AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆನ್ನು ನೋವಿನ ಚಿಕಿತ್ಸೆಗೆ ದರ್ಶನ್ ಮನವಿ: ಸರ್ಕಾರಿ ವಕೀಲರ ಆಕ್ಷೇಪವೇನು?

ಈ ಹಿಂದೆ 2024ರಲ್ಲಿ ಸಹ ದರ್ಶನ್​​ ತಮಗೆ ಜೈಲಿನಲ್ಲಿ ಬೆನ್ನು ನೋವು ಶುರುವಾಗಿದೆಯೆಂದು, ಬೆನ್ನು ನೋವಿಗೆ ಚಿಕಿತ್ಸೆ ಪಡೆಯಬೇಕೆಂಬ ಕಾರಣ ನೀಡಿ ಜಾಮೀನು ಪಡೆದುಕೊಂಡಿದ್ದರು. ಇದೀಗ ದರ್ಶನ್ ತಮಗೆ ಬೆನ್ನು ನೋವು ಶುರುವಾಗಿದ್ದು, ಚಳಿಗಾಲದ ಕಾರಣ ನೋವು ತೀವ್ರವಾಗಿದೆ ಎಂದು ಹೇಳಿದ್ದು, ಫಿಸಿಯೋಥೆರಪಿ ಮಾಡಿಸಿಕೊಳ್ಳಲು ಅನುಮತಿ ನೀಡಬೇಕು ಎಂದು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.

ಬೆನ್ನು ನೋವಿನ ಚಿಕಿತ್ಸೆಗೆ ದರ್ಶನ್ ಮನವಿ: ಸರ್ಕಾರಿ ವಕೀಲರ ಆಕ್ಷೇಪವೇನು?
Darshan Thoogudeepa
ಮಂಜುನಾಥ ಸಿ.
|

Updated on: Nov 06, 2026 | 4:06 PM

Share

ಮುಖ್ಯಾಂಶಗಳು

  • ದರ್ಶನ್ ತೂಗುದೀಪಗೆ ಜೈಲಿನಲ್ಲಿ ಬೆನ್ನು ನೋವು
  • ಚಿಕಿತ್ಸೆ ಬೇಡಿ ನ್ಯಾಯಾಲಯಕ್ಕೆ ದರ್ಶನ್ ಅರ್ಜಿ
  • ಅರ್ಜಿಯ ಕುರಿತು ಎಸ್​​ಪಿಪಿ ಆಕ್ಷೇಪ

ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್​​ಗೆ ಜೈಲಿನಲ್ಲಿ ಮತ್ತೆ ಬೆನ್ನು ನೋವು ಶುರುವಾಗಿದೆ. ಈ ಹಿಂದೆ 2024ರಲ್ಲಿ ಸಹ ದರ್ಶನ್​​ ತಮಗೆ ಜೈಲಿನಲ್ಲಿ ಬೆನ್ನು ನೋವು ಶುರುವಾಗಿದೆಯೆಂದು, ಬೆನ್ನು ನೋವಿಗೆ ಚಿಕಿತ್ಸೆ ಪಡೆಯಬೇಕೆಂಬ ಕಾರಣ ನೀಡಿ ಜಾಮೀನು ಪಡೆದುಕೊಂಡಿದ್ದರು. ಇದೀಗ ದರ್ಶನ್ ತಮಗೆ ಬೆನ್ನು ನೋವು ಶುರುವಾಗಿದ್ದು, ಚಳಿಗಾಲದ ಕಾರಣ ನೋವು ತೀವ್ರವಾಗಿದೆ ಎಂದು ಹೇಳಿದ್ದು, ಫಿಸಿಯೋಥೆರಪಿ ಮಾಡಿಸಿಕೊಳ್ಳಲು ಅನುಮತಿ ನೀಡಬೇಕು ಎಂದು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.

ಕಳೆದ ಕೆಲ ದಿನಗಳಿಂದ ಅರ್ಜಿಯ ವಿಚಾರಣೆ ನಡೆಯುತ್ತಿದೆ. ನಿನ್ನೆ (ನವೆಂಬರ್ 05) ದರ್ಶನ್ ಪರ ವಕೀಲರು ವಾದ ಮಂಡಿಸಿ, ಈ ಹಿಂದೆಯೇ ದರ್ಶನ್ ಅವರಿಗೆ ಚಿಕಿತ್ಸೆ ಅಗತ್ಯ ಇದೆ ಎಂದು ವೈದ್ಯರು ತಪಾಸಣೆ ನಡೆಸಿ ವರದಿ ಸಲ್ಲಿಸಿದ್ದರು. 15 ತಿಂಗಳುಗಳಿಂದಲೂ ಅವರು ಜೈಲಿನಲ್ಲಿ ಹಾಸಿಗೆ ಮೇಲೆ ಮಲಗುತ್ತಿದ್ದಾರೆ ಇದರಿಂದ ಅವರಿಗೆ ಬೆನ್ನು ನೋವು ಉಲ್ಬಣಿಸಿದೆ. ಅವರು ಕಳೆದ ಹಲವು ವರ್ಷಗಳಿಂದಲೂ ಬೆನ್ನು ಮೂಳೆಯ ಎಲ್​4 ಮತ್ತು ಎಲ್​​5 ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅವರಿಗೆ ಫಿಸಿಯೋಥೆರಪಿಗೆ ಅವಕಾಶ ಮಾಡಿಕೊಡಬೇಕು ಎಂದಿದ್ದರು.

ಇಂದು (ನವೆಂಬರ್ 6) ವಾದ ಮಂಡಿಸಿದ ಎಸ್​​ಪಿಪಿ ಪ್ರಸನ್ನ ಕುಮಾರ್, ‘ದರ್ಶನ್​​ ಅವರಿಗೆ ಬೆನ್ನುಹುರಿಯ ಎಲ್‌4 ಎಲ್‌5 ಸಮಸ್ಯೆ ಇದೆ ಎಂದು ಹೇಳಿದ್ದಾರೆ. ಸರ್ಜರಿ ಆಗಬೇಕೆಂದು ಹಿಂದೆ ವೈದ್ಯರು ವರದಿ ನೀಡಿದ್ದರು. ಸರ್ಜರಿಯಾಗದಿದ್ದರೆ ಕಾಲು ಬಲಹೀನವಾಗಲಿದೆ ಎಂದು ವರದಿಯಲ್ಲಿತ್ತು. ಆ ವರದಿ ಪರಿಗಣಿಸಿ ಹೈಕೋರ್ಟ್ ಜಾಮೀನು ನೀಡಿತ್ತು, ಆದರೆ ಜಾಮೀನು ಸಿಕ್ಕ ಬಳಿಕ ದರ್ಶನ್ ಸರ್ಜರಿ ಮಾಡಿಸಿಕೊಳ್ಳಲಿಲ್ಲ, ಬದಲಿಗೆ ದೊಡ್ಡ ದೊಡ್ಡ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದರು, ಸಿನಿಮಾ ಚಿತ್ರೀಕರಣಗಳಲ್ಲಿ ಪಾಲ್ಗೊಂಡಿದ್ದರು’ ಎಂದರು.

ಇದನ್ನೂ ಓದಿ:ರೇಣುಕಾ ಸ್ವಾಮಿ ತಾಯಿ ಪ್ರತಿಕೂಲ ಸಾಕ್ಷಿ? ಕೋರ್ಟ್​​ನಲ್ಲಿ ನಡೆದಿದ್ದೇನು?

ವಾದ ಮುಂದುವರೆಸಿ, ‘ಸುಪ್ರೀಂಕೋರ್ಟ್ ಸಹ ಇವರ (ದರ್ಶನ್) ನಡವಳಿಕೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದೆ, ವೈದ್ಯಕೀಯ ಚಿಕಿತ್ಸೆ ಬಗ್ಗೆ ಪ್ರಾಸಿಕ್ಯೂಷನ್ ಆಕ್ಷೇಪವಿಲ್ಲ, ಆದರೆ ಅವರ ಹಿಂದಿನ ನಡವಳಿಕೆಯನ್ನು ಕೋರ್ಟ್ ಪರಿಶೀಲಿಸಬೇಕು’ ಎಂದರು.

ಪ್ರಾಸಿಕ್ಯೂಷನ್ ವಾದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ದರ್ಶನ್ ಪರ ವಕೀಲ ಹಷ್ಮತ್ ಪಾಷಾ, ‘ಸುಮ್ಮನೇ ವೈದ್ಯರ ಬಳಿ ಹೋಗಲು ಯಾರೂ ಇಚ್ಛಿಸುವುದಿಲ್ಲ, ಕೇವಲ ಫಿಸಿಯೋಥೆರಪಿ ಚಿಕಿತ್ಸೆಗೆ ಮನವಿ ಮಾಡಿದ್ದೇವೆ, ಕೋರ್ಟ್ ಕಸ್ಟಡಿಯಲ್ಲಿರುವುದರಿಂದ ಆರೋಪಿ ಆರೋಗ್ಯದ ಕಾಳಜಿ ವಹಿಸಬೇಕು’ ಎಂದರು. ಎರಡೂ ಕಡೆಯ ವಾದ ಆಲಿಸಿದ 59ನೇ ಸಿಸಿಹೆಚ್ ಕೋರ್ಟ್ ನ್ಯಾಯಾಧೀಶರು ಆದೇಶವನ್ನು ನಾಳೆಗೆ ಕಾಯ್ದಿರಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ಬೆಂಗಳೂರಿನಲ್ಲಿ ಒಂದೇ ಕುಟುಂಬದ 7 ಜನರ ಹತ್ಯೆ: ಬಾಲಕ ಬದುಕುಳಿದಿದ್ದೇ ರೋಚಕ
ಬೆಂಗಳೂರಿನಲ್ಲಿ ಒಂದೇ ಕುಟುಂಬದ 7 ಜನರ ಹತ್ಯೆ: ಬಾಲಕ ಬದುಕುಳಿದಿದ್ದೇ ರೋಚಕ
ಚಿಕ್ಕಮಗಳೂರಿನಲ್ಲಿ ಪಾಕಿಸ್ತಾನದ ಗೋಹರ್ ಶಾಹಿ ಅನುಯಾಯಿ ಸಮಾಧಿ ವಿವಾದ
ಚಿಕ್ಕಮಗಳೂರಿನಲ್ಲಿ ಪಾಕಿಸ್ತಾನದ ಗೋಹರ್ ಶಾಹಿ ಅನುಯಾಯಿ ಸಮಾಧಿ ವಿವಾದ
7 ಜನರ ಹತ್ಯೆ ಕೇಸ್​: ಶಾಕಿಂಗ್​​ ಹೇಳಿಕೆ ಕೊಟ್ಟ ಪೊಲೀಸ್​​ ಕಮಿಷನರ್​
7 ಜನರ ಹತ್ಯೆ ಕೇಸ್​: ಶಾಕಿಂಗ್​​ ಹೇಳಿಕೆ ಕೊಟ್ಟ ಪೊಲೀಸ್​​ ಕಮಿಷನರ್​
ಸಿಸಿಟಿವಿಯಲ್ಲಿ ಸೆರೆಯಾಯಿತು ಭಯಾನಕ ದೃಶ್ಯ
ಸಿಸಿಟಿವಿಯಲ್ಲಿ ಸೆರೆಯಾಯಿತು ಭಯಾನಕ ದೃಶ್ಯ
‘ಮೋದಿಗಿಂತ ಚೆನ್ನಾಗಿ ಇಂಗ್ಲಿಷ್ ಬರುತ್ತೆ ನಂಗೆ’: ಪ್ರಿಯಾಂಕ್ ಖರ್ಗೆ
‘ಮೋದಿಗಿಂತ ಚೆನ್ನಾಗಿ ಇಂಗ್ಲಿಷ್ ಬರುತ್ತೆ ನಂಗೆ’: ಪ್ರಿಯಾಂಕ್ ಖರ್ಗೆ
ಊಟದಲ್ಲಿ ಮತ್ತಿನ ಮಾತ್ರೆ ಬೆರೆಸಿ ನಂತರ ಕೊಲೆ ಮಾಡಿದ ಶಂಕೆ!
ಊಟದಲ್ಲಿ ಮತ್ತಿನ ಮಾತ್ರೆ ಬೆರೆಸಿ ನಂತರ ಕೊಲೆ ಮಾಡಿದ ಶಂಕೆ!
7 ಜನರ ಭೀಕರ ಹತ್ಯೆ ಬಗ್ಗೆ ಗೃಹ ಸಚಿವರು ಹೇಳಿದ್ದೇನು ನೋಡಿ
7 ಜನರ ಭೀಕರ ಹತ್ಯೆ ಬಗ್ಗೆ ಗೃಹ ಸಚಿವರು ಹೇಳಿದ್ದೇನು ನೋಡಿ
ಏಳು ಜನರ ಭೀಕರ ಹತ್ಯೆ: ತಂದೆ ಕೃತ್ಯಕ್ಕೆ ಮಗಳೂ ಸಾಥ್​​ ನೀಡಿರುವ ಶಂಕೆ
ಏಳು ಜನರ ಭೀಕರ ಹತ್ಯೆ: ತಂದೆ ಕೃತ್ಯಕ್ಕೆ ಮಗಳೂ ಸಾಥ್​​ ನೀಡಿರುವ ಶಂಕೆ
ಬೆಂಗಳೂರಲ್ಲಿ ಒಂದೇ ಕುಟುಂಬದ 7 ಜನರ ಹತ್ಯೆಗೆ ಅಸಲಿಗೆ ಕಾರಣವೇನು ಗೊತ್ತಾ?
ಬೆಂಗಳೂರಲ್ಲಿ ಒಂದೇ ಕುಟುಂಬದ 7 ಜನರ ಹತ್ಯೆಗೆ ಅಸಲಿಗೆ ಕಾರಣವೇನು ಗೊತ್ತಾ?
7 ಜನರ ಹತ್ಯೆ ಕೇಸ್​​: ಆರೋಪಿಯ ಕರಾಳ ಇತಿಹಾಸ ಬಿಚ್ಚಿಟ್ಟ ಸಂಬಂಧಿಕರು
7 ಜನರ ಹತ್ಯೆ ಕೇಸ್​​: ಆರೋಪಿಯ ಕರಾಳ ಇತಿಹಾಸ ಬಿಚ್ಚಿಟ್ಟ ಸಂಬಂಧಿಕರು