AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Happy Birthday Ramya: ಜಪಾನ್​ನಲ್ಲಿ ರಮ್ಯಾ ಬರ್ತ್​​ಡೇ ಆಚರಣೆ; ವೈರಲ್ ಆಯ್ತು ಫೋಟೋ

Divya Spandana Birthday: ಕೆಲ ಸೆಲೆಬ್ರಿಟಿಗಳು ಬರ್ತ್​ಡೇ ಸಂದರ್ಭದಲ್ಲಿ ಒಂದು ಬ್ರೇಕ್ ತೆಗೆದುಕೊಂಡು ವಿದೇಶ ಪ್ರಯಾಣ ಬೆಳೆಸುತ್ತಾರೆ. ರಮ್ಯಾ ಕೂಡ ಈ ಬಾರಿ ವಿದೇಶಕ್ಕೆ ಹಾರಿದ್ದಾರೆ. ಅವರು ಹುಟ್ಟುಹಬ್ಬದ ಸಂದರ್ಭದಲ್ಲಿ ಜಪಾನ್​​ಗೆ ತೆರಳಿದ್ದಾರೆ.

Happy Birthday Ramya: ಜಪಾನ್​ನಲ್ಲಿ ರಮ್ಯಾ ಬರ್ತ್​​ಡೇ ಆಚರಣೆ; ವೈರಲ್ ಆಯ್ತು ಫೋಟೋ
ರಮ್ಯಾ
TV9 Web
| Edited By: |

Updated on:Nov 29, 2022 | 8:34 AM

Share

ನಟಿ ರಮ್ಯಾ (Ramya)  ಅವರು ಹಲವು ವರ್ಷಗಳ ಬಳಿಕ ಚಿತ್ರರಂಗಕ್ಕೆ ಮರಳಿದ್ದಾರೆ. ಈ ವಿಚಾರ ಅವರ ಅಭಿಮಾನಿಗಳಿಗೆ ಸಾಕಷ್ಟು ಖುಷಿ ನೀಡಿದೆ. ಇದರ ಜತೆಗೆ ನಿರ್ಮಾಣದಲ್ಲೂ ರಮ್ಯಾ ಬ್ಯುಸಿ ಆಗಿದ್ದಾರೆ. ‘ಆಪಲ್​ಬಾಕ್ಸ್​ ಸ್ಟುಡಿಯೋಸ್​’ (AppleBox Studios) ನಿರ್ಮಾಣ ಸಂಸ್ಥೆ ಸ್ಥಾಪಿಸಿ ಸಿನಿಮಾ ನಿರ್ಮಾಣಕ್ಕೆ ಇಳಿದಿದ್ದಾರೆ. ಇಂದು (ನವೆಂಬರ್ 29) ರಮ್ಯಾ  40ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಅವರಿಗೆ ಅಭಿಮಾನಿಗಳು ಹಾಗೂ ಸೆಲೆಬ್ರಿಟಿಗಳು ಬರ್ತ್​ಡೇ ವಿಶ್ ತಿಳಿಸುತ್ತಿದ್ದಾರೆ. ಬರ್ತ್​ಡೇ ಪ್ರಯುಕ್ತ ಅವರ ಮುಂದಿನ ಚಿತ್ರದ ಲುಕ್ ರಿವೀಲ್ ಆಗಲಿ ಎಂದು ಫ್ಯಾನ್ಸ್ ಕಾಯುತ್ತಿದ್ದಾರೆ.

ಕೆಲ ಸೆಲೆಬ್ರಿಟಿಗಳು ಬರ್ತ್​ಡೇ ಸಂದರ್ಭದಲ್ಲಿ ಒಂದು ಬ್ರೇಕ್ ತೆಗೆದುಕೊಂಡು ವಿದೇಶ ಪ್ರಯಾಣ ಬೆಳೆಸುತ್ತಾರೆ. ರಮ್ಯಾ ಕೂಡ ಈ ಬಾರಿ ವಿದೇಶಕ್ಕೆ ಹಾರಿದ್ದಾರೆ. ಅವರು ಹುಟ್ಟುಹಬ್ಬದ ಸಂದರ್ಭದಲ್ಲಿ ಜಪಾನ್​​ಗೆ ತೆರಳಿದ್ದಾರೆ. ಜಪಾನ್ ಹೇಗಿದೆ ಎಂಬ ಫೋಟೋಗಳನ್ನು ಇನ್​ಸ್ಟಾಗ್ರಾಮ್ ಸ್ಟೇಟಸ್​ನಲ್ಲಿ ಹಂಚಿಕೊಂಡಿದ್ದಾರೆ ಅವರು.

2003ರಲ್ಲಿ ತೆರೆಗೆ ಬಂದ ಪುನೀತ್ ರಾಜ್​ಕುಮಾರ್ ನಟನೆಯ ‘ಅಭಿ’ ಚಿತ್ರದಿಂದ ಬಣ್ಣದ ಬದುಕು ಆರಂಭಿಸಿದವರು ನಟಿ ರಮ್ಯಾ. ನಂತರ ‘ಎಕ್ಸ್​​ಕ್ಯೂಸ್​ ಮಿ’ ಚಿತ್ರದಲ್ಲಿ ನಟಿಸಿದರು. ಬಳಿಕ ಅವರಿಗೆ ತೆಲುಗು ಹಾಗೂ ತಮಿಳು ಚಿತ್ರರಂಗದಿಂದ ಆಫರ್ ಬಂತು. ಅಲ್ಲಿಯೂ ನಟಿಸಿ ಅವರು ಸೈ ಎನಿಸಿಕೊಂಡರು. ಸುದೀಪ್ ಮೊದಲಾದ ಸ್ಟಾರ್ ನಟರ ಜತೆ ರಮ್ಯಾ ತೆರೆಹಂಚಿಕೊಂಡಿದ್ದಾರೆ.

ಇದನ್ನೂ ಓದಿ
Image
‘ಪುಷ್ಪ 2’ ಬಗ್ಗೆ ನನಗೆ ಏನು ಅಂದ್ರೆ ಏನೂ ಗೊತ್ತಿಲ್ಲ ಎಂದ ಡಾಲಿ ಧನಂಜಯ
Image
ಡಾಲಿ ಧನಂಜಯ್​-ಅಮೃತಾ ಅಯ್ಯಂಗಾರ್​ ನಡುವೆ ಏನು ನಡೆಯುತ್ತಿದೆ? ನೇರ ಉತ್ತರ ನೀಡಿದ ನಟಿ
Image
‘ಕ್ಷೇತ್ರಪತಿ’ ಆದ ನವೀನ್​ ಶಂಕರ್​ಗೆ ಶುಭ ಕೋರಿದ ಡಾಲಿ ಧನಂಜಯ; ಮೋಷನ್​ ಪೋಸ್ಟರ್​ ರಿಲೀಸ್​
Image
‘ನೀನೇ ಬೇಕು ನೀನೇ ಬೇಕು ಎನ್ನುವಂತಾಗಲಿ’: ವಸಿಷ್ಠ ಸಿಂಹ, ಡಾಲಿ ಧನಂಜಯಗೆ ಹಂಸಲೇಖ ಹಾರೈಕೆ

ಇದನ್ನೂ ಓದಿ: ಜಪಾನ್​​ನಿಂದ ಬಂದು ರಾಘಣ್ಣನನ್ನು ಭೇಟಿ ಮಾಡಿದ ಪುನೀತ್ ರಾಜ್​ಕುಮಾರ್​ ಫ್ಯಾನ್ಸ್

ಕಳೆದ ಕೆಲ ವರ್ಷಗಳಿಂದ ರಮ್ಯಾ ರಾಜಕೀಯದಲ್ಲಿ ಬ್ಯುಸಿ ಆಗಿದ್ದರು. ಆ ಬಳಿಕ ಅವರು ರಾಜಕೀಯವನ್ನೂ ತೊರೆದರು. ಮತ್ತೆ ಚಿತ್ರರಂಗದಲ್ಲಿ ಅವರಿಗೆ ಆಸಕ್ತಿ ಬೆಳೆಯಿತು. ಈಗ ಅವರು ಹಲವು ವರ್ಷಗಳ ಬಳಿಕ ಬಣ್ಣದ ಲೋಕಕ್ಕೆ ಮರಳುತ್ತಿದ್ದಾರೆ. ‘ಉತ್ತರಕಾಂಡ’ ಚಿತ್ರದಿಂದ ಅವರು ನಟನೆಗೆ ಮರಳಿದ್ದಾರೆ.

ಇದನ್ನೂ ಓದಿ: Uttarakaanda: ರಮ್ಯಾ-ಡಾಲಿ ಧನಂಜಯ್​ ಜೋಡಿಯ ‘ಉತ್ತರಕಾಂಡ’ ಚಿತ್ರಕ್ಕೆ ಪೂಜೆ; ಇಲ್ಲಿವೆ ಮಸ್ತ್​ ಫೋಟೋಗಳು

‘ಉತ್ತರಕಾಂಡ’ ಸಿನಿಮಾವನ್ನು ವಿಜಯ್ ಕಿರಗಂದೂರು ಅರ್ಪಿಸುತ್ತಿದ್ದಾರೆ. ಕೆ.ಆರ್.ಜಿ. ಸಂಸ್ಥೆ ನಿರ್ಮಾಣ ಮಾಡುತ್ತಿದ್ದು, ರೋಹಿತ್ ಪದಕಿ ನಿರ್ದೇಶಿಸುತ್ತಿದ್ದಾರೆ. ನವೆಂಬರ್ 6ರಂದು ಪಂಚಮುಖಿ ಗಣಪತಿ ದೇವಸ್ಥಾನದಲ್ಲಿ ಈ ಚಿತ್ರಕ್ಕೆ ಮುಹೂರ್ತ ನೆರವೇರಿತ್ತು. ‘ರತ್ನನ್ ಪ್ರಪಂಚ’ ಯಶಸ್ಸಿನ ನಂತರ ನಿರ್ದೇಶಕ ರೋಹಿತ್ ಪದಕಿ, ನಿರ್ಮಾಪಕರಾದ ಕಾರ್ತಿಕ್ ಗೌಡ ಹಾಗೂ ಯೋಗಿ ಜಿ. ರಾಜ್, ನಟ ಧನಂಜಯ್ ಮತ್ತೊಮ್ಮೆ ಒಂದಾಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 8:03 am, Tue, 29 November 22

Follow Us
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಇಂದು ಏಕಾದಶಿ; ಯಾವೆಲ್ಲಾ ರಾಶಿಗಳ ಅದೃಷ್ಟ ಹೇಗಿದೆ?
ಇಂದು ಏಕಾದಶಿ; ಯಾವೆಲ್ಲಾ ರಾಶಿಗಳ ಅದೃಷ್ಟ ಹೇಗಿದೆ?
ಹೈದರಾಬಾದ್​​ನಲ್ಲಿ ‘ಟಾಕ್ಸಿಕ್’ ಇವೆಂಟ್​​, ಯಶ್ ನೋಡಲು ಬಂದ ಜನಸಾಗರ
ಹೈದರಾಬಾದ್​​ನಲ್ಲಿ ‘ಟಾಕ್ಸಿಕ್’ ಇವೆಂಟ್​​, ಯಶ್ ನೋಡಲು ಬಂದ ಜನಸಾಗರ
ದೆಹಲಿಯಲ್ಲಿ ಬಿಜೆಪಿ ನೂತನ ಪದಾಧಿಕಾರಿಗಳ ಜೊತೆ ಪ್ರಧಾನಿ ಮೋದಿ ಸಂವಾದ
ದೆಹಲಿಯಲ್ಲಿ ಬಿಜೆಪಿ ನೂತನ ಪದಾಧಿಕಾರಿಗಳ ಜೊತೆ ಪ್ರಧಾನಿ ಮೋದಿ ಸಂವಾದ
ನಾಪತ್ತೆಯಾಗಿದ್ದ IAS ಅಧಿಕಾರಿಯ ಸುಳಿವು ಪತ್ತೆ: ಸ್ಥಳದ ಮಾಹಿತಿ ಲಭ್ಯ!
ನಾಪತ್ತೆಯಾಗಿದ್ದ IAS ಅಧಿಕಾರಿಯ ಸುಳಿವು ಪತ್ತೆ: ಸ್ಥಳದ ಮಾಹಿತಿ ಲಭ್ಯ!
ಬರ, ರೈತರ ಸಾಲಮನ್ನಾ ಬಗ್ಗೆ ಕೃಷಿ ಸಚಿವ ನರೇಂದ್ರಸ್ವಾಮಿ ಹೇಳಿದ್ದಿಷ್ಟು
ಬರ, ರೈತರ ಸಾಲಮನ್ನಾ ಬಗ್ಗೆ ಕೃಷಿ ಸಚಿವ ನರೇಂದ್ರಸ್ವಾಮಿ ಹೇಳಿದ್ದಿಷ್ಟು