ಆಶಿಕಾ ರಂಗನಾಥ್ ಸಹೋದರಿ ಅನುಷಾ ಮದುವೆ; ಚಂದದ ಫೋಟೋಸ್ ಹಂಚಿಕೊಂಡ ನಟಿ
ಆಶಿಕಾ ರಂಗನಾಥ್ ರೀತಿಯೇ ಅವರ ಅಕ್ಕ ಅನುಷಾ ರಂಗನಾಥ್ ಕೂಡ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಕಿರುತೆರೆ ಸೀರಿಯಲ್ ಹಾಗೂ ಕನ್ನಡದ ಕೆಲವು ಸಿನಿಮಾಗಳಲ್ಲಿ ನಟಿಸುವ ಮೂಲಕ ಅವರು ಜನರಿಗೆ ಪರಿಚಯ ಆಗಿದ್ದಾರೆ. ಈಗ ಅವರು ದಾಂಪತ್ಯ ಜೀವನಕ್ಕೆ ಎಂಟ್ರಿ ನೀಡಿದ್ದಾರೆ. ಆಶಿಕಾ ರಂಗನಾಥ್ ಅವರ ಅಕ್ಕನ ವಿವಾಹಕ್ಕೆ ಚಂದನವನದ ಅನೇಕರು ಸಾಕ್ಷಿ ಆಗಿದ್ದಾರೆ.
ಖ್ಯಾತ ನಟಿ ಆಶಿಕಾ ರಂಗನಾಥ್ (Ashika Ranganath) ಅವರ ಮನೆಯಲ್ಲಿ ಸಂಭ್ರಮದ ವಾತಾವರಣ ನಿರ್ಮಾಣ ಆಗಿದೆ. ಆಶಿಕಾ ಅವರ ಸಹೋದರಿ ಅನುಷಾ ರಂಗನಾಥ್ (Anusha Ranganath) ಈಗ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ರೆಸಾರ್ಟ್ವೊಂದರಲ್ಲಿ ಕುಟುಂಬದವರು, ಸ್ನೇಹಿತರು ಮತ್ತು ಆಪ್ತರ ಸಮ್ಮುಖದಲ್ಲಿ ಈ ಮದುವೆ ನೆರವೇರಿದೆ. ಸಾಫ್ಟ್ವೇರ್ ಇಂಜಿನಿಯರ್ ಆರ್. ಶ್ರವಣ್ ಎಂಬುವವರ ಜೊತೆ ಅನುಷಾ ರಂಗನಾಥ್ ಅವರ ಮದುವೆ (Anusha Ranganath Marriage) ನೆರವೇರಿದೆ. ವಿವಾಹ ಸಮಾರಂಭದಲ್ಲಿ ಆಶಿಕಾ ರಂಗನಾಥ್ ಅವರು ಖುಷಿಯಿಂದ ಭಾಗಿ ಆಗಿದ್ದಾರೆ. ಆ ಸಂದರ್ಭದ ಫೋಟೋಗಳನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಆಶಿಕಾ ರಂಗನಾಥ್ ರೀತಿಯೇ ಅವರ ಅಕ್ಕ ಅನುಷಾ ರಂಗನಾಥ್ ಕೂಡ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಕಿರುತೆರೆ ಸೀರಿಯಲ್ ಹಾಗೂ ಕನ್ನಡ ಕೆಲವು ಸಿನಿಮಾಗಳಲ್ಲಿ ನಟಿಸುವ ಮೂಲಕ ಅವರು ಜನರಿಗೆ ಪರಿಚಯ ಆಗಿದ್ದಾರೆ. ಈಗ ಅವರು ದಾಂಪತ್ಯ ಜೀವನಕ್ಕೆ ಎಂಟ್ರಿ ನೀಡಿದ್ದಾರೆ. ಆಶಿಕಾ ರಂಗನಾಥ್ ಅವರ ಅಕ್ಕನ ವಿವಾಹಕ್ಕೆ ಚಂದನವನದ ಅನೇಕರು ಸಾಕ್ಷಿ ಆಗಿದ್ದಾರೆ.
View this post on Instagram
ಸೋಶಿಯಲ್ ಮೀಡಿಯಾದಲ್ಲಿ ಅನುಷಾ ರಂಗನಾಥ್ ಅವರ ಮದುವೆ ಫೋಟೋಗಳು ವೈರಲ್ ಆಗಿವೆ.
22.01.2024 ♥️🧿
Thanks for all the blessings & love ♥️ pic.twitter.com/BT3zfZR8Co
— Ashika Ranganath (@AshikaRanganath) January 25, 2024
ಕಿರುತೆರೆ ಮತ್ತು ಹಿರಿತೆರೆ ಎರಡರಲ್ಲೂ ಅನುಷಾ ರಂಗನಾಥ್ ಅವರು ಕೆಲಸ ಮಾಡಿದ್ದಾರೆ. ‘ಲೈಫ್ 360’, ‘10’, ‘ಒನ್ಸ್ ಮೋರ್ ಕೌರವ’, ‘ಅಂದವಾದ’, ‘ದಿ ಗ್ರೇಟ್ ಸ್ಟೋರಿ ಆಫ್ ಸೋಡಾಬುಡ್ಡಿ’ ಮುಂತಾದ ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ನಟನೆಯ ಮೂಲಕ ಅವರು ಗಮನ ಸೆಳೆದಿದ್ದಾರೆ. ವೈವಾಹಿಕ ಜೀವನ ಆರಂಭಿಸಿರುವ ಅವರಿಗೆ ಅಭಿಮಾನಿಗಳು, ಸೆಲೆಬ್ರಿಟಿಗಳು, ಆಪ್ತರು ಅಭಿನಂದನೆ ತಿಳಿಸುತ್ತಿದ್ದಾರೆ.
ಆಶಿಕಾಗಾಗಿ ಮತ್ತೆ ಮತ್ತೆ ‘ನಾ ಸಾಮಿ ರಂಗ’ ಚಿತ್ರ ನೋಡಿದ ಫ್ಯಾನ್ಸ್
ಮದುವೆಗೂ ಮುನ್ನ ಅನುಷಾ ರಂಗನಾಥ್ ಅವರು ಸ್ನೇಹಿತರಿಗಾಗಿ ಪಾರ್ಟಿ ಆಯೋಜಿಸಿದ್ದರು. ಆ ಸಂದರ್ಭದ ಫೋಟೋಗಳನ್ನು ಕೂಡ ಅವರ ಆಪ್ತರು ಹಂಚಿಕೊಂಡಿದ್ದಾರೆ. ಸುಷ್ಮಿತಾ ಗೌಡ, ತೇಜಸ್ವಿನಿ ಶರ್ಮಾ ಸೇರಿದಂತೆ ಹಲವ ಸೆಲೆಬ್ರಿಟಿಗಳು ಪಾರ್ಟಿಯಲ್ಲಿ ಭಾಗಿ ಆಗಿದ್ದರು. ಆಶಿಕಾ ರಂಗನಾಥ್ ಅವರ ಜೀವನದಲ್ಲಿ ಎಲ್ಲವೂ ಶುಭವಾಗುತ್ತಿದೆ. ಇತ್ತೀಚೆಗೆ ಬಿಡುಗಡೆಯಾದ ತೆಲುಗಿನ ‘ನಾ ಸಾಮಿ ರಂಗ’ ಚಿತ್ರದಲ್ಲಿ ಅವರ ನಟನೆಗೆ ಮೆಚ್ಚುಗೆ ಸಿಕ್ಕಿದೆ. ಈಗ ಅಕ್ಕನ ಮದುವೆ ನೆರವೇರಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:25 pm, Thu, 25 January 24