AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಹಳ ಜನ ನನ್ನನ್ನು ನಾಶ ಮಾಡಲು ಬಂದಿದ್ದರು: ದುನಿಯಾ ವಿಜಯ್

Duniya Vijay: ವಿನೋದ್ ಪ್ರಭಾಕರ್ ನಟನೆಯ 'ಫೈಟರ್' ಸಿನಿಮಾದ ಕಾರ್ಯಕ್ರಮದಲ್ಲಿ ನಟ, ನಿರ್ದೇಶಕ ದುನಿಯಾ ವಿಜಯ್ ತಾವು ಫೈಟರ್ ಆಗಿದ್ದ ದಿನಗಳಲ್ಲಿ ಅನುಭವಿಸಿದ ಕಷ್ಟ, ಅವಮಾನಗಳನ್ನು 'ಫೈಟರ್' ವೇದಿಕೆ ಮೇಲೆ ನೆನಪು ಮಾಡಿಕೊಂಡರು.

ಬಹಳ ಜನ ನನ್ನನ್ನು ನಾಶ ಮಾಡಲು ಬಂದಿದ್ದರು: ದುನಿಯಾ ವಿಜಯ್
ವಿಜಯ್-ದುನಿಯಾ
ಮಂಜುನಾಥ ಸಿ.
|

Updated on:Oct 02, 2023 | 12:12 AM

Share

ವಿನೋದ್ ಪ್ರಭಾಕರ್ (Vinod Prabhakar) ನಟನೆಯ ‘ಫೈಟರ್’ ಸಿನಿಮಾದ ಕಾರ್ಯಕ್ರಮದಲ್ಲಿ ನಟ, ನಿರ್ದೇಶಕ ದುನಿಯಾ ವಿಜಯ್ ಭಾಗವಹಿಸಿ ಗೆಳೆಯ ವಿನೋದ್ ಪ್ರಭಾಕರ್​ಗೆ ಶುಭಾಶಯ ತಿಳಿಸಿದರು. ಸ್ವತಃ ಫೈಟರ್ ಆಗಿದ್ದು ಬಳಿಕ ನಾಯಕ ನಟನಾದ ಆ ಬಳಿಕ ನಿರ್ದೇಶಕ, ನಿರ್ಮಾಪಕನೂ ಆಗಿರುವ ದುನಿಯಾ ವಿಜಯ್, ತಾವು ಫೈಟರ್ ಆಗಿದ್ದ ದಿನಗಳಲ್ಲಿ ಅನುಭವಿಸಿದ ಕಷ್ಟ, ಅವಮಾನಗಳನ್ನು ‘ಫೈಟರ್’ ವೇದಿಕೆ ಮೇಲೆ ನೆನಪು ಮಾಡಿಕೊಂಡರು.

”ಹಂಗೋ ಹಿಂಗೊ ಫೈಟರ್ ಆಗಿದ್ದಾನೆ. ಇವನು ಹೀರೋ ಆಗ್ತಾನಂತೆ ಅಂದ್ರು, ಹೀರೋ ಆದೆ. ಬಹಳಷ್ಟು ಜನ ನಮ್ಮನ್ನು ನಾಶ ಮಾಡಲು ಬಂದಿದ್ದರು. ಆದರೆ ಯಾರೂ ಯಶಸ್ಸು ಗಳಿಸಲಿಲ್ಲ. ತುಂಬಾ ಜನ ಕೆಟ್ಟದು ಮಾಡಿದರು. ತುಂಬಾ ಜನ ಒಳ್ಳೆಯದು ಮಾಡಿದರು. ಆದರೆ ನಮ್ಮ ವಿರುದ್ಧ ಕೊಂಕು ಮಾತನಾಡುವವರು ಇಂದಿಗೂ ಮಾತನಾಡುತ್ತಲೇ ಇದ್ದಾರೆ. ನಾನು ಬೆಳೆಯುತ್ತಲೇ ಇದ್ದೀನಿ” ಎಂದರು ವಿಜಯ್.

”ಸಿನಿಮಾ ಮಾಡುವ ಹುಚ್ಚು ಇದ್ದಿದ್ದ ಕಾರಣದಿಂದಲೇ ಫೈಟಿಂಗ್ ಕಲಿತೆ. ಫೈಟರ್ ಸಂಘವನ್ನು ಬಹಳ ಕಷ್ಟಪಟ್ಟು ಸೇರಿಕೊಂಡೆ. ಡ್ಯಾನಿ ಮಾಸ್ಟರ್ ತಂಡದಲ್ಲಿದ್ದೆ. ಆರಂಭದಲ್ಲಿಯೇ ನನಗೆ ಹಲವು ಗಾಯಗಳಾಗಿದ್ದವು. ಅದಾದ ಮೇಲೆ ನಟನೆ ಕಲಿತುಕೊಂಡೆ. ನಟನಾಗುವ ಪ್ರಯತ್ನ ಮಾಡಿದಾಗ, ಇವನ್ಯಾವನು ಫೈಟರ್ ನಟನಾಗ್ತಾನಂತೆ ಎಂದೆಲ್ಲ ಕುಹುಕ ಮಾಡಿದರು. ಆದರೆ ನಾನು ಬಿಡಲಿಲ್ಲ” ಎಂದರು.

ಇದನ್ನೂ ಓದಿ:ರಾಬರ್ಟ್ ಜೋಡಿ ಮತ್ತೆ ತೆರೆಗೆ, ಮತ್ತೊಂದು ಸಿನಿಮಾ ಮುಗಿಸಿದ ವಿನೋದ್ ಪ್ರಭಾಕರ್

”ದುನಿಯಾ’ ಸಿನಿಮಾ ಮಾಡಿದಾಗಲೂ ಸಹ ಫೈಟರ್ ಇವನು ನಟನಾಗಿ ಏನು ಮಾಡ್ತಾನೆ, ಕರಿಯರ್ ಮುಗಿಸಿ ಬಿಡೋಣ ಎಂದುಕೊಂಡರು. ಪ್ರಯತ್ನ ಪಟ್ಟರು ಅವರು ಪಟ್ಟ ಪ್ರಯತ್ನದಿಂದಲೇ ನಾನು ಬೆಳೆಯುತ್ತಾ ಹೋದೆ. ನಟನನ್ನು ಮುಗಿಸಿಬಿಡೋಣ ಅಂದುಕೊಂಡರು, ನಿರ್ಮಾಪಕ ಆದೆ. ನಿರ್ಮಾಪಕನ್ನು ಮುಗಿಸಿ ಬಿಡೋಣ ಅಂದುಕೊಂಡರು, ನಿರ್ದೇಶಕ ಆದೆ. ಹೀಗೆ ಒಟ್ಟಿನಲ್ಲಿ ಫೈಟ್ ಬಿಡಬಾರದು. ಸದಾ ಫೈಟರ್ ಆಗಿರಬೇಕು” ಎಂದರು ವಿಜಿ.

ವಿನೋದ್ ಪ್ರಭಾಕರ್ ಬಗ್ಗೆಯೂ ಮಾತನಾಡಿದ ನಟ ದುನಿಯಾ ವಿಜಯ್, ”ಎಷ್ಟೇ ವರ್ಷಗಳಾದರೂ ಅದೇ ಫಿಟ್​ನೆಸ್ ಅನ್ನು, ದೇಹದಾರ್ಡ್ಯವನ್ನು ನಿಭಾಯಿಸುವುದು ಸುಲಭವಾದ ಕೆಲಸ ಅಲ್ಲ. ಅದರ ಹಿಂದೆ ಅವರು ಎಷ್ಟು ಶ್ರಮ ಪಟ್ಟಿದ್ದಾರೆ. ಎಷ್ಟು ನೋವು ತಿಂದಿದ್ದಾರೆ, ಎಷ್ಟು ಗಾಯಗಳನ್ನು ಮಾಡಿಕೊಂಡಿದ್ದಾರೆ ಎಂಬುದು ಊಹಿಸಬಲ್ಲೆ. ಹಾಗಾಗಿ ಅಂಥಹವರನ್ನು ನಿರ್ದೇಶನ ಮಾಡುವ ನಿರ್ದೇಶಕರು, ಆ ಸಿನಿಮಾದ ಬಳಿಕ ಅವರಿಗೆ ಇನ್ನೂ ಐದು ಸಿನಿಮಾಗಳು ಸಿಗುವಂತೆ ಸಿನಿಮಾ ನಿರ್ದೇಶನ ಮಾಡಬೇಕು” ಎಂದು ವಿಜಯ್ ಮನವಿ ಮಾಡಿದರು. ವಿನೋದ್ ಪ್ರಭಾಕರ್ ನಟನೆಯ ‘ಫೈಟರ್’ ಸಿನಿಮಾ ಅಕ್ಟೋಬರ್ 06ಕ್ಕೆ ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:56 pm, Sun, 1 October 23

ಸೆಲಿಬ್ರಿಟಿಗಳ ಬಳಿ ತಮ್ಮ ಸಮಸ್ಯೆ ಹೇಳಿಕೊಂಡಿದ್ದರೆ ಪರಿಹಾರ ಸಿಗುತಿತ್ತು!
ಸೆಲಿಬ್ರಿಟಿಗಳ ಬಳಿ ತಮ್ಮ ಸಮಸ್ಯೆ ಹೇಳಿಕೊಂಡಿದ್ದರೆ ಪರಿಹಾರ ಸಿಗುತಿತ್ತು!
ಬಾಲಕನ ಕಿಡ್ನಾಪ್ ಮತ್ತು ಹತ್ಯೆ ಕೇಸ್: ಸಿಸಿಟಿವಿಯಲ್ಲಿ ಸೆರೆಯಾದ ಕೊನೆ ದೃಶ್ಯ
ಬಾಲಕನ ಕಿಡ್ನಾಪ್ ಮತ್ತು ಹತ್ಯೆ ಕೇಸ್: ಸಿಸಿಟಿವಿಯಲ್ಲಿ ಸೆರೆಯಾದ ಕೊನೆ ದೃಶ್ಯ
ಮನೆಯ ಮೆಟ್ಟಿಲ ಕೆಳಗೆ ಶೌಚಾಲಯವಿದಾಯಾ? ಹಾಗಾದ್ರೆ ಈ ವಿಡಿಯೋ ನೋಡಿ
ಮನೆಯ ಮೆಟ್ಟಿಲ ಕೆಳಗೆ ಶೌಚಾಲಯವಿದಾಯಾ? ಹಾಗಾದ್ರೆ ಈ ವಿಡಿಯೋ ನೋಡಿ
ರವಿ ಕರ್ಕಾಟಕ ರಾಶಿಯಲ್ಲೂ, ಚಂದ್ರ ತುಲಾ ರಾಶಿಯಲ್ಲೂ ಸಂಚರ
ರವಿ ಕರ್ಕಾಟಕ ರಾಶಿಯಲ್ಲೂ, ಚಂದ್ರ ತುಲಾ ರಾಶಿಯಲ್ಲೂ ಸಂಚರ
ನಟಿ ಭಾವನಾ ರಾಮಣ್ಣ ಸೀಮಂತ ಶಾಸ್ತ್ರ; ಇಲ್ಲಿದೆ ವಿಡಿಯೋ
ನಟಿ ಭಾವನಾ ರಾಮಣ್ಣ ಸೀಮಂತ ಶಾಸ್ತ್ರ; ಇಲ್ಲಿದೆ ವಿಡಿಯೋ
ಪ್ರಜ್ವಲ್ ರೇವಣ್ಣ ಅಪರಾಧಿ: ಕೋರ್ಟ್​ ತೀರ್ಪು ಸ್ವಾಗತಿಸಿದ ಬಿಜೆಪಿ ಮುಖಂಡ
ಪ್ರಜ್ವಲ್ ರೇವಣ್ಣ ಅಪರಾಧಿ: ಕೋರ್ಟ್​ ತೀರ್ಪು ಸ್ವಾಗತಿಸಿದ ಬಿಜೆಪಿ ಮುಖಂಡ
ಕಾನ್ಪುರದ ಬಳಿ ಹಳಿ ತಪ್ಪಿದ ಸಬರಮತಿ ಎಕ್ಸ್‌ಪ್ರೆಸ್ ರೈಲು
ಕಾನ್ಪುರದ ಬಳಿ ಹಳಿ ತಪ್ಪಿದ ಸಬರಮತಿ ಎಕ್ಸ್‌ಪ್ರೆಸ್ ರೈಲು
ಸಮುದ್ರದಲ್ಲಿ ಇರುವಾಗಲೇ ಹೊತ್ತಿ ಉರಿದ ಮೀನುಗಾರಿಕೆ ಬೋಟ್
ಸಮುದ್ರದಲ್ಲಿ ಇರುವಾಗಲೇ ಹೊತ್ತಿ ಉರಿದ ಮೀನುಗಾರಿಕೆ ಬೋಟ್
ರಾಹುಲ್ ಗಾಂಧಿ ಮಗುವಲ್ಲ, ದೇಶದ ಗೌರವಕ್ಕೆ ಧಕ್ಕೆ ತರಬಾರದು; ಕಿರಣ್ ರಿಜಿಜು
ರಾಹುಲ್ ಗಾಂಧಿ ಮಗುವಲ್ಲ, ದೇಶದ ಗೌರವಕ್ಕೆ ಧಕ್ಕೆ ತರಬಾರದು; ಕಿರಣ್ ರಿಜಿಜು
ನಾಳಿನ ಕಾರ್ಯಕ್ರಮದಲ್ಲಿ ಕೊನೆಯವನಾಗಿ ಮಾತಾಡುತ್ತೇನೆ: ಶಿವಕುಮಾರ್
ನಾಳಿನ ಕಾರ್ಯಕ್ರಮದಲ್ಲಿ ಕೊನೆಯವನಾಗಿ ಮಾತಾಡುತ್ತೇನೆ: ಶಿವಕುಮಾರ್