವರ ಪ್ರಯಾಣದಲ್ಲಿ ಹಲವು ಸೂಪರ್ ಹಿಟ್ ಚಿತ್ರಗಳಿವೆ. ಅವರು ಈಗ ‘ರಕ್ತಬ್ರಹ್ಮಾಂಡ’ ಸೀರಿಸ್​ನಲ್ಲಿ ತೊಡಗಿಸಿಕೊಂಡಿದ್ದಾರೆ.

‘ಆ ರೀತಿ ಮಾಡಬಾರದಿತ್ತು’; ಹಳೆಯ ನಿರ್ಧಾರಕ್ಕೆ ಈ ಮರುಗಿದ ಸಮಂತಾ
ಸಮಂತಾ
ರಾಜೇಶ್ ದುಗ್ಗುಮನೆ
|

Updated on: Mar 05, 2025 | 7:04 AM

Share

ನಟಿ ಸಮಂತಾ ರುತ್ ಪ್ರಭು ಅವರು ಚಿತ್ರರಂಗಕ್ಕೆ ಬಂದಿದ್ದು 2010ರಲ್ಲಿ. ಅವರು ಚಿತ್ರರಂಗಕ್ಕೆ ಕಾಲಿಟ್ಟು 15 ವರ್ಷಗಳು ಕಳೆದಿವೆ. ಈ ಸಂದರ್ಭದಲ್ಲಿ ಹಲವು ಸೂಪರ್ ಹಿಟ್ ಚಿತ್ರಗಳನ್ನು ಅವರು ನೀಡಿದ್ದಾರೆ. ಈ ಪೈಕಿ ಕೆಲವು ನಟನೆಗೆ ಆದ್ಯತೆ ಇರೋ ಸಿನಿಮಾಗಳಾದರೆ, ಇನ್ನೂ ಕೆಲವರು ಗ್ಲಾಮರಸ್ ಪಾತ್ರಗಳು. ಆದರೆ, ಈ ರೀತಿಯ ಪಾತ್ರಗಳನ್ನು ಮಾಡಬಾರದಿತ್ತು ಎಂದು ಸಮಂತಾ ಅವರು ಈಗ ಮರುಗಿದ್ದಾರೆ.

‘ಇದು ಒತ್ತಡದಿಂದ ಕೂಡಿತ್ತು. ಏಕೆಂದರೆ ನಾನು ಪ್ರತಿ ಚಿತ್ರದ ಯಶಸ್ಸಿಗೆ ನನ್ನ ಸ್ವಾಭಿಮಾನವನ್ನು ಕಟ್ಟಿಕೊಂಡಿದ್ದೇನೆ. ಯಶಸ್ಸನ್ನು ನಾನು ನಿರ್ಧರಿಸೋಕೆ ಸಾಧ್ಯವಿಲ್ಲ. ಪ್ರತಿ ಶುಕ್ರವಾರ ಆತಂಕ ಆಗುತ್ತಿತ್ತು. ಬಾಕ್ಸ್ ಆಫೀಸ್​ ಮೇಲೆ ನನ್ನ ಯಶಸ್ಸು ನಿರ್ಧಾರ ಆಗುತ್ತಿತ್ತು. ಈಗ ಹಾಗಿಲ್ಲ. ನಾನು ಸ್ಪಷ್ಟ ದೃಷ್ಟಿಕೋನ ಹೊಂದಿದ್ದೇನೆ’ ಎಂದಿದ್ದಾರೆ ಅವರು.

‘ನಾನು ಕೆಲವು ಪಾತ್ರಗಳಿಗೆ ಹೊಂದಿಕೊಳ್ಳಲು ಹೆಣಗಾಡುತ್ತಿದ್ದೆ. ಆದಾಗ್ಯೂ ಹೊಂದಿಕೊಳ್ಳಲು ಪ್ರಯತ್ನಿಸುತ್ತಿದ್ದೆ. ನಾನು ಈಗ ಆ ಸಿನಿಮಾಗಳನ್ನು ನೋಡಿದಾಗ ನನ್ನ ಪಾತ್ರಗಳು ನನಗೆ ಹಾಸ್ಯಾಸ್ಪದವಾಗಿ ಕಾಣುತ್ತವೆ. ಆ ಸಿನಿಮಾಗಳನ್ನು ಮಾಡಬಾರದಿತ್ತು’ ಎಂದಿದ್ದಾರೆ ಅವರು.

ಇದನ್ನೂ ಓದಿ
Image
‘ಅಸೂಯೆಗೆ ನನ್ನಲ್ಲಿ ಜಾಗವಿಲ್ಲ’; ಮಾಜಿ ಪತಿಯ ಮದುವೆ ಬಗ್ಗೆ ಸಮಂತಾ ಮಾತು
Image
ಕದ್ದುಮುಚ್ಚಿ ಡೇಟಿಂಗ್ ಮಾಡೋದು ನಿಲ್ಲಿಸಿದ ಸಮಂತಾ? ಓಪನ್ ಆಗಿ ಸುತ್ತಾಟ
Image
‘ಮುಂದಿನ 6 ತಿಂಗಳು ನಗುತ್ತಾ ಇರುತ್ತೇನೆ’; ಅಭಿಮಾನಿಗಳಿಗಾಗಿ ಸಮಂತಾ ಪೋಸ್ಟ್
Image
2025ರಲ್ಲಿ ಸಮಂತಾ 2ನೇ ಮದುವೆ, ತಾಯಿ ಆಗುವ ಸೂಚನೆ ನೀಡಿದ ನಟಿ

ಸಮಂತಾ ಅವರು ನಟಿಸಿದ್ದು, ‘ಯೇ ಮಾಯ ಚೇಸಾವೆ’ ಸಮಂತಾ ನಟಿಸಿದ ಮೊದಲ ಸಿನಿಮಾ. ಆ ಬಳಿಕ ಅವರು ‘ಬೃಂದಾವನಂ’, ‘ದೂಕುಡು’, ‘ಅತ್ತಾರಿಟಿಕಿ ದಾರೇದಿ’ ‘ಸನ್ ಆಫ್ ಸತ್ಯಮೂರ್ತಿ’ ಚಿತ್ರಗಳಲ್ಲಿ ಅವರು ನಟಿಸಿ ಗಮನ ಸೆಳೆದರು.

ಇದನ್ನೂ ಓದಿ: ಸಮಂತಾಗೆ ಈ ಸಿನಿಮಾ ನಟಿಯರು ಬಲು ಅಚ್ಚುಮೆಚ್ಚು, ನಟಿಯರ ಯಾವ ಸಿನಿಮಾ ಹೆಚ್ಚು ಇಷ್ಟ?

ಸಮಂತಾ ಅವರು 2023ರಲ್ಲಿ ‘ಶಾಂಕುಂತಲಂ’ ಹಾಗೂ ‘ಖುಷಿ’ ಚಿತ್ರಗಳಲ್ಲಿ ನಟಿಸಿದರು. ಈ ಪೈಕಿ ‘ಖುಷಿ’ ಸಿನಿಮಾ ಕೊಂಚ ಮೆಚ್ಚುಗೆ ಪಡೆಯಿತು. ಅಲ್ಲದೆ, ‘ಸಿಟಾಡೆಲ್’ ಸೀರಿಸ್​ನಲ್ಲೂ ಅವರು ನಟಿಸಿದ್ದಾರೆ. ‘ರಕ್ತಬ್ರಹ್ಮಾಂಡ: ದಿ ಬ್ಲಡಿ ಕಿಂಗ್​ಡಮ್’ ವೆಬ್ ಸೀರಿಸ್​ನಲ್ಲಿ ಅವರು ನಟಿಸುತ್ತಿದ್ದಾರೆ. ರಾಜ್ ಮತ್ತು ಡಿಕೆ ಈ ಸಿನಿಮಾನ ನಿರ್ದೇಶನ ಮಾಡುತ್ತಿದ್ದಾರೆ.  ಇನ್ನು, ರಾಜ್ ಜೊತೆ ಅವರು ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ಮಾತೂ ಇದೆ. ಆದರೆ, ಈ ವಿಚಾರ ಇನ್ನೂ ಅಧಿಕೃತ ಆಗಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Video: ತಂದೆ ತಾಯಿ ಜಗಳದಲ್ಲಿ ಮಗಳು ಸತ್ತೇ ಹೋದಳು!
Video: ತಂದೆ ತಾಯಿ ಜಗಳದಲ್ಲಿ ಮಗಳು ಸತ್ತೇ ಹೋದಳು!
ಎಣ್ಣೆ ನಶೆಯಲ್ಲಿ ನಾಯಿ ಜೊತೆ ಯುವಕನ ಡ್ಯಾನ್ಸ್​​: ವಿಡಿಯೋ ವೈರಲ್​
ಎಣ್ಣೆ ನಶೆಯಲ್ಲಿ ನಾಯಿ ಜೊತೆ ಯುವಕನ ಡ್ಯಾನ್ಸ್​​: ವಿಡಿಯೋ ವೈರಲ್​
ನಮಗೊಂದು ಟ್ವೀಟ್ ಮಾಡಿಕೊಡಿ: ಕೇರಳ ಸಿಎಂಗೆ ದುಂಬಾಲು ಬಿದ್ದ ಬಿಜೆಪಿ!
ನಮಗೊಂದು ಟ್ವೀಟ್ ಮಾಡಿಕೊಡಿ: ಕೇರಳ ಸಿಎಂಗೆ ದುಂಬಾಲು ಬಿದ್ದ ಬಿಜೆಪಿ!
ಹೊಸ ವರ್ಷಾಚರಣೆ ವೇಳೆ ಸ್ವಿಟ್ಜರ್​ಲ್ಯಾಂಡ್​ನ ಬಾರ್‌ನಲ್ಲಿ ಬಾಂಬ್ ಸ್ಫೋಟ
ಹೊಸ ವರ್ಷಾಚರಣೆ ವೇಳೆ ಸ್ವಿಟ್ಜರ್​ಲ್ಯಾಂಡ್​ನ ಬಾರ್‌ನಲ್ಲಿ ಬಾಂಬ್ ಸ್ಫೋಟ
ಹೊಸ ವರ್ಷದ ದಿನ ನಮ್ಮ ಮೆಟ್ರೋಗೆ ಬಂಪರ್​ ಆದಾಯ: ಕಲೆಕ್ಷನ್​ ಎಷ್ಟು?
ಹೊಸ ವರ್ಷದ ದಿನ ನಮ್ಮ ಮೆಟ್ರೋಗೆ ಬಂಪರ್​ ಆದಾಯ: ಕಲೆಕ್ಷನ್​ ಎಷ್ಟು?
ಪರೋಕ್ಷವಾಗಿ ಸಿಎಂ ಆಗುವ ಆಸೆ ವ್ಯಕ್ತಪಡಿಸಿದ ಡಾ. ಜಿ. ಪರಮೇಶ್ವರ್
ಪರೋಕ್ಷವಾಗಿ ಸಿಎಂ ಆಗುವ ಆಸೆ ವ್ಯಕ್ತಪಡಿಸಿದ ಡಾ. ಜಿ. ಪರಮೇಶ್ವರ್
ಹೂ, ಎಲೆಗಳ ಸಿಂಗಾರ; ವಿಶೇಷ ಅಲಂಕಾರದಲ್ಲಿ ಕಂಗೊಳಿಸಿದ ನಾಡ ದೇವತೆ
ಹೂ, ಎಲೆಗಳ ಸಿಂಗಾರ; ವಿಶೇಷ ಅಲಂಕಾರದಲ್ಲಿ ಕಂಗೊಳಿಸಿದ ನಾಡ ದೇವತೆ
ಮಂತ್ರಾಲಯದಲ್ಲಿ ಹೊಸ ವರ್ಷದ ಸಂಭ್ರಮ: ಸಾಗರೋಪಾದಿಯಲ್ಲಿ ಹರಿದುಬಂದ ಭಕ್ತರು
ಮಂತ್ರಾಲಯದಲ್ಲಿ ಹೊಸ ವರ್ಷದ ಸಂಭ್ರಮ: ಸಾಗರೋಪಾದಿಯಲ್ಲಿ ಹರಿದುಬಂದ ಭಕ್ತರು
ಪಕ್ಕದಮನೆಯವರ ಬಗ್ಗೆ ಮಾತನಾಡಲ್ಲ; ವಿಜಯಲಕ್ಷ್ಮೀ ಬಗ್ಗೆ ಸುದೀಪ್ ಮಾತು
ಪಕ್ಕದಮನೆಯವರ ಬಗ್ಗೆ ಮಾತನಾಡಲ್ಲ; ವಿಜಯಲಕ್ಷ್ಮೀ ಬಗ್ಗೆ ಸುದೀಪ್ ಮಾತು
ಮಂಗಳೂರಿನ ಕದ್ರಿ ಮಂಜುನಾಥ ದೇವಸ್ಥಾನದಲ್ಲಿ ಭಕ್ತರ ದಂಡು
ಮಂಗಳೂರಿನ ಕದ್ರಿ ಮಂಜುನಾಥ ದೇವಸ್ಥಾನದಲ್ಲಿ ಭಕ್ತರ ದಂಡು