AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಟಿ ಶ್ರುತಿ ಅವರ ಮೊದಲ ಸಂಪಾದನೆ ಎಷ್ಟು? ಅವರ ಮೊದಲ ಹೆಸರೇನು? ಇಲ್ಲಿದೆ ಕುತೂಹಲಕಾರಿ ವಿಚಾರ

ಶ್ರೀನಿವಾಸ ಮೂರ್ತಿ ನಿರ್ಮಾಪಣದ ‘ನಂಬಿದ್ರೆ ನಂಬಿ ಬಿಟ್ರೆ ಬಿಡಿ’ ಸಿನಿಮಾದಲ್ಲಿ ಶ್ರುತಿಗೆ ಮೊದಲ ಚಾನ್ಸ್ ಸಿಕ್ಕಿತು. ಬಾಲರಾಜ್ ಈ ಚಿತ್ರಕ್ಕೆ ಹೀರೋ ಆದರೆ, ಶ್ರುತಿ ನಾಯಕಿ. ಅವರು ಈ ಸಿನಿಮಾದಲ್ಲಿ ಗಮನ ಸೆಳೆದರು. ಆ ಬಳಿಕ ಸಿಕ್ಕಿದ್ದೇ, ‘ಆಸೆಗೊಬ್ಬ ಮೀಸೆಗೊಬ್ಬ’ ಸಿನಿಮಾ. ಶರಣ್ ಅವರು ಶ್ರುತಿ ಫೋಟೋನ ಶಿವಣ್ಣನಿಗೆ ತೋರಿಸಿದ್ದರು.

ನಟಿ ಶ್ರುತಿ ಅವರ ಮೊದಲ ಸಂಪಾದನೆ ಎಷ್ಟು? ಅವರ ಮೊದಲ ಹೆಸರೇನು? ಇಲ್ಲಿದೆ ಕುತೂಹಲಕಾರಿ ವಿಚಾರ
ಶ್ರುತಿ
ರಾಜೇಶ್ ದುಗ್ಗುಮನೆ
|

Updated on: Sep 18, 2024 | 7:00 AM

Share

ನಟಿ ಶ್ರುತಿ ಅವರಿಗೆ ಕನ್ನಡದ ಚಿತ್ರರಂಗದಲ್ಲಿ ಸಖತ್ ಬೇಡಿಕೆ ಇದೆ. ಅವರಿಗೆ ಇಂದು (ಸೆಪ್ಟೆಂಬರ್ 18) ಜನ್ಮದಿನ. ಸೋಶಿಯಲ್​ ಮೀಡಿಯಾದಲ್ಲಿ ಅವರಿಗೆ ಅಭಿಮಾನಿಗಳು ಶುಭಾಶಯ ಕೋರುತ್ತಾ ಇದ್ದಾರೆ. ಶ್ರುತಿ ಅವರು ಹೀರೋಯಿಯನ್ ಆಗಿ ಮಿಂಚಿದವರು. ಭಾವನಾತ್ಮಕ ಪಾತ್ರಗಳನ್ನು ಜೀವಿಸಿದ್ದಾರೆ. ಹಾಗಾದರೆ ಅವರ ಮೊದಲ ಸಂಭಾವನೆ ಎಷ್ಟು? ಮೊದಲ ಹೆಸರು ಏನು ಎಂಬ ಬಗ್ಗೆ ಇಲ್ಲಿದೆ ಮಾಹಿತಿ.

ನಿರ್ಮಾಪಕ ಶ್ರೀನಿವಾಸ ಮೂರ್ತಿ ಅವರು ‘ನಂಬಿದ್ರೆ ನಂಬಿ ಬಿಟ್ರೆ ಬಿಡಿ’ ಹೆಸರಿನ ಸಿನಿಮಾ ಮಾಡುತ್ತಿದ್ದರು. ಬಾಲರಾಜ್ ಈ ಚಿತ್ರಕ್ಕೆ ಹೀರೋ ಆದರೆ, ಪ್ರಿಯದರ್ಶಿನಿ (ಶ್ರುತಿ) ನಾಯಕಿ. ಅವರು ಈ ಸಿನಿಮಾದಲ್ಲಿ ಗಮನ ಸೆಳೆದರು. ಆ ಬಳಿಕ ಸಿಕ್ಕಿದ್ದೇ, ‘ಆಸೆಗೊಬ್ಬ ಮೀಸೆಗೊಬ್ಬ’ ಸಿನಿಮಾ. ಶರಣ್ ಅವರು ಶ್ರುತಿ ಫೋಟೋನ ಶಿವಣ್ಣನಿಗೆ ತೋರಿಸಿದ್ದರು. ಅಲ್ಲೇ ಇದ್ದ ಗೀತಾ ಶಿವರಾಜ್​ಕುಮಾರ್ ಅವರು ಶ್ರುತಿಯನ್ನು ಇಷ್ಟಪಟ್ಟರು. ‘ಆಸೆಗೊಬ್ಬ ಮೀಸೆಗೊಬ್ಬ’ ಚಿತ್ರದಲ್ಲಿ ಶಿವಣ್ಣನ ತಂಗಿ ಪಾತ್ರ ಮಾಡೋಕೆ ಅವರಿಗೆ ಚಾನ್ಸ್ ನೀಡಿದರು.

ಆ ಬಳಿಕ ದ್ವಾರಕೀಶ್ ನಿರ್ದೇಶಿಸಿ, ನಿರ್ಮಿಸಿರುವ ‘ಶ್ರುತಿ’ ಹೆಸರಿನ ಸಿನಿಮಾದಲ್ಲಿ ನಟಿಯಾಗೋ ಚಾನ್ಸ್ ಪಡೆದರು. ಆ ಕಾಲದ ಬೇಡಿಕೆಯ ಹೀರೋ ಆಗಿದ್ದ ಸುನೀಲ್ ಅವರು ಈ ಚಿತ್ರಕ್ಕೆ ಹೀರೋ ಆಗಿದ್ದರು. ಅಲ್ಲಿಂದ ಶ್ರುತಿ ಅವರು ಹಿಂದಿರುಗಿ ನೋಡಲೇ ಇಲ್ಲ. ಪ್ರಿಯದರ್ಶಿನಿ ಎಂದಿದ್ದ ಅವರು ಹೆಸರು ಶ್ರುತಿ ಎಂದು ಬದಲಾಗಿದ್ದು ಕೂಡ ಇದೇ ಸಿನಿಮಾದಿಂದ.

ಶ್ರುತಿ ಅವರ ಮೊದಲ ಸಂಭಾವನೆ 1000 ರೂಪಾಯಿ. ‘ನಂಬಿದ್ರೆ ನಂಬಿ ಬಿಟ್ರೆ ಬಿಡಿ’ ಚಿತ್ರಕ್ಕಾಗಿ ಅವರಿಗೆ ಶ್ರೀನಿವಾಸ್​ಮೂರ್ತಿ ಈ ಹಣ ನೀಡಿದ್ದರು. ಸಿನಿಮಾಗೂ ಮೊದಲೂ ‘ಪ್ರೇಮದ ಕಾರಂಜಿ’ ಹೆಸರಿನ ಧಾರಾವಾಹಿಯಲ್ಲೂ ನಟಿಸಿದ್ದರು.

ಇದನ್ನೂ ಓದಿ: ‘ಹೇಮಾ ಸಮಿತಿ ರೀತಿಯೇ ಸ್ಯಾಂಡಲ್​ವುಡ್​ನಲ್ಲೂ ಒಂದು ಸಮಿತಿಯ ಅಗತ್ಯವಿದೆ’; ಶ್ರುತಿ ಹರಿಹರನ್

2015ರಲ್ಲಿ ‘ಬಿಗ್ ಬಾಸ್ ಕನ್ನಡ ಸೀಸನ್ 3’ರ ಭಾಗವಾಗಿದ್ದರು. ಇದರ ವಿನ್ನರ್ ಕೂಡ ಆದರು. ಕನ್ನಡ ಬಿಗ್ ಬಾಸ್ ಇತಿಹಾಸದಲ್ಲಿ ಗೆಲುವು ಕಂಡ ಏಕೈಕ ಮಹಿಳಾ ಸ್ಪರ್ಧಿ ಎಂದರೆ ಅದು ಶ್ರುತಿ ಅನ್ನೋದು ವಿಶೇಷ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.