ಆ್ಯಮಿ ಜಾಕ್ಸನ್​ ಸಂಸಾರದಲ್ಲಿ ಬಿರುಕು? ಸೂಚನೆ ಕೊಟ್ಟ ‘ದಿ ವಿಲನ್​’ ನಟಿ

TV9 Digital Desk

|

Updated on:Jul 29, 2021 | 9:15 AM

Amy Jackson: ಬ್ರಿಟಿಷ್​ ಉದ್ಯಮಿ ಮ್ಯಾಗ್ನೇಜ್ ಜಾರ್ಜ್ ಜತೆ ಆ್ಯಮಿ ರಿಲೇಶನ್​ಶಿಪ್​ನಲ್ಲಿದ್ದರು. ಆ್ಯಮಿ ಗರ್ಭ ಧರಿಸಿದ ನಂತರದಲ್ಲಿ ಇಬ್ಬರೂ ಎಂಗೇಜ್​ಮೆಂಟ್​ ಮಾಡಿಕೊಂಡರು. 2019ರಲ್ಲಿ ಆ್ಯಮಿಗೆ ಗಂಡು ಮಗು ಜನಿಸಿತು.

ಆ್ಯಮಿ ಜಾಕ್ಸನ್​ ಸಂಸಾರದಲ್ಲಿ ಬಿರುಕು? ಸೂಚನೆ ಕೊಟ್ಟ ‘ದಿ ವಿಲನ್​’ ನಟಿ
ಆ್ಯಮಿ ಜಾಕ್ಸನ್​ ಸಂಸಾರದಲ್ಲಿ ಬಿರುಕು? ಇನ್​ಸ್ಟಾಗ್ರಾಮ್​ನಲ್ಲಿ ಸೂಚನೆ ಕೊಟ್ಟ ‘ದಿ ವಿಲನ್​’ ನಟಿ
Follow us

ನಟಿ ಆ್ಯಮಿ ಜಾಕ್ಸನ್​ ಕನ್ನಡದ ‘ದಿ ವಿಲನ್’​ ಸಿನಿಮಾದಲ್ಲಿ ಸುದೀಪ್​ಗೆ ಜತೆಯಾಗಿ ಕಾಣಿಸಿಕೊಂಡಿದ್ದರು. 8 ವರ್ಷಗಳ ಕಾಲ ಚಿತ್ರರಂಗದಲ್ಲಿ ಆ್ಯಕ್ಟಿವ್ ಆಗಿದ್ದ ಅವರು ಸಾಕಷ್ಟು ಹಿಟ್​ ಚಿತ್ರಗಳಲ್ಲಿ ನಟಿಸಿದರು. ಈಗ ಅವರ ಸಂಸಾರದಲ್ಲಿ ಬಿರುಗಾಳಿ ಬೀಸುವ ಸೂಚನೆ ಸಿಕ್ಕಿದೆ. ಇನ್​ಸ್ಟಾಗ್ರಾಮ್​ನಲ್ಲಿ ಆ್ಯಮಿ ಹೀಗೊಂದು ಸೂಚನೆ ನೀಡಿದ್ದಾರೆ.  

ಬ್ರಿಟಿಷ್​ ಉದ್ಯಮಿ ಮ್ಯಾಗ್ನೇಜ್ ಜಾರ್ಜ್ ಜತೆ ಆ್ಯಮಿ ರಿಲೇಶನ್​ಶಿಪ್​ನಲ್ಲಿದ್ದರು. ಗರ್ಭಿಣಿ ಆದ  ನಂತರದಲ್ಲಿ ಇಬ್ಬರೂ ಎಂಗೇಜ್​ಮೆಂಟ್​ ಮಾಡಿಕೊಂಡರು. 2019ರಲ್ಲಿ ಆ್ಯಮಿಗೆ ಗಂಡು ಮಗು ಜನಿಸಿತು. ಇದಾದ ನಂತರದಲ್ಲಿ ಆ್ಯಮಿ ಮಗುವಿನ ಜತೆ ಇರುವ ಸಾಕಷ್ಟು ಫೋಟೋಗಳನ್ನು ಹಂಚಿಕೊಂಡಿದ್ದರು. ಆದರೆ, ಈಗ ಮ್ಯಾಗ್ನೇಜ್​ ಜತೆ ಆ್ಯಮಿ ಬ್ರೇಕಪ್​ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ.

ಅಂದಹಾಗೆ, ಈ ಸುದ್ದಿ ಹುಟ್ಟಿಕೊಳ್ಳೋಕು ಒಂದು ಕಾರಣ ಇದೆ. ಮ್ಯಾಗ್ನೇಜ್ ಜತೆ ಇರುವ ಸಾಕಷ್ಟು ಫೋಟೋಗಳನ್ನು ಆ್ಯಮಿ ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದರು. ಆದರೆ, ಈಗ ಯಾವ ಫೋಟೋಗಳು ಅಲ್ಲಿಲ್ಲ. ಆ ಫೋಟೋಗಳನ್ನು ಆ್ಯಮಿ ಡಿಲೀಟ್​ ಮಾಡಿದ್ದಾರೆ. ಇದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ. ಆದರೆ, ಈ ಬಗ್ಗೆ ಅಧಿಕೃತ ಘೋಷಣೆ ಆಗಿಲ್ಲ. ಇದು ಆ್ಯಮಿ ಅಭಿಮಾನಿಗಳಿಗೆ ಬೇಸರ ತರಿಸಿದೆ. ಅಲ್ಲದೆ, ಅವರು ಸಂಬಂಧ ಕಡಿದುಕೊಳ್ಳೋಕೆ ಕಾರಣ ಏನು ಎನ್ನುವ ಪ್ರಶ್ನೆಯೂ ಕಾಡುತ್ತಿದೆ.

2010ರಲ್ಲಿ ತೆರೆಗೆ ಬಂದ ತಮಿಳಿನ ‘ಮದ್ರಾಸಪಟ್ಟಿಣಂ​’​ ಸಿನಿಮಾ ಮೂಲಕ ಆ್ಯಮಿ ಬಣ್ಣದ ಲೋಕಕ್ಕೆ ಕಾಲಿಟ್ಟರು. ನಂತರ ‘ಐ’, ‘ಥೆರಿ’ ಅಂಥ ಹಿಟ್​ ಚಿತ್ರಗಳಲ್ಲಿ ಆ್ಯಮಿ ನಟಿಸಿದರು. 2018ರಲ್ಲಿ ತೆರೆಗೆ ಬಂದ ಪ್ರೇಮ್​ ನಿರ್ದೇಶನದ ದಿ ವಿಲನ್​ ಸಿನಿಮಾಗೂ ಆ್ಯಮಿ ನಾಯಕಿಯಾದರು. ಅದೇ ವರ್ಷ ತೆರೆಗೆ ಬಂದ ‘2.0’ ಅವರ ಕೊನೆಯ ಚಿತ್ರ. ಇದಾದ ನಂತರದಲ್ಲಿ ಅವರು ಸಂಸಾರದಲ್ಲಿ ಬ್ಯುಸಿಯಾದರು. ಮತ್ತೆ ಚಿತ್ರರಂಗಕ್ಕೆ ಬರುವ ಇಚ್ಛೆಯನ್ನು ಇತ್ತೀಚೆಗೆ ಅವರು ವ್ಯಕ್ತಪಡಿಸಿದ್ದರು. ಸದ್ಯ, ಆ್ಯಮಿ ಬ್ರಿಟನ್​ನಲ್ಲಿಯೇ ಸೆಟಲ್​ ಆಗಿದ್ದಾರೆ.

ಇದನ್ನೂ ಓದಿ: ನನ್ನ ಕರೀಯರ್, ಬದುಕು ಮತ್ತು ವ್ಯವಹಾರವನ್ನು ಮಣ್ಣು ಪಾಲು ಮಾಡಿಬಿಟ್ಟೆ ಅಂತ ಕುಂದ್ರಾ ಮೇಲೆ ಕೂಗಾಡಿದರು ಶಿಲ್ಪಾ ಶೆಟ್ಟಿ

‘ಅಶ್ಲೀಲ ಸಿನಿಮಾದಲ್ಲಿ ನಟಿಸೋದು ತಪ್ಪು ಎಂದಿದ್ದು ಯಾರು?’ ಸಲ್ಮಾನ್​ ಖಾನ್​ ಮಾಜಿ ಪ್ರೇಯಸಿಯ ಖಡಕ್​ ಪ್ರಶ್ನೆ  

ತಾಜಾ ಸುದ್ದಿ

Related Stories

Click on your DTH Provider to Add TV9 Kannada