AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯಾವ ಪಕ್ಷಕ್ಕೂ ಸೇರಲ್ಲ ಹಿರಿಯ ನಟ ಅನಂತ್ ನಾಗ್; ವದಂತಿ ಹಬ್ಬಿಸಿದವರ ಬಗ್ಗೆ ಅಸಮಾಧಾನ

ಚುನಾವಣೆ ಸಂದರ್ಭದಲ್ಲಿ ಅನೇಕ ಸಿನಿಮಾ ಸೆಲೆಬ್ರಿಟಿಗಳು ರಾಜಕೀಯ ಸೇರಿ ತಮ್ಮ ಅದೃಷ್ಟಪರೀಕ್ಷೆ ಮಾಡಿಕೊಳ್ಳಲು ರೆಡಿ ಆಗಿದ್ದಾರೆ. ಫೆ.22ರಂದು ಅನಂತ್ ನಾಗ್ ಅವರು ಬಿಜೆಪಿ ಸೇರ್ಪಡೆ ಆಗುತ್ತಾರೆ ಎನ್ನಲಾಗಿತ್ತು.

ಯಾವ ಪಕ್ಷಕ್ಕೂ ಸೇರಲ್ಲ ಹಿರಿಯ ನಟ ಅನಂತ್ ನಾಗ್; ವದಂತಿ ಹಬ್ಬಿಸಿದವರ ಬಗ್ಗೆ ಅಸಮಾಧಾನ
Follow us
ರಾಜೇಶ್ ದುಗ್ಗುಮನೆ
|

Updated on:Apr 01, 2023 | 12:06 PM

ರಾಜ್ಯದಲ್ಲಿ ವಿಧಾನಸಭೆ ಚುನಾವಣೆಗೆ ಡೇಟ್ ಫಿಕ್ಸ್ ಆಗಿದೆ. ಮೇ 10ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಈ ಮಧ್ಯೆ ನಟ ಅನಂತ್ ನಾಗ್ ಅವರು ಬಿಜೆಪಿ ಸೇರ್ಪಡೆ ಆಗುತ್ತಾರೆ ಎನ್ನುವ ಸುದ್ದಿ ಹಬ್ಬಿತ್ತು. ಇತ್ತೀಚೆಗೆ ಅವರು ಪಕ್ಷ ಸೇರೋಕೆ ಕಾರ್ಯಕ್ರಮ ಕೂಡ ಏರ್ಪಡಿಸಲಾಗಿತ್ತು ಎನ್ನಲಾಗಿತ್ತು. ಆದರೆ, ಈ ಸುದ್ದಿಗೆ ಬ್ರೇಕ್ ಬಿದ್ದಿದೆ. ಅನಂತ್ ನಾಗ್ (Anant Nag) ಅವರು ಯಾವುದೇ ರಾಜಕೀಯ ಪಕ್ಷಕ್ಕೂ ಸೇರ್ಪಡೆ ಆಗುತ್ತಿಲ್ಲ. ಈ ಬಗ್ಗೆ ಅವರ ಆಪ್ತ ಮೂಲಗಳಿಂದಲೇ ಸ್ಪಷ್ಟನೆ ಸಿಕ್ಕಿದೆ. ಈ ವಿಚಾರದಲ್ಲಿ ಅವರು ದೃಢ ನಿರ್ಧಾರ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.

ಚುನಾವಣೆ ಸಂದರ್ಭದಲ್ಲಿ ಅನೇಕ ಸಿನಿಮಾ ಸೆಲೆಬ್ರಿಟಿಗಳು ರಾಜಕೀಯ ಸೇರಿ ತಮ್ಮ ಅದೃಷ್ಟಪರೀಕ್ಷೆ ಮಾಡಿಕೊಳ್ಳಲು ರೆಡಿ ಆಗಿದ್ದಾರೆ. ಫೆ.22ರಂದು ಅನಂತ್ ನಾಗ್ ಅವರು ಬಿಜೆಪಿ ಸೇರ್ಪಡೆ ಆಗುತ್ತಾರೆ ಎನ್ನಲಾಗಿತ್ತು. ಆದರೆ, ಅವರು ಅಂದು ಕಾರ್ಯಕ್ರಮಕ್ಕೆ ಹಾಜರಿ ಹಾಕಿಲ್ಲ. ಇದು ತೀವ್ರ ಕುತೂಹಲ ಮೂಡಿಸಿತ್ತು. ಅವರನ್ನು ಬಿಜೆಪಿ ನಾಯಕರು ಸಂಪರ್ಕಿಸಿದ್ದು ನಿಜ, ಆದರೆ, ಆಗ ಅವರಿಗೆ ರಾಜಕೀಯ ಸೇರುವ ಆಲೋಚನೆ ಇರಲಿಲ್ಲ.

ಇದನ್ನೂ ಓದಿ: Yogi Mimicry: ಶಿವಣ್ಣ, ಅನಂತ್​ ನಾಗ್​ ರೀತಿ ಮಿಮಿಕ್ರಿ ಮಾಡಿದ ಯೋಗಿ ಪ್ರತಿಭೆ ಕಂಡು ಜಗ್ಗೇ​ಶ್​ ಫಿದಾ

ಇಂದು (ಏಪ್ರಿಲ್ 1) ದೆಹಲಿಯಲ್ಲಿ ಅನಂತ್​ ನಾಗ್ ಅವರು ಬಿಜೆಪಿ ಸೇರ್ಪಡೆಯಾಗ್ತಾರೆ ಅನ್ನೋ ವದಂತಿ ಹಬ್ಬಿತ್ತು. ಅನಂತ್ ನಾಗ್ ಅವರು ಬೆಂಗಳೂರಿನಲ್ಲೇ ಇದ್ದಾರೆ. ‘ಆ ರೀತಿಯ ಯಾವ ಆಲೋಚನೆ ಇಲ್ಲ. ಯಾವ ಪಕ್ಷಕ್ಕೂ ಸೇರಲ್ಲ. ಇದನ್ನು ಯಾರು ಹಬ್ಬಿಸ್ತಿದ್ದಾರೋ ನಂಗೆ ಗೊತ್ತಿಲ್ಲ’ ಎಂದು ಅನಂತ್ ನಾಗ್ ಬೇಸರ ವ್ಯಕ್ತಪಡಿಸಿರುವುದಾಗಿ ಅವರ ಆಪ್ತ ಮೂಲಗಳು ಟಿವಿನೈನ್ ಕನ್ನಡಕ್ಕೆ ಸ್ಪಷ್ಟನೆ ನೀಡಿವೆ.

ಅನಂತ್ ನಾಗ್ ಅವರು ಈ ಮೊದಲು ರಾಜಕೀಯ ಸೇರಿದ್ದರು. ಎಂಎಲ್​ಸಿ, ಎಂಎಲ್​ಎ ಆಗಿದ್ದರು. ಅವರು ಬೆಂಗಳೂರು ನಗರ ಅಭಿವೃದ್ಧಿ ಸಚಿವರಾಗಿದ್ದರು. 2004ರಲ್ಲಿ ಜೆಡಿಎಸ್​ನಿಂದ ಅವರು ಚುನಾವಣೆಯಲ್ಲಿ ಸ್ಪರ್ಧಿಸಿ ಸೋತರು. ಬಳಿಕ ಅನಂತ್ ನಾಗ್ ರಾಜಕೀಯದಿಂದ ದೂರ ಉಳಿದರು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 11:53 am, Sat, 1 April 23