500 ಜನರ ಎದುರು ನಡುಗುತ್ತಾ ನಿಂತಿದ್ದ ಸಮಂತಾ ರುತ್ ಪ್ರಭು; ಕಾರಣ ಏನು?

ತಾವು ಹಾಟ್ ಆಗಿ ಕಾಣಬಹುದು ಎಂದು ಸಮಂತಾ ರುತ್ ಪ್ರಭು ಅಂದುಕೊಂಡಿರಲಿಲ್ಲ. ಹಾಗಾಗಿ ಅವರಿಗೆ ಶೂಟಿಂಗ್ ದಿನ ನರ್ವಸ್ ಆಗಿತ್ತು. ಆ ಘಟನೆಯನ್ನು ಈಗ ಅವರು ನೆನಪಿಸಿಕೊಂಡಿದ್ದಾರೆ. ‘ಉ ಅಂಟಾವಾ ಮಾವ..’ ಹಾಡಿನ ಶೂಟಿಂಗ್ ದಿನ ಏನಾಗಿತ್ತು ಎಂಬುದನ್ನು ಅವರು ಮೆಲುಕು ಹಾಕಿದ್ದಾರೆ.

500 ಜನರ ಎದುರು ನಡುಗುತ್ತಾ ನಿಂತಿದ್ದ ಸಮಂತಾ ರುತ್ ಪ್ರಭು; ಕಾರಣ ಏನು?
Samantha Ruth Prabhu

Updated on: May 11, 2025 | 9:43 AM

ನಟಿ ಸಮಂತಾ ರುತ್ ಪ್ರಭು (Samantha Ruth Prabhu) ಅವರು ಯಶಸ್ವಿ ಹೀರೋಯಿನ್. ತಮಿಳು ಹಾಗೂ ತೆಲುಗು ಚಿತ್ರರಂಗದಲ್ಲಿ ಅವರು ತಮ್ಮದೇ ಛಾಪು ಮೂಡಿಸಿದ್ದಾರೆ. ಅವರಿಗೆ ಆತ್ಮವಿಶ್ವಾಸದ ಕೊರತೆ ಖಂಡಿತವಾಗಿಯೂ ಇಲ್ಲ. ಆದರೆ ಒಂದು ದಿನ ಶೂಟಿಂಗ್ ಸಂದರ್ಭದಲ್ಲಿ ಎಲ್ಲರ ಎದುರು ಅವರು ನಡುಗುತ್ತಾ ನಿಂತಿದ್ದರು. ಈ ವಿಚಾರವನ್ನು ಅವರು ಸ್ವತಃ ಒಪ್ಪಿಕೊಂಡಿದ್ದಾರೆ. ಅಂದಹಾಗೆ, ಈ ಘಟನೆ ನಡೆದಿದ್ದು ‘ಪುಷ್ಪ’ ಸಿನಿಮಾದ ಐಟಂ ಸಾಂಗ್ ಮಾಡುವಾಗ. ಅಲ್ಲು ಅರ್ಜುನ್
(Allu Arjun) ಜೊತೆ ‘ಉ ಅಂಟಾವಾ ಮಾವ..’ ಹಾಡಿಗೆ ಡ್ಯಾನ್ಸ್ ಮಾಡುವಾಗ ಸಮಂತಾ (Samantha) ರುತ್ ಪ್ರಭು ಅವರು ಸಿಕ್ಕಾಪಟ್ಟೆ ನರ್ವಸ್ ಆಗಿದ್ದರು.

ಮಾಧ್ಯಮವೊಂದಕ್ಕೆ ನೀಡಿದ ಸಂದರ್ಭದಲ್ಲಿ ಸಮಂತಾ ಅವರು ಈ ವಿಚಾರದ ಬಗ್ಗೆ ಮಾತನಾಡಿದ್ದಾರೆ. ಹಲವು ವರ್ಷಗಳ ವೃತ್ತಿ ಜೀವನದಲ್ಲಿ ಸಮಂತಾ ಅವರು ಎಂದಿಗೂ ಐಟಂ ಡ್ಯಾನ್ಸ್ ಮಾಡಿರಲಿಲ್ಲ. ಯಾರೂ ಕೂಡ ಅವರಿಗೆ ಅಂತಹ ಆಫರ್ ನೀಡಿರಲಿಲ್ಲ. ಅಲ್ಲದೇ, ತಾನು ಹಾಟ್ ಆಗಿ ಕಾಣಿಸುವುದಿಲ್ಲ ಎಂಬ ಆಲೋಚನೆ ಸಮಂತಾಗೆ ಇತ್ತು. ಹಾಗಾಗಿ ಅವರಿಗೆ ‘ಉ ಅಂಟಾವಾ ಮಾವ..’ ಹಾಡಿಗೆ ಡ್ಯಾನ್ಸ್ ಮಾಡುವಾಗ ಆತಂಕ ಆಗಿತ್ತು.

‘ನನ್ನನ್ನು ಯಾರು ಅಂಥ ಹಾಡಿನಲ್ಲಿ ಕಲ್ಪಿಸಿಕೊಳ್ಳುತ್ತಾರೆ? ಅದರಲ್ಲಿ ನಾನು ತುಂಬ ಹಾಟ್ ಆಗಿ ಕಾಣಿಸಿಕೊಳ್ಳಬೇಕಿತ್ತು. ಅಲ್ಲಿಯವರೆಗೂ ನಾನು ಕೇವಲ ಕ್ಯೂಟ್ ಹುಡುಗಿ ರೀತಿ ಕಾಣಿಸುತ್ತಿದ್ದೆ. ಉ ಅಂಟಾವಾ ಹಾಡಿನ ರೀತಿ ನಾನು ಇರಲಿಲ್ಲ. ಹಾಗಾಗಿ ನನ್ನ ಸುತ್ತಮುತ್ತ ಇರುವವರು ಅಂಥ ಹಾಡಿನಲ್ಲಿ ಡ್ಯಾನ್ಸ್ ಮಾಡಬೇಡ ಎಂದರು. ಆದರೆ ನಾನು ಅದನ್ನು ಸವಾಲಾಗಿ ಸ್ವೀಕರಿಸಿದೆ’ ಎಂದು ಸಮಂತಾ ಅವರು ಹೇಳಿದ್ದಾರೆ.

ಇದನ್ನೂ ಓದಿ
ಪೀರಿಯಡ್ಸ್ ಬಗ್ಗೆ ಓಪನ್​ ಆಗಿ ಮಾತನಾಡೋದು ನಮಗೆ ಈಗಲೂ ನಾಚಿಕೆಯ ವಿಷಯ; ಸಮಂತಾ
ಬಿಡುಗಡೆಗೆ ರೆಡಿಯಾಗಿದೆ ಸಮಂತಾ ನಿರ್ಮಾಣದ ಮೊದಲ ಸಿನಿಮಾ
ಕದ್ದುಮುಚ್ಚಿ ಡೇಟಿಂಗ್ ಮಾಡೋದು ನಿಲ್ಲಿಸಿದ ಸಮಂತಾ? ಓಪನ್ ಆಗಿ ಸುತ್ತಾಟ
2025ರಲ್ಲಿ ಸಮಂತಾ 2ನೇ ಮದುವೆ, ತಾಯಿ ಆಗುವ ಸೂಚನೆ ನೀಡಿದ ನಟಿ

‘ನನಗೆ ಆ ಹಾಡಿಗೆ ಸಾಹಿತ್ಯ ಇಷ್ಟ ಆಯಿತು. ಈ ರೀತಿ ಇರುವುದನ್ನು ನನಗೆ ಈ ಮುಂಚೆ ಯಾರೂ ಆಫರ್ ಮಾಡಿರಲಿಲ್ಲ. ಹಾಗಾಗಿ ಇದು ಒಂದು ಒಳ್ಳೆಯ ಅವಕಾಶ ಅಂತ ನನಗೆ ಅನಿಸಿತು. ಆದರೂ ನಾನು 500 ಮಂದಿ ಜೂನಿಯರ್ ಆರ್ಟಿಸ್ಟ್​​ಗಳ ಎದುರಿನಲ್ಲಿ ನಡುಗುತ್ತಿದ್ದೆ. ನಾನು ತುಂಬ ನರ್ವಸ್ ಆಗಿದ್ದೆ’ ಎಂದು ಆ ದಿನವನ್ನು ಸಮಂತಾ ಅವರು ನೆನಪಿಸಿಕೊಂಡಿದ್ದಾರೆ.

ಇದನ್ನೂ ಓದಿ: ನಿರ್ಮಾಪಕಿಯಾಗಿ ಸಮಂತಾ ಮೊದಲ ಚಿತ್ರಕ್ಕೆ ಕವಿದ ಕಾರ್ಮೋಡ

‘ಪುಷ್ಪ’ ಸಿನಿಮಾ ಸೂಪರ್ ಹಿಟ್ ಆಗಲು ಹಾಡುಗಳು ಕೂಡ ಕಾರಣ. ಎಲ್ಲ ಭಾಷೆಯಲ್ಲೂ ‘ಉ ಅಂಟಾವಾ ಮಾವ..’ ಹಾಡು ಧೂಳೆಬ್ಬಿಸಿತು. ಸಮಂತಾ ಅವರು ಅಂಥ ಅವತಾರದಲ್ಲಿ ನೋಡಿ ಎಲ್ಲರಿಗೂ ಅಚ್ಚರಿ ಆಯಿತು. ಆ ಬಳಿಕ ಮತ್ತೆ ಅಂತಹ ಹಾಡಿನಲ್ಲಿ ಸಮಂತಾ ಅವರು ಡ್ಯಾನ್ಸ್ ಮಾಡಿಲ್ಲ. ಈಗ ಅವರು ಸಿನಿಮಾಗಳ ಆಯ್ಕೆಯಲ್ಲಿ ತುಂಬಾ ತಡ ಮಾಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.