Kantara Movie: ‘ಕಾಂತಾರ’ ಎಫೆಕ್ಟ್​; ರಿಷಬ್​ ಶೆಟ್ಟಿ ಜತೆ ಸಿನಿಮಾ ಮಾಡುವ ಹಂಬಲ ವ್ಯಕ್ತಪಡಿಸಿದ ಅನಿಲ್​ ಕಪೂರ್​

Rishab Shetty | Anil Kapoor​: ಅನಿಲ್​ ಕಪೂರ್​ ಅವರು ಮೊದಲು ನಟಿಸಿದ್ದೇ ಕನ್ನಡದಲ್ಲಿ. ಈಗ ಮತ್ತೆ ಅವರು ಕನ್ನಡ ಸಿನಿಮಾದಲ್ಲಿ ಅಭಿನಯಿಸುವ ಆಸೆ ವ್ಯಕ್ತಪಡಿಸಿದ್ದಾರೆ.

Kantara Movie: ‘ಕಾಂತಾರ’ ಎಫೆಕ್ಟ್​; ರಿಷಬ್​ ಶೆಟ್ಟಿ ಜತೆ ಸಿನಿಮಾ ಮಾಡುವ ಹಂಬಲ ವ್ಯಕ್ತಪಡಿಸಿದ ಅನಿಲ್​ ಕಪೂರ್​
ರಿಷಬ್ ಶೆಟ್ಟಿ, ಅನಿಲ್ ಕಪೂರ್Image Credit source: pinkvilla
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:Dec 21, 2022 | 7:54 AM

ಇತ್ತೀಚೆಗೆ ಬರುತ್ತಿರುವ ಕನ್ನಡ ಸಿನಿಮಾಗಳಿಂದಾಗಿ ಚಂದನವನದ ಚಾರ್ಮ್​ ಹೆಚ್ಚಿದೆ. ಇಲ್ಲಿನ ನಿರ್ದೇಶಕರು ಮತ್ತು ನಟರ ಬಗ್ಗೆ ದೇಶಾದ್ಯಂತ ಚರ್ಚೆ ಆಗುತ್ತಿದೆ. ‘ಕಾಂತಾರ’ (Kantara Movie) ಚಿತ್ರವೇ ಇದಕ್ಕೆ ಬೆಸ್ಟ್​ ಉದಾಹರಣೆ. ಅದೇ ರೀತಿ ‘ಕೆಜಿಎಫ್​: ಚಾಪ್ಟರ್​ 2’, ‘777 ಚಾರ್ಲಿ’ ಮುಂತಾದ ಸಿನಿಮಾಗಳು ಕೂಡ ಸಖತ್​​ ಸದ್ದು ಮಾಡಿವೆ. ಈ ವರ್ಷ ರಿಷಬ್​ ಶೆಟ್ಟಿ (Rishab Shetty) ಅವರು ‘ಕಾಂತಾರ’ ಚಿತ್ರದಿಂದ ಪ್ಯಾನ್​ ಇಂಡಿಯಾ ಸ್ಟಾರ್​ ಆಗಿದ್ದಾರೆ. ಉತ್ತರ ಭಾರತದಲ್ಲಿ ಅವರಿಗೆ ದೊಡ್ಡ ಮಟ್ಟದ ಫ್ಯಾನ್​ ಫಾಲೋಯಿಂಗ್​ ಸೃಷ್ಟಿ ಆಗಿದೆ. ಅಲ್ಲಿನ ಅನೇಕ ಮಾಧ್ಯಮಗಳಿಗೆ ಅವರು ಸಂದರ್ಶನ ನೀಡಿದ್ದಾರೆ. ರಿಷಬ್​ ಶೆಟ್ಟಿ ಜೊತೆ ಕೆಲಸ ಮಾಡಲು ಬಾಲಿವುಡ್​ ಸ್ಟಾರ್​ ಕಲಾವಿದರು ಇಷ್ಟಪಡುತ್ತಿದ್ದಾರೆ. ನಟ ಅನಿಲ್​ ಕಪೂರ್​ (Anil Kapoor) ಕೂಡ ಈ ಬಗ್ಗೆ ಮಾತನಾಡಿದ್ದಾರೆ.

‘ಪಿಂಕ್​ ವಿಲ್ಲಾ’ ನಡೆಸಿದ ಸಂದರ್ಶನದಲ್ಲಿ ಅನಿಲ್​ ಕಪೂರ್​, ಮೃಣಾಲ್​ ಠಾಕೂರ್​, ಅಡಿವಿ ಶೇಷ್​, ವಿದ್ಯಾ ಬಾಲನ್​, ರಿಷಬ್​ ಶೆಟ್ಟಿ ಭಾಗವಹಿಸಿದ್ದಾರೆ. ಈ ವೇಳೆ ಅನೇಕ ವಿಚಾರಗಳ ಬಗ್ಗೆ ಚರ್ಚೆ ಆಗಿದೆ. ‘ಕಾಂತಾರ’ ಸಿನಿಮಾವನ್ನು ಎಲ್ಲರೂ ಹಾಡಿ ಹೊಗಳಿದ್ದಾರೆ. ಅನಿಲ್​ ಕಪೂರ್​ ಅವರು ಮುಂದಿನ ಸಿನಿಮಾದಲ್ಲಿ ರಿಷಬ್​ ಶೆಟ್ಟಿ ಜೊತೆ ಕೆಲಸ ಮಾಡುವ ಹಂಬಲ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: IMDb Top 10 Indian Movies: ಐಎಂಡಿಬಿ ಟಾಪ್​ 10 ಚಿತ್ರಗಳಲ್ಲಿ ಕಾಂತಾರ, ಕೆಜಿಎಫ್​ 2, 777 ಚಾರ್ಲಿ

ಇದನ್ನೂ ಓದಿ
Image
Rishab Shetty: ಪಂಚೆ ಧರಿಸಿದ ರಿಷಬ್​ ಶೆಟ್ಟಿ ಗತ್ತು ಹೇಗಿದೆ ನೋಡಿ; ಇಲ್ಲಿದೆ ‘ಕಾಂತಾರ’ ಹೀರೋ ಫೋಟೋ ಗ್ಯಾಲರಿ
Image
Kantara: ಕರ್ನಾಟಕದಲ್ಲಿ ‘ಕಾಂತಾರ’ ಚಿತ್ರದ 1 ಕೋಟಿ ಟಿಕೆಟ್ಸ್​ ಮಾರಾಟ; ದಾಖಲೆಗೆ ಹಿಗ್ಗಿದ ‘ಹೊಂಬಾಳೆ ಫಿಲ್ಮ್ಸ್​’
Image
Kantara: ಬೆಂಗಳೂರಿಗೆ ಕಾಲಿಡುತ್ತಲೇ ‘ಕಾಂತಾರ’ ಬಗ್ಗೆ ಮಾತಾಡಿದ ಎಬಿ ಡಿವಿಲಿಯರ್ಸ್; ರಿಷಬ್​ ಶೆಟ್ಟಿ ಹೇಳಿದ್ದೇನು?
Image
Kantara: ‘ಕಾಂತಾರ’ ಸೂಪರ್​ ಹಿಟ್​ ಆದ್ಮೇಲೆ ರಿಷಬ್​ ಶೆಟ್ಟಿ ಏನು ಮಾಡ್ತಿದ್ದಾರೆ? ಪ್ರೈವೇಟ್​ ಜೆಟ್​ ಏರಿದ ಶಿವ

ಅಂದಹಾಗೆ, ಅನಿಲ್​ ಕಪೂರ್​ ಅವರು ಮೊದಲು ನಟಿಸಿದ್ದೇ ಕನ್ನಡದಲ್ಲಿ. ಮಣಿರತ್ನಂ ನಿರ್ದೇಶನ ‘ಪಲ್ಲವಿ ಅನುಪಲ್ಲವಿ’ ಚಿತ್ರವೇ ಅನಿಲ್​ ಕಪೂರ್​ ಅವರ ಚೊಚ್ಚಲ ಸಿನಿಮಾ. ನಂತರ ಅವರು ಹಿಂದಿಯಲ್ಲಿ ಸ್ಟಾರ್​ ನಟನಾಗಿ ಗುರುತಿಸಿಕೊಂಡರು. ಈಗ ಮತ್ತೆ ಅವರು ಕನ್ನಡ ಸಿನಿಮಾದಲ್ಲಿ ನಟಿಸುವ ಆಸೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Lionel Messi: ‘ಕಾಂತಾರ’ ರೀತಿ ಕಾಣಿಸಿದ ಮೆಸ್ಸಿ-ಮರಡೋನಾ; ವಿಶ್ವ ಮಟ್ಟದಲ್ಲಿ ಕನ್ನಡ ಸಿನಿಮಾ ಕ್ರೇಜ್​

‘ಕಾಂತಾರ’ ಚಿತ್ರದ ಬಗ್ಗೆ ಈಗಾಗಲೇ ಅನೇಕ ಸ್ಟಾರ್​ ಕಲಾವಿದರು ಮಾತನಾಡಿದ್ದಾರೆ. ರಜನಿಕಾಂತ್​, ಪ್ರಭಾಸ್​, ಕಂಗನಾ ರಣಾವತ್​, ವಿವೇಕ್​ ಅಗ್ನಿಹೋತ್ರಿ, ಅನುಷ್ಕಾ ಶೆಟ್ಟಿ, ಅಲ್ಲು ಅರ್ಜುನ್​, ಹೃತಿಕ್​ ರೋಷನ್​ ಸೇರಿದಂತೆ ಅನೇಕರು ಮೆಚ್ಚುಗೆ ಸೂಚಿಸಿದ್ದಾರೆ. ಹಿಂದಿ ಚಿತ್ರರಂಗದ ಹಲವರು ಈ ಸಿನಿಮಾದ ಕುರಿತು ಚರ್ಚೆ ಮಾಡಿದ್ದಾರೆ. ಒಟ್ಟಿನಲ್ಲಿ ಕನ್ನಡ ಚಿತ್ರರಂಗದ ಕಡೆಗೆ ಎಲ್ಲರೂ ತಿರುಗಿ ನೋಡುವಂತಾಗಿದೆ.

ಇದನ್ನೂ ಓದಿ: Kantara Movie: ‘ಕಾಂತಾರ’​ ಚಿತ್ರದ ಗೆಲುವಿಗೆ ಅಭಿನಂದನೆ ಸಲ್ಲಿಸಿದ ಟಾಲಿವುಡ್​ ಸ್ಟಾರ್​ ನಟ ಅಲ್ಲು ಅರ್ಜುನ್​

ಗೂಗಲ್​ನಲ್ಲಿ ಈ ವರ್ಷ ಜನರು ಅತಿ ಹೆಚ್ಚು ಹುಡುಕಿದ ಭಾರತೀಯ ಸಿನಿಮಾಗಳ ಪಟ್ಟಿ ಇತ್ತೀಚೆಗೆ ಪ್ರಕಟವಾಯಿತು. ಟಾಪ್​ 5 ಸಿನಿಮಾಗಳಲ್ಲಿ ಕನ್ನಡದ ಎರಡು ಚಿತ್ರಗಳು (ಕಾಂತಾರ ಮತ್ತು ಕೆಜಿಎಫ್​ 2) ಇವೆ ಎಂಬುದು ವಿಶೇಷ. ಕನ್ನಡ ಚಿತ್ರರಂಗದಿಂದ ತಯಾರಾಗುವ ಮುಂಬರುವ ಸಿನಿಮಾಗಳ ಬಗ್ಗೆ ಎಲ್ಲರಿಗೂ ನಿರೀಕ್ಷೆ ಹೆಚ್ಚಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 7:30 am, Wed, 21 December 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ