ಜಾಗ್ವಾರ್ ನಿಖಿಲ್ ಜೊತೆ ದುನಿಯಾ ವಿಜಯ್: ಲೈಕಾ ಕುಟುಂಬಕ್ಕೆ ಎಂಟ್ರಿ

Nikhil-Duniya Vijya: ನಿಖಿಲ್ ಕುಮಾರಸ್ವಾಮಿಯ ಹೊಸ ಸಿನಿಮಾದಲ್ಲಿ ನಟ ದುನಿಯಾ ವಿಜಯ್ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ. ಈ ಸಿನಿಮಾವನ್ನು ಲೈಕಾ ಪ್ರೊಡಕ್ಷನ್ ಅವರು ನಿರ್ಮಾಣ ಮಾಡುತ್ತಿದ್ದಾರೆ.

ಜಾಗ್ವಾರ್ ನಿಖಿಲ್ ಜೊತೆ ದುನಿಯಾ ವಿಜಯ್: ಲೈಕಾ ಕುಟುಂಬಕ್ಕೆ ಎಂಟ್ರಿ
ದುನಿಯಾ ವಿಜಯ್-ನಿಖಿಲ್ ಕುಮಾರಸ್ವಾಮಿ
Follow us
ಮಂಜುನಾಥ ಸಿ.
|

Updated on: Oct 12, 2023 | 6:19 PM

ನಿಖಿಲ್ ಕುಮಾರಸ್ವಾಮಿಯ (Nikhil Kumaraswamy) ಹೊಸ ಸಿನಿಮಾವನ್ನು ದಕ್ಷಿಣ ಭಾರತದ ಜನಪ್ರಿಯ ನಿರ್ಮಾಣ ಸಂಸ್ಥೆ ಲೈಕಾ ಪ್ರೊಡಕ್ಷನ್ ನಿರ್ಮಾಣ ಮಾಡುತ್ತಿದೆ. ರಜನೀಕಾಂತ್, ವಿಕ್ರಂ, ಐಶ್ವರ್ಯಾ ರೈ, ಕಮಲ್ ಹಾಸನ್, ಮೆಗಾಸ್ಟಾರ್ ಚಿರಂಜೀವಿ ಇನ್ನೂ ಹಲವು ಸ್ಟಾರ್ ನಟರ ಸಿನಿಮಾಗಳನ್ನು ನಿರ್ಮಿಸಿರುವ ಲೈಕಾ ಪ್ರೊಡಕ್ಷನ್ ಹೌಸ್, ಕನ್ನಡ ಚಿತ್ರರಂಗಕ್ಕೆ ನಿಖಿಲ್ ಕುಮಾರಸ್ವಾಮಿ ಸಿನಿಮಾ ಮೂಲಕ ಎಂಟ್ರಿ ನೀಡುತ್ತಿದೆ.

ಕನ್ನಡದಲ್ಲಿ ತಮ್ಮ ಮೊದಲ ಸಿನಿಮಾವನ್ನು ಸಖತ್ ಅದ್ಧೂರಿಯಾಗಿ ಲೈಕಾ ನಿರ್ಮಾಣ ಮಾಡುತ್ತಿದೆ. ದೊಡ್ಡ ಬಜೆಟ್​ ಸಿನಿಮಾಗಳಿಂದಲೇ ಖ್ಯಾತಿ ಗಳಿಸಿರುವ ಲೈಕಾ, ಕನ್ನಡದ್ಲಿಯೂ ತನ್ನ ಹಿರಿಮೆಗೆ ತಕ್ಕಂತೆ ಅದ್ಧೂರಿಯಾಗಿಯೇ ಸಿನಿಮಾ ನಿರ್ಮಾಣ ಮಾಡುತ್ತಿದೆ. ಅದ್ಧೂರಿಯಾಗಿ ಸಿನಿಮಾ ನಿರ್ಮಿಸುವ ಜೊತೆಗೆ ತಾರಾಗಣವೂ ಅದ್ಧೂರಿಯಾಗಿಯೇ ಇರುವಂತೆ ಎಚ್ಚರ ವಹಿಸಿದೆ.

ನಿಖಿಲ್ ಕುಮಾರಸ್ವಾಮಿ ನಾಯಕ ನಟನಾಗಿ ನಟಿಸುತ್ತಿರುವ ಈ ಸಿನಿಮಾಕ್ಕೆ ಇದೀಗ ನಟ ದುನಿಯಾ ವಿಜಯ್​ರನ್ನು ಕರೆ ತರಲಾಗಿದೆ. ವಿಜಯ್ ಅವರು ಬಹಳ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ನಿಖಿಲ್​ರ ಈ ಸಿನಿಮಾದಲ್ಲಿ ವಿಜಯ್ ವಿಲನ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾತುಗಳು ಸಹ ಕೇಳಿ ಬರುತ್ತಿದೆ. ಆದರೆ ಈ ಬಗ್ಗೆ ಇನ್ನಷ್ಟೆ ಖಾತ್ರಿ ಸಿಗಬೇಕಿದೆ.

ಇದನ್ನೂ ಓದಿ:ಬಹಳ ಜನ ನನ್ನನ್ನು ನಾಶ ಮಾಡಲು ಬಂದಿದ್ದರು: ದುನಿಯಾ ವಿಜಯ್

ನಿಖಿಲ್ ಕುಮಾರಸ್ವಾಮಿ ತಮ್ಮ ಸಾಮಾಜಿಕ ಜಾಲತಾಣದ ಮೂಲಕ, ತಮ್ಮ ಹೊಸ ಸಿನಿಮಾಕ್ಕೆ ದುನಿಯಾ ವಿಜಯ್​ರನ್ನು ಸ್ವಾಗತಿಸಿದ್ದಾರೆ. ಇಬ್ಬರೂ ನಟರು ಒಟ್ಟಿಗಿರುವ ಚಿತ್ರವನ್ನು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ನಟ ನಿಖಿಲ್ ಕುಮಾರಸ್ವಾಮಿ, ”ಲೈಕಾ ಪ್ರೊಡಕ್ಷನ್ ಅಡಿಯಲ್ಲಿ ಪ್ರೊಡಕ್ಷನ್ ನಂ28 ಕುಟುಂಬಕ್ಕೆ ಅಧಿಕೃತವಾಗಿ ಸೇರ್ಪಡೆಯಾದ ಸ್ಯಾಂಡಲ್ ವುಡ್ ‘ಸಲಗ’ ಕರಿಚಿರತೆ ದುನಿಯಾ ವಿಜಯ್ ಅವರಿಗೆ ಸ್ವಾಗತ. ನಮ್ಮ ಸಿನಿಮಾದ ಪ್ರಮುಖ ಪಾತ್ರದಲ್ಲಿ ದುನಿಯಾ ವಿಜಯ್ ಅವರು ನಟಿಸುತ್ತಿದ್ದಾರೆ. ಅವರ ಜೊತೆ ನಾನು ತೆರೆಹಂಚಿಕೊಳ್ಳುತ್ತಿರುವುದು ಸಂತೋಷದ ವಿಚಾರ” ಎಂದಿದ್ದಾರೆ.

ದುನಿಯಾ ವಿಜಯ್ ಇತ್ತೀಚೆಗಷ್ಟೆ ತಮ್ಮದೇ ನಿರ್ದೇಶನದ ‘ಭೀಮ’ ಸಿನಿಮಾದ ಚಿತ್ರೀಕರಣ ಮುಗಿಸಿದ್ದು, ಸಿನಿಮಾದ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಇತ್ತೀಚೆಗಷ್ಟೆ ‘ಭೀಮ’ ಸಿನಿಮಾದ ಹಾಡೊಂದನ್ನು ಬಿಡುಗಡೆ ಮಾಡಿದ್ದು, ಹಾಡು ಸೂಪರ್ ವೈರಲ್ ಆಗಿದೆ. ‘ಭೀಮ’ ಹೊರತಾಗಿ ಇನ್ನೂ ಕೆಲವು ಸಿನಿಮಾಗಳಲ್ಲಿ ದುನಿಯಾ ವಿಜಯ್ ತೊಡಗಿಕೊಂಡಿದ್ದಾರೆ. ಇದರ ನಡುವೆ ನಿಖಿಲ್ ಕುಮಾರಸ್ವಾಮಿಯ ಹೊಸ ಸಿನಿಮಾದಲ್ಲಿಯೂ ನಟಿಸುತ್ತಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ