‘ಮಹಿಳೆಯರನ್ನು ಮಾತ್ರ ಪ್ರಶ್ನೆ ಮಾಡುವ ನಮ್ಮ ಸಮಾಜಕ್ಕೆ ನೈತಿಕತೆ ಇಲ್ಲ’; ಸಿಟ್ಟಾದ ಸಮಂತಾ

TV9 Digital Desk

| Edited By: Rajesh Duggumane

Updated on: Oct 08, 2021 | 3:59 PM

ವಿಚ್ಛೇದನದ ನಂತರ ಸಮಂತಾ ಸಾಕಷ್ಟು ಅರ್ಥಪೂರ್ಣ ಸಾಲು​ಗಳನ್ನು ಪೋಸ್ಟ್​ ಮಾಡುತ್ತಿದ್ದಾರೆ. ಪ್ರತಿ ಸಾಲುಗಳಿಗೂ ನಾನಾ ಅರ್ಥಗಳು ಬರುವ ರೀತಿಯಲ್ಲಿದೆ.

‘ಮಹಿಳೆಯರನ್ನು ಮಾತ್ರ ಪ್ರಶ್ನೆ ಮಾಡುವ ನಮ್ಮ ಸಮಾಜಕ್ಕೆ ನೈತಿಕತೆ ಇಲ್ಲ’; ಸಿಟ್ಟಾದ ಸಮಂತಾ
ಸಮಂತಾ

ಸಮಂತಾ ಅಕ್ಕಿನೇನಿ ಮತ್ತು ನಾಗ ಚೈತನ್ಯ ವಿಚ್ಛೇದನ ಪಡೆದ ವಿಚಾರ ದೊಡ್ಡ ಮಟ್ಟದಲ್ಲಿ ಚರ್ಚೆ ಆಗುತ್ತಿದೆ. ನಾಲ್ಕು ವರ್ಷ ಸಂಸಾರ ನಡೆಸಿ ಈಗ ಇಬ್ಬರೂ ಬೇರೆ ಆಗಿದ್ದಾರೆ. ಸಮಂತಾ ಅವರದ್ದೇ ತಪ್ಪು ಎಂದು ಸಾಕಷ್ಟು ಮಂದಿ ಅವರ ಮೇಳೆ ಗೂಬೆ ಕೂರಿಸುವ ಪ್ರಯತ್ನ ಮಾಡಿದ್ದಾರೆ. ಸಮಂತಾ ಕಿವಿಗೂ ಈ ವಿಚಾರ ಬಿದ್ದಿದೆ. ಈ ಬಗ್ಗೆ ಅವರು ಸೋಶಿಯಲ್​ ಮೀಡಿಯಾದಲ್ಲಿ ಅಸಮಾಧಾನ ಹೊರ ಹಾಕುತ್ತಿದ್ದಾರೆ. ಅವರು ನಿತ್ಯ ಹೊಸಹೊಸ ಪೋಸ್ಟ್ ಮಾಡುತ್ತಿದ್ದು, ಎಲ್ಲರನ್ನೂ ಪರೋಕ್ಷವಾಗಿ ಕುಟುಕುತ್ತಿದ್ದಾರೆ.

ವಿಚ್ಛೇದನದ ನಂತರ ಸಮಂತಾ ಸಾಕಷ್ಟು ಅರ್ಥಪೂರ್ಣ ಸಾಲು​ಗಳನ್ನು ಪೋಸ್ಟ್​ ಮಾಡುತ್ತಿದ್ದಾರೆ. ಪ್ರತಿ ಸಾಲುಗಳಿಗೂ ನಾನಾ ಅರ್ಥಗಳು ಬರುವ ರೀತಿಯಲ್ಲಿದೆ. ಈಗ ಸಮಂತಾ ಹೊಸ ಸ್ಟೇಟಸ್​ ಹಾಕಿದ್ದಾರೆ. ಈ ಸ್ಟೇಟಸ್​ ನೋಡಿ ಸಾಕಷ್ಟು ರೀತಿಯಲ್ಲಿ ಅರ್ಥೈಸಲಾಗುತ್ತಿದೆ.

‘ಮಹಿಳೆಯರು ಏನೇ ಮಾಡಿದರೂ ಅದನ್ನು ನೈತಿಕವಾಗಿ ಪ್ರಶ್ನೆ ಮಾಡಲಾಗುತ್ತದೆ. ಆದರೆ, ಪುರುಷರು ಏನಾದರೂ ಮಾಡಿದಾಗ ಅದನ್ನು ನೈತಿಕ ಪ್ರಶ್ನೆ ಮಾಡುವುದಿಲ್ಲ ಎಂದಾದರೆ, ಅಂಥ ಸಮಾಜಕ್ಕೆ ನೈತಿಕತೆ ಇಲ್ಲ’ ಎನ್ನುವ ಸಾಲುಗಳನ್ನು ಸಮಂತಾ ಹಾಕಿದ್ದಾರೆ. ಸಮಾಜದಲ್ಲಿ ಪುರುಷರು ತಪ್ಪು ಮಾಡಿದಾಗ ಒಂದು ರೀತಿಯಲ್ಲಿ ನೋಡಿದರೆ, ಮಹಿಳೆಯರು ತಪ್ಪು ಮಾಡಿದಾಗ ಮತ್ತೊಂದು ರೀತಿಯಲ್ಲಿ ನೋಡಲಾಗುತ್ತದೆ. ಇದು ತಪ್ಪು ಎನ್ನುವುದನ್ನು ಸಮಂತಾ ಹೇಳ ಹೊರಟಿದ್ದಾರೆ. ಇನ್ನೂ ಕೆಲವರು, ಈ ಸಾಲುಗಳಿಗೆ ಸಮಂತಾ ಅವರ ವಿಚ್ಛೇದನ ಪ್ರಕರಣವನ್ನು ತಾಳೆ ಮಾಡಿ ನೋಡುತ್ತಿದ್ದಾರೆ.

ಜೆಮಿನಿ ಟಿವಿಯಲ್ಲಿ ‘ಎವರು ಮೀಲೊ ಕೋಟಿಶ್ವರುಲು’ ಶೋ ಪ್ರಸಾರವಾಗುತ್ತಿದೆ. ‘ಕೌನ್​ ಬನೇಗಾ ಕರೋಡ್​​ಪತಿಯ’ ತೆಲುಗು ವರ್ಷನ್​ ಇದು. ಇದನ್ನು ಖ್ಯಾತ ನಟ ಜ್ಯೂ.ಎನ್​ಟಿಆರ್​ ನಡೆಸಿಕೊಡುತ್ತಿದ್ದಾರೆ. ಈ ಶೋಗೆ ಸಮಂತಾ ಅವರು ಅತಿಥಿಯಾಗಿ ಆಗಮಿಸುತ್ತಿದ್ದಾರೆ. ಸಮಂತಾ ವಿಚ್ಛೇದನ ಪಡೆದ ನಂತರ ಒಂದು ಬ್ರೇಕ್​ ಪಡೆದುಕೊಂಡಿದ್ದರು. ಆದರೆ, ಈಗ ಅವರು ಮತ್ತೆ ಕೆಲಸಕ್ಕೆ ಮರಳೋಕೆ ನಿರ್ಧರಿಸಿದ್ದಾರೆ. ಈ ಕಾರಣಕ್ಕೆ ಅವರು ಇತ್ತೀಚೆಗೆ ಜಾಹೀರಾತಿನ ಶೂಟಿಂಗ್​ನಲ್ಲಿ ಪಾಲ್ಗೊಂಡಿದ್ದರು. ಇದರ ಜತೆಗೆ ಅವರು ಹೊಸ ಸಿನಿಮಾದ ಕಥೆ ಕೂಡ ಕೇಳುತ್ತಿದ್ದಾರೆ. ಈಗ ಅವರು ಕಿರುತೆರೆ ಶೋನಲ್ಲಿ ಮರಳೋಕೆ ರೆಡಿ ಆಗಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ವಿಚ್ಛೇದನದ ನಂತರ ಕಿರುತೆರೆಯಲ್ಲಿ ಕಾಣಿಸಿಕೊಳ್ಳೋಕೆ ರೆಡಿ ಆದ್ರು ಸಮಂತಾ

ಸಮಂತಾ ದೇಹದ ಮೇಲಿರುವ ಟ್ಯಾಟೂ ಗತಿಯೇನು? ಅದರಲ್ಲಿದೆ ನಾಗ ಚೈತನ್ಯ ನೆನಪು

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada