ಹಾಲಿವುಡ್​ನಲ್ಲಿ ಡಾಲಿ ಧನಂಜಯ್ ಆಂಡ್ ಗ್ಯಾಂಗ್: ನಾಗಭೂಷಣ್ ಲುಂಗಿಯೇ ಹೈಲೈಟ್

Hollywood: ಡಾಲಿ ಧನಂಜಯ್ ಹಾಗೂ ಗೆಳೆಯರು ಹಾಲಿವುಡ್​ಗೆ ಹೋಗಿದ್ದಾರೆ. ಲಾಸ್ ಏಂಜಲ್ಸ್​ನ ಮೌಂಟ್ ಲೀ ಬೆಟ್ಟದ ಮೇಲಿರುವ ಹಾಲಿವುಡ್​ ಸೈನ್ ಬೋರ್ಡ್​ ಮುಂದೆ ನಿಂತು ಫೋಸು ನೀಡಿದ್ದಾರೆ. ನಾಗಭೂಷಣ್ ವೇಷ ಸಖತ್ ಗಮನ ಸೆಳೆಯುತ್ತಿದೆ.

ಹಾಲಿವುಡ್​ನಲ್ಲಿ ಡಾಲಿ ಧನಂಜಯ್ ಆಂಡ್ ಗ್ಯಾಂಗ್: ನಾಗಭೂಷಣ್ ಲುಂಗಿಯೇ ಹೈಲೈಟ್
Follow us
ಮಂಜುನಾಥ ಸಿ.
|

Updated on:Sep 21, 2023 | 7:30 PM

ಸಾಲು-ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ನಟ ಡಾಲಿ ಧನಂಜಯ್ (Daali Dhananjay) ಅಚಾನಕ್ಕಾಗಿ ಅಮೆರಿಕಕ್ಕೆ ತೆರಳಿದ್ದಾರೆ. ಒಬ್ಬರೇ ಅಲ್ಲ ಗ್ಯಾಂಗ್ ಜೊತೆ ಅಮೆರಿಕಕ್ಕೆ ತೆರಳಿದ್ದು ‘ಹಾಲಿವುಡ್​’ ಮುಂದೆ ಸಖತ್ ಪೋಸು ನೀಡಿದ್ದಾರೆ. ಡಾಲಿ ಏನೋ ಎಂದಿನಂತೆ ಸಖತ್ ಹ್ಯಾಂಡ್ಸಮ್ ಆಗಿ ಕಾಣುತ್ತಿದ್ದಾರಾದರೂ, ಡಾಲಿಯ ಹಾಲಿವುಡ್ ಚಿತ್ರ ನೋಡಿದವರು ಮಾತನಾಡುತ್ತಿರುವುದು ಡಾಲಿಯ ಗೆಳೆಯ, ನಟ ನಾಗಭೂಷಣ್ ಧರಿಸಿರುವ ಲುಂಗಿಯ ಬಗ್ಗೆ.

ಡಾಲಿ, ನಾಗಭೂಷಣ್ ಹಾಗೂ ಇನ್ನೂ ಕೆಲವು ಗೆಳೆಯರು ಲಾಸ್ ಏಂಜಲ್ಸ್​ನ ಜನಪ್ರಿಯ ಹಾಲಿವುಡ್ ಸೈನ್ ಬೋರ್ಡ್ ನಿರ್ಮಿಸಲಾಗಿರುವ ಮೌಂಟ್ ಲೀ ಬೆಟ್ಟಕ್ಕೆ ಭೇಟಿ ಕೊಟ್ಟಿದ್ದಾರೆ. ಹಾಲಿವುಡ್ ಸೈನ್ ಬೋರ್ಡ್​ ಮುಂದೆ ನಿಂತು ಮಾಸ್ ಫೋಸು ನೀಡಿದ್ದಾರೆ. ಆದರೆ ನಟ ನಾಗಭೂಷಣ್, ಪಟಾ-ಪಟಿ ಲುಂಗಿ, ಟವೆಲ್ ಒಂದನ್ನು ಹೆಗಲ ಮೇಲೆ ಹಾಕಿಕೊಂಡು ಲಾಸ್ ಏಂಜಲ್ಸ್​ನಲ್ಲಿ ಸುತ್ತಾಡಿದ್ದಾರೆ. ಹಾಲಿವುಡ್ ಭೇಟಿಯ ಚಿತ್ರಗಳನ್ನು ಡಾಲಿ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ಕಮೆಂಟ್ ಮಾಡಿರುವ ಬಹುತೇಕರು ನಾಗಭೂಷಣ್​ರ ಲುಂಗಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ನಾಗಭೂಷಣ್, ತನ್ನ ಇನ್​ಸ್ಟಾಗ್ರಾಂನಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದು, ಹಾಲಿವುಡ್​ ಸೈನ್ ಬೋರ್ಡ್ ಎದುರು ಲುಂಗಿ ತೊಟ್ಟು, ಹೆಗಲ ಮೇಲೆ ಟವಲ್ ಹಾಕಿಕೊಂಡು ‘ಟಗರು ಪಲ್ಯ’ ಸಿನಿಮಾದ ಹಾಡಿಗೆ ಸ್ಟೆಪ್ಪು ಹಾಕಿದ್ದಾರೆ. ನಾಗಭೂಷಣ್​ರ ಈ ವಿಡಿಯೋ ವೈರಲ್ ಆಗುತ್ತಿದೆ. ‘ಟಗರು ಪಲ್ಯ’ ಪ್ರೊಮೋಷನ್​ಗೆ ಅಷ್ಟು ದೂರ ಹೋದಿರಾ ಎಂದು ಕೆಲವರು ಪ್ರಶ್ನೆ ಮಾಡಿದರೆ, ಹಲವರು ನಾಗಭೂಷಣ್, ಹಾಲಿವುಡ್​ನಲ್ಲಿ ಪಟಾಪಟಿ ಲುಂಗಿ ತೊಟ್ಟು ಕುಣಿದಿರುವುದನ್ನು ಕನ್ನಡತನದ ಪಸರಣ ಎಂದು ಹೆಮ್ಮೆಯಿಂದ ಸ್ವೀಕರಿಸಿದ್ದಾರೆ.

ಇದನ್ನೂ ಓದಿ:ಡಾಲಿ ಧನಂಜಯ್ ಪ್ಯಾನ್ ಇಂಡಿಯಾ ಸಿನಿಮಾ, ಜೀಬ್ರಾ ಲುಕ್ ಬಿಡುಗಡೆ

ಡಾಲಿ ಧನಂಜಯ್ ಪ್ರಸ್ತುತ ‘ಉತ್ತರಕಾಂಡ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಸಿನಿಮಾದ ಚಿತ್ರೀಕರಣ ಬಹುತೇಕ ಮುಗಿದಿದ್ದು ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಹಂತ ಪ್ರಗತಿಯಲ್ಲಿದೆ ಎನ್ನಲಾಗುತ್ತಿದೆ. ‘ತೊತಾಪುರಿ 2’ ಸಿನಿಮಾದ ಚಿತ್ರೀಕರಣ ಮುಗಿಸಿದ್ದು ಶೀಘ್ರವೇ ಆ ಸಿನಿಮಾ ಬಿಡುಗಡೆ ಆಗಲಿದೆ. ಇದರ ಜೊತೆಗೆ ತಮಿಳಿನ ಒಂದು ಸಿನಿಮಾ. ತೆಲುಗಿನ ‘ಪುಷ್ಪ 2’, ಕನ್ನಡದಲ್ಲಿಯೂ ಕೆಲವಾರು ಸಿನಿಮಾಗಳನ್ನು ಡಾಲಿ ಒಪ್ಪಕೊಂಡು ನಟಿಸುತ್ತಿದ್ದಾರೆ. ಇದರ ಜೊತೆಗೆ ಸಿನಿಮಾ ನಿರ್ಮಾಣದಲ್ಲಿಯೂ ಬಹಳ ಬ್ಯುಸಿಯಾಗಿದ್ದಾರೆ.

ಡಾಲಿ ಪಿಕ್ಚರ್ಸ್ ವತಿಯಿಂದ ‘ಟಗರು ಪಲ್ಯ’ ಸಿನಿಮಾ ನಿರ್ಮಾಣ ಮಾಡಿದ್ದು, ಸಿನಿಮಾದಲ್ಲಿ ಅವರ ಆಪ್ತ ಗೆಳೆಯ ನಾಗಭೂಷಣ್ ನಾಯಕ, ನಟ ಪ್ರೇಮ್ ಪುತ್ರಿ ನಾಯಕಿ. ಸಿನಿಮಾದ ಹಾಡುಗಳು ಯೂಟ್ಯೂಬ್​ನಲ್ಲಿ ಬಿಡುಗಡೆ ಆಗಿ ಟ್ರೆಂಡ್ ಆಗಿವೆ. ಸಿನಿಮಾದ ಬಿಡುಗಡೆ ಶೀಘ್ರವೇ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:29 pm, Thu, 21 September 23