‘ಮಾನ್ಸೂನ್ ರಾಗ’ (Monsoon Raaga) ಸಿನಿಮಾ ಬಗ್ಗೆ ಸಿನಿಪ್ರಿಯರಿಗೆ ವಿಶೇಷ ನಿರೀಕ್ಷೆ ಇದೆ. ರವೀಂದ್ರನಾಥ್ ಅವರು ನಿರ್ದೇಶನ ಮಾಡಿರುವ ಈ ಚಿತ್ರಕ್ಕೆ ವಿಖ್ಯಾತ್ ಬಂಡವಾಳ ಹೂಡಿದ್ದಾರೆ. ಡಾಲಿ ಧನಂಜಯ್, ರಚಿತಾ ರಾಮ್ (Rachita Ram), ಯಶಾ ಶಿವಕುಮಾರ್, ಅಚ್ಯುತ್ ಕುಮಾರ್, ಸುಹಾಸಿನಿ ಮಣಿರತ್ನಂ ಸೇರಿದಂತೆ ಅನೇಕರು ಈ ಚಿತ್ರದಲ್ಲಿ ನಟಿಸಿದ್ದಾರೆ. ಇಂದು (ಸೆ.16) ‘ಮಾನ್ಸೂನ್ ರಾಗ’ ಚಿತ್ರ ಬಿಡುಗಡೆ. ಕರ್ನಾಟಕದ ಅನೇಕ ಚಿತ್ರಮಂದಿರಗಳಲ್ಲಿ ಈ ಸಿನಿಮಾ ಪ್ರದರ್ಶನ ಕಾಣುತ್ತಿದೆ. ಥಿಯೇಟರ್ ಎದುರು ಕಟೌಟ್ಗಳು ರಾರಾಜಿಸುತ್ತಿವೆ. ಡಾಲಿ ಧನಂಜಯ್ (Daali Dhananjay) ಅಭಿಮಾನಿಗಳು ಅದ್ದೂರಿಯಾಗಿ ಸಿನಿಮಾಗೆ ಸ್ವಾಗತ ಕೋರುತ್ತಿದ್ದಾರೆ. ‘ಮಾನ್ಸೂನ್ ರಾಗ’ ನೋಡಲು ಪ್ರಮುಖ 5 ಕಾರಣಗಳು ಇಲ್ಲಿವೆ..
ಕಾರಣ 1: ಡಾಲಿ ಧನಂಜಯ್-ರಚಿತಾ ರಾಮ್ ಕಾಂಬಿನೇಷನ್
ಡಾಲಿ ಧನಂಜಯ್ ಮಾಡುವ ಪ್ರತಿ ಸಿನಿಮಾಗಳು ಕೂಡ ವಿಶೇಷವಾಗಿ ಇರುತ್ತವೆ. ಅವರಿಗೆ ಈ ಬಾರಿ ರಚಿತಾ ರಾಮ್ ಜೋಡಿ ಆಗಿದ್ದಾರೆ. ಟ್ರೇಲರ್ನಲ್ಲಿ ಅವರಿಬ್ಬರ ಕಾಂಬಿನೇಷನ್ ನೋಡಿ ಸಿನಿಪ್ರಿಯರಿಗೆ ಕೌತುಕ ಹೆಚ್ಚಿದೆ. ಇದೇ ಮೊದಲ ಬಾರಿಗೆ ಅವರು ಜೊತೆಯಾಗಿ ನಟಿಸಿದ್ದಾರೆ.
ಕಾರಣ 2: ಸುಹಾಸಿನಿ-ಅಚ್ಯುತ್ ಕುಮಾರ್ ಜೋಡಿ
ಯಾವ ಪಾತ್ರ ಕೊಟ್ಟರೂ ಅದಕ್ಕೆ ನ್ಯಾಯ ಒದಗಿಸುವಂತಹ ನಟ ಅಚ್ಯುತ್ ಕುಮಾರ್. ಈ ಸಿನಿಮಾದಲ್ಲಿ ಅವರ ಜೊತೆ ಸುಹಾನಿಸಿ ಮಣಿರತ್ನಂ ಕೂಡ ನಟಿಸಿರುವುದರಿಂದ ನಿರೀಕ್ಷೆ ಮೂಡಿದೆ. ಡಿಫರೆಂಟ್ ಪ್ರೇಮಕಥೆಯನ್ನು ಜನರ ಮುಂದಿಡಲಿದೆ ಈ ಸಿನಿಮಾ.
ಕಾರಣ 3: ಗೌಪ್ಯವಾಗಿವೆ ಕೆಲವು ಪಾತ್ರಗಳು
ಈ ಸಿನಿಮಾದಲ್ಲಿನ ಕೆಲವು ಪಾತ್ರಗಳನ್ನು ಮೊದಲೇ ರಿವೀಲ್ ಮಾಡಿಲ್ಲ. ಚಿತ್ರಮಂದಿರದಲ್ಲಿ ಒಂದಷ್ಟು ಪಾತ್ರಗಳು ಸರ್ಪ್ರೈಸ್ ನೀಡಲಿವೆ. ಟ್ರೇಲರ್ನಲ್ಲಿ ತೋರಿಸಿದ್ದಕ್ಕಿಂತಲೂ ಹೆಚ್ಚಿನ ವಿಚಾರಗಳು ಈ ಸಿನಿಮಾದಲ್ಲಿ ಅಡಗಿವೆ.
ಕಾರಣ 4: ಯಶಾ ಶಿವಕುಮಾರ್ ಹಾಡು ಸೂಪರ್ ಹಿಟ್
‘ಮಾನ್ಸೂನ್ ರಾಗ’ ಚಿತ್ರಕ್ಕೆ ಅನೂಪ್ ಸಿಳೀನ್ ಸಂಗೀತ ನೀಡಿದ್ದಾರೆ. ಯಶಾ ಶಿವಕುಮಾರ್ ಕಾಣಿಸಿಕೊಂಡಿರುವ ಹಾಡು ಯೂಟ್ಯೂಬ್ನಲ್ಲಿ ಧೂಳೆಬ್ಬಿಸಿದೆ. 20 ಲಕ್ಷಕ್ಕೂ ಅಧಿಕ ವೀವ್ಸ್ ಪಡೆದುಕೊಂಡಿದೆ. ದೊಡ್ಡಪರದೆಯಲ್ಲಿ ಈ ಸಾಂಗ್ ನೋಡಲು ಫ್ಯಾನ್ಸ್ ಬಯಸಿದ್ದಾರೆ.
ಕಾರಣ 5: ಡಾಲಿಯ ಡಿಫರೆಂಟ್ ಸಿನಿಮಾ
ರಗಡ್ ಪಾತ್ರಗಳಿಗೆ ಡಾಲಿ ಫೇಮಸ್. ಹಾಗಂತ ಅವರು ಒಂದೇ ರೀತಿಯ ಚಿತ್ರಗಳಿಗೆ ತಮ್ಮನ್ನು ಸೀಮಿತವಾಗಿಸಿಕೊಂಡಿಲ್ಲ. ವಿಭಿನ್ನವಾದಂತಹ ಸ್ಕ್ರಿಪ್ಟ್ ಮತ್ತು ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಅಂಥ ಚಿತ್ರಗಳ ಸಾಲಿಗೆ ಸೇರುವಂತಹ ಸಿನಿಮಾ ‘ಮಾನ್ಸೂನ್ ರಾಗ’. ಗುರು ಕಶ್ಯಪ್ ಅವರು ಈ ಚಿತ್ರಕ್ಕೆ ಸಂಭಾಷಣೆ ಬರೆದಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.