AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಾಫಿ ಸಾಕ್ಷಿ ತಡೆಯಲು ಇನ್ನಿಲ್ಲದ ಯತ್ನ: ದರ್ಶನ್ ಪರ ವಕೀಲರ ವಾದವೇನು?

ಪ್ರದೋಷ್ ಮಾಫಿ ಸಾಕ್ಷಿಗೆ ನ್ಯಾಯಾಲಯ ದಿನಾಂಕ ನಿಗದಿ ಮಾಡಿದ್ದಾಗಿದೆ. ಆದರೆ ಮಾಫಿ ಸಾಕ್ಷಿಯನ್ನು ಹೇಳಿಕೆಯನ್ನು ತಪ್ಪಿಸಲು ದರ್ಶನ್ ಪರ ವಕೀಲರು ಶತಾಯಗತಾಯ ಪ್ರಯತ್ನ ಮಾಡುತ್ತಿದ್ದಾರೆ. ಹೇಳಿಕೆ ದಾಖಲಿಸಲು ದಿನಾಂಕ ನಿಗದಿ ಆದ ಬಳಿಕವೂ ಸಹ ಪ್ರಖರವಾದ ವಾದ ಮಂಡಿಸಿ, ಅದರಲ್ಲೂ ಸಹ ಅವಕಾಶವೊಂದನ್ನು ದರ್ಶನ್ ಪರ ವಕೀಲರ ಹಷ್ಮತ್ ಪಾಷಾ ಪಡೆದುಕೊಂಡಿದ್ದಾರೆ.

ಮಾಫಿ ಸಾಕ್ಷಿ ತಡೆಯಲು ಇನ್ನಿಲ್ಲದ ಯತ್ನ: ದರ್ಶನ್ ಪರ ವಕೀಲರ ವಾದವೇನು?
Darshan Renuka Swamy
ಮಂಜುನಾಥ ಸಿ.
|

Updated on: Sep 24, 2026 | 4:31 PM

Share

ಮುಖ್ಯಾಂಶಗಳು

  • ಪ್ರದೋಶ್ ಸಾಕ್ಷಿ ಹೇಳಿಕೆ ಕುರಿತು ವಾದ
  • ಪ್ರಖರ ವಾದ ಮಂಡಿಸಿದ ದರ್ಶನ್ ಪರ ವಕೀಲ
  • ಸೆಪ್ಟೆಂಬರ್ 28ಕ್ಕೆ ದಿನಾಂಕ ನಿಗದಿ ಆಗಿದೆ

ರೇಣುಕಾ ಸ್ವಾಮಿ ಪ್ರಕರಣ ಮಹತ್ವದ ಘಟ್ಟಕ್ಕೆ ಬಂದು ನಿಂತಿದೆ. ಆರೋಪಿಗಳಲ್ಲಿ ಒಬ್ಬರಾಗಿರುವ ಪ್ರದೋಶ್, ಮಾಫಿ ಸಾಕ್ಷಿಯಾಗಿ ಬದಲಾಗಿದ್ದಾರೆ. ಆ ಮೂಲಕ ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಇಂಚಿಂಚೂ ಮಾಹಿತಿಯನ್ನು ನ್ಯಾಯಾಲಯದ ಮುಂದೆ ಒಪ್ಪಿಕೊಳ್ಳುವುದಾಗಿ ಹೇಳಿದ್ದಾರೆ. ಇದು ದರ್ಶನ್​ ಮತ್ತು ಇತರೆ ಕೆಲವು ಪ್ರಮುಖ ಆರೋಪಿಗಳಿಗೆ ನುಂಗಲಾರದ ತುತ್ತಾಗಿದೆ. ದರ್ಶನ್ ಮತ್ತು ಅವರ ವಕೀಲರಂತೂ ಪ್ರದೋಶ್ ಸಾಕ್ಷಿಯನ್ನು ತಡೆಯಲು ಶತಾಯಗತಾಯ ಪ್ರಯತ್ನ ಮಾಡುತ್ತಲೇ ಬಂದಿದ್ದಾರೆ. ಇದೀಗ ವಿಚಾರಣಾ ನ್ಯಾಯಾಲಯವು ಪ್ರದೋಶ್ ಸಾಕ್ಷಿ ಹೇಳಿಕೆಗೆ ದಿನಾಂಕ ನಿಗದಿಪಡಿಸಿದೆ. ಕಾಲಾವಕಾಶವನ್ನು ಸಹ ಕೊಡಲಾಗದು ಎಂದಿದೆ ಹಾಗಿದ್ದರೂ ಸಹ ದರ್ಶನ್ ಪರ ವಕೀಲರು ಪ್ರಯತ್ನ ನಿಲ್ಲಿಸಿಲ್ಲ.

ಇಂದು (ಸೆಪ್ಟೆಂಬರ್ 24) 59ನೇ ಸಿಸಿಹೆಚ್ ನ್ಯಾಯಾಲಯವು ಪ್ರದೋಶ್, ಮಾಫಿ ಸಾಕ್ಷಿ ದಾಖಲಿಸುವಂತೆ ಸಮನ್ಸ್ ಜಾರಿ ಮಾಡಿತು. ಸೆಪ್ಟೆಂಬರ್ 28ಕ್ಕೆ ಮಾಫಿ ಸಾಕ್ಷಿ ದಾಖಲಿಸುವಂತೆ ಸೂಚಿಸಿತು. ಆದರೆ ಇದಕ್ಕೆ ತಕರಾರು ಎತ್ತಿದ ದರ್ಶನ್ ಪರ ವಕೀಲರ ಹಷ್ಮತ್ ಪಾಷಾ ಅವರು, ‘ನಮಗೆ ಕಾಲಾವಕಾಶ ಬೇಕು’ ಎಂದರು. ‘ನಾವು ಸುಪ್ರೀಂಕೋರ್ಟ್​​ಗೆ ಮೇಲ್ಮನವಿ ಸಲ್ಲಿಸಿದ್ದೇವೆ ಹಾಗಾಗಿ ಕಾಲಾವಕಾಶ ಕೊಡಿ’ ಎಂದರು. ಆದರೆ ದರ್ಶನ್ ವಕೀಲರ ವಾದ ಒಪ್ಪದ ನ್ಯಾಯಾಲಯ, ‘ಖುದ್ದು ಸುಪ್ರೀಂಕೋರ್ಟ್​​ನ ಸೂಚನೆ ಇದೆ, ಬೇಗ ಸಾಕ್ಷಿಗಳ ವಿಚಾರಣೆ ಮುಗಿಯಬೇಕೆಂದು ಹಾಗಾಗಿ ಸಮಯ ನೀಡಲಾಗದು’ ಎಂದರು.

ಇದನ್ನೂ ಓದಿ:  ಮಾಫಿ ಸಾಕ್ಷಿಗೆ ದಿನಾಂಕ ನಿಗದಿ, ಸೆ.28ಕ್ಕೆ ದರ್ಶನ್ ಭವಿಷ್ಯ ಭಾಗಷಃ ನಿರ್ಧಾರ

ಹೈಕೋರ್ಟ್​​, ಮಾಫಿ ಸಾಕ್ಷಿ ಬಗ್ಗೆ ಆದೇಶ ಹೊರಡಿಸಿದ್ದು, ಆ ಆದೇಶ ಪ್ರತಿ ಇನ್ನೂ ಕೈಗೆ ಸಿಕ್ಕಿಲ್ಲ. ಹೈಕೋರ್ಟ್ ಆದೇಶದಲ್ಲಿ ಮಾಫಿ ಸಾಕ್ಷಿಗೂ ಸಹ ಷರತ್ತುಗಳನ್ನು ವಿಧಿಸಲಾಗಿದೆ. ಅವುಗಳನ್ನು ಗಣನೆಗೆ ತೆಗೆದುಕೊಳ್ಳಬೇಕಿದೆ. ಪಾಟಿಸವಾಲಿನ (ಕ್ರಾಸ್ ಎಕ್ಸಾಮಿನ್) ವೇಳೆ ದರ್ಶನ್ ಹಾಜರಿಡಲೂ ಹೈಕೋರ್ಟ್ ಸೂಚಿಸಿದೆ, ಯಾವ ಕ್ರಮದಲ್ಲಿ ವಿಚಾರಣೆ ನಡೆಸಬೇಕೆಂದು ಸಹ ಹೈಕೋರ್ಟ್ ಹೇಳಿದೆ ಇವೆಲ್ಲವನ್ನೂ ಪರಿಗಣಿಸದೆ ಪ್ರದೋಶ್ ಸಾಕ್ಷಿ ಹೇಳಿಕೆಗೆ ಅನುಮತಿ ನೀಡುವಂತಿಲ್ಲ ಎಂದು ದರ್ಶನ್ ಪರ ವಕೀಲರು ವಾದ ಮಂಡಿಸಿದ್ದಾರೆ.

ಹಷ್ಮತ್ ಪಾಷಾ ವಾದ ಆಲಿಸಿದರ ನ್ಯಾಯಾಧೀಶರು, ‘ಹೈಕೋರ್ಟ್ ಆದೇಶದ ಪ್ರತಿ ಸಲ್ಲಿಸಿದರೆ ಅದನ್ನು ಪಾಲಿಸಲಾಗುವುದು, ನಾಳೆ ಅಥವಾ ನಾಡಿದ್ದು ಹೈಕೋರ್ಟ್‌ನ ಸರ್ಟಿಫೈಡ್ ಕಾಪಿ ಸಲ್ಲಿಸಿ’ ಎಂದರು. ಆಗ ಹಷ್ಮತ್ ಅವರು, ‘ಆದೇಶ ಪಾಲಿಸದೆ ಸಮನ್ಸ್ ಜಾರಿ ಮಾಡಬಾರದು’ ಎಂದರು. ಅದಕ್ಕೆ ನ್ಯಾಯಾಧೀಶರು, ‘ಈಗಾಗಲೇ ಸಾಕ್ಷ್ಯ ವಿಚಾರಣೆಗೆ ಕೋರ್ಟ್ ದಿನಾಂಕ ನಿಗದಿಪಡಿಸಿದೆ, ನಿಮ್ಮ ವಾದವನ್ನೂ ಸಹ ನಾವು ಪರಿಗಣಿಸಿಕೊಂಡಿದ್ದೇವೆ. ಶನಿವಾರದೊಳಗೆ ಸರ್ಟಿಫೈಡ್ ಕಾಪಿ ಸಿಗದಿದ್ದರೆ ಮುಂದೂಡಿಕೆಯನ್ನು ಪರಿಗಣಿಸುತ್ತೇವೆ’ ಎಂದರು.

ಶನಿವಾರದ ಒಳಗಾಗಿ ದರ್ಶನ್ ಪರ ವಕೀಲರು ಹೈಕೋರ್ಟ್​ ಆದೇಶದ ಕಾಪಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕಾಗಿದೆ. ಒಂದೊಮ್ಮೆ ಆ ಆದೇಶಕ್ಕೆ ವ್ಯತಿರಿಕ್ತವಾಗಿ ಸಮನ್ಸ್ ಜಾರಿ ಆಗಿದ್ದರೆ ಮಾತ್ರ ಪ್ರದೋಶ್ ಸಾಕ್ಷ್ಯ ಹೇಳಿಕೆ ದಾಖಲು ದಿನಾಂಕ ಮುಂದೂಡಿಕೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More