AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಂಧ್ರದಲ್ಲಿ ‘ಕಾಂತಾರ’ ವಿತರಣೆಗೆ ನೂಕು-ನುಗ್ಗಲು, ಆರು ವಿತರಕರು ಫೈನಲ್

Kantara Chapter 1: ರಿಷಬ್ ಶೆಟ್ಟಿ ನಟಿಸಿ, ನಿರ್ದೇಶನ ಮಾಡಿ, ಹೊಂಬಾಳೆ ಫಿಲಮ್ಸ್ ನಿರ್ಮಾಣ ಮಾಡಿರುವ ‘ಕಾಂತಾರ: ಚಾಪ್ಟರ್ 1’ ಸಿನಿಮಾ ಅಕ್ಟೋಬರ್ 2 ರಂದು ಬಿಡುಗಡೆ ಆಗಲಿದ್ದು, ಸಿನಿಮಾದ ವಿತರಣೆ ಹಕ್ಕು ಖರೀದಿಗೆ ನೂಕು-ನುಗ್ಗಲು ಶುರುವಾಗಿದೆ. ಇದೀಗ ಆಂಧ್ರ ಪ್ರದೇಶದಲ್ಲಿ ಭಿನ್ನ ಪ್ರಯತ್ನಕ್ಕೆ ಹೊಂಬಾಳೆ ಕೈ ಹಾಕಿದ್ದು, ಬರೋಬ್ಬರು ಆರು ಸಂಸ್ಥೆಗಳು ಆಂಧ್ರದಲ್ಲಿ ‘ಕಾಂತಾರ’ ಸಿನಿಮಾ ಅನ್ನು ವಿತರಣೆ ಮಾಡಲಿವೆ.

ಆಂಧ್ರದಲ್ಲಿ ‘ಕಾಂತಾರ’ ವಿತರಣೆಗೆ ನೂಕು-ನುಗ್ಗಲು, ಆರು ವಿತರಕರು ಫೈನಲ್
Rishab Shetty
ಮಂಜುನಾಥ ಸಿ.
|

Updated on:Sep 10, 2025 | 5:59 PM

Share

ಹೊಂಬಾಳೆ (Hombale) ನಿರ್ಮಾಣ ಮಾಡಿ, ರಿಷಬ್ ಶೆಟ್ಟಿ ನಟಿಸಿ, ನಿರ್ದೇಶನ ಮಾಡಿರುವ ‘ಕಾಂತಾರ ಚಾಪ್ಟರ್ 1’ ಸಿನಿಮಾ ಬಿಡುಗಡೆಗೆ ಕೆಲವೇ ದಿನಗಳು ಬಾಕಿ ಇದೆ. ಸಿನಿಮಾದ ಬ್ಯುಸಿನೆಸ್ ಪ್ರಾರಂಭ ಆಗಿದ್ದು, ಪ್ರತಿ ಬಾರಿಯಂತೆ ಹೊಂಬಾಳೆ ಅದ್ಭುತವಾಗಿ ಪ್ರೀ ರಿಲೀಸ್ ಬ್ಯುಸಿನೆಸ್ ಮಾಡುತ್ತಿದೆ. ಹೊಂಬಾಳೆ ಸಂಸ್ಥೆಯು ಸಿನಿಮಾ ನಿರ್ಮಾಣ ಮತ್ತು ಅದರ ಮಾರಾಟದಲ್ಲಿ ಸದಾ ಮುಂದಿದೆ. ‘ನರಸಿಂಹ’ ಅಂಥಹಾ ಕಾರ್ಟೂನ್ ಸಿನಿಮಾ ಅನ್ನೇ ಬ್ಲಾಕ್ ಬಸ್ಟರ್ ಸಿನಿಮಾ ಮಾಡಿರುವ ಹೊಂಬಾಳೆ, ಈಗ ತಮ್ಮ ನಿರ್ಮಾಣ ಸಂಸ್ಥೆಯ ಟಾಪ್ ಪ್ರಾಜೆಕ್ಟ್​ ಅನ್ನು ಇನ್ನೂ ಹೆಚ್ಚಿನ ಆಸ್ತೆಯಿಂದ ಜನರಿಗೆ ತಲುಪಿಸಲು ಸಜ್ಜಾಗಿದೆ.

‘ಕಾಂತಾರ: ಚಾಪ್ಟರ್ 1’ ಸಿನಿಮಾದ ವಿತರಣೆ ಹಕ್ಕುಗಳ ಮಾರಾಟದಲ್ಲಿ ಹೊಂಬಾಳೆ ತೊಡಗಿಕೊಂಡಿದೆ. ಈಗಾಗಲೇ ಕೇರಳ ರಾಜ್ಯದ ವಿತರಣೆ ಹಕ್ಕನ್ನು ತಮ್ಮ ಸಂಸ್ಥೆಯ ಹಳೆಯ ಗೆಳೆಯ, ಸ್ಟಾರ್ ನಟ ಪೃಥ್ವಿರಾಜ್ ಸುಕುಮಾರನ್ ಅವರಿಗೆ ನೀಡಿದೆ. ಆದರೆ ಆಂಧ್ರ ಪ್ರದೇಶದಲ್ಲಿ ‘ಕಾಂತಾರ: ಚಾಪ್ಟರ್ 1’ ಸಿನಿಮಾ ವಿತರಣೆ ಹಕ್ಕು ಖರೀದಿಗೆ ನೂಕು-ನುಗ್ಗಲು ಶುರುವಾಗಿದೆ. ಹಾಗಾಗಿ ಹೊಂಬಾಳೆ ಆಂಧ್ರದಲ್ಲಿ ಬರೋಬ್ಬರಿ ಆರು ಸಂಸ್ಥೆಗಳಿಗೆ ವಿತರಣೆ ವಿಷಯದಲ್ಲಿ ಒಪ್ಪಂದ ಮಾಡಿಕೊಂಡಿದೆ.

ಆರು ವಿವಿಧ ವಿತರಣೆ ಸಂಸ್ಥೆಗಳು ‘ಕಾಂತಾರ: ಚಾಪ್ಟರ್ 1’ ಸಿನಿಮಾ ಅನ್ನು ವಿತರಣೆ ಮಾಡಲಿವೆ. ಉತ್ತರ ಆಂಧ್ರ ಪ್ರದೇಶದಲ್ಲಿ ವಿಘ್ನೇಶ್ವರ ನಿರ್ಮಾಣ ಸಂಸ್ಥೆ ‘ಕಾಂತಾರ’ ಸಿನಿಮಾದ ವಿತರಣೆ ಮಾಡಲಿದೆ. ಪೂರ್ವ ಮತ್ತು ಪಶ್ಚಿಮ ಗೋಧಾವರಿ ಏರಿಯಾಗಳಲ್ಲಿ ಅಲ್ಲು ಅರವಿಂದ್ ಅವರ ಗೀತಾ ಆರ್ಟ್ಸ್​​ ಸಂಸ್ಥೆ ‘ಕಾಂತಾರ’ ಸಿನಿಮಾದ ವಿತರಣೆ ಮಾಡಲಿದೆ. ಇನ್ನು ಗುಂಟೂರಿನಲ್ಲಿ ಖ್ಯಾತ ನಿರ್ಮಾಣ ಸಂಸ್ಥೆಯಾಗಿರುವ ವಾರಾಹಿ ಪ್ರೊಡಕ್ಷನ್ಸ್​​ ವಿತರಣೆ ಮಾಡಲಿದೆ. ಕೃಷ್ಣ ಜಿಲ್ಲೆಯಲ್ಲಿ ಕೆಎಸ್​​ಎನ್ ಸಂಸ್ಥೆ ವಿತರಣೆ ಮಾಡಲಿದೆ. ನೆಲ್ಲೂರಿನಲ್ಲಿ ಎಸ್​​ವಿ ಸಿನಿಮಾಸ್ ವಿತರಣೆ ಮಾಡಲಿದೆ. ಸೀಡೆಡ್ ಪ್ರದೇಶದಲ್ಲಿ ಶಿಲ್ಪಕಲಾ ಎಂಟರ್ಟೈನ್​​​ಮೆಂಟ್​​ನವರು ವಿತರಣೆ ಮಾಡಲಿದ್ದಾರೆ.

ಇದನ್ನೂ ಓದಿ:‘ಕಾಂತಾರ ಚಾಪ್ಟರ್ 1’ ವಿತರಣೆ ಹಕ್ಕು ಖರೀದಿಸಿದ ಸ್ಟಾರ್ ನಟ

2022 ರಲ್ಲಿ ಬಿಡುಗಡೆ ಆಗಿದ್ದ ‘ಕಾಂತಾರ’ ಸಿನಿಮಾ, ಆಂಧ್ರ ಮತ್ತು ತೆಲಂಗಾಣಗಳಲ್ಲಿ ಭರ್ಜರಿ ಕಲೆಕ್ಷನ್ ಮಾಡಿತ್ತು. ಅದೇ ಕಾರಣಕ್ಕೆ ಈಗ ‘ಕಾಂತಾರ: ಚಾಪ್ಟರ್ 1’ ಸಿನಿಮಾಕ್ಕೆ ಭಾರಿ ಬೇಡಿಕೆ ನಿರ್ಮಾಣ ಆಗಿದೆ. ಆಂಧ್ರ ಪ್ರದೇಶದಲ್ಲಿ ಮಾತ್ರವೇ ಅಲ್ಲದೆ ತೆಲಂಗಾಣದಲ್ಲಿಯೂ ಸಿನಿಮಾಕ್ಕೆ ಭಾರಿ ಬೇಡಿಕೆ ಇದ್ದು, ತೆಲಂಗಾಣದ ವಿತರಣೆ ಯಾರ ಕೈಸೇರಿದೆ ಎಂಬ ಮಾಹಿತಿಯನ್ನು ಹೊಂಬಾಳೆ ಇನ್ನಷ್ಟೆ ಹಂಚಿಕೊಳ್ಳಬೇಕಿದೆ. ಇನ್ನು ಉತ್ತರ ಭಾರತದ ವಿತರಣೆಯನ್ನು ಅನಿಲ್ ಟಂಡಾನಿ ಅವರಿಗೆ ನೀಡುವ ಸಾಧ್ಯತೆ ದಟ್ಟವಾಗಿದೆ. ಈ ಹಿಂದೆ ಹೊಂಬಾಳೆಯ ನಿರ್ಮಾಣದ ಸಿನಿಮಾಗಳಾಗಿದ್ದ ‘ಕಾಂತಾರ’ ಮತ್ತು ‘ಕೆಜಿಎಫ್’ ಸಿನಿಮಾಗಳನ್ನು ಉತ್ತರ ಭಾರತದಲ್ಲಿ ಅವರೇ ವಿತರಣೆ ಮಾಡಿದ್ದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:58 pm, Wed, 10 September 25

'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ
ವಿಮಾನ ನಿಲ್ದಾಣದಲ್ಲಿ ಶಾಸ್ತ್ರೀಯ ನೃತ್ಯಕ್ಕೆ ಮನಸೋತ ರಷ್ಯಾ ಅಧ್ಯಕ್ಷ ಪುಟಿನ್
ವಿಮಾನ ನಿಲ್ದಾಣದಲ್ಲಿ ಶಾಸ್ತ್ರೀಯ ನೃತ್ಯಕ್ಕೆ ಮನಸೋತ ರಷ್ಯಾ ಅಧ್ಯಕ್ಷ ಪುಟಿನ್
ಭಾರತಕ್ಕೆ ಬಂದ ಗೆಳೆಯ ಪುಟಿನ್​ಗೆ ಪ್ರಧಾನಿ ಮೋದಿಯ ಅಪ್ಪುಗೆಯ ಸ್ವಾಗತ
ಭಾರತಕ್ಕೆ ಬಂದ ಗೆಳೆಯ ಪುಟಿನ್​ಗೆ ಪ್ರಧಾನಿ ಮೋದಿಯ ಅಪ್ಪುಗೆಯ ಸ್ವಾಗತ