AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಣ್ಣ ವಯಸ್ಸಲ್ಲೇ ನಿಧನ ಹೊಂದಿದ ದರ್ಶನ್ ಅಪ್ಪಟ ಅಭಿಮಾನಿ ಸುದೀಪ್

ನಟ ದರ್ಶನ್ ಅವರ ಅಪ್ಪಟ ಅಭಿಮಾನಿ ಶಿವಮೊಗ್ಗದ ಸುದೀಪ್ (24) ಮೂರ್ಛೆ ರೋಗದಿಂದ ವಿಧಿವಶರಾಗಿದ್ದಾರೆ. ಸಾಯುವ ಮುನ್ನ ನೆಚ್ಚಿನ ನಟನನ್ನು ಭೇಟಿಯಾಗಬೇಕೆಂಬ ಕನಸು ಹೊಂದಿದ್ದ ಇವರು, ಮಾಧ್ಯಮ ವರದಿಗಳ ಮೂಲಕ ಮೈಸೂರಿನಲ್ಲಿ ದರ್ಶನ್‌ರನ್ನು ಭೇಟಿಯಾಗಿ ಧೈರ್ಯದ ಮಾತುಗಳನ್ನು ಕೇಳಿದ್ದರು. ಯುವಕನ ಹಠಾತ್ ನಿಧನದಿಂದ ಕುಟುಂಬಸ್ಥರಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ.

ಸಣ್ಣ ವಯಸ್ಸಲ್ಲೇ ನಿಧನ ಹೊಂದಿದ ದರ್ಶನ್ ಅಪ್ಪಟ ಅಭಿಮಾನಿ ಸುದೀಪ್
ದರ್ಶನ್ ಅಭಿಮಾನಿImage Credit source: Tv9 Kannada
Basavaraj Yaraganavi
| Edited By: |

Updated on:Sep 24, 2026 | 11:42 AM

Share

ಮುಖ್ಯಾಂಶಗಳು

  • ಅಭಿಮಾನಿಯ ಕೊನೆಯಾಸೆ ಈಡೇರಿಸಿದ್ದ ನಟ ದರ್ಶನ್
  • ಶಿವಮೊಗ್ಗದ ಯುವಕ ಇನ್ನಿಲ್ಲ
  • ಸಾಯುವ ಮುನ್ನ ಡಿ-ಬಾಸ್ ಕಣ್ತುಂಬಿಕೊಂಡಿದ್ದ ಸುದೀಪ್

ಶಿವಮೊಗ್ಗ (ಸೆಪ್ಟೆಂಬರ್ 24): ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ನಟ ದರ್ಶನ್‌ ಪ್ರಕರಣದಿಂದ ಹೊರ ಬರುವ ಪ್ರಯತ್ನದಲ್ಲಿ ಇದ್ದಾರೆ. ಈ ಮಧ್ಯೆ ಅವರಿಗೆ ಬೇಸರದ ಸುದ್ದಿ ಎದುರಾಗಿದೆ. ಅವರ ಅಪ್ಪಟ ಅಭಿಮಾನಿ, ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಮತ್ತಿಕೊಪ್ಪ ಗ್ರಾಮದ ಸುದೀಪ್ (24) ಮೂರ್ಛೆ ರೋಗದಿಂದ (ಫಿಟ್ಸ್) ಸಾವುನ್ನಪ್ಪಿದ್ದಾರೆ.

ಮನೆಯಲ್ಲಿದ್ದಾಗ ಏಕಾಏಕಿ ಫಿಟ್ಸ್ ಬಂದು ಕೆಳಗೆ ಬಿದ್ದ ಯುವಕ ಸುದೀಪ್ ಕೊನೆಯುಸಿರೆಳೆದಿದ್ದಾರೆ. ಆರು ವರ್ಷದ ಬಾಲಕನಾಗಿದ್ದಾಗಿನಿಂದಲೂ ನಟ ದರ್ಶನ್‌ ಎಂದರೆ ಸುದೀಪ್‌ಗೆ ಅಪಾರ ಅಭಿಮಾನವಿತ್ತು. ‘ಸಾಯುವ ಮುನ್ನ ಒಮ್ಮೆ ದರ್ಶನ್ ಅವರನ್ನು ಕಣ್ತುಂಬಿಕೊಳ್ಳಬೇಕು’ ಎನ್ನುವುದು ಈ ಯುವಕನ ಬಹುದಿನಗಳ ಕನಸಾಗಿತ್ತು.

ತಮ್ಮ ನೆಚ್ಚಿನ ನಟನನ್ನು ಭೇಟಿಯಾಗಲು ಸುದೀಪ್ ಹಲವು ಬಾರಿ ಬೆಂಗಳೂರಿನ ದರ್ಶನ್‌ ನಿವಾಸಕ್ಕೆ ತೆರಳಿದ್ದರಾದರೂ, ಭೇಟಿಯಾಗಲು ಸಾಧ್ಯವಾಗದೆ ನಿರಾಸೆಯಿಂದ ಮರಳಿದ್ದರು. 2023ರಲ್ಲಿ ಸುದೀಪ್ ಅವರ ಅಭಿಮಾನ ಮತ್ತು ಅನಾರೋಗ್ಯದ ಕುರಿತು ವರದಿ ಆಗಿತ್ತು.

ಮಾಧ್ಯಮ ವರದಿಯನ್ನು ಗಮನಿಸಿದ್ದ ನಟ ದರ್ಶನ್, ಅಭಿಮಾನಿ ಸುದೀಪ್ ಅವರನ್ನು ಮೈಸೂರಿಗೆ ಕರೆಸಿಕೊಂಡಿದ್ದರು. ದರ್ಶನ್ ಅವರನ್ನು ಭೇಟಿಯಾಗಿ, ಅವರಿಂದ ಧೈರ್ಯದ ಮಾತುಗಳನ್ನು ಕೇಳಿದ್ದ ಸುದೀಪ್ ಅತ್ಯಂತ ಸಂತಸಗೊಂಡಿದ್ದರು.

ಇದನ್ನೂ ಓದಿ: ಪ್ರದೋಷ್‌ ಮಾಫಿ ಸಾಕ್ಷಿ ಆದೇಶ ರದ್ದುಪಡಿಸುವಂತೆ ಕೋರಿ ಮತ್ತೆ ಹೈಕೋರ್ಟ್‌ ಮೆಟ್ಟಿಲೇರಿದ ನಟ ದರ್ಶನ್‌

ತಮ್ಮ ಕೊನೆಯಾಸೆಯಂತೆ ನೆಚ್ಚಿನ ನಟನನ್ನು ಕಣ್ತುಂಬಿಕೊಂಡಿದ್ದ ಯುವಕ ಸುದೀಪ್ ಇದೀಗ ಇಹಲೋಕ ತ್ಯಜಿಸಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಗ್ರಾಮದಲ್ಲೂ ಶೋಕದ ವಾತಾವರಣ ಆವರಿಸಿದೆ. ದರ್ಶನ್ ತಮ್ಮ ಅಭಿಮಾನಿಗಳನ್ನು ಸೆಲೆಬ್ರಿಟಿಸ್ ಎನ್ನುತ್ತಾರೆ. ಈಗ ಅಭಿಮಾನಿ ಸಾವಿನ ಸುದ್ದಿ ಕೇಳಿದರೆ ಅವರು ಬೇಸರ ಮಾಡಿಕೊಳ್ಳುತ್ತಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 11:42 am, Thu, 24 September 26

Follow Us
Basavaraj Yaraganavi
Basavaraj Yaraganavi