‘ನಿನ್ನ ಬಿಟ್ಟು ಇರೋಕೆ ಆಗ್ತಾ ಇಲ್ಲ ಅಣ್ಣ..’; ಚಿರು ನೆನೆದು ಎಮೋಷನಲ್​ ಆದ ಧ್ರುವ ಸರ್ಜಾ: ವಿಡಿಯೋ ವೈರಲ್​

TV9 Digital Desk

| Edited By: ಮದನ್​ ಕುಮಾರ್​

Updated on: Sep 13, 2021 | 8:52 AM

ಚಿರಂಜೀವಿ ಸರ್ಜಾ ಅಗಲಿಕೆ ನಂತರ ಧ್ರುವ ಸರ್ಜಾ ಅವರಿಗೆ ಆದ ನೋವು ಅಷ್ಟಿಷ್ಟಲ್ಲ. ಆ ದುರ್ಘಟನೆ ನಡೆದು ಒಂದು ವರ್ಷಕ್ಕೂ ಹೆಚ್ಚು ಕಾಲ ಆಗಿದೆ. ಈಗೇಕೋ ಅವರಿಗೆ ಮತ್ತೆ ತೀವ್ರವಾಗಿ ಸಹೋದರನ ನೆನಪು ಕಾಡುತ್ತಿದೆ.

‘ನಿನ್ನ ಬಿಟ್ಟು ಇರೋಕೆ ಆಗ್ತಾ ಇಲ್ಲ ಅಣ್ಣ..’; ಚಿರು ನೆನೆದು ಎಮೋಷನಲ್​ ಆದ ಧ್ರುವ ಸರ್ಜಾ: ವಿಡಿಯೋ ವೈರಲ್​
ಚಿರಂಜೀವಿ ಸರ್ಜಾ, ಧ್ರುವ ಸರ್ಜಾ

ನಟ ಧ್ರುವ ಸರ್ಜಾ ಅವರು ‘ಮಾರ್ಟಿನ್​’ ಸಿನಿಮಾದ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಈ ನಡುವೆ ಅವರಿಗೆ ಅಣ್ಣನ ನೆನಪು ಕಾಡುತ್ತಿದೆ. ಅವರ ಸಹೋದರ ಚಿರಂಜೀವಿ ಸರ್ಜಾ ಇಹಲೋಕ ತ್ಯಜಿಸಿ ಒಂದು ವರ್ಷಕ್ಕೂ ಹೆಚ್ಚು ಕಾಲ ಆಗಿದೆ. ಹಾಗಿದ್ದರೂ ಕೂಡ ಅಣ್ಣನ ಅಗಲಿಕೆಯ ನೋವನ್ನು ಮರೆಯಲು ಧ್ರುವ ಸರ್ಜಾಗೆ ಸಾಧ್ಯವಾಗುತ್ತಿಲ್ಲ. ಈ ವಿಚಾರದಲ್ಲಿ ಸಾಧ್ಯವಾದಷ್ಟು ಗಟ್ಟಿಯಾಗಿರಲು ಪ್ರಯತ್ನಿಸುವ ಅವರು ಈಗ ಇದ್ದಕ್ಕಿದ್ದಂತೆ ಎಮೋಷನಲ್​ ಆಗಿದ್ದಾರೆ. ತಮ್ಮ ಮನಸ್ಸಿನ ತಳಮಳವನ್ನು ಸೋಶಿಯಲ್ ಮೀಡಿಯಾದಲ್ಲಿ ಹೇಳಿಕೊಳ್ಳುವ ಮಟ್ಟಕ್ಕೆ ಅವರು ಅಣ್ಣನನ್ನು ಮಿಸ್​ ಮಾಡಿಕೊಳ್ಳುತ್ತಿದ್ದಾರೆ.

ಚಿರಂಜೀವಿ ಸರ್ಜಾ ಮತ್ತು ಧ್ರುವ ಸರ್ಜಾ ನಡುವೆ ಇದ್ದ ಬಾಂಧವ್ಯಕ್ಕೆ ಸಾಟಿಯೇ ಇಲ್ಲ ಎನ್ನುತ್ತಾರೆ ಅಭಿಮಾನಿಗಳು. ಆ ಮಾತನ್ನು ಸಾಬೀತುಪಡಿಸುವಂತಹ ಅನೇಕ ಫೋಟೋ ಮತ್ತು ವಿಡಿಯೋಗಳು ಲಭ್ಯವಿದೆ. ಅಣ್ಣ-ತಮ್ಮಂದಿರಾದರೂ ಸ್ನೇಹಿತರ ರೀತಿ ಇದ್ದರು ಚಿರು-ಧ್ರುವ. ಅಣ್ಣನ ಅಗಲಿಕೆ ನಂತರ ಧ್ರುವ ಸರ್ಜಾಗೆ ಆದ ನೋವು ಅಷ್ಟಿಷ್ಟಲ್ಲ. ಈಗೇಕೋ ಅವರಿಗೆ ಮತ್ತೆ ತೀವ್ರವಾಗಿ ಸಹೋದರನ ನೆನಪು ಕಾಡುತ್ತಿದೆ.

ಸೋಶಿಯಲ್​ ಮೀಡಿಯಾದಲ್ಲಿ ಧ್ರುವ ಒಂದು ವಿಡಿಯೋ ಹಂಚಿಕೊಂಡಿದ್ದಾರೆ. ಬಾಲ್ಯದಿಂದ ಹಿಡಿದು ಚಿರು ನಿಧನದವರೆಗೂ ಅಣ್ಣ-ತಮ್ಮ ಜೊತೆಯಾಗಿ ಕಳೆದ ಅನೇಕ ಪ್ರೀತಿಯ ಕ್ಷಣಗಳು ಈ ವಿಡಿಯೋದಲ್ಲಿ ಸೆರೆಯಾಗಿವೆ. ‘ಮಿಸ್​ ಯೂ ಚಿರು. ನಿನ್ನನ್ನು ಬಿಟ್ಟು ಇರಲು ಸಾಧ್ಯವಾಗುತ್ತಿಲ್ಲ’ ಎಂದು ಇದಕ್ಕೆ ಅವರು ಕ್ಯಾಪ್ಷನ್​ ನೀಡಿದ್ದಾರೆ. ಅವರಿಗೆ ಸಮಾಧಾನ ಮಾಡುವ ರೀತಿಯಲ್ಲಿ ಅಭಿಮಾನಿಗಳು ಕಮೆಂಟ್​ ಮಾಡುತ್ತಿದ್ದಾರೆ.

ಚಿರು-ಮೇಘನಾ ರಾಜ್​ ಪುತ್ರ ರಾಯನ್​ ರಾಜ್​ ಸರ್ಜಾ ಜನಿಸಿದ ಬಳಿಕ ಅವರ ಕುಟುಂಬದಲ್ಲಿ ಮತ್ತೆ ನಗು ಮೂಡಿತು. ಇತ್ತೀಚೆಗಷ್ಟೇ ಆ ಮಗುವಿಗೆ ನಾಮಕರಣ ಮಾಡಲಾಯಿತು. ಮೇಘನಾ ರಾಜ್​ ಮತ್ತು ಸರ್ಜಾ ಕುಟುಂಬದ ನಡುವೆ ಕೆಲವು ವಿಚಾರಕ್ಕೆ ಮನಸ್ತಾಪ ಮೂಡಿದೆಯೇ ಎಂಬ ಅನುಮಾನ ಕೂಡ ಹಲವರ ಮನದಲ್ಲಿ ಉದ್ಭವ ಆಗಿತ್ತು. ಅದಕ್ಕೆ ಅಂದು ಧ್ರುವ ಸ್ಪಷ್ಟನೆ ನೀಡಿದ್ದರು. ‘ಅಣ್ಣನ ಮಗನಿಗೆ ರಾಯನ್​ ರಾಜ್​ ಸರ್ಜಾ ಎಂದು ಹೆಸರು ಇಟ್ಟಿದ್ದೇವೆ. ರಾಜ್​ ಮತ್ತು ಸರ್ಜಾ ಎಂಬ ಈ ಹೆಸರಿನಲ್ಲಿಯೇ ಗೊತ್ತಾಗುತ್ತದೆ. ರಾಜ್​-ಸರ್ಜಾ ಫ್ಯಾಮಿಲಿ ಜೊತೆಯಾಗಿಯೇ ಇದೆ. ಯೂಟ್ಯೂಬ್​ ಚಾನೆಲ್​ಗಳ ಮೂಲಕ ತಪ್ಪು ಮಾಹಿತಿ ಹರಡಬೇಡಿ. ಅದರ ಪ್ರಭಾವಕ್ಕೆ ನಾವು ಒಳಗಾಗುವುದಿಲ್ಲ. ಸುಂದರ್​ ರಾಜ್​ ಅಂಕಲ್​, ಪ್ರಮೀಳಾ ಜೋಷಾಯ್​ ಆಂಟಿ ಮತ್ತು ಮೇಘನಾ ಅತ್ತಿಗೆ ಸೇರಿದಂತೆ ಎಲ್ಲರೂ ನಮ್ಮೊಂದಿಗೆ ಸಹಕಾರದಿಂದ ಇದ್ದಾರೆ. ನಾವು ಖುಷಿಯಾಗಿದ್ದೇವೆ’ ಎಂದು ಅವರು ಹೇಳಿದ್ದರು.

ಇದನ್ನೂ ಓದಿ:

‘ಮೇಘನಾಳನ್ನು ನಾವು ನೋಡಿಕೊಳ್ತೀವಿ, ಬೇರೆ ಯಾರೂ ಬೇಡ’; ಪ್ರಮೀಳಾ ಜೋಷಾಯ್​ ನೇರ​ ಮಾತು

ಹಿಂದೂ-ಕ್ರೈಸ್ತ ಸಂಪ್ರದಾಯದಂತೆ ಮಗನಿಗೆ ಹೆಸರಿಟ್ಟಿದ್ದಕ್ಕೆ ಕಾರಣ ತಿಳಿಸಿದ ಮೇಘನಾ ರಾಜ್​

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada