AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Samantha: ಮಾಜಿ ಪತಿಯನ್ನು ಅನ್​ಫಾಲೋ ಮಾಡಿದ ಸಮಂತಾ; ಫ್ಯಾನ್ಸ್ ಗಮನಿಸಿದ್ರು ಮತ್ತೊಂದು ಅಚ್ಚರಿಯ ವಿಚಾರ

Naga Chaitanya: ಬಹುಭಾಷಾ ನಟಿ ಸಮಂತಾ ನಾಗ ಚೈತನ್ಯರೊಂದಿಗೆ ಎಲ್ಲಾ ನೆನಪುಗಳನ್ನು ಕಡಿದುಕೊಳ್ಳಲು ಮುಂದಾಗಿದ್ದು, ಇನ್​ಸ್ಟಾಗ್ರಾಂನಲ್ಲಿ ಮಾಜಿ ಪತಿಯನ್ನು ಅನ್​ಫಾಲೋ ಮಾಡಿದ್ದಾರೆ. ಈ ನಡುವೆ ಫ್ಯಾನ್ಸ್ ಅಚ್ಚರಿಯ ವಿಚಾರವೊಂದನ್ನು ಗಮನಿಸಿದ್ದಾರೆ.

Samantha: ಮಾಜಿ ಪತಿಯನ್ನು ಅನ್​ಫಾಲೋ ಮಾಡಿದ ಸಮಂತಾ; ಫ್ಯಾನ್ಸ್ ಗಮನಿಸಿದ್ರು ಮತ್ತೊಂದು ಅಚ್ಚರಿಯ ವಿಚಾರ
ನಾಗ ಚೈತನ್ಯ, ಸಮಂತಾ
TV9 Web
| Edited By: |

Updated on: Mar 23, 2022 | 2:42 PM

Share

2021ರಲ್ಲಿ ತಾರೆಯರ ದಾಂಪತ್ಯದ ಬಗ್ಗೆ ದೇಶಾದ್ಯಂತ ದೊಡ್ಡ ಸುದ್ದಿಯಾಗಿದ್ದು ಸಮಂತಾ (Samantha) ಹಾಗೂ ನಾಗ ಚೈತನ್ಯ (Naga Chaitanya) ಜೋಡಿಯ ವಿಚ್ಛೇದನದ ವಿಚಾರ. ಈರ್ವರೂ ತಮ್ಮ ವೈವಾಹಿಕ ಜೀವನದಿಂದ ಬೇರೆಯಾಗುತ್ತಿರುವುದಾಗಿ ಘೋಷಿಸಿದ್ದು ಅಭಿಮಾನಿಗಳಿಗೆ ಆಘಾತ ತಂದಿತ್ತು. ಮದುವೆಯ ನಾಲ್ಕನೇ ವಾರ್ಷಿಕೋತ್ಸವಕ್ಕೆ ಕೆಲವೇ ದಿನಗಳ ಮೊದಲು ಈ ಶಾಕಿಂಗ್ ನಿರ್ಧಾರವನ್ನು ಸ್ಯಾಮ್ ಹಾಗೂ ಚೈ ಘೋಷಿಸಿದ್ದರು. ಈ ಮೂಲಕ 2010ರಿಂದ ‘ಯೇ ಮಾಯಾ ಚೇಸಾವೆ’ ಚಿತ್ರದಿಂದ ಆರಂಭವಾದ ಸ್ನೇಹ, ವಿವಾಹ ಬಾಂಧವ್ಯಕ್ಕೆ ತಿರುಗಿ ಅಲ್ಲಿಂದ ಬೇರ್ಪಡುವುದರೊಂದಿಗೆ ಅಂತ್ಯವಾಗಿತ್ತು. ನಂತರದಲ್ಲಿ ಈ ವಿಚಾರದ ಬಗ್ಗೆ ಸ್ಯಾಮ್ ಹಾಗೂ ಚೈ ಸಾಕಷ್ಟು ಮೌನವನ್ನೇ ವಹಿಸಿದ್ದಾರೆ. ಪರೋಕ್ಷವಾಗಿ ಆಗೊಮ್ಮೆ ಈಗೊಮ್ಮೆ ಮಾತನಾಡಿದರೂ ಕೂಡ ಒಬ್ಬರ ಬಗ್ಗೆ ಮತ್ತೊಬ್ಬರು ಆರೋಪ- ಪ್ರತ್ಯಾರೋಪ ಮೊದಲಾದವುಗಳನ್ನು ನಡೆಸದೆ ಗೌರವದಿಂದ ನಡೆದುಕೊಳ್ಳುತ್ತಿದ್ದಾರೆ. ಆದರೆ ಸಮಂತಾ ತಮ್ಮ ಸಂಬಂಧದ ಕುರುಹಾಗಿ ಯಾವುದನ್ನೂ ಉಳಿಸಿಕೊಳ್ಳಲು ಇಷ್ಟಪಡುತ್ತಿಲ್ಲ. ಇದಕ್ಕೆ ಪುಷ್ಠಿ ನೀಡುವಂತೆ ಸ್ಯಾಮ್ ನಾಗ ಚೈತನ್ಯರನ್ನು ಇನ್​ಸ್ಟಾಗ್ರಾಂನಲ್ಲಿ ಅನ್​ಫಾಲೋ ಮಾಡಿದ್ದಾರೆ.

ಕೆಲ ಸಮಯದ ಹಿಂದೆ ಸಮಂತಾ ನಾಗ ಚೈತನ್ಯರೊಂದಿಗಿದ್ದ ಫೋಟೋಗಳನ್ನು ಇನ್​ಸ್ಟಾಗ್ರಾಂನಿಂದ ಡಿಲೀಟ್ ಮಾಡಿದ್ದರು. ಇದೀಗ ನಟಿ ನಾಗ ಚೈತನ್ಯರನ್ನು ಅನ್​ಫಾಲೋ ಮಾಡಿದ್ದಾರೆ. ಈ ನಡುವೆ ಫ್ಯಾನ್ಸ್ ಅಚ್ಚರಿಯ ವಿಚಾರವೊಂದನ್ನು ಗಮನಿಸಿದ್ದಾರೆ. ನಾಗ ಚೈತನ್ಯ ಮಾತ್ರ ಇನ್ನೂ ಸಮಂತಾರನ್ನು ಇನ್​ಸ್ಟಾಗ್ರಾಂನಲ್ಲಿ ಫಾಲೋ ಮಾಡುತ್ತಿದ್ದಾರೆ. ಸದ್ಯ ಈ ವಿಚಾರ ಅಭಿಮಾನಿ ವಲಯದಲ್ಲಿ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದೆ.

ಸಮಂತಾ ಹಾಗೂ ನಾಗ ಚೈತನ್ಯ 2017ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದರು. ಆದರೆ ವೃತ್ತಿ ಜೀವನದಲ್ಲಿ ಈರ್ವರ ಹಾದಿ ಭಿನ್ನ ಎಂದು ಅರಿತುಕೊಂಡ ನಂತರ ಬೇರೆಯಾಗುವ ನಿರ್ಧಾರ ಘೋಷಿಸಿದ್ದರು. ಪ್ರಸ್ತುತ ಸಮಂತಾ ಪ್ರವಾಸ, ಸಿನಿಮಾ ಎಂದು ಹಲವು ವಿಚಾರಗಳಲ್ಲಿ ತೊಡಗಿಸಿಕೊಂಡು ಸಕ್ರಿಯರಾಗಿದ್ದಾರೆ.

ಮಹಿಳಾ ಪ್ರಧಾನ ಪಾತ್ರಗಳಲ್ಲಿ ಸಮಂತಾ ಗುರುತಿಸಿಕೊಳ್ಳುತ್ತಿದ್ದು, ‘ಶಾಕುಂತಲಂ’, ‘ಕಾಥುವಾಕುಲ ರೆಂಡು ಕಾದಲ್’, ‘ಅರೇಂಜ್​ಮೆಂಟ್ಸ್ ಆಫ್ ಲವ್’ ಮೊದಲಾದ ಚಿತ್ರಗಳಲ್ಲಿ ಬಣ್ಣಹಚ್ಚುತ್ತಿದ್ದಾರೆ. ಇತ್ತೀಚೆಗೆ ‘ಪುಷ್ಪ: ದಿ ರೈಸ್’ ಚಿತ್ರದ ‘ಊ ಅಂಟಾವಾ’ ಹಾಡಿನಲ್ಲಿ ಹೆಜ್ಜೆಹಾಕಿದ್ದ ಸಮಂತಾ, ಸೆನ್ಸೇಶನ್ ಸೃಷ್ಟಿಸಿದ್ದರು. ಇದಕ್ಕಾಗಿ ಬರೋಬ್ಬರಿ 5 ಕೋಟಿ ರೂ ಸಂಭಾವನೆಯನ್ನು ನಟಿ ಪಡೆದಿದ್ದಾರೆ ಎಂದೂ ಸುದ್ದಿಯಾಗಿತ್ತು.

ನಾಗ ಚೈತನ್ಯ ಬಾಲಿವುಡ್ ಪ್ರವೇಶಕ್ಕೆ ಸಿದ್ಧರಾಗುತ್ತಿದ್ದಾರೆ. ಆಮಿರ್ ಖಾನ್ ನಟನೆಯ ‘ಲಾಲ್ ಸಿಂಗ್ ಛಡ್ಡಾ’ದಲ್ಲಿ ಪ್ರಮುಖ ಪಾತ್ರವನ್ನು ಅವರು ನಿರ್ವಹಿಸುತ್ತಿದ್ದಾರೆ. ಈ ಚಿತ್ರಕ್ಕೆ ಕರೀನಾ ಕಪೂರ್ ನಾಯಕಿಯಾಗಿದ್ದು, ಕಿರಣ್ ರಾವ್ ಹಾಗೂ ಆಮಿರ್ ಖಾನ್ ಜತೆಯಾಗಿ ನಿರ್ಮಿಸುತ್ತಿದ್ದಾರೆ.

ಇದನ್ನೂ ಓದಿ:

Samantha: ‘ಪುಷ್ಪ: ದಿ ರೂಲ್’ನಲ್ಲಿಲ್ಲ ಸಮಂತಾ ಮೋಡಿ? ಹೆಜ್ಜೆಹಾಕಲಿದ್ದಾರಂತೆ ಈ ಬಾಲಿವುಡ್ ಬ್ಯೂಟಿ

‘ದಿ ಕಾಶ್ಮೀರ್​ ಫೈಲ್ಸ್​’ ನಟರಿಗೆ ಸಿಕ್ಕಿದೆ ಕೋಟಿ ರೂ. ಸಂಬಳ; ಅತಿ ಹೆಚ್ಚು ಸಂಭಾವನೆ ಪಡೆದಿದ್ದು ಯಾರು?

ಅಯೋಧ್ಯೆಗೆ ಹೊರಟ ಸಚ್ಚಿದಾನಂದ ಸ್ವಾಮೀಜಿಗೆ ರೈಲಿನಲ್ಲಿ ವಿಶೇಷ ಸೌಲಭ್ಯ
ಅಯೋಧ್ಯೆಗೆ ಹೊರಟ ಸಚ್ಚಿದಾನಂದ ಸ್ವಾಮೀಜಿಗೆ ರೈಲಿನಲ್ಲಿ ವಿಶೇಷ ಸೌಲಭ್ಯ
ಸೇತುವೆಯಿಂದ ಕೆಳಗೆ ಬಿದ್ದರೂ ಯುವಕನ ಜೀವ ಉಳಿಸಿತು ಲೈಟ್ ಕಂಬ!
ಸೇತುವೆಯಿಂದ ಕೆಳಗೆ ಬಿದ್ದರೂ ಯುವಕನ ಜೀವ ಉಳಿಸಿತು ಲೈಟ್ ಕಂಬ!
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ಇಂಗ್ಲೆಂಡ್ ತಂಡವನ್ನು ಬಹಿರಂಗವಾಗಿ ಅಣಕಿಸಿದ ರೋಹಿತ್ ಶರ್ಮಾ
ಇಂಗ್ಲೆಂಡ್ ತಂಡವನ್ನು ಬಹಿರಂಗವಾಗಿ ಅಣಕಿಸಿದ ರೋಹಿತ್ ಶರ್ಮಾ
ಜಾತಿ ರಾಕ್ಷಸರಿಗೆ ಶಿಕ್ಷೆ ಆಗಲೇಬೇಕು
ಜಾತಿ ರಾಕ್ಷಸರಿಗೆ ಶಿಕ್ಷೆ ಆಗಲೇಬೇಕು