Samantha: ಅವಕಾಶ ನೀಡಿದ್ದಕ್ಕೆ ಆ ನಿರ್ದೇಶಕನ ಕಾಲು ಮುಟ್ಟಿ ನಮಸ್ಕರಿಸಿದೆ: ಸಮಂತಾ

ಇತ್ತೀಚೆಗೆ ತಾವು ತೆಲುಗು ಸಿನಿಮಾ ನಿರ್ದೇಶಕರೊಬ್ಬರ ಕಾಲು ಮುಟ್ಟಿ ನಮಸ್ಕರಿಸಿದ ಘಟನೆಯನ್ನು ನಟಿ ಸಮಂತಾ ಸ್ಮರಿಸಿದ್ದಾರೆ. ಯಾರು ಆ ನಿರ್ದೇಶಕ? ಸಮಂತಾ ನಮಸ್ಕರಿಸಿದ್ದೇಕೆ?

Samantha: ಅವಕಾಶ ನೀಡಿದ್ದಕ್ಕೆ ಆ ನಿರ್ದೇಶಕನ ಕಾಲು ಮುಟ್ಟಿ ನಮಸ್ಕರಿಸಿದೆ: ಸಮಂತಾ
ಸಮಂತಾ
Follow us
ಮಂಜುನಾಥ ಸಿ.
|

Updated on:Mar 25, 2023 | 4:30 PM

ಸಮಂತಾ (Samantha) ದಕ್ಷಿಣ ಭಾರತದ ಹೊಸ ಸೂಪರ್ ಸ್ಟಾರ್ ನಟಿ. ನಯನತಾರಾ (Nayanathara), ಅನುಷ್ಕಾ ಶೆಟ್ಟಿ (Anushka Shetty) ಅವರುಗಳು ಬಳಿಕ ಅವರಂತೆ ಅತಿ ಹೆಚ್ಚು ಫ್ಯಾನ್ ಫಾಲೋವಿಂಗ್, ಭಿನ್ನ ರೀತಿಯ ಪಾತ್ರಗಳು, ಒಂದರ ಹಿಂದೊಂದು ಹಿಟ್ ಸಿನಿಮಾಗಳನ್ನು ನೀಡುತ್ತಾ ಬರುತ್ತಿದ್ದಾರೆ ಸಮಂತಾ (Samantha). ಇವರಿಗಾಗಿಯೇ ಕತೆ ಬರೆದು ಸಿನಿಮಾ ಮಾಡಲು ಕಾದು ನಿಂತಿರುವ ನಿರ್ದೇಶಕರು ಹಲವರಿದ್ದಾರೆ. ಹೀಗಿರುವಾಗ ಇತ್ತೀಚೆಗಷ್ಟೆ, ಸಿನಿಮಾ ಒಂದರಲ್ಲಿ ಪಾತ್ರ ನೀಡಿದ್ದಕ್ಕೆ ನಿರ್ದೇಶಕರೊಬ್ಬರ ಕಾಲು ಮುಟ್ಟಿ ನಮಸ್ಕರಿಸಿ ಧನ್ಯವಾದ ಹೇಳಿದರಂತೆ ನಟಿ ಸಮಂತಾ.

ಸಮಂತಾ, ‘ಶಾಕುಂತಲಂ’ (Shakunthalam) ಹೆಸರಿನ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ಹಲವು ಅಡೆ-ತಡೆಗಳ ಬಳಿಕ ಸಿನಿಮಾ ತೆರೆಗೆ ಬರಲು ಸಜ್ಜಾಗಿದೆ. ಸಿನಿಮಾದ ಪ್ರಚಾರ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿರುವ ಸಮಂತಾ, ಈ ಸಿನಿಮಾದ ನಿರ್ದೇಶಕ ಗುಣಶೇಖರ್ ಅವರ ಕಾಲು ಮುಟ್ಟಿ ತಾವು ನಮಸ್ಕರಿಸಿದ ಘಟನೆ ಬಗ್ಗೆ ಹೇಳಿಕೊಂಡಿದ್ದಾರೆ.

”ನನಗೆ ಡಿಸ್ನಿ ಸಿನಿಮಾಗಳೆಂದರೆ ಬಹಳ ಇಷ್ಟ. ನನಗೆ ಬೇಜಾರಾದಾಗ, ಖುಷಿಯಾದಾಗ ಡಿಸ್ನಿಯ ಸಿನಿಮಾಗಳನ್ನು ನೋಡುತ್ತೇನೆ. ಅಲ್ಲಿ ಪ್ರಾಣಿಗಳು ಮಾತನಾಡುತ್ತವೆ, ಮುದ್ದಾದ ರಾಣಿಯರಿರುತ್ತಾರೆ, ಅದೊಂದು ಅದ್ಭುತವಾದ ಕಾಲ್ಪನಿಕ ಜಗತ್ತು. ಸದಾ ಅದೇ ಗುಂಗಿನಲ್ಲಿ ಇರುತ್ತಿದ್ದ ನಾನು ಶಕುಂತಲಂ ಸಿನಿಮಾ ಮಾಡಿ, ಮೊದಲ ಬಾರಿ ಸ್ಕ್ರೀನಿಂಗ್ ನೋಡಿದಾಗ ನಾನು ಯಾವುದರ ಬಗ್ಗೆ ಕನಸು ಕಾಣುತ್ತಿದ್ದೆನೊ ಅಂಥಹುದೇ ಪಾತ್ರದಲ್ಲಿ ನಾನು ನಟಿಸಿದ್ದೀನಿ ಎನಿಸಿತು. ಶಾಕುಂತಲಂ ಸಹ ಬಹುತೇಕ ಡಿಸ್ನಿ ರಾಣಿಯರ ರೀತಿಯೇ, ಮ್ಯಾಜಿಕಲ್ ಕಾಡಿನಲ್ಲಿ ವಾಸಿಸುತ್ತಾಳೆ. ಪ್ರಾಣಿ ಪಕ್ಷಿಗಳು ಅವಳೊಟ್ಟಿಗೆ ಮಾತನಾಡುತ್ತವೆ. ಅವಳ ಪ್ರಪಂಚದಲ್ಲಿ ಎಲ್ಲದಕ್ಕೂ ಜೀವವಿದೆ, ಎಲ್ಲದಕ್ಕೂ ಭಾವನೆ ಇದೆ. ಸಿನಿಮಾ ನೋಡಿ ನನಗೆ ನನ್ನ ಕನಸು ನನಸಾದಂತೆ ಭಾಸವಾಯಿತು. ಕೂಡಲೇ ಹೋಗಿ ನಾನು ನಿರ್ದೇಶಕ ಗುಣಶೇಖರ್ ಅವರ ಕಾಲಿಗೆ ನಮಸ್ಕರಿಸಿದೆ. ನನ್ನನ್ನು ಈ ಸಿನಿಮಾಕ್ಕೆ ಆಯ್ಕೆ ಮಾಡಿದ್ದಕ್ಕೆ ಧನ್ಯವಾದ ತಿಳಿಸಿದೆ” ಎಂದಿದ್ದಾರೆ ಸಮಂತಾ.

ಸಮಂತಾ ನಟನೆಯ ಶಾಕುಂತಲಂ ಸಿನಿಮಾವು ಕಾಳಿದಾಸನ ಶಾಕುಂತಲೆ ಕಾವ್ಯ ಆಧರಿಸಿದ್ದಾಗಿದ್ದು, ಸಮಂತಾ ರಾಣಿ ಶಾಕುಂತಲೆಯ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾದ ಕೆಲವು ಹಾಡುಗಳು ಈಗಾಗಲೇ ಬಿಡುಗಡೆ ಆಗಿದ್ದು, ಸಖತ್ ವೈರಲ್ ಆಗಿವೆ. ಸಿನಿಮಾದಲ್ಲಿ ದುಶ್ಯಂತನ ಪಾತ್ರದಲ್ಲಿ ದೇವ್ ಮೋಹನ್ ನಟಿಸಿದ್ದು, ಕಣ್ವ ಮಹರ್ಷಿಯ ಪಾತ್ರದಲ್ಲಿ ಸಚಿನ್ ಖೇಡೆಕರ್ ನಟಿಸಿದ್ದಾರೆ. ಸಿನಿಮಾದಲ್ಲಿ ಅಲ್ಲು ಅರ್ಜುನ್ ಪುತ್ರಿ ಮೊದಲ ಬಾರಿಗೆ ನಟಿಸಿರುವುದು ವಿಶೇಷ. ಸಿನಿಮಾವನ್ನು ಗುಣಶೇಖರ್ ನಿರ್ದೇಶನ ಮಾಡಿದ್ದಾರೆ. ನಿರ್ಮಾಣ ಮಾಡಿರುವುದು ಗುಣಶೇಖರ್ ಪತ್ನಿ ನೀಲಿಮಾ ಗುಣ.

ಈ ಸಿನಿಮಾದ ಚಿತ್ರೀಕರಣವು ಹಲವು ಕಾರಣಗಳಿಂದಾಗಿ ತಡವಾಯ್ತು. ಕೊರೊನಾ ಯಿಂದ ಸಮಸ್ಯೆಯಾದ ಬಳಿಕ ಸಮಂತಾ ಆರೋಗ್ಯ, ವಿಚ್ಛೇದನ ಇನ್ನೂ ಹಲವು ಕಾರಣಗಳಿಗೆ ಸಿನಿಮಾದ ಚಿತ್ರೀಕರಣ ಹಾಗೂ ಬಿಡುಗಡೆ ತಡವಾಗುತ್ತಲೇ ಬಂದು ಇದೀಗ ಏಪ್ರಿಲ್ 14 ಕ್ಕೆ ಸಿನಿಮಾ ತೆರೆಗೆ ಬರಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:28 pm, Sat, 25 March 23