AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜೆಟ್​ ಲ್ಯಾಗ್ ಪಾರ್ಟಿ ಪ್ರಕರಣ; ಸೆಲೆಬ್ರಿಟಿಗಳ ಹೇಳಿಕೆಗೂ, ಪೊಲೀಸರು ಹಾಕಿರೋ ಕೇಸ್​ಗೂ ಬರುತ್ತಿಲ್ಲ ತಾಳೆ

ಅವಧಿಮೀರಿ ಪಾರ್ಟಿ ವೇಳೆ ಮದ್ಯ ಸೇವನೆ ಮಾಡಲಾಗಿತ್ತು ಎಂದು ಪೊಲೀಸರು ಎಫ್​ಐಆರ್​ನಲ್ಲಿ ದಾಖಲಿಸಿದ್ದರು. ಜೆಟ್ ಲ್ಯಾಗ್​ನಲ್ಲಿ ನಾವು ಊಟ ಮಾತ್ರ ಮಾಡಿದೆವು ಎಂದು ಸೆಲೆಬ್ರಿಟಿಗಳು ಹೇಳಿದ್ದಾರೆ.

ಜೆಟ್​ ಲ್ಯಾಗ್ ಪಾರ್ಟಿ ಪ್ರಕರಣ; ಸೆಲೆಬ್ರಿಟಿಗಳ ಹೇಳಿಕೆಗೂ, ಪೊಲೀಸರು ಹಾಕಿರೋ ಕೇಸ್​ಗೂ ಬರುತ್ತಿಲ್ಲ ತಾಳೆ
ದರ್ಶನ್
ಜಗದೀಶ ಬಿ.
| Edited By: |

Updated on: Jan 13, 2024 | 8:59 AM

Share

‘ಕಾಟೇರ’ (Kaatera Movie) ಸೆಲೆಬ್ರಿಟಿ ಶೋ ಮುಗಿದ ಬಳಿಕೆ ದರ್ಶನ್, ರಾಕ್​ಲೈನ್ ವೆಂಕಟೇಶ್ ಸೇರಿ ಅನೇಕ ಸೆಲೆಬ್ರಿಟಿಗಳು ಬೆಂಗಳೂರಿನ ಜೆಟ್ ಲ್ಯಾಗ್​ನಲ್ಲಿ ಅವಧಿ ಮೀರಿ ಪಾರ್ಟಿ ಮಾಡಿದ್ದರು ಎನ್ನುವ ಪ್ರಕರಣ ಸಾಕಷ್ಟು ಚರ್ಚೆ ಆಗುತ್ತಿದೆ. ನೋಟಿಸ್ ಪಡೆದ ಎಲ್ಲಾ ಸೆಲೆಬ್ರಿಟಿಗಳು ಜನವರಿ 12ರಂದು ಬಂದು ವಿಚಾರಣೆ ಎದುರಿಸಿದ್ದಾರೆ. ಈ ಪ್ರಕರಣದಲ್ಲಿ ಯಾವುದು ಸತ್ಯ ಮತ್ತು ಯಾವುದು ಸುಳ್ಳು ಎನ್ನುವ ಪ್ರಶ್ನೆ ಮೂಡಿದೆ. ಸೆಲೆಬ್ರಿಟಿಗಳ ಹೇಳಿಕೆ ಬಳಿಕ ಸಾಕಷ್ಟು ಅನುಮಾನ ಶುರುವಾಗಿದೆ.

ಅವಧಿ ಮೀರಿ ಪಾರ್ಟಿ ಮಾಡಿದ ಹಿನ್ನಲೆಯಲ್ಲಿ ಎಫ್​ಐಆರ್ ದಾಖಲಾಗಿತ್ತು. ಆದರೆ, ಊಟಕ್ಕೆ ಮಾತ್ರ ಬಂದಿದ್ದಾಗಿ ಸೆಲೆಬ್ರಿಟಿಗಳ ಹೇಳಿಕೆ ನೀಡಿದ್ದಾರೆ. ಅವಧಿಮೀರಿ ಪಾರ್ಟಿ ವೇಳೆ ಮದ್ಯ ಸೇವನೆ ಮಾಡಲಾಗಿತ್ತು ಎಂದು ಎಫ್​ಐಆರ್​ನಲ್ಲಿ ದಾಖಲಿಸಿಕೊಳ್ಳಲಾಗಿದೆ. ಜೆಟ್ ಲ್ಯಾಗ್​ನಲ್ಲಿ ನಾವು ಊಟ ಮಾತ್ರ ಮಾಡಿದೆವು ಎಂದು ಸೆಲೆಬ್ರಿಟಿಗಳು ಹೇಳಿದ್ದಾರೆ. ಪಬ್​ನಲ್ಲಿ ಗ್ರಾಹಕರಿದ್ದರು, ಅವರಿಗೆ ಮದ್ಯ ಸರಬರಾಜು ಮಾಡಲಾಗುತಿತ್ತು ಎಂದು ಎಫ್​ಐಆರ್​ನಲ್ಲಿ ಉಲ್ಲೇಖ ಮಾಡಲಾಗಿದೆ. ಮಧ್ಯರಾತ್ರಿ ಜೆಟ್ ಲ್ಯಾಗ್​ನಲ್ಲಿ ಕೆಲಸದವರು ಸಹ ಇರಲಿಲ್ಲ ಎಂದು ಸೆಲೆಬ್ರಿಟಿಗಳು ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ: ನಿಮಗೆ ತಾಕತ್ತಿದ್ದರೆ, ಧೈರ್ಯ ಇದ್ದರೆ..  ಪೊಲೀಸರಿಗೆ ಸವಾಲೆಸೆದ ದರ್ಶನ್ ಪರ ವಕೀಲ

ಮಧ್ಯರಾತ್ರಿ ತೆರಳಿ ಪಬ್ ಮುಚ್ಚುವಂತೆ ಹೇಳಿದ್ದಾಗಿ ಪೊಲೀಸರು ಈ ಮೊದಲು ತಿಳಿಸಿದ್ದರು. ನಾವು ಊಟ ಮುಗಿಸಿ ಹೊದರು ಯಾವ ಪೊಲೀಸರೂ ಬಂದಿಲ್ಲ ಎಂದು ರಾಕ್​ಲೈನ್ ಹೇಳಿಕೆ ನೀಡಿದ್ದಾರೆ. ಅಬಕಾರಿ ಕಾಯ್ದೆ, ಪೊಲೀಸ್ ಕಾಯ್ದೆ ಷರತ್ತು ಉಲ್ಲಂಘನೆ ಹಿನ್ನಲೆಯಲ್ಲಿ ದಾಳಿ ಮಾಡಿರುವುದಾಗಿ ಪೊಲೀಸರು ಉಲ್ಲೇಖ ಮಾಡಿದ್ದಾರೆ. ಆದರೆ ಪೊಲೀಸರೇ ಬಂದಿಲ್ಲ ಎಂದು ಸೆಲೆಬ್ರಿಟಿಗಳು ಹೇಳಿರೋದು ಸಾಕಷ್ಟು ಅನುಮಾನ ಹುಟ್ಟುಹಾಕಿದೆ. ಹೀಗಾಗಿ, ಯಾವುದು ಸತ್ಯ? ಯಾವುದು ಸುಳ್ಳು ಎನ್ನುವ ಪ್ರಶ್ನೆ ಮೂಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪಬ್​ನ ಸಿಸಿಟಿವಿ ದೃಶ್ಯಗಳನ್ನು ಪರಿಶೀಲನೆ ಮಾಡಲಾಗುತ್ತಿದೆ.

ಈ ಪ್ರಕರಣದ ಹಿಂದೆ ಇರೋದು ಯಾರು ಎಂದು ರಾಕ್​ಲೈನ್ ವೆಂಕಟೇಶ್ ಮಾಧ್ಯಮಗಳ ಎದುರು ಹೇಳಿದ್ದಾರೆ. ಈ ಪ್ರಕರಣದಲ್ಲಿ ದರ್ಶನ್​ ಟಾರ್ಗೆಟ್ ಮಾಡುತ್ತಲಾಗುತ್ತಿದೆಯೇ ಎನ್ನುವ ಪ್ರಶ್ನೆ ಮೂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Follow Us
ಜಗದೀಶ ಬಿ.
ಜಗದೀಶ ಬಿ.

ಜಗದೀಶ್​ ಬಸವರಾಜು ಟಿವಿ9 ಕನ್ನಡದ ಜಿಲ್ಲಾ ವರದಿಗಾರರಾಗಿದ್ದಾರೆ. ಪ್ರಸ್ತುತ ಅವರು ತುಮಕುರು ಜಿಲ್ಲಾ ಸುದ್ದಿಗಳ ವರದಿ ಮಾಡುತ್ತಿದ್ದಾರೆ. ಹುಟ್ಟಿದ್ದು, ಬೆಳೆದಿದ್ದು ಬೆಂಗಳೂರಿನಲ್ಲಿ. ಪತ್ರಿಕೋದ್ಯಮ ಓದಿದ್ದು, ವೃತ್ತಿ ಬದುಕು ಆರಂಭಿಸಿದ್ದು ಕೂಡಾ ಬೆಂಗಳೂರಿನಲ್ಲಿ. ಟಿವಿ9ನಲ್ಲಿ ಎಂಟು ವರ್ಷ ಸಹಿತ ಹತ್ತು ವರ್ಷದ ಕ್ರೈಂ ವರದಿಗಾರಿಕೆಯ ಅನುಭವದ ಜೊತೆ ಸದ್ಯ ೨೦೨೫ರಿಂದ ತುಮಕೂರು ಜಿಲ್ಲಾವರದಿಗಾರನಾಗಿ ಮಾದ್ಯಮದ ವೃತ್ತಿ ಬದುಕು ಮುಂದುವರೆದಿದೆ.

Read More
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್