AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮತ್ತೊಂದು ಮಧುರ ಪ್ರೇಮಕತೆಯೊಟ್ಟಿಗೆ ಬಂದ ಗಣೇಶ್, ‘ಬೃಂದಾವಿಹಾರಿ’ ಬಿಡುಗಡೆ ಯಾವಾಗ?

ಕೌಟುಂಬಿಕ ಸಿನಿಮಾಗಳು, ಹಾಸ್ಯಮಯ ಪ್ರೇಮಕತಾ ಸಿನಿಮಾಗಳನ್ನು ಮಾಡಿಕೊಂಡು ಬರುತ್ತಿರುವ ನಟ ಗಣೇಶ್ ಇದೀಗ ಮತ್ತೊಮ್ಮೆ ಅಂಥಹುದೇ ಸಿನಿಮಾನಲ್ಲಿ ನಟಿಸಿದ್ದು, ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಗಣೇಶ್ ನಟನೆಯ ‘ಬೃಂದಾವಿಹಾರಿ’ ಸಿನಿಮಾ ಬಿಡುಗಡೆಗೆ ರೆಡಿಯಾಗಿದ್ದು, ಕೆವಿಎನ್ ಪ್ರೊಡಕ್ಷನ್ಸ್ ಈ ಸಿನಿಮಾದ ವಿತರಣೆ ಮಾಡಲಿದೆ. ಭಾರಿ ಅದ್ಧೂರಿಯಾಗಿ ಈ ಸಿನಿಮಾ ಬಿಡುಗಡೆ ಆಗಲಿದೆ.

ಮತ್ತೊಂದು ಮಧುರ ಪ್ರೇಮಕತೆಯೊಟ್ಟಿಗೆ ಬಂದ ಗಣೇಶ್, ‘ಬೃಂದಾವಿಹಾರಿ’ ಬಿಡುಗಡೆ ಯಾವಾಗ?
BrindavihariImage Credit source: Ganesh Instagram
ಮಂಜುನಾಥ ಸಿ.
|

Updated on:Sep 02, 2026 | 4:00 PM

Share

ಮುಖ್ಯಾಂಶಗಳು

  • ಗೋಲ್ಡನ್ ಸ್ಟಾರ್ ಗಣೇಶ್ ಅವರ ಹೊಸ ಸಿನಿಮಾ
  • ಮತ್ತೊಂದು ಮಧುರ ಪ್ರೇಮಕತೆಯಲ್ಲಿ ನಟಿಸಿರುವ ಗಣೇಶ್
  • ‘ಬೃಂದಾವಿಹಾರಿ’ ಸಿನಿಮಾ ರಿಲೀಸ್​​ಗೆ ರೆಡಿಯಾಗಿದೆ.

ಗೋಲ್ಡನ್ ಸ್ಟಾರ್ ಗಣೇಶ್ (Ganesh), ಮತ್ತೊಮ್ಮೆ ಒಂದು ಮಧುರ ಪ್ರೇಮಕತೆಯುಳ್ಳ ಕೌಟುಂಬಿಕ ಸಿನಿಮಾದ ಜೊತೆಗೆ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ. ಗಣೇಶ್ ಮುಖ್ಯ ಪಾತ್ರದಲ್ಲಿ ನಟಿಸಿರುವ ‘ಬೃಂದಾವಿಹಾರಿ’ ಸಿನಿಮಾದ ಬಿಡುಗಡೆಗೆ ರೆಡಿಯಾಗಿದೆ. ‘ಕೃಷ್ಣಂ ಪ್ರಣಯ ಸಖಿ’ ಸಿನಿಮಾದ ಮೂಲಕ ಹಿಟ್ ಕೊಟ್ಟಿದ್ದ ಗಣೇಶ್ ಮತ್ತು ನಿರ್ದೇಶಕ ಶ್ರೀನಿವಾಸ್ ಅವರು ಇದೀಗ ‘ಬೃಂದಾವಿಹಾರಿ’ ಸಿನಿಮಾದ ಮೂಲಕ ಮತ್ತೊಮ್ಮೆ ಒಂದಾಗಿದ್ದಾರೆ. ಈ ಜೋಡಿಯ ಕಾರಣಕ್ಕೆ ‘ಬೃಂದಾವಿಹಾರಿ’ ಸಿನಿಮಾದ ಮೇಲೆ ಪ್ರೇಕ್ಷಕರಿಗೆ ನಿರೀಕ್ಷೆ ಹೆಚ್ಚಾಗಿದೆ.

ಇದೀಗ ಗಣೇಶ್ ನಟನೆ ‘ಬೃಂದಾವಿಹಾರಿ’ ಸಿನಿಮಾದ ಬಿಡುಗಡೆ ದಿನಾಂಕ ಅಧಿಕೃತವಾಗಿ ಘೋಷಣೆಯಾಗಿದೆ. ಮುಂಬರುವ ದಸರಾ ಹಬ್ಬದ ವಿಶೇಷ ಕೊಡುಗೆಯಾಗಿ ಸಿನಿಮಾ ಪ್ರೇಕ್ಷಕರ ಮುಂದೆ ಬರಲಿದೆ. ಚಿತ್ರತಂಡ ನಿಗದಿಪಡಿಸಿದ ದಿನಾಂಕದಂತೆ ‘ಬೃಂದಾವಿಹಾರಿ’ಸಿನಿಮಾ ಅಕ್ಟೋಬರ್ 16 ರಂದು ಬಿಡುಗಡೆಯಾಗಲಿದೆ. ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆ ಈ ಸಿನಿಮಾದ ವಿತರಣಾ ಜವಾಬ್ದಾರಿಯನ್ನು ವಹಿಸಿಕೊಂಡಿದ್ದು, ಭಾರಿ ಅದ್ಧೂರಿಯಾಗಿ ಸಿನಿಮಾ ಅನ್ನು ರಿಲೀಸ್ ಮಾಡುವ ಯೋಜನೆಯಲ್ಲಿದೆ.

ಗಣೇಶ್ ಅವರ ಈ ಸಿನಿಮಾವನ್ನು ಒಟ್ಟಿಗೆ 1,300 ಕ್ಕೂ ಹೆಚ್ಚು ಸ್ಕ್ರೀನ್​​ಗಳಲ್ಲಿ ಬಿಡುಗಡೆ ಮಾಡಲು ಯೋಜನೆ ಹಾಕಿಕೊಳ್ಳಲಾಗಿದೆ. ದಸರಾ ರಜೆ, ಹಬ್ಬಗಳ ಸಾಲು ಇನ್ನಿತರೆಗಳನ್ನು ಗಣನೆಗೆ ತೆಗೆದುಕೊಂಡು ‘ಬೃಂದಾವಿಹಾರಿ‘ ಸಿನಿಮಾದ ಬಿಡುಗಡೆ ದಿನಾಂಕವನ್ನು ನಿಗದಿಪಡಿಸಲಾಗಿದೆ. ಗಣೇಶ್ ಅವರಿಗಿರುವ ಜನಪ್ರಿಯತೆ ಮತ್ತು ಕಂಟೆಂಟ್ ಅನ್ನು ಗಮನಿಸಿ ಕೆವಿಎನ್ ಸಂಸ್ಥೆಯು ಭಾರಿ ಸಂಖ್ಯೆಯ ಚಿತ್ರಮಂದಿರಗಳಲ್ಲಿ ಸಿನಿಮಾ ಅನ್ನು ಒಟ್ಟಿಗೆ ರಿಲೀಸ್ ಮಾಡಲು ಮುಂದಾಗಿದೆ.

ಇದನ್ನೂ ಓದಿ:ತುಳು, ಕನ್ನಡ ‘ಟಾಸ್’ ಸಿನಿಮಾಗೆ ಸಾಥ್ ನೀಡಿದ ‘ಗೋಲ್ಡನ್ ಸ್ಟಾರ್’ ಗಣೇಶ್, ಶಿಲ್ಪಾ

ಇತ್ತೀಚೆಗಷ್ಟೆ ನಡೆದ ಸಿನಿಮಾದ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದ ನಾಯಕ ನಟ ಗಣೇಶ್ ‘ಪ್ರೇಕ್ಷಕರು ನನ್ನಿಂದ ಯಾವ ರೀತಿಯ ಅಭಿನಯವನ್ನು ಬಯಸುತ್ತಾರೋ, ಅದೇ ಮುಗ್ಧತೆ ಹಾಗೂ ಭಾವನೆಗಳಿಗೆ ಬೆಲೆ ಕೊಡುವ ಪಾತ್ರ ನನ್ನದು’ ಎಂದಿದ್ದಾರೆ. ‘ಜೈಲರ್ 2’ ಸಿನಿಮಾ ಬಿಡುಗಡೆ ಸಮಯದಲ್ಲಿಯೇ ‘ಬೃಂದಾವಿಹಾರಿ’ ರಿಲೀಸ್ ಆಗುತ್ತಿರುವ ಬಗ್ಗೆ ಮಾತನಾಡಿರುವ ನಿರ್ಮಾಪಕ ಸಮೃದ್ಧಿ ಮಂಜುನಾಥ್, ‘ಇದು ನಮ್ಮ ಶುದ್ಧ ಕನ್ನಡ ಸಿನಿಮಾ. ಕಥೆಯ ಮೇಲಿನ ನಂಬಿಕೆ ಹಾಗೂ ಗೆಲ್ಲುವ ವಿಶ್ವಾಸದಿಂದಲೇ ಜಗತ್ತಿನಾದ್ಯಂತ 1,300 ಪರದೆಗಳಲ್ಲಿ ರಿಲೀಸ್ ಮಾಡುತ್ತಿದ್ದೇವೆ’ ಎಂದಿದ್ದಾರೆ.

ಮೈಸೂರು ಹಾಗೂ ಸುತ್ತಮುತ್ತಲಿನ ಸುಂದರ ತಾಣಗಳಲ್ಲಿ ‘ಬೃಂದಾವಿಹಾರಿ’ ಸಿನಿಮಾದ ಚಿತ್ರೀಕರಣ ಮಾಡಲಾಗಿದೆ. ಸಿನಿಮಾನಲ್ಲಿ ಗಣೇಶ್‌ಗೆ ನಾಯಕಿಯಾಗಿ ಮಾಳವಿಕಾ ಶರ್ಮಾ ಹಾಗೂ ದೇವಿಕಾ ಭಟ್ ನಟಿಸಿದ್ದಾರೆ. ಇವರೊಂದಿಗೆ ಹಿರಿಯ ನಟಿ ಲಕ್ಷ್ಮಿ, ಅಶೋಕ್, ರಾಮ್ ಕುಮಾರ್ ಮತ್ತು ರಂಗಾಯಣ ರಘು ಸೇರಿದಂತೆ ದೊಡ್ಡ ಕಲಾವಿದರ ದಂಡು ಸಿನಿಮಾನಲ್ಲಿದೆ. ಇತ್ತೀಚೆಗಿನ ದಿನಗಳಲ್ಲಿ ಸಖತ್ ಜನಪ್ರಿಯ ಆಗಿರುವ ಹೇಶಮ್ ಅಬ್ದುಲ್ ವಹಾಬ್ ಈ ಸಿನಿಮಾಕ್ಕೆ ಸಂಗೀತ ನೀಡಿದ್ದಾರೆ. ಸಿನಿಮಾ ಅಕ್ಟೋಬರ್ 16ಕ್ಕೆ ರಿಲೀಸ್ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:59 pm, Wed, 2 September 26

Follow Us