ಮಹಿಳಾ ದಿನಾಚರಣೆ ವಿಶೇಷ: ಕಾನ್ಫಿಡೆನ್ಸ್​ ಇದ್ರೆ ಮಾರ್ಗ ಸಿಗುತ್ತೆ; ನಿರ್ದೇಶಕಿ ರಿಷಿಕಾ ಶರ್ಮಾ ಮಾತು

International Women's Day 2022: ಉದ್ಯಮಿ ವಿಜಯ್ ಸಂಕೇಶ್ವರ್​ ಬಯೋಪಿಕ್ ನಿರ್ದೇಶನ ಮಾಡುವ ದೊಡ್ಡ ಜವಾಬ್ದಾರಿ ತೆಗೆದುಕೊಂಡಿದ್ದಾರೆ ನಿರ್ದೇಶಕಿ ರಿಷಿಕಾ . ಅವರು ಓರ್ವ ಮಹಿಳೆ ಆಗಿ ಸಿನಿಮಾ ಜರ್ನಿ ಬಗ್ಗೆ ಟಿವಿ9 ಕನ್ನಡದ ಜತೆ ಮಾತನಾಡಿದ್ದಾರೆ.

ಮಹಿಳಾ ದಿನಾಚರಣೆ ವಿಶೇಷ: ಕಾನ್ಫಿಡೆನ್ಸ್​ ಇದ್ರೆ ಮಾರ್ಗ ಸಿಗುತ್ತೆ; ನಿರ್ದೇಶಕಿ ರಿಷಿಕಾ ಶರ್ಮಾ ಮಾತು
ರಿಷಿಕಾ
Follow us
ರಾಜೇಶ್ ದುಗ್ಗುಮನೆ
| Updated By: shivaprasad.hs

Updated on:Mar 08, 2022 | 9:15 AM

ಇಂದು (ಮಾರ್ಚ್​ 8) ವಿಶ್ವಾದ್ಯಂತ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು (International Women’s Day 2022 ) ಆಚರಿಸಲಾಗುತ್ತಿದೆ. ಮಹಿಳೆಯರು ಹಾಗೂ ಪುರುಷರು ಸಮಾನರು ಎಂದು ಸಾರುವ ನಿಟ್ಟಿನಲ್ಲಿ ಈ ದಿನಾಚರಣೆ ಮಹತ್ವ ಪಡೆದುಕೊಂಡಿದೆ. ಈನಮ್ಮ ಸಮಾಜ ಮೊದಲಿನಂತೆ ಇಲ್ಲ. ಕಾಲ ಬದಲಾಗಿದೆ. ಲಿಂಗ ತಾರತಮ್ಯದ ಕಾನ್ಸೆಪ್ಟ್​ ಹೋಗಿದೆ. ಎಲ್ಲಾ ಕ್ಷೇತ್ರದಲ್ಲೂ ಮಹಿಳೆಯರು ಪುರುಷರಿಗೆ ಸರಿಯಾಗಿ ನಿಲ್ಲುತ್ತಿದ್ದಾರೆ. ಚಿತ್ರರಂಗ ಕೂಡ ಇದಕ್ಕೆ ಹೊರತಾಗಿಲ್ಲ. ನಿರ್ಮಾಣ, ನಟನೆ, ಛಾಯಾಗ್ರಹಣ, ನಿರ್ದೇಶನ ಸೇರಿ ಎಲ್ಲಾ ವಿಭಾಗದಲ್ಲೂ ಮಹಿಳೆಯರಿದ್ದಾರೆ. ‘ಟ್ರಂಕ್​’ ಸಿನಿಮಾ (Trunk Movie​ ) ನಿರ್ದೇಶಿಸಿ ಯಶಸ್ವಿಯಾಗಿರುವ ರಿಷಿಕಾ ಶರ್ಮಾ (Rishika Sharma), ಈಗ ಉದ್ಯಮಿ ವಿಜಯ್ ಸಂಕೇಶ್ವರ್​ ಬಯೋಪಿಕ್ ನಿರ್ದೇಶನ ಮಾಡುವ ದೊಡ್ಡ ಜವಾಬ್ದಾರಿ ತೆಗೆದುಕೊಂಡಿದ್ದಾರೆ. ಅವರು ಓರ್ವ ಮಹಿಳೆ ಆಗಿ ಸಿನಿಮಾ ಜರ್ನಿ ಬಗ್ಗೆ ಟಿವಿ9 ಕನ್ನಡದ ಜತೆ ಮಾತನಾಡಿದ್ದಾರೆ.

ಚಾಲೆಂಜ್​ ಎದುರಿಸುತ್ತಿದ್ದೇನೆ:

ಆರಂಭದಲ್ಲಿ ನನಗೆ ಚಿತ್ರರಂಗದ ಬಗ್ಗೆ ಐಡಿಯಾ ಇರಲಿಲ್ಲ. ನಾನು ಓದಿದ್ದು ಪತ್ರಿಕೋದ್ಯಮ ಹಾಗೂ ಸೈಕಾಲಜಿ. ಓದಿನ ಬಳಿಕ ಒಂದು ವರ್ಷ ಕೆಲಸ ಮಾಡಿದೆ. ನಂತರ ಅದನ್ನು ಬಿಟ್ಟು ರಂಗಭೂಮಿಯಲ್ಲಿ ಪರದೆ ಹಿಂದೆ ಕೆಲಸ ಮಾಡೋಕೆ ಶುರು ಮಾಡಿದೆ. ಅಲ್ಲಿಂದ ಆಸಕ್ತಿ ಬೆಳೆಯಿತು. ನಿರ್ದೇಶಕ ಆದರ್ಶ್​ ಈಶ್ವರಪ್ಪ ಅವರ ಬಳಿ ಅಸಿಸ್ಟಂಟ್​ ಆಗಿ ಸೇರಿಕೊಂಡೆ. ನಂತರ ಧಾರಾವಾಹಿಗಳಲ್ಲಿ ನಟಿಸಿದೆ. 2016ನಲ್ಲಿ ನಾನು ನನ್ನ ಸಿನಿಮಾಗೆ ಕಥೆ ಬರೆಯೋಕೆ ಶುರು ಮಾಡಿದೆ. 2018ರಲ್ಲಿ ‘ಟ್ರಂಕ್​’ ಸಿನಿಮಾ ತೆರೆಗೆ ತಂದೆ. ಈಗ ವಿಜಯ ಸಂಕೇಶ್ವರ್​ ಅವರ ‘ವಿಜಯಾನಂದ​’ ಬಯೋಪಿಕ್ ಮಾಡುತ್ತಿದ್ದೇನೆ. ಇದು ನಿಜಕ್ಕೂ ಚಾಲೆಂಜಿಂಗ್ ಆಗಿದೆ. ಆದರೆ, ಆ ಚಾಲೆಂಜ್​ಅನ್ನು ಎದುರಿಸುತ್ತಿದ್ದೇನೆ. ಮಾಡುತ್ತಿರುವ ಕೆಲಸ ಖುಷಿ ಕೊಡುತ್ತಿದೆ.

ಚಿಕ್ಕಪುಟ್ಟ ಅಡೆತಡೆಗಳು ಇರುತ್ತವೆ:

ನಾನು ತುಂಬಾನೇ ಲಕ್ಕಿ. ನನ್ನ ಕುಟುಂಬದಿಂದ ಹಿಡಿದು, ಕೆಲಸ ಮಾಡುವ ಕ್ಷೇತ್ರದವರೆಗೆ ಎಲ್ಲರೂ ನನಗೆ ಬೆಂಬಲ ಕೊಟ್ಟಿದ್ದಾರೆ. ಅನೇಕ ಪುರುಷರು ನನಗೆ ಸಪೋರ್ಟ್​ ಮಾಡಿದ್ದಾರೆ. ಚಿಕ್ಕಪುಟ್ಟ ಅಡೆತಡೆಗಳು ಇರುತ್ತವೆ. ಕೆಲಸ ಮಾಡಿ ಆಚೆ ಬಂದಾಗ ಅದ್ಯಾವುದೂ ನನ್ನ ಮನಸ್ಸಲ್ಲಿ ಇರುವುದಿಲ್ಲ. ನನ್ನ ತಂಡ ಅದ್ಭುತವಾಗಿದೆ. ಈ ಕಾರಣಕ್ಕೆ ಯಾವುದೇ ಪ್ರೆಷರ್​ ನನ್ನ ಬಳಿ ಬಂದಿಲ್ಲ.

ಒಳ್ಳೆಯ ಮನಸ್ಸಿಂದ ಕೆಲಸ ಮಾಡಿ:

ಈಗ ಕಾಲ ಬದಲಾಗಿದೆ. ಇವತ್ತು ಟ್ಯಾಲೆಂಟ್​ಗೆ ಜಾಗ ಇರೋದು. ಇದಕ್ಕೆ ನಾನು ಒಳ್ಳೆಯ ಉದಾಹರಣೆ. ನಾನು ವಿಜಯ್​ ಸಂಕೇಶ್ವರ್​ ಅವರ ಬಯೋಪಿಕ್ ಮಾಡ್ತೀನಿ ಎಂದಾಗ ನೂರಾರು ಜನರು ಬಂದು ಕೈ ಜೋಡಿಸಿದ್ದಾರೆ. ನಾವು ಕಾನ್ಫಿಡೆಂಟ್​ ಆಗಿದೇವೆ ಎಂದರೆ ದಾರಿ ಆಗುತ್ತದೆ. ಒಳ್ಳೆಯ ಮನಸ್ಸಿಂದ ಕೆಲಸ ಮಾಡಬೇಕು. ಆಗ ಯಶಸ್ಸು ಸಿಗುತ್ತದೆ.

ಮಹಿಳೆಯರಿಗೆ ಮೊದಲ ಆದ್ಯತೆ:

ನನ್ನ ಬಳಿ ಯಾರಾದರೂ ಹೆಣ್ಣುಮಕ್ಕಳು ಬಂದು ಕೆಲಸ ಮಾಡುತ್ತೇನೆ ಎಂದರೆ ಅವರಿಗೆ ಮೊದಲ ಆದ್ಯತೆ ನೀಡುತ್ತೇನೆ. ನಾನು ಸಾಕಷ್ಟು ಕಷ್ಟ ಕಂಡಿದ್ದೇನೆ. ಆ ಕಷ್ಟ ಈಗಿನ ಹೆಣ್ಣುಮಕ್ಕಳಿಗೆ ಎದುರಾಗಬಾರದು. ಈ ತಾಂತ್ರಿಕ ವರ್ಗಕ್ಕೆ ಹೆಣ್ಣುಮಕ್ಕಳು ಬರುತ್ತೇನೆ ಎನ್ನುವುದೇ ಒಂದು ದೊಡ್ಡ ವಿಚಾರ. ಹೀಗಾಗಿ, ನಾನು ಅವರಿಗೆ ಸಹಾಯ ಮಾಡುತ್ತೇನೆ ಎಂದರು.

ಇದನ್ನೂ ಓದಿ: ಕಾಲಿಲ್ಲದ ವ್ಯಕ್ತಿಯಿಂದ ಮಕ್ಕಳಿಗಾಗಿ ಬಲೂನ್​ ಖರೀದಿಸಿದ ಅಮೂಲ್ಯ ಪತಿ; ಇದರ ಹಿಂದಿದೆ ಒಂದು ಕಹಾನಿ

ಉದ್ಯಮಿ ವಿಜಯ ಸಂಕೇಶ್ವರ ಬಯೋಪಿಕ್​ ‘ವಿಜಯಾನಂದ’; ಉತ್ತರ ಕರ್ನಾಟಕದ ಪ್ರತಿಭೆಯೇ ಹೀರೋ

Published On - 6:00 am, Tue, 8 March 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ