AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೇಗೆ ಮಾತನಾಡಬೇಕು? ಅಣ್ಣಾವ್ರು ಹೇಳಿಕೊಟ್ಟ ಪಾಠ ನೆನಪಿಸಿಕೊಂಡ ನಟಿ ಅಂಬಿಕಾ

Dr Rarjkumar: ‘ಚಲಿಸುವ ಮೋಡಗಳು’, ‘ಎರಡು ನಕ್ಷತ್ರಗಳು’, ‘ಭಕ್ತ ಪ್ರಹಲ್ಲಾದ’, ‘ಅಪೂರ್ವ ಸಂಗಮ’ ಇನ್ನೂ ಹಲವು ಸಿನಿಮಾಗಳಲ್ಲಿ ನಟಿಸಿರುವ ಹಿರಿಯ ನಟಿ ಅಂಬಿಕ. ಈಗಲೂ ಸಹ ಆಗೊಮ್ಮೆ ಈಗೊಮ್ಮೆ ಕನ್ನಡ ಸಿನಿಮಾಗಳಲ್ಲಿ ನಟಿಸುವುದುಂಟು. ಅಂಬಿಕ ಅವರು ಇತ್ತೀಚೆಗೆ ತಮಿಳು ಯೂಟ್ಯೂಬ್ ಚಾನೆಲ್ ಒಂದಕ್ಕೆ ನೀಡಿರುವ ಸಂದರ್ಶನದಲ್ಲಿ ಕನ್ನಡದ ಮೇರು ನಟ ಡಾ ರಾಜ್​ಕುಮಾರ್ ಅವರನ್ನು ಕೊಂಡಾಡಿದ್ದಾರೆ. ಅದರಲ್ಲೂ ವಿಶೇಷವಾಗಿ ರಾಜ್​ಕುಮಾರ್ ಅವರಿಗೆ ಭಾಷೆಯ ಮೇಲೆ ಇದ್ದ ಪ್ರೀತಿ, ಕಾಳಜಿ ಮತ್ತು ಹಿಡಿತ ಎಂಥಹದ್ದು ಎಂದು ವಿವರಿಸಿದ್ದಾರೆ.

ಹೇಗೆ ಮಾತನಾಡಬೇಕು? ಅಣ್ಣಾವ್ರು ಹೇಳಿಕೊಟ್ಟ ಪಾಠ ನೆನಪಿಸಿಕೊಂಡ ನಟಿ ಅಂಬಿಕಾ
Dr Rajkumar Ambika
ಮಂಜುನಾಥ ಸಿ.
|

Updated on:May 14, 2026 | 1:41 PM

Share

ಹಿರಿಯ ನಟಿ ಅಂಬಿಕಾ (Ambika) ಮೂಲತಃ ಕೇರಳದವರು ಆದರೆ ಕನ್ನಡದಲ್ಲಿ ಹಲವಾರು ನೆನಪುಳಿಯುವ ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ವಿಶೇಷವಾಗಿ ಡಾ ರಾಜ್​ಕುಮಾರ್ ಜೊತೆಗೆ ‘ಚಲಿಸುವ ಮೋಡಗಳು’, ‘ಎರಡು ನಕ್ಷತ್ರಗಳು’, ‘ಭಕ್ತ ಪ್ರಹಲ್ಲಾದ’, ‘ಅಪೂರ್ವ ಸಂಗಮ’ ಇನ್ನೂ ಕೆಲವು. ಅಂಬರೀಶ್, ವಿಷ್ಣುವರ್ಧನ್ ಜೊತೆಗೆ ಹಲವು ಸಿನಿಮಾಗಳಲ್ಲಿ ನಟಿಸಿರುವ ಅಂಬಿಕ. ಈಗಲೂ ಸಹ ಆಗೊಮ್ಮೆ ಈಗೊಮ್ಮೆ ಕನ್ನಡ ಸಿನಿಮಾಗಳಲ್ಲಿ ನಟಿಸುವುದುಂಟು. ಅಂಬಿಕ ಅವರು ಇತ್ತೀಚೆಗೆ ತಮಿಳು ಯೂಟ್ಯೂಬ್ ಚಾನೆಲ್ ಒಂದಕ್ಕೆ ನೀಡಿರುವ ಸಂದರ್ಶನದಲ್ಲಿ ಕನ್ನಡದ ಮೇರು ನಟ ಡಾ ರಾಜ್​ಕುಮಾರ್ ಅವರನ್ನು ಕೊಂಡಾಡಿದ್ದಾರೆ. ಅದರಲ್ಲೂ ವಿಶೇಷವಾಗಿ ರಾಜ್​ಕುಮಾರ್ ಅವರಿಗೆ ಭಾಷೆಯ ಮೇಲೆ ಇದ್ದ ಪ್ರೀತಿ, ಕಾಳಜಿ ಮತ್ತು ಹಿಡಿತ ಎಂಥಹದ್ದು ಎಂದು ವಿವರಿಸಿದ್ದಾರೆ.

‘ನಾನು ಆರಂಭದಲ್ಲಿ ತೆಲುಗು ಸಿನಿಮಾ ಮಾಡಿದಾಗ ನನಗೆ ಹಿಟ್ ಸಿಗಲಿಲ್ಲ. ಅದೇ ಸಮಯದಲ್ಲಿ ಕನ್ನಡದಲ್ಲಿ ನಟಿಸಿದ ಎರಡು ಸಿನಿಮಾಗಳು ಭಾರಿ ದೊಡ್ಡ ಹಿಟ್ ಆದವು. ರಾಜ್​ಕುಮಾರ್ ಅವರ ಜೊತೆಗೆ ನಟಿಸಿದ ‘ಚಲಿಸುವ ಮೋಡಗಳು’ ಭಾರಿ ದೊಡ್ಡ ಹಿಟ್. ಅವರೊಟ್ಟಿಗೆ ನಟಿಸುತ್ತಾ ನಾನು ಕನ್ನಡ ಕಲಿತೆ. ನಾನು ಕನ್ನಡ ಕಲಿಯುವಲ್ಲಿ 80% ಸಹಾಯ ಮಾಡಿದ್ದು ಡಾ ರಾಜ್​ಕುಮಾರ್ ಅವರೇ. ಅವರು ಸದಾ ಹೇಳುತ್ತಿದ್ದರು, ‘ಭಾಷೆಯನ್ನು ಯಾರು ಬೇಕಾದರೂ ಮಾತನಾಡಬಹುದು, ಆದರೆ ಆ ಭಾಷೆಯನ್ನು ಸುಂದರವಾಗಿ ಮಾತನಾಡುವುದು ಬಹಳ ಮುಖ್ಯ’ ಎಂದು ಅಣ್ಣಾವ್ರ ತಮಗೆ ಹೇಳಿದ್ದ ಮಾತುಗಳನ್ನು ಹೇಳಿದ್ದಾರೆ.

‘ನಾವು ಬಳಸುವ ಪದಗಳಲ್ಲಿ ಮರ್ಯಾದೆ, ಗೌರವದ ಜೊತೆಗೆ ಸುಂದರತೆಯೂ ಇರಬೇಕು ಹಾಗಿದ್ದಲ್ಲಿ ಮಾತ್ರವೇ ನಾವು ಭಾಷೆಗೆ ಗೌರವ ಕೊಟ್ಟಂತಾಗುತ್ತದೆ, ನಾವು ಸಂಭಾಷಿಸುತ್ತಿರುವ ವ್ಯಕ್ತಿಗೆ ಗೌರವ ನೀಡದಂತೆ ಆಗುತ್ತದೆ. ನಾವು ಆಡುವ ಭಾಷೆ ಸುಂದರವಾಗುತ್ತದೆ’ ಎಂದು ರಾಜ್​ಕುಮಾರ್ ತಮಗೆ ಹೇಳಿದ್ದಾಗಿ ಅಂಬಿಕ ಅವರು ಹೇಳಿದ್ದಾರೆ. ಇದನ್ನು ಉದಾಹರಣೆ ಸಹಿತ ವಿವರಿಸಿರುವ ಹಿರಿಯ ನಟಿ, ‘ಏನು?’ ಎಂದು ಕೇಳುವುದರ ಬದಲು ‘ಹೇಗಿದ್ದೀರಿ’ ಎಂದು ಕೇಳುವುದಕ್ಕೂ ಎಷ್ಟು ವ್ಯತ್ಯಾಸ ಇದೆ ಅಲ್ಲವೆ. ಅದನ್ನೇ ರಾಜ್​ಕುಮಾರ್ ಅವರು ನನಗೆ ಹೇಳಿಕೊಟ್ಟಿದ್ದು’ ಎಂದು ಖುಷಿಯಿಂದ ಮಾತನಾಡಿದ್ದಾರೆ ಅಂಬಿಕ.

ಇದನ್ನೂ ಓದಿ:‘ನಾ ನಿನ್ನ ಬಿಡಲಾರೆ’: ದುರ್ಗಾಗೆ ಗೊತ್ತಾಯ್ತು ಅಂಬಿಕಾ ತನ್ನ ಅಕ್ಕ ಅನ್ನೋ ಸತ್ಯ

‘ಆಡುವ ಮಾತುಗಳಲ್ಲಿ ಮರ್ಯಾದೆ ಇರಬೇಕು’ ಎಂದು ಅಂದು ಅಣ್ಣಾವ್ರು ನನಗೆ ಹೇಳಿದ್ದರು. ಅದನ್ನೇ ಈಗಲೂ ನಾನು ಪಾಲಿಸಿಕೊಂಡು ಬಂದಿದ್ದೀನಿ. ‘ಕೆಟ್ಟದಾಗಿ ಮಾತನಾಡುವುದು, ಏಕವಚನದಲ್ಲಿ ಮಾತನಾಡುವುದು, ಕೆಟ್ಟ ಪದಗಳನ್ನು ಮಾತಿನ ನಡುವೆ ಬಳಸುವುದು ಇದ್ಯಾವುದನ್ನೂ ನಾನು ಮಾಡುವುದಿಲ್ಲ. ಅದಕ್ಕೆ ರಾಜ್​ಕುಮಾರ್ ಅವರು ಹೇಳಿದ ಮಾತು ಕಾರಣ’ ಎಂದು ಅಂಬಿಕಾ ಅವರು ಹೇಳಿದ್ದಾರೆ.

ಡಾ ರಾಜ್​ಕುಮಾರ್ ಅವರಷ್ಟು ಅದ್ಭುತವಾಗಿ ಕನ್ನಡ ಮಾತನಾಡಿದ ಮತ್ತೊಬ್ಬ ನಟ ಕನ್ನಡ ಚಿತ್ರರಂಗದಲ್ಲಿ ಇಲ್ಲವೆಂದೇ ಹೇಳಬೇಕು. ಪದಗಳ ನಡುವಿನ ಏರಿಳಿತ, ಹೃಸ್ವಸ್ವರ, ದೀರ್ಘಸ್ವರಗ, ಅಲ್ಪ ಪ್ರಾಣ, ಮಹಾ ಪ್ರಾಣಗಳನ್ನು ಸಹ ರಾಜ್​ಕುಮಾರ್ ಅವರು ತಪ್ಪಿಸುತ್ತಿರಲಿಲ್ಲ. ಇದೆಲ್ಲದರ ಜೊತೆಗೆ ಅದ್ಭುತವಾದ ಸ್ವರದೊಂದಿಗೆ, ಏರಿಳಿತದೊಂದಿಗೆ ಅವರು ಮಾತನಾಡುತ್ತಿದ್ದರು, ಸಂಭಾಷಣೆ ಹೇಳುತ್ತಿದ್ದರು. ಇದುವೇ ಅವರನ್ನು ಕನ್ನಡದ ಕುಲಕಂಠೀರವನನ್ನಾಗಿ ಮಾಡಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:40 pm, Thu, 14 May 26

Follow Us
Manjunatha C
Manjunatha C

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More