AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಶ್ಲೀಲ ಕಮೆಂಟ್ ಮಾಡಿದ ದರ್ಶನ್ ಫ್ಯಾನ್ಸ್; 7 ವರ್ಷ ಜೈಲು ಶಿಕ್ಷೆ ಆಗುತ್ತೆ ಹುಷಾರ್

ನಟಿ ರಮ್ಯಾ ಅವರಿಗೆ ದರ್ಶನ್ ಅಭಿಮಾನಿಗಳು ಅಶ್ಲೀಲವಾದ ಸಂದೇಶಗಳನ್ನು ಕಳಿಸಿದ್ದಾರೆ. ಈ ಬಗ್ಗೆ ತನಿಖೆ ಶುರುವಾಗಿದ್ದು, ತಪ್ಪು ಸಾಬೀತಾದರೆ ಕಿಡಿಗೇಡಿಗಳಿಗೆ 7 ವರ್ಷ ಜೈಲು ಶಿಕ್ಷೆ ಆಗಲಿದೆ. ಈ ಬಗ್ಗೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಅವರು ಟಿವಿ9 ಜೊತೆ ಮಾತನಾಡಿದ್ದಾರೆ.

ಅಶ್ಲೀಲ ಕಮೆಂಟ್ ಮಾಡಿದ ದರ್ಶನ್ ಫ್ಯಾನ್ಸ್; 7 ವರ್ಷ ಜೈಲು ಶಿಕ್ಷೆ ಆಗುತ್ತೆ ಹುಷಾರ್
Ramya Divya Spandana, Nagalakshmi Choudhary, Darshan
ಮದನ್​ ಕುಮಾರ್​
|

Updated on: Jul 28, 2025 | 4:29 PM

Share

ನಟ ದರ್ಶನ್ ಅವರ ಅಭಿಮಾನಿಗಳ ವರ್ತನೆ ಮಿತಿ ಮೀರಿದೆ. ಕೊಲೆಯಾದ ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗಬೇಕು ಎಂದು ಹೇಳಿರುವ ನಟಿ ರಮ್ಯಾ ಬಗ್ಗೆ ದರ್ಶನ್ ಫ್ಯಾನ್ಸ್ (Darshan Fans) ಬಹಳ ಅಶ್ಲೀಲವಾಗಿ ಕಮೆಂಟ್ ಮಾಡಿದ್ದಾರೆ. ನಟಿಗೆ ನೇರವಾಗಿ ಅವಾಚ್ಯ ಪದಗಳ ಸಂದೇಶ ಕಳಿಸಲಾಗಿದೆ. ಅಂತಹ ಕಿಡಿಗೇಡಿಗಳ ಮೇಲೆ ಕ್ರಮ ಜರುಗಿಸಲು ರಾಜ್ಯ ಮಹಿಳಾ ಆಯೋಗ (Women Commission) ಸಿದ್ಧವಾಗಿದೆ. ಕೆಟ್ಟ ಸಂದೇಶ ಕಳಿಸಿದವರ ಮೇಲೆ ಕ್ರಮ ತೆಗೆದುಕೊಳ್ಳುವಂತೆ ಪೊಲೀಸ್ ಆಯುಕ್ತರಿಗೆ ಮಹಿಳಾ ಆಯೋಗ ತಿಳಿಸಿದೆ. ಈ ಬಗ್ಗೆ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ (Nagalakshmi Choudhary) ಅವರು ಟಿವಿ9ಗೆ ಪ್ರತಿಕ್ರಿಯೆ ನೀಡಿದ್ದಾರೆ.

‘ಈ ರೀತಿ ಅವಹೇಳನಕಾರಿ ಪದಗಳನ್ನು ಉಪಯೋಗಿಸಿ, ಹೆಣ್ಣಿನ ಮಾನಹಾನಿ ಮಾಡುವುದು ದೊಡ್ಡ ಅಪರಾಧ. ಇದನ್ನು ನಾವು ಮಾಧ್ಯಮಗಳಲ್ಲಿ ನೋಡಿದ್ದೇನೆ. ನಮಗೆ ದೂರು ಕೂಡ ಬಂದಿದೆ. ಹಾಗಾಗಿ ನಾವು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದೇವೆ. ಅಶ್ಲೀಲವಾದ ಕಮೆಂಟ್​​ಗಳನ್ನು ಮಾಡುತ್ತಿರುವುದು ಕಾನೂನಿನ ಅಡಿಯಲ್ಲಿ ದೊಡ್ಡ ಅಪರಾಧ. ನಾವು ಪೊಲೀಸ್ ಆಯುಕ್ತರಿಗೆ ಪತ್ರವನ್ನು ಬರೆದಿದ್ದೇವೆ’ ಎಂದು ನಾಗಲಕ್ಷ್ಮಿ ಚೌಧರಿ ಅವರು ಹೇಳಿದ್ದಾರೆ.

‘ಕೂಡಲೇ ಕ್ರಮ ಜರುಗಿಸಿ, ಈಗಾಗಲೇ ಹಾಕಿರುವ ಕಮೆಂಟ್​ಗಳನ್ನು ಬ್ಲಾಕ್ ಮಾಡಿಸಿ, ಅಶ್ಲೀಲ ಸಂದೇಶ ಕಳಿಸಿದವರ ಮೇಲೆ ಕ್ರಮ ತೆಗೆದುಕೊಂಡು, ವರದಿ ಸಲ್ಲಿಸಿ ಎಂದು ನಾವು ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿದ್ದೇವೆ. ಇದು ರಮ್ಯಾ ಬಗ್ಗೆ ಮಾತ್ರವಲ್ಲ, ಯಾರ ಬಗ್ಗೆ ಈ ರೀತಿ ಕಮೆಂಟ್ ಮಾಡಿದರೂ ಅದು ತಪ್ಪು. ಸ್ವತಂತ್ರವಾಗಿ ಮಾತನಾಡುವ ಹಕ್ಕು ಎಲ್ಲರಿಗೂ ಇದೆ. ಆದರೆ ಅದು ಒಳ್ಳೆಯ ಒಂದು ಚರ್ಚೆ ಆಗಬೇಕೇ ಹೊರತು ಹೆಣ್ಮಗಳ ಬಗ್ಗೆ ಇಷ್ಟು ಕೆಟ್ಟ ರೀತಿಯಲ್ಲಿ, ಸೋಶಿಯಲ್ ಮೀಡಿಯಾದಲ್ಲಿ ಮಾತನಾಡುವುದು ಸರಿಯಲ್ಲ’ ಎಂದಿದ್ದಾರೆ ನಾಗಲಕ್ಷ್ಮಿ ಚೌಧರಿ.

ಇದನ್ನೂ ಓದಿ
Image
ದರ್ಶನ್​ಗೆ ದೇವರ ಮೇಲೆ ಎಷ್ಟು ಭಕ್ತಿ ನೋಡಿ; ಇಲ್ಲಿದೆ ವಿಡಿಯೋ ಸಾಕ್ಷಿ
Image
ಪತ್ನಿಯೊಂದಿಗೆ ಚಾಮುಂಡೇಶ್ವರಿ ತಾಯಿ ದರ್ಶನ ಪಡೆದ ನಟ ದರ್ಶನ್
Image
ಫಾರ್ಮ್​ಹೌಸ್​ನಲ್ಲಿ ಎತ್ತಿನಗಾಡಿ ಓಡಿಸಿದ ನಟ ದರ್ಶನ್; ದಾಸನ ಜಾಲಿ ಮೂಡ್
Image
ಕರ್ನಾಟಕದ ಮುಖ್ಯ ಮಂತ್ರಿಯಾದ ನಟ ದರ್ಶನ್, ಪಕ್ಷ ಯಾವುದು ಗೊತ್ತೆ?

‘ಕಾನೂನು ಇದೆ, ನ್ಯಾಯಾಲಯ ಇದೆ. ತಪ್ಪು ಸಾಬೀತಾದರೆ 7 ವರ್ಷ ಜೈಲು ಶಿಕ್ಷೆ ಆಗುತ್ತದೆ. ಇದು ನಿಮಗೆ ನೆನಪಿರಲಿ. ನೀವು ಕಮೆಂಟ್ ಮಾಡುವುದಕ್ಕೂ ಮುಂಚೆ ಭವಿಷ್ಯದ ಬಗ್ಗೆ ಆಲೋಚನೆ ಮಾಡಬೇಕು. ಇಂಥ ಕಮೆಂಟ್​ಗಳನ್ನು ಮಾಡುವುದರಿಂದ ದೂರ ಇರಿ ಎಂದು ನಾನು ಆಯೋಗದ ಅಧ್ಯಕ್ಷೆಯಾಗಿ ಹೇಳುತ್ತಿದ್ದೇನೆ’ ಎಂದು ನಾಗಲಕ್ಷ್ಮಿ ಚೌಧರಿ ಅವರು ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: ದರ್ಶನ್ ಅಭಿಮಾನಿಗಳ ವಿರುದ್ಧ ರೊಚ್ಚಿಗೆದ್ದಿರುವ ರಮ್ಯಾರಿಂದ ಸೈಬರ್ ಪೊಲೀಸ್​ಗೆ ದೂರು ನೀಡುವ ನಿರ್ಧಾರ

ಪತ್ರದಲ್ಲಿ ಏನಿದೆ?

‘ಮಾಜಿ ಸಂಸದೆ ಮತ್ತು ಚಲನಚಿತ್ರ ನಟಿ ರಮ್ಯಾ ಅವರ ವಿರುದ್ಧ, ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಸಂದೇಶಗಳನ್ನು ನೀಡಿರುವ ಬಗ್ಗೆ ವರದಿ ಆಗಿರುತ್ತದೆ. ಇದರಿಂದ ಮಹಿಳೆಯ ಸ್ಥಾನಮಾನಕ್ಕೆ ತೊಂದರೆ ಆಗುತ್ತಿದ್ದು, ಈ ಸಂಬಂಧ ರಾಜ್ಯ ಮಹಿಳಾ ಆಯೋಗವು ಇದನ್ನು ಗಂಭೀರವಾಗಿ ಪರಿಗಣಿಸಿರುತ್ತದೆ. ಆದ್ದರಿಂದ ಸದರಿ ಪ್ರಕರಣದ ಬಗ್ಗೆ ನಿಯಮಾನುಸಾರ ಪರಿಶೀಲಿಸಿ, ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗುತ್ತಿರುವ ಅವಹೇಳನಕಾರಿ ಸಂದೇಶಗಳನ್ನು ಕೂಡಲೇ ಸ್ಥಗಿತಗೊಳಿಸಿ, ಸಂಬಂಧಿಸಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿದೆ’ ಎಂದು ಮಹಿಳಾ ಆಯೋಗದ ಕಡೆಯಿಂದ ಪೊಲೀಸ್ ಆಯುಕ್ತರಿಗೆ ಪತ್ರದ ಮೂಲಕ ತಿಳಿಸಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ನಕಲಿ ಔಷಧ ಕಿಂಗ್​ಪಿನ್ ಪ್ರಶಾಂತ್ ಭಾರತದಲ್ಲೇ ಇರುವ ಬಗ್ಗೆ ಅನುಮಾನ!
ನಕಲಿ ಔಷಧ ಕಿಂಗ್​ಪಿನ್ ಪ್ರಶಾಂತ್ ಭಾರತದಲ್ಲೇ ಇರುವ ಬಗ್ಗೆ ಅನುಮಾನ!
ಮೈಸೂರಿನಲ್ಲಿ ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ 2026
ಮೈಸೂರಿನಲ್ಲಿ ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ 2026
ಸರ್ಕಾರಿ ಆಸ್ಪತ್ರೆಯ ಪಾಳುಬಿದ್ದ ಕಟ್ಟಡದಲ್ಲಿ ಲಕ್ಷಾಂತರ ಮೌಲ್ಯದ ಔಷಧ ಪತ್ತೆ!
ಸರ್ಕಾರಿ ಆಸ್ಪತ್ರೆಯ ಪಾಳುಬಿದ್ದ ಕಟ್ಟಡದಲ್ಲಿ ಲಕ್ಷಾಂತರ ಮೌಲ್ಯದ ಔಷಧ ಪತ್ತೆ!
ನಾಗೇಂದ್ರ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿ-ಜೆಡಿಎಸ್ ಪ್ರತಿಭಟನೆ
ನಾಗೇಂದ್ರ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿ-ಜೆಡಿಎಸ್ ಪ್ರತಿಭಟನೆ
ಮಡಿಕೇರಿ-ಕೊಡಗು ಭಾಗದಲ್ಲಿ ಕಾಫಿ ಬೆಳೆಗಾರರಿಗೆ ಎದುರಾಯ್ತು ಹೊಸ ತಲೆನೋವು
ಮಡಿಕೇರಿ-ಕೊಡಗು ಭಾಗದಲ್ಲಿ ಕಾಫಿ ಬೆಳೆಗಾರರಿಗೆ ಎದುರಾಯ್ತು ಹೊಸ ತಲೆನೋವು
ಮಂಗಳೂರಿನಲ್ಲಿ ಆಹಾರ ಪರೀಕ್ಷಾ ಲ್ಯಾಬ್‌ನ ಅಗತ್ಯ
ಮಂಗಳೂರಿನಲ್ಲಿ ಆಹಾರ ಪರೀಕ್ಷಾ ಲ್ಯಾಬ್‌ನ ಅಗತ್ಯ
ಬೆಂಗಳೂರಿನ 2ನೇ ವಿಮಾನ ನಿಲ್ದಾಣಕ್ಕೆ ಹಾರೋಹಳ್ಳಿಯಲ್ಲಿ ಸ್ಥಳ ಪರಿಶೀಲನೆ
ಬೆಂಗಳೂರಿನ 2ನೇ ವಿಮಾನ ನಿಲ್ದಾಣಕ್ಕೆ ಹಾರೋಹಳ್ಳಿಯಲ್ಲಿ ಸ್ಥಳ ಪರಿಶೀಲನೆ
ಹನೂರು ಪ್ರಕರಣ: ಗೃಹ ಪ್ರವೇಶದ ಸಂಭ್ರಮ ತುಂಬಿರಬೇಕಿದ್ದ ಮನೆಯಲ್ಲೀಗ ಸೂತಕ!
ಹನೂರು ಪ್ರಕರಣ: ಗೃಹ ಪ್ರವೇಶದ ಸಂಭ್ರಮ ತುಂಬಿರಬೇಕಿದ್ದ ಮನೆಯಲ್ಲೀಗ ಸೂತಕ!
ನಿಮ್ಮ ಕನಸಿನ ಮನೆ ಅಥವಾ ಆಸ್ತಿಯನ್ನು ಖರೀದಿಸುವ ಸುವರ್ಣಾವಕಾಶ ಈಗ ನಿಮ್ಮದು
ನಿಮ್ಮ ಕನಸಿನ ಮನೆ ಅಥವಾ ಆಸ್ತಿಯನ್ನು ಖರೀದಿಸುವ ಸುವರ್ಣಾವಕಾಶ ಈಗ ನಿಮ್ಮದು
ಬೆಂಗಳೂರಿನಲ್ಲಿ ಕಾರಿನಲ್ಲಿ ಸಾಗಿಸುತ್ತಿದ್ದ 9 ಕೋಟಿ ರೂ. ನಗದು ಜಪ್ತಿ
ಬೆಂಗಳೂರಿನಲ್ಲಿ ಕಾರಿನಲ್ಲಿ ಸಾಗಿಸುತ್ತಿದ್ದ 9 ಕೋಟಿ ರೂ. ನಗದು ಜಪ್ತಿ