ಕನ್ನಡ ಚಿತ್ರರಂಗದಲ್ಲಿ ಹಾಸ್ಯ ಚಕ್ರವರ್ತಿಯಾಗಿ ಮಿಂಚಿದವರು ನಟ ನರಸಿಂಹ ರಾಜು (Narasimha Raju). ಇಂದು (ಜೂನ್ 4) ಅವರ ಹಿರಿಯ ಪುತ್ರಿ ಧರ್ಮವತಿ (Dharmavati Narasimha Raju) ನಿಧನರಾಗಿದ್ದಾರೆ. ಮುಂಜಾನೆ 5.30ಕ್ಕೆ ಅವರು ಕೊನೆಯುಸಿರು ಎಳೆದರು ಎಂದು ಕುಟುಂಬದವರು ತಿಳಿಸಿದ್ದಾರೆ. ಧರ್ಮವತಿ ಅವರಿಗೆ 71 ವರ್ಷ ವಯಸ್ಸಾಗಿತ್ತು. ಮೂವರು ಮಕ್ಕಳನ್ನು ಅವರು ಅಗಲಿದ್ದಾರೆ. ಹೃದಯಾಘಾತದಿಂದ (Heart Attack) ಧರ್ಮವತಿ ನಿಧನರಾಗಿದ್ದಾರೆ ಎಂದು ಅವರ ಪುತ್ರ, ನಿರ್ದೇಶಕ ಅರವಿಂದ್ ಮಾಹಿತಿ ನೀಡಿದ್ದಾರೆ. ಇಂದು ಸಂಜೆ 3.30ರ ಸುಮಾರಿಗೆ ಹೆಬ್ಬಾಳದಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಎಂದ ಎಲ್ಲರೂ ಪ್ರಾರ್ಥಿಸುತ್ತಿದ್ದಾರೆ. ಧರ್ಮವತಿ ಅವರ ಅಗಲಿಕೆಯಿಂದ ಕುಟುಂಬದಲ್ಲಿ ಶೋಕದ ವಾತಾವರಣ ನಿರ್ಮಾಣ ಆಗಿದೆ.
ಕನ್ನಡ ಚಿತ್ರರಂಗಕ್ಕೆ ನರಸಿಂಹ ರಾಜು ನೀಡಿದ ಕೊಡುಗೆ ಅಪಾರ. ಅವರ ಕುಟುಂಬದ ಸದ್ಯಸರು ಕೂಡ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಪುತ್ರಿ ಸುಧಾ ನರಸಿಂಹ ರಾಜು ಅವರು ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಅನೇಕ ಸಿನಿಮಾಗಳಲ್ಲಿ ನಟಿಸಿ ಅವರು ಜನಪ್ರಿಯತೆ ಪಡೆದಿದ್ದಾರೆ. ಧರ್ಮವತಿ ಅವರ ಮಕ್ಕಳಾದ ಅವಿನಾಶ್ ಮತ್ತು ಅರವಿಂದ್ ಅವರ ಕೂಡ ಕನ್ನಡ ಚಿತ್ರರಂಗದಲ್ಲಿ ತೊಡಗಿಕೊಂಡಿದ್ದಾರೆ.
ಧರ್ಮವತಿ ಅವರ ಹಿರಿಯ ಪುತ್ರ ಅರವಿಂದ್ ಅವರು ನಿರ್ದೇಶಕನಾಗಿ ಸಕ್ರಿಯರಾಗಿದ್ದಾರೆ. ಅವರ ನಿರ್ದೇಶನದಲ್ಲಿ ಮೂಡಿಬಂದಿದ್ದ ‘ಲಾಸ್ಟ್ ಬಸ್’ ಸಿನಿಮಾ ಗಮನ ಸೆಳೆದಿತ್ತು. ಕಿರಿಯ ಪುತ್ರ ಅವಿನಾಶ್ ನರಸಿಂಹ ರಾಜು ಅವರು ನಟನಾಗಿ ಗುರುತಿಸಿಕೊಂಡಿದ್ದಾರೆ. ‘ಲಾಸ್ಟ್ ಬಸ್’, ‘ಚೇಸ್’ ಮುಂತಾದ ಸಿನಿಮಾ ಮಾತ್ರವಲ್ಲದೇ ಕೆಲವು ಮ್ಯೂಸಿಕ್ ವಿಡಿಯೋದಲ್ಲೂ ಅವರು ನಟಿಸಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 1:18 pm, Sat, 4 June 22