ಮತ್ತೆ ಸಿನಿಮಾ ಕೆಲಸಗಳಲ್ಲಿ ಬ್ಯುಸಿಯಾದ ಸಂತೋಷ್ ಆನಂದ್ರಾಮ್, ಜಗ್ಗೇಶ್; ಮೈಸೂರಿನಲ್ಲಿ ಶೂಟಿಂಗ್
‘ಕೆಜಿಎಫ್ ಚಾಫ್ಟರ್ 2’ನಂತಹ ಬಿಗ್ ಬಜೆಟ್ ಸಿನಿಮಾಗಳನ್ನು ನಿರ್ಮಾಣ ಮಾಡುತ್ತಿರುವ ವಿಜಯ್ ಕಿರಗಂದೂರು ಅವರು ಇತ್ತೀಚೆಗೆ ‘ರಾಘವೇಂದ್ರ ಸ್ಟೋರ್ಸ್’ ಸಿನಿಮಾ ಘೋಷಣೆ ಮಾಡಿದ್ದರು.

ಪುನೀತ್ ರಾಜ್ಕುಮಾರ್ (Puneeth Rajkumar) ಅವರನ್ನು ಕಳೆದುಕೊಂಡು ಚಿತ್ರರಂಗ ಸಾಕಷ್ಟು ನಷ್ಟ ಅನುಭವಿಸಿದೆ. ಅವರನ್ನು ಕಳೆದುಕೊಂಡ ನೋವನ್ನು ಸಾಕಷ್ಟು ಜನರಿಗೆ ಈಗಲೂ ಅರಗಿಸಿಕೊಳ್ಳೋಕೆ ಆಗುತ್ತಿಲ್ಲ. ಅವರು ನಿಧನ ಹೊಂದಿ ಎರಡು ತಿಂಗಳಾಗುತ್ತಾ ಬಂದಿದೆ. ಅವರಿಲ್ಲ ಎಂಬುದನ್ನು ಒಪ್ಪಿಕೊಂಡು ಮುಂದೆ ಸಾಗಲೇಬೇಕಾದ ಅನಿವಾರ್ಯತೆ ಇದೆ. ಈ ಕಾರಣಕ್ಕೆ ನಿಧಾನವಾಗಿ ಸಿನಿಮಾ ಕೆಲಸಗಳಿಗೆ ಮರಳುತ್ತಿದ್ದಾರೆ. ಪುನೀತ್ಗೆ ಆಪ್ತರಾಗಿದ್ದ ಸಂತೋಷ್ ಆನಂದ್ರಾಮ್ (h Santhosh Ananddram ) ಹಾಗೂ ಜಗ್ಗೇಶ್ (Jaggesh) ಸಿನಿಮಾ ಕೆಲಸಗಳಿಗೆ ಮರಳಿದ್ದಾರೆ.
‘ಕೆಜಿಎಫ್ ಚಾಫ್ಟರ್ 2’ನಂತಹ ಬಿಗ್ ಬಜೆಟ್ ಸಿನಿಮಾಗಳನ್ನು ನಿರ್ಮಾಣ ಮಾಡುತ್ತಿರುವ ವಿಜಯ್ ಕಿರಗಂದೂರು ಅವರು ಇತ್ತೀಚೆಗೆ ‘ರಾಘವೇಂದ್ರ ಸ್ಟೋರ್ಸ್’ ಸಿನಿಮಾ ಘೋಷಣೆ ಮಾಡಿದ್ದರು. ಜಗ್ಗೇಶ್ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸಂತೋಷ್ ಆನಂದ್ರಾಮ್ ನಿರ್ದೇಶನ ಸಿನಿಮಾಗಿದೆ. ಸೆಪ್ಟೆಂಬರ್ ತಿಂಗಳಲ್ಲಿ ಸಿನಿಮಾ ಘೋಷಣೆ ಆಗಿತ್ತು. ಈಗ ಚಿತ್ರೀಕರಣ ಮೈಸೂರು ಭಾಗದಲ್ಲಿ ನಡೆಯುತ್ತಿದೆ.
ಮೈಸೂರಿನಲ್ಲಿ ಸಿನಿಮಾದ ಸೆಟ್‌ನಲ್ಲಿರುವ ವಿಡಿಯೋವನ್ನು ಜಗ್ಗೇಶ್ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಮೈಸೂರಿನ ಹಳೆಯ ಚೌಲ್ಟ್ರಿಯಲ್ಲಿ ಚಿತ್ರೀಕರಣ ಪ್ರಗತಿಯಲ್ಲಿದೆ. ‘ರತ್ನನ್ ಪ್ರಪಂಚದ’ ಪ್ರಮುಖ ಭಾಗಗಳನ್ನು ಇಲ್ಲಿಯೇ ಶೂಟ್ ಮಾಡಲಾಗಿತ್ತು. ಜಗ್ಗೇಶ್ ಬಾಣಸಿಗನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾದಲ್ಲಿ ಜಗ್ಗೇಶ್ ಭಿನ್ನ ಗೆಟಪ್ ಪ್ರೇಕ್ಷಕರಿಗೆ ಇಷ್ಟವಾಗಿದೆ.
ಜಗ್ಗೇಶ್ ಅವರು ‘ರಂಗನಾಯಕ’ ಚಿತ್ರದ ಶೂಟಿಂಗ್ ಕೂಡ ಆರಂಭಿಸಿದ್ದಾರೆ. ‘ಎದ್ದೇಳು ಮಂಜುನಾಥ’ ಮತ್ತು ‘ಮಠ’ ನಂತರ ಮೂರನೇ ಬಾರಿಗೆ ನಿರ್ದೇಶಕ ಗುರುಪ್ರಸಾದ್ ಹಾಗೂ ಜಗ್ಗೇಶ್ ಒಂದಾಗಿದ್ದಾರೆ. ಎರಡು ಪಾರ್ಟ್ಗಳಲ್ಲಿ ಬಿಡುಗಡೆಯಾಗಲಿರುವ ‘ತೋತಾಪುರಿ’ ಚಿತ್ರದಲ್ಲೂ ನವರಸ ನಾಯಕ ಬ್ಯುಸಿ ಇದ್ದಾರೆ. ಈ ಚಿತ್ರಕ್ಕೆ ಅದಿತಿ ಪ್ರಭುದೇವ ನಾಯಕಿ. ಸಂತೋಷ್ ಆನಂದ್ರಾಮ್ ಅವರು ಪುನೀತ್ ಜತೆ ಇನ್ನೊಂದು ಸಿನಿಮಾ ಮಾಡಬೇಕಿತ್ತು. ಆದರೆ, ಅದಕ್ಕೂ ಮೊದಲೇ ಅವರು ನಿಧನ ಹೊಂದಿದ್ದಾರೆ.
ಈಗ ಹೊಂಬಾಳೆ ಫಿಲ್ಮ್ಸ್ ಬೇರೆಬೇರೆ ನಟರ ಜತೆ ಸಿನಿಮಾ ಮಾಡುತ್ತಿದೆ. ತೆಲುಗಿನ ‘ಸಲಾರ್’ ಸಿನಿಮಾ ನಿರ್ಮಾಣ ಜವಾಬ್ದಾರಿ ಹೊಂಬಾಳೆ ಹೊತ್ತುಕೊಂಡಿದೆ. ಈ ಸಿನಿಮಾದಲ್ಲಿ ಪ್ರಭಾಸ್ ಹೀರೋ. ಶ್ರೀಮುರಳಿ ನಟನೆಯ ‘ಭಗೀರ’, ಪುನೀತ್ ನಟನೆಯ ‘ದ್ವಿತ್ವ’, ರಕ್ಷಿತ್ ಶೆಟ್ಟಿ ನಿರ್ದೇಶನದ ‘ರಿಚರ್ಡ್ ಆ್ಯಂಟೋನಿ’ ರಿಷಬ್ ಶೆಟ್ಟಿ ಆ್ಯಕ್ಷನ್ ಕಟ್ ಹೇಳುತ್ತಿರುವ ‘ಕಾಂತಾರ’ ಸಿನಿಮಾಗೆ ಹೊಂಬಾಳೆ ಫಿಲ್ಮ್ಸ್ ಹಣ ಹೂಡುತ್ತಿದೆ.
ಇದನ್ನೂ ಓದಿ: ಪುನೀತ್ ಕುರಿತು ಸಿದ್ಧವಾಗಲಿದೆ ಬಯೋಪಿಕ್? ನಿರ್ದೇಶಕ ಸಂತೋಷ್ ಆನಂದ್ರಾಮ್ ನೀಡಿದ್ರು ಸೂಚನೆ
Raghavendra Rajkumar: ಡಾ.ರಾಜ್ ಪುತ್ಥಳಿ ಪಕ್ಕದಲ್ಲೇ ಪುನೀತ್ ಪುತ್ಥಳಿ: ರಾಘವೇಂದ್ರ ರಾಜ್ಕುಮಾರ್ ಮಾಹಿತಿ