Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಂಕ್ರಾಂತಿಗೆ ‘ಜೇಮ್ಸ್’ ತಂಡದಿಂದ ಪೋಸ್ಟರ್ ಗಿಫ್ಟ್; ಅಭಿಮಾನಿಗಳ ಪ್ರಶ್ನೆಗೆ ಸಿಗಲೇ ಇಲ್ಲ ಉತ್ತರ

ಚೇತನ್​ ಕುಮಾರ್​ ಸಿನಿಮಾದಲ್ಲಿ ಸಾಕಷ್ಟು ಆ್ಯಕ್ಷನ್​ ದೃಶ್ಯಗಳಿರುತ್ತವೆ, ಅದ್ದೂರಿತನ ಇರುತ್ತದೆ. ‘ಜೇಮ್ಸ್​​’ನಲ್ಲೂ ಅದು ಮುಂದುವರಿಯಲಿದೆ ಎನ್ನಲಾಗುತ್ತಿದೆ. ಈಗ ಸಿನಿಮಾದ ಹೊಸ ಪೋಸ್ಟರ್​ ರಿಲೀಸ್ ಆಗಿದೆ

ಸಂಕ್ರಾಂತಿಗೆ ‘ಜೇಮ್ಸ್’ ತಂಡದಿಂದ ಪೋಸ್ಟರ್ ಗಿಫ್ಟ್; ಅಭಿಮಾನಿಗಳ ಪ್ರಶ್ನೆಗೆ ಸಿಗಲೇ ಇಲ್ಲ ಉತ್ತರ
ಪುನೀತ್​ ರಾಜ್​ಕುಮಾರ್​
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:Jan 15, 2022 | 7:07 PM

ಪುನೀತ್​ ರಾಜ್​ಕುಮಾರ್​ಗೆ (Puneeth Rajkumar) ಸ್ಯಾಂಡಲ್​​ವುಡ್​ನಲ್ಲಿ (Sandalwood) ಭಾರೀ ಬೇಡಿಕೆ ಇತ್ತು. ಅವರು ಏಕಾಏಕಿ ನಿಧನ ಹೊಂದುತ್ತಾರೆ ಎಂದು ಯಾರೂ ಅಂದುಕೊಂಡಿರಲಿಲ್ಲ. ಅವರು ಮೃತಪಟ್ಟಿದ್ದು ಸ್ಯಾಂಡಲ್​ವುಡ್ ಪಾಲಿಗೆ ದೊಡ್ಡ ನಷ್ಟ. ಪುನೀತ್​ ಒಪ್ಪಿಕೊಂಡಿದ್ದ ಹಲವು ಪ್ರಾಜೆಕ್ಟ್​ಗಳು ಅರ್ಧಕ್ಕೆ ನಿಂತಿವೆ. ಅವರು ಅಭಿನಯಿಸುತ್ತಿದ್ದ ‘ಜೇಮ್ಸ್​’ ಸಿನಿಮಾ (James Movie) ಹೆಚ್ಚು ನಿರೀಕ್ಷೆ ಮೂಡಿಸಿತ್ತು. ನಿರ್ದೇಶಕ ಚೇತನ್​ ಕುಮಾರ್ ಆ್ಯಕ್ಷನ್​ ಕಟ್​ ಹೇಳುತ್ತಿರುವ ಈ ಚಿತ್ರದ ಕೆಲಸಗಳು ಪೂರ್ಣಗೊಳ್ಳುವುದಕ್ಕೂ ಮುನ್ನವೇ ಪುನೀತ್​ ರಾಜ್​ಕುಮಾರ್​ ಇಹಲೋಕ ತ್ಯಜಿಸಿದ್ದರು. ಆದಾಗ್ಯೂ, ಜೇಮ್ಸ್​ ಸಿನಿಮಾ ರಿಲೀಸ್​ ಆಗುತ್ತಿದೆ. ಈಗ ಚಿತ್ರತಂಡ ಸಂಕ್ರಾಂತಿ ಪ್ರಯುಕ್ತ ವಿಶೇಷ ಪೋಸ್ಟರ್​ ರಿಲೀಸ್​ ಮಾಡಿದೆ. ಈ ಪೋಸ್ಟರ್​ನಲ್ಲಿ ಎಲ್ಲಿಯೂ ರಿಲೀಸ್​ ದಿನಾಂಕ ಉಲ್ಲೇಖ ಮಾಡಿಲ್ಲ. ಹೀಗಾಗಿ ಈ ಚಿತ್ರ ಯಾವಾಗ ತೆರೆಗೆ ಬರಲಿದೆ ಎನ್ನುವ ಕುತೂಹಲ ಹಾಗೆಯೇ ಉಳಿದುಕೊಂಡಿದೆ.

ಚೇತನ್​ ಕುಮಾರ್​ ಸಿನಿಮಾದಲ್ಲಿ ಸಾಕಷ್ಟು ಆ್ಯಕ್ಷನ್​ ದೃಶ್ಯಗಳಿರುತ್ತವೆ, ಅದ್ದೂರಿತನ ಇರುತ್ತದೆ. ‘ಜೇಮ್ಸ್​​’ನಲ್ಲೂ ಅದು ಮುಂದುವರಿಯಲಿದೆ ಎನ್ನಲಾಗುತ್ತಿದೆ. ಈಗ ಸಿನಿಮಾದ ಹೊಸ ಪೋಸ್ಟರ್​ ರಿಲೀಸ್ ಆಗಿದೆ. ಈ ಪೋಸ್ಟರ್​ನಲ್ಲಿ ಪುನೀತ್​ ಬೈಕ್​ ಏರಿ ಕುಳಿತಿದ್ದಾರೆ. ಅವರು ಈ ಪೋಸ್ಟರ್​ನಲ್ಲಿ ಸಖತ್​ ಸ್ಟೈಲಿಶ್​ ಆಗಿ ಕಾಣಿಸಿಕೊಂಡಿದ್ದಾರೆ. ಇದನ್ನು ನೋಡಿದ ಫ್ಯಾನ್ಸ್​ ‘ಮಿಸ್​ ಯೂ ಅಪ್ಪು’ ಎಂದಿದ್ದಾರೆ.

ಪುನೀತ್​ ಜನ್ಮದಿನದ ಅಂಗವಾಗಿ ಮಾರ್ಚ್​ 17ರಂದು ಸಿನಿಮಾ ತೆರೆಗೆ ಬರಲಿದೆ ಎನ್ನಲಾಗಿದೆ. ಆದರೆ, ಚಿತ್ರತಂಡದಿಂದ ಅಧಿಕೃತವಾಗಿ ಘೋಷಣೆ ಆಗಿಲ್ಲ. ಸದ್ಯ, ಎಲ್ಲೆಲ್ಲೂ ಕೊರೊನಾ ಅಬ್ಬರ ಜೋರಾಗಿದೆ. ಈ ಕಾರಣಕ್ಕೆ ಯಾವುದೇ ದೊಡ್ಡ ಬಜೆಟ್​ ಚಿತ್ರಗಳು ಬಿಡುಗಡೆ ಆಗುತ್ತಿಲ್ಲ. ಹೀಗಾಗಿ, ‘ಜೇಮ್ಸ್​’ ಕೂಡ ಆ ಸಂದರ್ಭದಲ್ಲಿ ಬಿಡುಗಡೆ ಆಗೋದು ಅನುಮಾನ ಎನ್ನುವ ಮಾತು ಕೇಳಿ ಬಂದಿದೆ.

‘ಜೇಮ್ಸ್​ ಚಿತ್ರಕ್ಕೆ ಬಹುತೇಕ ಶೂಟಿಂಗ್​ ಮುಕ್ತಾಯ ಆಗಿತ್ತು. ಒಂದು ಹಾಡಿನ ಚಿತ್ರೀಕರಣ ಮಾತ್ರ ಬಾಕಿ ಇತ್ತು. ಸಾಂಗ್​ ಶೂಟಿಂಗ್​ ಮಾಡಲು ನ.8ರಿಂದ ಪುನೀತ್​ ರಾಜ್​ಕುಮಾರ್​ ಅವರು ಡೇಟ್ಸ್​​ ನೀಡಿದ್ದರು. ಅವರ ಪಾತ್ರದ ಡಬ್ಬಿಂಗ್​ ಅರ್ಧ ಬಾಕಿ ಉಳಿದಿದೆ. ಈ ಸಿನಿಮಾ ಖಂಡಿತ ರಿಲೀಸ್​ ಆಗಲಿದೆ’ ಎಂದು ಚೇತನ್​ ಕುಮಾರ್​ ಈ ಮೊದಲು ಹೇಳಿದ್ದರು.

ಇದನ್ನೂ ಓದಿ: Puneeth Rajkumar: ‘ಜೇಮ್ಸ್​’ ಸಿನಿಮಾ ಖಂಡಿತ ರಿಲೀಸ್​ ಆಗತ್ತೆ; ಬಿಗ್​ ಅಪ್​ಡೇಟ್​​ ​ನೀಡಿದ ನಿರ್ದೇಶಕ ಚೇತನ್​ ಕುಮಾರ್

‘ಜೇಮ್ಸ್​’ ಸಿನಿಮಾ ಶೂಟಿಂಗ್​ ವಿಡಿಯೋ ವೈರಲ್​; ಪುನೀತ್​ ನೋಡಿ ಭಾವುಕರಾದ ಫ್ಯಾನ್ಸ್​

Published On - 7:02 pm, Sat, 15 January 22

ಸುಲಭ ಕ್ಯಾಚ್ ಕೈಚೆಲ್ಲಿದರೂ ಔಟಾದ ಆರ್​ಸಿಬಿ ಬ್ಯಾಟರ್
ಸುಲಭ ಕ್ಯಾಚ್ ಕೈಚೆಲ್ಲಿದರೂ ಔಟಾದ ಆರ್​ಸಿಬಿ ಬ್ಯಾಟರ್
ಮತ್ತೆ ಮಾರ್ದನಿಸಿದ ಲಿಂಗಾಯತ ಪ್ರತ್ಯೇಕ ಧರ್ಮದ ಕೂಗು
ಮತ್ತೆ ಮಾರ್ದನಿಸಿದ ಲಿಂಗಾಯತ ಪ್ರತ್ಯೇಕ ಧರ್ಮದ ಕೂಗು
ಮಹಾಕುಂಭಮೇಳ ಹೇಗೆ ಅಯೋಜಿಸಲಾಯಿತು ಅಂತ ವಿಚಾರಿಸಿದ್ದೀನಿ: ಶಿವಕುಮಾರ್
ಮಹಾಕುಂಭಮೇಳ ಹೇಗೆ ಅಯೋಜಿಸಲಾಯಿತು ಅಂತ ವಿಚಾರಿಸಿದ್ದೀನಿ: ಶಿವಕುಮಾರ್
ಬಜೆಟ್‌ನಲ್ಲಿ ಮಾವು, ರೇಷ್ಮೆ ಬೆಳೆಗೆ ಆದ್ಯತೆ ನೀಡಿ; ಸಂಸದ ಮಂಜುನಾಥ್ ಸಲಹೆ
ಬಜೆಟ್‌ನಲ್ಲಿ ಮಾವು, ರೇಷ್ಮೆ ಬೆಳೆಗೆ ಆದ್ಯತೆ ನೀಡಿ; ಸಂಸದ ಮಂಜುನಾಥ್ ಸಲಹೆ
ಡಿಕೆ ಶಿವಕುಮಾರ್​ ಕೂಡ ಏಕನಾಥ ಶಿಂಧೆ ರೀತಿ ಆಗಬಹುದು: ಆರ್​ ಅಶೋಕ್
ಡಿಕೆ ಶಿವಕುಮಾರ್​ ಕೂಡ ಏಕನಾಥ ಶಿಂಧೆ ರೀತಿ ಆಗಬಹುದು: ಆರ್​ ಅಶೋಕ್
ಸದ್ಗುರು ವಾಸುದೇವ್ ಖುದ್ದಾಗಿ ಮನೆಗೆ ಬಂದು ಆಹ್ವಾನಿಸಿದ್ದರು: ಶಿವಕುಮಾರ್
ಸದ್ಗುರು ವಾಸುದೇವ್ ಖುದ್ದಾಗಿ ಮನೆಗೆ ಬಂದು ಆಹ್ವಾನಿಸಿದ್ದರು: ಶಿವಕುಮಾರ್
ಮಹಿಳಾ ಪಿಡಿಒಗೆ ಚಪ್ಪಲಿಯಿಂದ ಹೊಡೆದ ಗ್ರಾಮ ಪಂಚಾಯಿತಿ ಸದಸ್ಯೆ
ಮಹಿಳಾ ಪಿಡಿಒಗೆ ಚಪ್ಪಲಿಯಿಂದ ಹೊಡೆದ ಗ್ರಾಮ ಪಂಚಾಯಿತಿ ಸದಸ್ಯೆ
ಲೇಡಿ ಕಾನ್​ಸ್ಟೇಬಲ್​ರನ್ನು ಸಾರ್ವಜನಿಕವಾಗಿ ನಿಂದಿಸಿದ ಹೆಡ್ ಕಾನ್​ಸ್ಟೇಬಲ್
ಲೇಡಿ ಕಾನ್​ಸ್ಟೇಬಲ್​ರನ್ನು ಸಾರ್ವಜನಿಕವಾಗಿ ನಿಂದಿಸಿದ ಹೆಡ್ ಕಾನ್​ಸ್ಟೇಬಲ್
ವಿಧಾನಸೌಧ ಆವರಣದಲ್ಲಿ ಮೊದಲ ಬಾರಿಗೆ ಪುಸ್ತಕ ಮೇಳ ಆಯೋಜನೆ
ವಿಧಾನಸೌಧ ಆವರಣದಲ್ಲಿ ಮೊದಲ ಬಾರಿಗೆ ಪುಸ್ತಕ ಮೇಳ ಆಯೋಜನೆ
ಲಕ್ಷ್ಮಿ ಹೆಬ್ಬಾಳ್ಕರ್​ಗೆ ಭವತಿ ಭಿಕ್ಷಾಂ ದೇಹಿ ಎಂದ ವಿದ್ಯಾರ್ಥಿಗಳು !
ಲಕ್ಷ್ಮಿ ಹೆಬ್ಬಾಳ್ಕರ್​ಗೆ ಭವತಿ ಭಿಕ್ಷಾಂ ದೇಹಿ ಎಂದ ವಿದ್ಯಾರ್ಥಿಗಳು !