Chandan Shetty: ‘ಎಲ್ರ ಕಾಲೆಳಿಯತ್ತೆ ಕಾಲ’ ಎಂದ ಚಂದನ್ ಶೆಟ್ಟಿ; ಇಲ್ಲಿದೆ ಹೊಸ ಸಮಾಚಾರ
Sujay Shastry | Elra Kaaleliyutte Kaala: ಗಾಯಕ, ಸಂಗೀತ ನಿರ್ದೇಶಕ ಚಂದನ್ ಶೆಟ್ಟಿ ನಟನೆಯಲ್ಲೂ ಮೋಡಿ ಮಾಡಲು ಸಿದ್ಧರಾಗುತ್ತಿದ್ಧಾರೆ. ಅವರ ಹೊಸ ಚಿತ್ರ ‘ಎಲ್ರ ಕಾಲೆಳಿಯತ್ತೆ ಕಾಲ’ ಅನೌನ್ಸ್ ಆಗಿದೆ. ಚಿತ್ರದ ಕುರಿತ ಮಾಹಿತಿ ಇಲ್ಲಿದೆ.

ಇತ್ತೀಚೆಗಷ್ಟೇ ಗಾಯಕ, ಸಂಗೀತ ನಿರ್ದೇಶಕ ಚಂದನ್ ಶೆಟ್ಟಿ (Chandan Shetty) ರೆಟ್ರೋ ಶೈಲಿಯ ಲುಕ್ ಒಂದರಲ್ಲಿ ಹೊಸ ಫೋಟೋವೊಂದನ್ನು ಹಂಚಿಕೊಂಡಿದ್ದರು. ಇದು ಅಭಿಮಾನಿಗಳ ಕುತೂಹಲ ಹೆಚ್ಚಿಸಿತ್ತು. ಹೊಸ ಚಿತ್ರದಲ್ಲಿ ಅವರು ನಾಯಕನಾಗಿ ನಟಿಸುತ್ತಿದ್ದು, ಅದರ ಲುಕ್ ಇದಾಗಿದೆ ಎಂದೂ ಬಹಿರಂಗವಾಗಿತ್ತು. ಇದೀಗ ಚಂದನ್ ಯಾವ ಚಿತ್ರಕ್ಕಾಗಿ ಗೆಟಪ್ ಬದಲಿಸುತ್ತಿದ್ದಾರೆ? ಚಿತ್ರದ ಹೆಸರೇನು? ಮೊದಲಾದ ಪ್ರಶ್ನೆಗಳಿಗೆ ಉತ್ತರ ಸಿಕ್ಕಿದೆ. ‘ಗುಬ್ಬಿ ಮೇಲೆ ಬ್ರಹ್ಮಾಸ್ತ್ರ’ ಮೂಲಕ ಸ್ಯಾಂಡಲ್ವುಡ್ನಲ್ಲಿ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದ, ನಟನೆಯ ಮೂಲಕ ಈಗಾಗಲೇ ಹೆಸರುವಾಸಿಯಾಗಿರುವ ಸುಜಯ್ ಶಾಸ್ತ್ರಿ (Sujay Shastry) ಆಕ್ಷನ್ ಕಟ್ ಹೇಳುತ್ತಿರುವ ಹೊಸ ಚಿತ್ರ ಇದಾಗಿದೆ. ಚಿತ್ರಕ್ಕೆ ‘ಎಲ್ರ ಕಾಲೆಳಿಯತ್ತೆ ಕಾಲ’ (Elra Kaaleliyutte Kaala) ಎಂದು ಹೆಸರಿಡಲಾಗಿದೆ. ಸ್ಯಾಂಡಲ್ವುಡ್ನಲ್ಲಿ ವಿಭಿನ್ನ ಶೀರ್ಷಿಕೆಗಳ ಟ್ರೆಂಡ್ ಈ ಮೂಲಕ ಮುಂದುವರೆದಿದ್ದು, ಹೆಸರಿನಿಂದಲೇ ಚಿತ್ರ ಮತ್ತಷ್ಟು ಕುತೂಹಲ ಹುಟ್ಟುಹಾಕಿದೆ.
ಚಿತ್ರದ ಮೊದಲ ಪೋಸ್ಟರ್ಅನ್ನು ಬಿಡುಗಡೆ ಮಾಡಿ, ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ. ಬೆಟ್ಟ- ಗುಡ್ಡ ಪರಿಸರದ ನಡುವೆ ಕೆಂಪು ಡಬ್ಬಿ ಬಸ್ ಒಂದು ಸಾಗುತ್ತಿರುವ ದೃಶ್ಯವನ್ನೊಳಗೊಂಡ ಪೋಸ್ಟರ್ಅನ್ನು ಹಂಚಿಕೊಳ್ಳಲಾಗಿದೆ. ಜಗದೀಶ್ ಫಿಲ್ಮ್ಸ್ ಪ್ರಸ್ತುತಪಡಿಸುತ್ತಿರುವ ಈ ಚಿತ್ರವನ್ನು ಗೋಕುಲ ಎಂಟರ್ಪ್ರೈಸಸ್ ಬ್ಯಾನರ್ನಲ್ಲಿ ಉಷಾ ಗೋವಿಂದರಾಜು ನಿರ್ಮಾಣ ಮಾಡುತ್ತಿದ್ದಾರೆ.
‘ಎಲ್ರ ಕಾಲೆಳಿಯತ್ತೆ ಕಾಲ’ ಪೋಸ್ಟರ್ ಇಲ್ಲಿದೆ:
#ElraKaalEliyutteKaala #EKEKTheFilm #GokulEntertainers @chandanspshetty @Sujayshastry @ekekthefilm pic.twitter.com/E5hZxs1Gf6
— Chandan Shetty (@chandanspshetty) January 30, 2022
ಹೊಸ ಗೆಟಪ್ ಮೂಲಕ ಚಿತ್ರದ ಕುತೂಹಲ ಹೆಚ್ಚಿಸಿದ್ದ ಚಂದನ್ ಶೆಟ್ಟಿ: ಕಳೆದ ವಾರ ಚಂದನ್ ಶೆಟ್ಟಿ ಹೊಸ ಪೋಸ್ಟ್ ಒಂದನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು. ಅದರಲ್ಲಿ ಹೊಸ ಗೆಟಪ್ನಲ್ಲಿ ಕಾಣಿಸಿಕೊಂಡಿದ್ದ ಅವರು ಎಲ್ಲರ ಗಮನ ಸೆಳೆದಿದ್ದರು. ರೆಟ್ರೋ ಮಾದರಿಯ ವೇಷಭೂಷಣದಿಂದ ಗುರುತು ಹಿಡಿಯಲು ಕಷ್ಟ ಎನ್ನುವಷ್ಟು ಬದಲಾಗಿ ಚಂದನ್ ಶೆಟ್ಟಿ ಕಾಣಿಸಿಕೊಂಡಿದ್ದರು. ‘ಹೊಸ ವಿಚಾರ ಸದ್ಯದಲ್ಲೇ..’ ಎಂದು ಅವರು ಬರೆದುಕೊಂಡಿದ್ದರು. ಇದೀಗ ಚಿತ್ರವನ್ನು ಅನೌನ್ಸ್ ಮಾಡಲಾಗಿದೆ.
ಚಂದನ್ ಶೆಟ್ಟಿ ಹಂಚಿಕೊಂಡಿದ್ದ ಪೋಸ್ಟ್ ಇಲ್ಲಿದೆ:
View this post on Instagram
‘ಎಲ್ರ ಕಾಲೆಳಿಯತ್ತೆ ಕಾಲ’ಕ್ಕೆ ಕತೆ, ಚಿತ್ರಕತೆ, ಸಂಭಾಷಣೆ ರಚಿಸಿರುವವರು ರಾಜ್ಗುರು ಹೊಸಕೋಟೆ. ಪ್ರವೀಣ್- ಪ್ರದೀಪ್ ಸಂಗೀತ ನೀಡುತ್ತಿದ್ದು ವಿಶ್ವಜಿತ್ ರಾವ್ ಛಾಯಾಗ್ರಹಣದ ಮಾಡಲಿದ್ದಾರೆ. ಸದ್ಯದಲ್ಲೇ ಚಿತ್ರದ ಮೊದಲ ಲುಕ್ ಬಿಡುಗಡೆ ಮಾಡಲಾಗುವುದು ಎಂದು ಚಿತ್ರತಂಡ ತಿಳಿಸಿದೆ.
ಇದನ್ನೂ ಓದಿ:
ಶೀಘ್ರವೇ ಶಮಿತಾ ಶೆಟ್ಟಿ-ರಾಕೇಶ್ ಬಾಪಟ್ ಎಂಗೇಜ್ಮೆಂಟ್; ಅಭಿಮಾನಿ ವಲಯದಲ್ಲಿ ಜೋರಾಯ್ತು ಚರ್ಚೆ
1.5 ಕೋಟಿ ರೂ. ಬೆಲೆಯ ಕಾರು ಗಿಫ್ಟ್ ಪಡೆದ ‘ಕಿಲಾಡಿ’ ನಿರ್ದೇಶಕ; ಆದರೆ ಚಿತ್ರವೇ ಇನ್ನೂ ರಿಲೀಸ್ ಆಗಿಲ್ಲ