ಮಸ್ತ್ ಡೈಲಾಗ್ಗಳ ಮೂಲಕ ಗಮನ ಸೆಳೆದ ‘ಚೌ ಚೌ ಬಾತ್’ ಟ್ರೇಲರ್ ಹೇಗಿದೆ ನೋಡಿ…
ನಿರ್ದೇಶಕ ಕೇಂಜ ಚೇತನ್ ಕುಮಾರ್ ಅವರೇ ‘ಚೌ ಚೌ ಬಾತ್’ ಸಿನಿಮಾಗೆ ಸಂಭಾಷಣೆ ಬರೆದಿದ್ದಾರೆ. ಟ್ರೇಲರ್ ನೋಡಿದ ಸಿನಿಪ್ರಿಯರು ಪಾಸಿಟಿವ್ ಆಗಿ ಕಮೆಂಟ್ ಮಾಡುತ್ತಿದ್ದಾರೆ. ಸುಶ್ಮಿತಾ ಭಟ್, ಸಾಗರ್ ಗೌಡ, ಸಂಕಲ್ಪ್ ಶರ್ಮಾ, ಅರುಣಾ ಬಾಲರಾಜ್, ಗೀತಾ ಬಂಗೇರ, ಧನುಶ್ ಬೈಕಂಪಾಡಿ, ಪ್ರಕರ್ಷ ಶಾಸ್ತ್ರಿ ಸೇರಿದಂತೆ ಅನೇಕರು ಈ ಸಿನಿಮಾದಲ್ಲಿ ನಟಿಸಿದ್ದಾರೆ.
ಕನ್ನಡದಲ್ಲಿ ಡೈಲಾಗ್ಗಳ ಮೂಲಕವೇ ಪ್ರೇಕ್ಷಕರನ್ನು ಸೆಳೆದುಕೊಂಡ ಸಿನಿಮಾಗಳು (Kannada Cinema) ಸಾಕಷ್ಟಿವೆ. ಸಿನಿಮಾ ರಿಲೀಸ್ಗೂ ಮುನ್ನವೇ ಡೈಲಾಗ್ಗಳು ಟ್ರೆಂಡ್ ಆದ ಉದಾಹರಣೆ ಇದೆ. ಈಗ ಅವುಗಳ ಸಾಲಿಗೆ ‘ಚೌ ಚೌ ಬಾತ್’ (Chow Chow Bath) ಸಿನಿಮಾ ಕೂಡ ಸೇರ್ಪಡೆ ಆಗುವ ಸೂಚನೆ ಸಿಕ್ಕಿದೆ. ಈ ಸಿನಿಮಾದ ಟ್ರೇಲರ್ ಇತ್ತೀಚೆಗೆ ಬಿಡುಗಡೆ ಮಾಡಲಾಯಿತು. ಬೆಂಗಳೂರಿನ ಮಲ್ಲೇಶ್ವರದ ಎಸ್.ಆರ್.ವಿ. ಥಿಯೇಟರ್ನಲ್ಲಿ ಸುದ್ದಿಗೋಷ್ಠಿ ನಡೆಸಿ ಟ್ರೇಲರ್ ಅನಾವರಣ ಮಾಡಲಾಗಿದೆ. ಕೇಂಜ ಚೇತನ್ ಕುಮಾರ್ ನಿರ್ದೇಶನ ಮಾಡಿರುವ ‘ಚೌ ಚೌ ಬಾತ್’ ಚಿತ್ರದ ಟ್ರೇಲರ್ನಲ್ಲಿ ಸಂಭಾಷಣೆಗಳು ಹೈಲೈಟ್ ಆಗಿವೆ.
‘ಚೌ ಚೌ ಬಾತ್’ ಸಿನಿಮಾವನ್ನು ಸತೀಶ್ ಎಸ್.ಬಿ. ನಿರ್ಮಾಣ ಮಾಡಿದ್ದಾರೆ. ‘ಬಿಗ್ ಬಾಸ್ ಕನ್ನಡ ಸೀಸನ್ 10’ ಶೋನಲ್ಲಿ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಪಡೆದಿದ್ದ ಅವಿನಾಶ್ ಶೆಟ್ಟಿ ಅವರು ಈ ಸಿನಿಮಾದ ಟ್ರೇಲರ್ ಬಿಡುಗಡೆ ಸಂದರ್ಭಕ್ಕೆ ಸಾಕ್ಷಿಯಾದರು. ಇದು ಕನ್ನಡದ ಮೊದಲ ಹೈಪರ್ ಲಿಂಕ್ ರೋಮ್ಯಾಂಟಿಕ್ ಕಾಮಿಡಿ ಸಿನಿಮಾ ಎಂದು ಚಿತ್ರತಂಡ ಹೇಳಿಕೊಂಡಿದೆ. ಆ ಮೂಲಕ ಕುತೂಹಲ ಮೂಡಿಸಲಾಗಿದೆ.
ಇದನ್ನೂ ಓದಿ: ಭಿನ್ನವಾಗಿದೆ ‘ಅಪರಿಚಿತ’ ಲಿರಿಕಲ್ ಸಾಂಗ್; ‘ಸಾರಾಂಶ’ ಚಿತ್ರದ ಬಗ್ಗೆ ಹೆಚ್ಚಿತು ಕುತೂಹಲ
ನಿರ್ದೇಶಕ ಕೇಂಜ ಚೇತನ್ ಕುಮಾರ್ ಅವರೇ ‘ಚೌ ಚೌ ಬಾತ್’ ಸಿನಿಮಾಗೆ ಸಂಭಾಷಣೆ ಬರೆದಿದ್ದಾರೆ. ಕಾಮಿಡಿ, ಲವ್, ಸೆಂಟಿಮೆಂಟ್, ಫಿಲಾಸಫಿ.. ಹೀಗೆ ಎಲ್ಲವನ್ನೂ ಹೇಳುವಂತಹ ಡೈಲಾಗ್ಗಳು ಈ ಟ್ರೇಲರ್ನಲ್ಲಿವೆ. ‘ಎ2 ಮ್ಯೂಸಿಕ್’ ಮೂಲಕ ಟ್ರೇಲರ್ ಬಿಡುಗಡೆ ಆಗಿದೆ. ಯೂಟ್ಯೂಬ್ನಲ್ಲಿ ಇದನ್ನು ನೋಡಿದ ಸಿನಿಪ್ರಿಯರು ಪಾಸಿಟಿವ್ ಆಗಿ ಕಮೆಂಟ್ ಮಾಡುತ್ತಿದ್ದಾರೆ.
‘ಚೌ ಚೌ ಬಾತ್’ ಚಿತ್ರದ ಟ್ರೇಲರ್:
ಸುಶ್ಮಿತಾ ಭಟ್, ಸಾಗರ್ ಗೌಡ, ಸಂಕಲ್ಪ್ ಶರ್ಮಾ, ಅರುಣಾ ಬಾಲರಾಜ್, ಗೀತಾ ಬಂಗೇರ, ಧನುಶ್ ಬೈಕಂಪಾಡಿ, ಪ್ರಕರ್ಷ ಶಾಸ್ತ್ರಿ ಸೇರಿದಂತೆ ಅನೇಕರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಸತೀಶ್ ಎಸ್.ಬಿ., ಸಂಕಲ್ಪ್ ಶರ್ಮಾ, ಪೂರ್ಣಚಂದ್ರ, ಅಶೋಕ್ ಡಿ. ಶೆಟ್ಟಿ, ದ ಜೋಯ್ಸ್ ಪ್ರಾಜೆಕ್ಟ್, ಓಂ ಸ್ಟುಡಿಯೋ ಸಹ-ನಿರ್ಮಾಣದಲ್ಲಿ ‘ಚೌ ಚೌ ಬಾತ್’ ಸಿನಿಮಾ ಮೂಡಿಬರುತ್ತಿದೆ. ‘ಸನಾತನಯ್ ಪಿಕ್ಚರ್ಸ್’ ಹಾಗೂ ‘ಕಾಮಧೇನು ಫಿಲ್ಮ್ಸ್’ ಅರ್ಪಿಸುವ ಈ ಚಿತ್ರವು ‘ಹಾರಿಜಾನ್ ಮೂವೀಸ್’ ಬ್ಯಾನರ್ ಮೂಲಕ ನಿರ್ಮಾಣ ಆಗುತ್ತಿದೆ. ಈ ಚಿತ್ರಕ್ಕೆ ಹೇಮಂತ್ ಜೋಯಿಸ್ ಅವರ ಸಂಗೀತ ನಿರ್ದೇಶನವಿದೆ. ರುದ್ರಮೂರ್ತಿ ಬೆಳಗೆರೆ ಛಾಯಾಗ್ರಹಣ ಮಾಡಿದ್ದಾರೆ. ಪ್ರಮೋದ್ ಮರವಂತೆ ಅವರು ಗೀತರಚನೆ ಮಾಡಿದ್ದಾರೆ. ನಿರ್ದೇಶಕರೇ ಸಂಕಲನ ಮಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:36 pm, Thu, 25 January 24