AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಾಮೀನು ಗೊಂದಲ; ಮಟನ್ ಊಟ ಕೊಟ್ಟರೂ ತಿನ್ನದೇ ಮಂಕಾದ ದರ್ಶನ್

ಬಳ್ಳಾರಿ ಸೆಂಟ್ರಲ್​ ಜೈಲು ಮೆನುವಿನ ಪ್ರಕಾರ ಖೈದಿಗಳಿಗೆ ಇಂದು (ಸೆ.13) ನಾನ್​-ವೆಜ್​ ಊಟ ನೀಡಲಾಗಿದೆ. ಆದರೆ ದರ್ಶನ್​ ಆಹಾರ ಸೇವಿಸಿಲ್ಲ. ಜಾಮೀನು ಪ್ರಕ್ರಿಯೆಯಲ್ಲಿ ಗೊಂದಲ ಉಂಟಾಗಿರುವ ಕಾರಣದಿಂದ ನಟನಿಗೆ ಟೆನ್ಷನ್​ ಜಾಸ್ತಿ ಆಗಿದೆ. ಸೆ.17ರ ತನಕ ದರ್ಶನ್ ಸೇರಿದಂತೆ ಎಲ್ಲ ಆರೋಪಿಗಳ ನ್ಯಾಯಾಂಗ ಬಂಧನದ ಅವಧಿವನ್ನು ವಿಸ್ತರಣೆ ಮಾಡಲಾಗಿದೆ.

ಜಾಮೀನು ಗೊಂದಲ; ಮಟನ್ ಊಟ ಕೊಟ್ಟರೂ ತಿನ್ನದೇ ಮಂಕಾದ ದರ್ಶನ್
ದರ್ಶನ್​
ವಿನಾಯಕ ಬಡಿಗೇರ್​
| Edited By: |

Updated on: Sep 13, 2024 | 9:02 PM

Share

ನಟ ದರ್ಶನ್​ಗೆ ಸಂಕಷ್ಟ ಮುಗಿಯುತ್ತಿಲ್ಲ. ರೇಣುಕಾ ಸ್ವಾಮಿ ಕೊಲೆ ಕೇಸ್​ನ ಚಾರ್ಜ್​ಶೀಟ್​ ಸಲ್ಲಿಕೆ ಆದ ಬಳಿಕ ಅವರ ಪರಿಸ್ಥಿತಿ ಇನ್ನಷ್ಟು ಕಷ್ಟ ಆಗಿದೆ. ಕೊಲೆ ಆರೋಪದಲ್ಲಿ ಎ2 ಆಗಿರುವ ದರ್ಶನ್​ಗೆ ಬಳ್ಳಾರಿ ಜೈಲಿನಲ್ಲಿ ದಿನ ಕಳೆಯುವುದು ಕಷ್ಟವಾಗಿದೆ. ಹೀಗಿರುವಾಗ, ಜಾಮೀನು ಪಡೆಯಬೇಕು ಎಂಬ ಅವರ ಪ್ರಯತ್ನವೂ ಕೈಗೂಡುತ್ತಿಲ್ಲ. ಇದು ಕೊಲೆ ಆರೋಪ ಆದ್ದರಿಂದ ಅಷ್ಟು ಸುಲಭಕ್ಕೆ ಜಾಮೀನು ಸಿಗುವುದಿಲ್ಲ. ಅಲ್ಲದೇ, ಈಗ ಅವರು ನ್ಯಾಯಾಂಗ ಬಂಧನದ ಅವಧಿ ಕೂಡ ವಿಸ್ತರಣೆ ಆಗಿರುವುದರಿಂದ ಬಳ್ಳಾರಿ ಜೈಲಿನಲ್ಲಿ ದರ್ಶನ್​ ಊಟ ಬಿಟ್ಟಿದ್ದಾರೆ ಎನ್ನಲಾಗಿದೆ.

ರೇಣುಕಾಸ್ವಾಮಿ ಬರ್ಬರ ಹತ್ಯೆ ಪ್ರಕರಣದಲ್ಲಿ ದರ್ಶನ್ ಸೇರಿದಂತೆ ಎಲ್ಲ 17 ಆರೋಪಿಗಳ ನ್ಯಾಯಾಂಗ ಬಂಧನ ವಿಸ್ತರಣೆ ಮಾಡಲಾಗಿದೆ. ಇಂದು (ಸೆಪ್ಟೆಂಬರ್​ 13) ವಿಡಿಯೋ ಕಾನ್ಫರೆನ್ಸ್ ಮೂಲಕ ಆರೋಪಿಗಳು ಕೋರ್ಟ್​ಗೆ ಹಾಜರಾಗಿದ್ದರು. ಸೆಪ್ಟೆಂಬರ್​ 17ರವರೆಗೆ ನ್ಯಾಯಾಂಗ ಬಂಧನ ವಿಸ್ತರಣೆ ಮಾಡಿ ನ್ಯಾಯಾಲಯ ಆದೇಶಿಸಿದೆ. ನ್ಯಾಯಾಂಗ ಬಂಧನದ ಅವಧಿ ವಿಸ್ತರಣೆ ಆದ ಹಿನ್ನೆಲೆಯನ್ನು ದರ್ಶನ್​ ತಲೆ ಮೇಲೆ ಕೈಹೊತ್ತು ಕೂತಿದ್ದಾರೆ.

ದರ್ಶನ್​ಗೆ ಚಡಪಡಿಕೆ ಹೆಚ್ಚಾಗಿದೆ. ಬಳ್ಳಾರಿ ಸೆಂಟ್ರಲ್ ಜೈಲಿನ ಕಟ್ಟುನಿಟ್ಟಿನ ವಾತಾವರಣಕ್ಕೆ ಅವರು ಸೊರಗಿದ್ದಾರೆ. ಜೈಲಿನ ಇನ್​ಸೈಡ್​ ಮಾಹಿತಿ ಪ್ರಕಾರ, ಇಂದು ಅವರು ಊಟ ಸೇವಿಸಿಲ್ಲ. ಜೈಲಿನ ಮೆನು ಪ್ರಕಾರ ಇಂದು ದರ್ಶನ್​ಗೆ ಮಟನ್ ಊಟ ನೀಡಲಾಯಿತು. ಜಾಮೀನು ಸಿಗದೇ ಟೆನ್ಷನ್​ ಆಗಿರುವ ದರ್ಶನ್​ ಮಟನ್​ ಊಟ ಸೇವಿಸಿಲ್ಲ. ಜಾಮೀನು ಅರ್ಜಿ ಸಲ್ಲಿಕೆ ವಿಚಾರವಾಗಿ ವಕೀಲರ ಜೊತೆ ಅವರು ಚರ್ಚೆ ಮಾಡಿದ್ದಾರೆ.

ಇದನ್ನೂ ಓದಿ: ದರ್ಶನ್​ಗೆ ಕೆಟ್ಟ ಸಮಯ ನಡೆಯುತ್ತಿದೆ, ಫೆಬ್ರವರಿಗೆ ಸರಿಹೋಗುತ್ತೆ: ಕೆ ಮಂಜು ಭವಿಷ್ಯ

ಹೈಸೆಕ್ಯೂರಿಟಿ ಸೆಲ್​ನಲ್ಲಿ ದರ್ಶನ್ ಚಡಪಡಿಸಿದ್ದಾರೆ. ವಿಡಿಯೋ ಕಾನ್ಫರೆನ್ಸ್ ಮುಗಿಯುತ್ತಿದ್ದಂತೆಯೇ ಸೆಲ್‌ನಲ್ಲಿ ಅತ್ತಿಂದಿತ್ತ ದರ್ಶನ್ ಓಡಾಡಿದ್ದಾರೆ. ಹೈಪ್ರೊಫೈಲ್​ ಕೇಸ್​ ಆದ್ದರಿಂದ ಪೊಲೀಸರು ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆಯನ್ನು ಕೂಲಂಕಶವಾಗಿ ಮಾಡಿದ್ದಾರೆ. 3991 ಪುಟಗಳ ಚಾರ್ಜ್​ಶೀಟ್​ ಸಲ್ಲಿಕೆ ಮಾಡಿದ್ದಾರೆ. ಇತ್ತೀಚೆಗೆ ಹೇಳಿಕೆ ನೀಡಿದ್ದ ದರ್ಶನ್​ ಪರ ವಕೀಲರು, ‘ಜಾಮೀನು ಅರ್ಜಿ ಸಲ್ಲಿಸಲು ಇನ್ನೂ ಸಮಯವಿದೆ’ ಎಂದು ಹೇಳಿದ್ದರು. ಪರಪ್ಪನ ಅಗ್ರಹಾರ ಜೈಲಿನಿಂದ ಬಳ್ಳಾರಿ ಜೈಲಿಗೆ ದರ್ಶನ್​ ಅವರನ್ನು ಶಿಫ್ಟ್​ ಮಾಡಿದ ಬಳಿಕ ಕುಟುಂಬದವರು ಮತ್ತು ಲಾಯರ್​ ಭೇಟಿ ಕೂಡ ಕಷ್ಟವಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.