AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೇಶದ ದುಬಾರಿ ಡ್ಯಾನ್ಸ್: 5 ನಿಮಿಷದ ಹಾಡಿಗೆ ಕೋಟಿ ಕೋಟಿ ಚಾರ್ಜ್ ಮಾಡಿದ್ದಾರೆ ಇವರು

ಮಲೈಕಾದಿಂದ ಹಿಡಿದು ಸನ್ನಿ ಲಿಯೋನ್‌ವರೆಗೆ ಅನೇಕ ನಟಿಯರು ಚಿತ್ರಗಳಲ್ಲಿ ಐಟಂ ಹಾಡುಗಳನ್ನು ಮಾಡಿದ್ದಾರೆ. 4ರಿಂದ 5 ನಿಮಿಷದ ಹಾಡಿಗೆ ಹೆಜ್ಜೆ ಹಾಕೋಕೆ ಕೋಟಿಗಟ್ಟಲೆ ಸಂಭಾವನೆ ಪಡೆದ ಅನೇಕ ಹೀರೋಯಿನ್​ಗಳು ಇದ್ದಾರೆ. ಭಾರತೀಯ ಚಿತ್ರರಂಗದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ್ದು ಎಂದರೆ ಕೇವಲ 5 ನಿಮಿಷಗಳ ಡ್ಯಾನ್ಸ್​ಗೆ 5 ಕೋಟಿ ರೂ ಪಡೆದಿದ್ದು.

ದೇಶದ ದುಬಾರಿ ಡ್ಯಾನ್ಸ್: 5 ನಿಮಿಷದ ಹಾಡಿಗೆ ಕೋಟಿ ಕೋಟಿ ಚಾರ್ಜ್ ಮಾಡಿದ್ದಾರೆ ಇವರು
ದೇಶದ ದುಬಾರಿ ಡ್ಯಾನ್ಸ್: 5 ನಿಮಿಷದ ಹಾಡಿಗೆ ಕೋಟಿ ಕೋಟಿ ಚಾರ್ಜ್ ಮಾಡಿದ್ದಾರೆ ಇವರು
 ಶ್ರೀಲಕ್ಷ್ಮೀ ಎಚ್
| Edited By: |

Updated on: Apr 06, 2024 | 7:30 AM

Share

ಬಾಲಿವುಡ್ (Bollywood) ಹಾಗೂ ದಕ್ಷಿಣ ಭಾರತದ ಸಿನಿಮಾಗಳಲ್ಲಿ ವಿಶೇಷ ಸಾಂಗ್ ಮೂಲಕ ಗಮನ ಸೆಳೆದ ಅನೇಕ ಸಾಂಗ್​ಗಳು ಇವೆ. ಹಲವು ಬಾರಿ ಸಿನಿಮಾ ಫ್ಲಾಪ್ ಆಗಿದ್ದರೂ ಆ ಚಿತ್ರದ ಐಟಂ ಸಾಂಗ್ ಹಿಟ್ ಆದ ಉದಾಹರಣೆ ಇದೆ. ಕಳೆದ ಕೆಲ ವರ್ಷಗಳಲ್ಲಿ ಐಟಂ ನಂಬರ್​ಗಳು ಸಿನಿಮಾದಲ್ಲಿ ವಿಶೇಷ ಸ್ಥಾನ ಪಡೆದುಕೊಳ್ಳುತ್ತಿವೆ.  ಈ ಹಿಂದೆ ಕೆಲವೇ ಕೆಲವು ನಟಿಯರು ಮಾತ್ರ ಅದರಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಆದರೆ ಈಗ ಟಾಪ್ ನಟಿಯರೂ ಈ ರೀತಿಯ ಹಾಡಿಗೆ ಹೆಜ್ಜೆ ಹಾಕುತ್ತಾರೆ. ಐಟಂ ಸಾಂಗ್‌ಗಳನ್ನು ಮಾಡಲು ಹೀರೋಗಿಂತ ಹೆಚ್ಚಿನ ಸಂಭಾವನೆ ಪಡೆದ ಉದಾಹರಣೆ ಸಾಕಷ್ಟಿದೆ.

ಮಲೈಕಾದಿಂದ ಹಿಡಿದು ಸನ್ನಿ ಲಿಯೋನ್‌ವರೆಗೆ ಅನೇಕ ನಟಿಯರು ಚಿತ್ರಗಳಲ್ಲಿ ಐಟಂ ಹಾಡುಗಳನ್ನು ಮಾಡಿದ್ದಾರೆ. 4ರಿಂದ 5 ನಿಮಿಷದ ಹಾಡಿಗೆ ಹೆಜ್ಜೆ ಹಾಕೋಕೆ ಕೋಟಿಗಟ್ಟಲೆ ಸಂಭಾವನೆ ಪಡೆದ ಅನೇಕ ಹೀರೋಯಿನ್​ಗಳು ಇದ್ದಾರೆ. ಭಾರತೀಯ ಚಿತ್ರರಂಗದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ್ದು ಎಂದರೆ ಕೇವಲ 5 ನಿಮಿಷಗಳ ಡ್ಯಾನ್ಸ್​ಗೆ 5 ಕೋಟಿ ರೂ ಪಡೆದಿದ್ದು. ಇದು ಇಲ್ಲಿಯವರೆಗಿನ ಅತಿ ದೊಡ್ಡ ಶುಲ್ಕ ಎಂದು ಪರಿಗಣಿಸಲಾಗಿದೆ.

ಯಾವ ನಟಿಯರ ಸಂಭಾವನೆ ಎಷ್ಟು?

ಐಟಂ ಸಾಂಗ್​ನಲ್ಲಿ ಕಾಣಿಸಿಕೊಳ್ಳಲು ಹೆಸರುವಾಸಿಯಾದ ಅನೇಕ ನಟಿಯರಿದ್ದಾರೆ. ಈ ಪೈಕಿ ಮಲೈಕಾ ಅರೋರಾ ಕೂಡ ಒಬ್ಬರು. ವರದಿಗಳ ಪ್ರಕಾರ ಪ್ರತಿ ಹಾಡಿಗೆ ಅವರು 50 ಲಕ್ಷದಿಂದ 1 ಕೋಟಿ ರೂ ಪಡೆಯುತ್ತಾರೆ. ಕರೀನಾ ಕಪೂರ್ ಐಟಂ ಡ್ಯಾನ್ಸ್​ಗೆ 1.5 ಕೋಟಿ ರೂಪಾಯಿ ಪಡೆಯುತ್ತಾರೆ. ತಮನ್ನಾ ಭಾಟಿಯಾ ಒಂದು ಹಾಡಿಗೆ ರೂ. 1 ಕೋಟಿ ರೂ., ಕತ್ರಿನಾ ಕೈಫ್ ವಿಶೇಷ ಸಾಂಗ್​ನಲ್ಲಿ ಕಾಣಿಸಿಕೊಳ್ಳಲು 2 ಕೋಟಿ ರೂಪಾಯಿ ಪಡೆಯುತ್ತಾರೆ. ಬಾಲಿವುಡ್‌ನ ದುಬಾರಿ ಕಲಾವಿದರಲ್ಲಿ ಸನ್ನಿ ಲಿಯೋನ್ ಕೂಡ ಒಬ್ಬರು. ಪ್ರತಿ ಹಾಡಿಗೆ 2-3 ಕೋಟಿ ರೂ ಪಡೆಯುತ್ತಾರೆ. ಅತ್ಯಂತ ದುಬಾರಿ ನಟಿ ಬೇರೆ ಎಂದತೆ ಅದು ಸಮಂತಾ.

ಇದನ್ನೂ ಓದಿ: ಅಟ್ಲಿ ಜೊತೆಗಿನ ಅಲ್ಲು ಅರ್ಜುನ್ ಸಿನಿಮಾಗೆ ಸಮಂತಾ ರುತ್​ ಪ್ರಭು ನಾಯಕಿ?

ಸಮಂತಾ ಸಖತ್ ದುಬಾರಿ

ಅಲ್ಲು ಅರ್ಜುನ್ ಅವರ ‘ಪುಷ್ಪ’ ಚಿತ್ರದಲ್ಲಿ ‘ಹೂ ಅಂತೀಯಾ ಮಾವ..’ ಹಾಡು ಗಮನ ಸೆಳೆದಿತ್ತು. ಈ ಹಾಡಿಗಾಗಿ  ಸಮಂತಾ ಅವರು 5 ಕೋಟಿ ರೂಪಾಯಿ ಪಡೆದಿದ್ದರು ಎನ್ನಲಾಗಿದೆ. ಐದು ನಿಮಿಷ ಕಾಣಿಸಿಕೊಂಡ ಸಮಂತಾ ಅವರ ವೃತ್ತಿಜೀವನದಲ್ಲಿ ಮೊದಲ ವಿಶೇಷ ಐಟಂ ಸಾಂಗ್ ಇದಾಗಿದ್ದು, ಆ ಹಾಡು ಸೂಪರ್ ಹಿಟ್ ಆಯಿತು. ಆರಂಭದಲ್ಲಿ ಅವರು ನಟಿಸಲು ಹಿಂಜರಿದಿದ್ದರು. ನಂತರ ಒಪ್ಪಿ ಖುಷಿಯಿಂದ ಡ್ಯಾನ್ಸ್ ಮಾಡಿದರು. ಸಖತ್ ಬೋಲ್ಡ್ ಆಗಿ ಅವರು ಗಮನ ಸೆಳದರು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Follow Us
Shreelaxmi H
Shreelaxmi H

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More