ಗುರುಪ್ರಸಾದ್ ಗಡ್ಡವನ್ನು ಏಕೆ ಬಿಡುತ್ತಿದ್ದರು? ಇದೆ ರಾಜ್​ಕುಮಾರ್ ಕನೆಕ್ಷನ್

ಖ್ಯಾತ ನಿರ್ದೇಶಕ ಗುರುಪ್ರಸಾದ್ ಅವರ ಅನುಮಾನಾಸ್ಪದ ಸಾವಿನ ಬಗ್ಗೆ ಅನೇಕ ಪ್ರಶ್ನೆಗಳು ಮೂಡಿವೆ. ಈ ಬಗ್ಗೆ ತನಿಖೆ ನಡೆಯುತ್ತಿದೆ. ಅವರ ಗಡ್ಡವನ್ನು ಬಿಡಲು ರಾಜ್‌ಕುಮಾರ್ ಅವರೊಂದಿಗಿನ ಒಂದು ಘಟನೆ ಕಾರಣ ಎಂದು ಹೇಳಲಾಗಿದೆ.

ಗುರುಪ್ರಸಾದ್ ಗಡ್ಡವನ್ನು ಏಕೆ ಬಿಡುತ್ತಿದ್ದರು? ಇದೆ ರಾಜ್​ಕುಮಾರ್ ಕನೆಕ್ಷನ್
ಗುರುಪ್ರಸಾದ್-ರಾಜ್​ಕುಮಾರ್
Follow us
ರಾಜೇಶ್ ದುಗ್ಗುಮನೆ
|

Updated on: Nov 04, 2024 | 2:38 PM

ಕನ್ನಡದ ಖ್ಯಾತ ನಿರ್ದೇಶಕ ಗುರುಪ್ರಸಾದ್ ಅವರು ಇಂದು ನಮ್ಮ ಜೊತೆಗೆ ಇಲ್ಲ. ಬೆಂಗಳೂರಿನಲ್ಲಿರುವ ತಮ್ಮ ನಿವಾಸದಲ್ಲಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಗುರುಪ್ರಸಾದ್ ಅವರು ಗಡ್ಡವಿಲ್ಲದೆ ಯಾವಾಗಲೂ ಕಾಣಿಸಿಕೊಂಡಿಲ್ಲ. ಗುರುಪ್ರಸಾದ್ ಅವರು ಈ ರೀತಿ ಗಡ್ಡ ಬಿಡಲು ಒಂದು ಕಾರಣ ಇತ್ತು. ಅವರು ಸಂದರ್ಶನ ಒಂದರಲ್ಲಿ ಈ ಬಗ್ಗೆ ಹೇಳಿಕೊಂಡಿದ್ದರು.

ರಾಜ್​ಕುಮಾರ್ ಅವರನ್ನು ಹತ್ತಿರದಿಂದ ಕಂಡವರು ಗುರುಪ್ರಸಾದ್. ಅವರನ್ನು ಗುರುಪ್ರಸಾದ್ ಭೇಟಿ ಮಾಡಿದ್ದರು. ಆಗ ಗುರುಪ್ರಸಾದ್ ಅವರು ಗಡ್ಡ ಬಿಟ್ಟಿದ್ದರು. ಈ ಗಡ್ಡವನ್ನು ಮುಟ್ಟಿದ್ದ ರಾಜ್​ಕುಮಾರ್ ಅವರು, ‘ಗಡ್ಡ ಚೆನ್ನಾಗಿದೆ. ನಿಮಗೆ ಚೆನ್ನಾಗಿ ಕಾಣುತ್ತದೆ’ ಎಂದು ಹೇಳಿದ್ದರು. ಅದರಿಂದ ಖುಷಿಪಟ್ಟಿದ್ದ ಗುರುಪ್ರಸಾದ್ ಅವರು, ‘ರಾಜ್​ಕುಮಾರ್ ಅವರೇ ನನ್ನ ಗಡ್ಡ ಮುಟ್ಟಿರುವಾಗ ಇದನ್ನೇಕೆ ಶೇವ್ ಮಾಡಬೇಕು’ ಎಂದು ಅವರು ನಿರ್ಧರಿಸಿದರು.

ಇದಾದ ಬಳಿಕ ಗುರುಪ್ರಸಾದ್ ಅವರು ಎಂದಿಗೂ ಗಡ್ಡವನ್ನು ಶೇವ್ ಮಾಡಲೇ ಇಲ್ಲ. ಆಗಾಗ, ಗುರುಪ್ರಸಾದ್ ಅವರು ಗಡ್ಡಕ್ಕೆ ಕತ್ತರಿ ಹಾಕುತ್ತಿದ್ದರು ಅಷ್ಟೇ. ಈ ವಿಚಾರವನ್ನು ಅವರೇ ಈ ಮೊದಲು ಹೇಳಿಕೊಂಡಿದ್ದರು.

ಗುರುಪ್ರಸಾದ್ ಅವರ ಸಾವಿನ ಹಿಂದೆ ಸಾಕಷ್ಟು ಅನುಮಾನಗಳು ಮೂಡಿವೆ. ಮೇಲ್ನೋಟಕ್ಕೆ ಗುರುಪ್ರಸಾದ್ ಅವರದ್ದು ಆತ್ಮಹತ್ಯೆ ರೀತಿಯೇ ಕಾಣಿಸಿದೆ. ಆದರೆ, ಸೂಕ್ತ ತನಿಖೆ ಬಳಿಕ ಅಸಲಿ ವಿಷಯ ತಿಳಿಯಲಿದೆ. ಅವರ ಸಾವಿನ ಬಗ್ಗೆ 4 ಪ್ರಮುಖ ಅನುಮಾನಗಳು ಮೂಡಿವೆ.

ಇದನ್ನೂ ಓದಿ: ‘ಆನ್​ಲೈನ್ ಗೇಮ್​ನಲ್ಲಿ ಗುರುಪ್ರಸಾದ್ 70 ಲಕ್ಷ ರೂಪಾಯಿ ಕಳೆದುಕೊಂಡಿದ್ದ’: ಜಗ್ಗೇಶ್

ಗುರುಪ್ರಸಾದ್ ಅವರು ಸಾಕಷ್ಟು ಸಾಲ ಮಾಡಿಕೊಂಡಿದ್ದರು. ಇದರಿಂದ ಅವರು ಸಾಕಷ್ಟು ತೊಂದರೆ ಅನುಭವಿಸಿದ್ದರು ಎನ್ನಲಾಗಿದೆ. ಅವರ ಸಿನಿಮಾಗಳು ಇತ್ತೀಚೆಗೆ ಗೆಲುವು ಕಂಡಿರಲಿಲ್ಲ. ಇದರಿಂದ ಅವರು ಬೇಸರಕ್ಕೆ ಒಳಗಾದರೇ ಎನ್ನುವ ಪ್ರಶ್ನೆಯೂ ಮೂಡಿದೆ. ಹಣ ನೀಡದ ಕಾರಣಕ್ಕೆ ಅವರಿಗೆ ಬಂಧನದ ಭಯ ಇತ್ತು. ಅವರು ಎರಡೆರಡು ಮದುವೆ ಆಗಿದ್ದರು. ಹೀಗಾಗಿ, ಕೌಟುಂಬಿಕ ಕಲಹವೂ ಇತ್ತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ನೋಡ ನೋಡ್ತಿದ್ದಂತೆಯೇ ಹತ್ತಾರು ಲೀಟರ್ ಹಾಲು ರಸ್ತೆಗೆ ಸುರಿದರು!
ನೋಡ ನೋಡ್ತಿದ್ದಂತೆಯೇ ಹತ್ತಾರು ಲೀಟರ್ ಹಾಲು ರಸ್ತೆಗೆ ಸುರಿದರು!
ವಕ್ಫ್ ಬೋರ್ಡ್ ವಿರುದ್ಧ 5 ಜಿಲ್ಲೆಗಳಲ್ಲಿ ನಡೆಯಲಿದೆ ಯತ್ನಾಳ್ ತಂಡದ ಅಭಿಯಾನ
ವಕ್ಫ್ ಬೋರ್ಡ್ ವಿರುದ್ಧ 5 ಜಿಲ್ಲೆಗಳಲ್ಲಿ ನಡೆಯಲಿದೆ ಯತ್ನಾಳ್ ತಂಡದ ಅಭಿಯಾನ
ಪಾರ್ಕಿಂಗ್ ವಿಚಾರವಾಗಿ ಜಗಳ, ವ್ಯಕ್ತಿಗೆ ಮನಬಂದಂತೆ ಥಳಿಸಿದ ಗುಂಪು
ಪಾರ್ಕಿಂಗ್ ವಿಚಾರವಾಗಿ ಜಗಳ, ವ್ಯಕ್ತಿಗೆ ಮನಬಂದಂತೆ ಥಳಿಸಿದ ಗುಂಪು
ಜನಪ್ರತಿನಿಧಿಗಳ ನಿರ್ಲಕ್ಷ್ಯ ಜಲಾಶಯದಲ್ಲಿ ಸೋರುವಿಕೆಗೆ ಕಾರಣವಾಯಿತೆ?
ಜನಪ್ರತಿನಿಧಿಗಳ ನಿರ್ಲಕ್ಷ್ಯ ಜಲಾಶಯದಲ್ಲಿ ಸೋರುವಿಕೆಗೆ ಕಾರಣವಾಯಿತೆ?
ಮುಡಾ ಪ್ರಕರಣದಲ್ಲಿ ಲೋಕಾಯುಕ್ತವೇ ಅಪರಾಧಿ ಸ್ಥಾನದಲ್ಲಿದೆ: ಸ್ನೇಹಮಯಿ ಕೃಷ್ಣ
ಮುಡಾ ಪ್ರಕರಣದಲ್ಲಿ ಲೋಕಾಯುಕ್ತವೇ ಅಪರಾಧಿ ಸ್ಥಾನದಲ್ಲಿದೆ: ಸ್ನೇಹಮಯಿ ಕೃಷ್ಣ
ಮಹಾರಾಜನಾಗಿ ದರ್ಪ ತೋರಿದ್ರು; ಉಳಿದವರ ಉಪವಾಸ ಕೆಡವಿ ತಾನು ಊಟ ಮಾಡಿದ ಮಂಜು
ಮಹಾರಾಜನಾಗಿ ದರ್ಪ ತೋರಿದ್ರು; ಉಳಿದವರ ಉಪವಾಸ ಕೆಡವಿ ತಾನು ಊಟ ಮಾಡಿದ ಮಂಜು
ಚಲಿಸುತ್ತಿದ್ದ ರೈಲಿನಿಂದ ಹಾರಿದ ಮಹಿಳೆಯ ಜೀವ ಉಳಿಸಿದ ರೈಲ್ವೆ ಪೊಲೀಸ್
ಚಲಿಸುತ್ತಿದ್ದ ರೈಲಿನಿಂದ ಹಾರಿದ ಮಹಿಳೆಯ ಜೀವ ಉಳಿಸಿದ ರೈಲ್ವೆ ಪೊಲೀಸ್
ಕಾರ್ತಿಕ ಮಾಸದ ಕೊನೆ ಸೋಮವಾರ ಶಿವನ ಆರಾಧನೆ ಹೇಗೆ ಮಾಡುವುದು? ತಿಳಿಯಿರಿ
ಕಾರ್ತಿಕ ಮಾಸದ ಕೊನೆ ಸೋಮವಾರ ಶಿವನ ಆರಾಧನೆ ಹೇಗೆ ಮಾಡುವುದು? ತಿಳಿಯಿರಿ
Daily Horoscope: ಕಾರ್ತಿಕ ಮಾಸದ ಕೊನೆ ಸೋಮವಾರ ದಿನ ಭವಿಷ್ಯ ತಿಳಿಯಿರಿ
Daily Horoscope: ಕಾರ್ತಿಕ ಮಾಸದ ಕೊನೆ ಸೋಮವಾರ ದಿನ ಭವಿಷ್ಯ ತಿಳಿಯಿರಿ
ಭೈರತಿ ರಣಗಲ್: ಶಿವಮೊಗ್ಗದಲ್ಲಿ ಫ್ಯಾನ್ಸ್ ಜತೆ ಸಂಭ್ರಮಿಸಿದ ಶಿವರಾಜ್​ಕುಮಾರ್
ಭೈರತಿ ರಣಗಲ್: ಶಿವಮೊಗ್ಗದಲ್ಲಿ ಫ್ಯಾನ್ಸ್ ಜತೆ ಸಂಭ್ರಮಿಸಿದ ಶಿವರಾಜ್​ಕುಮಾರ್