AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಧನ್ವೀರ್ ಸಿನಿಮಾ ಟ್ರೇಲರ್ ಲಾಂಚ್; ದರ್ಶನ್​ಗಾಗಿ ಕಾದು ಕೂತವರಿಗೆ ನಿರಾಸೆ

ದರ್ಶನ್ ಅವರು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ ಮತ್ತು ರಾಜಸ್ಥಾನದಲ್ಲಿ 'ಡೆವಿಲ್' ಚಿತ್ರದ ಚಿತ್ರೀಕರಣದಲ್ಲಿದ್ದಾರೆ. ಆದ್ದರಿಂದ, ಧನ್ವೀರ್ ಅವರ 'ವಾಮನ' ಚಿತ್ರದ ಟ್ರೇಲರ್ ಬಿಡುಗಡೆ ಕಾರ್ಯಕ್ರಮಕ್ಕೆ ಹಾಜರಾಗಲು ಸಾಧ್ಯವಿಲ್ಲ. ಆದರೂ, ಅವರು ಧನ್ವೀರ್ ಅವರಿಗೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ. ಟ್ರೇಲರ್ ಅನ್ನು ಡಿಜಿಟಲ್‌ ಆಗಿ ಬಿಡುಗಡೆ ಮಾಡಲಾಗುವುದು.

ಧನ್ವೀರ್ ಸಿನಿಮಾ ಟ್ರೇಲರ್ ಲಾಂಚ್; ದರ್ಶನ್​ಗಾಗಿ ಕಾದು ಕೂತವರಿಗೆ ನಿರಾಸೆ
ಧನ್ವೀರ್​-ದರ್ಶನ್
ರಾಜೇಶ್ ದುಗ್ಗುಮನೆ
|

Updated on: Mar 27, 2025 | 11:32 AM

Share

ದರ್ಶನ್ (Darshan) ಅವರು ಜೈಲಿನಲ್ಲಿ ಇದ್ದಾಗ ನಟ ಧನ್ವೀರ್ ಅವರು ಸ್ವಂತ ತಮ್ಮನ ರೀತಿ ಬೆಂಬಲಕ್ಕೆ ನಿಂತಿದ್ದರು. ಅವಕಾಶ ಸಿಕ್ಕಾಗಲೆಲ್ಲ ಜೈಲಿಗೆ ಬರುತ್ತಿದ್ದ ಅವರು ದರ್ಶನ್​ನ ಮಾತನಾಡಿಸಿ, ಧೈರ್ಯ ತುಂಬಿ ಹೋಗುತ್ತಿದ್ದರು. ಅವರು ಬಿಡುಗಡೆ ಆದ ಬಳಿಕವೂ ಧನ್ವೀರ್ ಅವರು ದರ್ಶನ್ ಜೊತೆಯೇ ಇರುತ್ತಿದ್ದರು. ಈಗ ಧನ್ವೀರ್ ಬೆಂಬಲಕ್ಕೆ ದರ್ಶನ್ ನಿಂತಿದ್ದಾರೆ. ಧನ್ವೀರ್ ನಟನೆಯ ‘ವಾಮನ’ ಸಿನಿಮಾದ ಟ್ರೇಲರ್​ನ ದರ್ಶನ್ ಲಾಂಚ್​ ಮಾಡಲಿದ್ದಾರೆ. ಇದನ್ನು ಕೇಳಿ ದರ್ಶನ್ ಫ್ಯಾನ್ಸ್ ಖುಷಿ ಆಗಿದ್ದರು. ದರ್ಶನ್ ಭೇಟಿಗೆ ಅವಕಾಶ ಸಿಗುತ್ತದೆ ಎಂದು ಅನೇಕರು ಭಾವಿಸಿದ್ದರು. ಆದರೆ, ಅವರೆಲ್ಲರಿಗೂ ಈಗ ನಿರಾಸೆ ಆಗಿದೆ.

ಧನ್ವೀರ್ ಅವರು ‘ವಾಮನ’ ಸಿನಿಮಾದಲ್ಲಿ ನಟಿಸಿದ್ದಾರೆ. ಚೇತನ್ ಗೌಡ ಅವರ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ಈ ಸಿನಿಮಾಗೆ ಎಸ್ ಶಂಕರ್ ರಾಮನ್ ನಿರ್ದೇಶನ ಮಾಡಿದ್ದಾರೆ. ಧನ್ವೀರ್​ಗೆ ಜೊತೆಯಾಗಿ ರೀಷ್ಮಾ ನಾಣಯ್ಯ ನಟಿಸಿದ್ದಾರೆ. ಈ ಚಿತ್ರದ ಟ್ರೇಲರ್ ಬಿಡುಗಡೆ ಹಾಗೂ ಪ್ರೀ ರಿಲೀಸ್ ಇವೆಂಟ್ ಇಂದು (ಮಾರ್ಚ್ 27) ಸಂಜೆ 4 ಗಂಟೆಗೆ ಬೆಂಗಳೂರಿನ ಪ್ರಸನ್ನ ಥಿಯೇಟರ್​ನಲ್ಲಿ ನಡೆಯಲಿದೆ. ಇದಕ್ಕೆ ದರ್ಶನ್ ಬರುತ್ತಾರೆ ಎನ್ನಲಾಗಿತ್ತು. ಆದರೆ, ಈಗ ಪ್ಲ್ಯಾನ್ ಬದಲಾಗಿದೆ.

ಸಂಜೆ ದರ್ಶನ್ ಹಾಗೆ ಧನ್ವೀರ್ ಮಾತುಕತೆ ವಿಡಿಯೋನ ತಂಡ ದೊಡ್ಡ ಪರದೆಮೇಲೆ ಹಂಚಿಕೊಳ್ಳಲಿದೆ. ಅದೇ ರೀತಿ ಟ್ರೇಲರ್ ಡಿಜಿಟಲ್ ಲಾಂಚ್ ಮಾಡಿರೋ ವಿಡಿಯೋನ ತಂಡ ರಿಲೀಸ್ ಮಾಡಲಿದೆ. ದರ್ಶನ್ ಅವರು ಸ್ಥಳದಲ್ಲಿ ಹಾಜರಿ ಇರುವುದಿಲ್ಲ ಎಂದು ತಿಳಿದು ಬಂದಿದೆ. ಈಗಾಗಲೇ ಪ್ರಸನ್ನ ಥಿಯೆಟರ್ ಬಳಿ ದರ್ಶನ್ ಹಾಗೆ ಧನ್ವೀರ್ ಕಟೌಟ್ ನಿಲ್ಲಿಸಲಾಗಿದೆ. ದರ್ಶನ್ ಬರೋದಿಲ್ಲ ಎಂಬ ಬೇಸರ ಅವರನ್ನು ಕಾಡುತ್ತಿದೆ. ಈ ಹಿಂದೆ ದರ್ಶನ್ ಪತ್ನಿ ವಿಜಯಲಕ್ಷ್ಮೀ ಅವರು ‘ವಾಮನ’ ಚಿತ್ರದ ಹಾಡನ್ನು ರಿಲೀಸ್ ಮಾಡಿದ್ದರು. ಈಗ ದರ್ಶನ್ ಕಡೆಯಿಂದ ಟ್ರೇಲರ್ ಲಾಂಚ್ ಆಗಲಿದೆ.

ಇದನ್ನೂ ಓದಿ
Image
ರಾಮ್ ಚರಣ್ ಹೊಸ ಚಿತ್ರದ ಟೈಟಲ್ ರಿವೀಲ್; ಮತ್ತೆ ಮಾಸ್ ಲುಕ್​
Image
ಗೆದ್ದಿದ್ದು ಕಡಿಮೆ ಸಿನಿಮಾ ಆದರೂ ರಾಮ್ ಚರಣ್ ಆಸ್ತಿ 1,300 ಕೋಟಿ ರೂಪಾಯಿ
Image
ಐಶ್ವರ್ಯಾ ಕಾರು ಅಪಘಾತಕ್ಕೆ ಒಳಗಾಗಿದ್ದು ಹೇಗೆ? ವಿಡಿಯೋ ವೈರಲ್
Image
ಸಲ್ಮಾನ್ ಖಾನ್ ಸಿನಿಮಾದಲ್ಲಿ ಕಂತೆ ಕಂತೆ ನಕಲಿ ನೋಟು ಬಳಕೆ; ಇಲ್ಲಿದೆ ಸಾಕ್ಷಿ

ಇದನ್ನೂ ಓದಿ: ದರ್ಶನ್ ಹಿಂಬಾಲಕರಿಗೂ ಬಿಡದ ಸಂಕಷ್ಟ; ಒಂದಾದ ಮೇಲೆ ಒಂದು ಕೇಸ್

ನಟ ದರ್ಶನ್ ಅವರಿಗೆ ತೀವ್ರ ಬೆನ್ನು ನೋವು ಇದೆ. ಇದರ ಮಧ್ಯೆಯೂ ಅವರು ಶೂಟಿಂಗ್ ಮಾಡುತ್ತಿದ್ದಾರೆ. ಸದ್ಯ ‘ಡೆವಿಲ್’ ಶೂಟಿಂಗ್​ಗಾಗಿ ದರ್ಶನ್ ಅವರು ರಾಜಸ್ಥಾನದಲ್ಲಿ ಇದ್ದಾರೆ ಎಂದು ತಿಳಿದು ಬಂದಿದೆ. ಇನ್ನು, ಜನರ ಮಧ್ಯೆ ಬಂದು ಟ್ರೇಲರ್ ಲಾಂಚ್ ಮಾಡೋದು ಈ ಸಮಯದಲ್ಲಿ ಒಳಿತಲ್ಲ ಎನ್ನುವ ನಿರ್ಧಾರಕ್ಕೆ ಬಂದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.