ಯುವ ರೈತ ಚೇತನ್-ಭವ್ಯಾ ಗೌಡ ನಟನೆಯ ‘ದೇವಿ’ ಚಿತ್ರದ ಹಾಡಿಗೆ ಧ್ವನಿಯಾದ ಜೋಗಿ ಪ್ರೇಮ್
ನಿರ್ದೇಶನದ ಜೊತೆಗೆ ತಮ್ಮ ವಿಶಿಷ್ಟ ಕಂಠದಿಂದಲೂ ಅಭಿಮಾನಿಗಳನ್ನು ಗೆದ್ದಿರುವ ಜೋಗಿ ಪ್ರೇಮ್, ಈಗ ಯುವ ರೈತ ಚೇತನ್ ಹಾಗೂ ಭವ್ಯಾ ಗೌಡ ನಟನೆಯ ‘ದೇವಿ’ ಸಿನಿಮಾದ ತಾಯಿ ಕುರಿತಾದ ಹಾಡಿಗೆ ಧ್ವನಿಯಾಗಿದ್ದಾರೆ. ಶ್ರೀಧರ್ ವಿ. ಸಂಭ್ರಮ್ ಸಂಗೀತ ಸಂಯೋಜನೆಯ ಈ ಭಾವನಾತ್ಮಕ ಹಾಡು ಈಗಾಗಲೇ ಗಮನ ಸೆಳೆಯುತ್ತಿದ್ದು, ಹೊಸ ವರ್ಷದ ವೇಳೆಗೆ ಸಿನಿಮಾ ತೆರೆಗೆ ಬರಲು ಸಜ್ಜಾಗುತ್ತಿದೆ.

ಮುಖ್ಯಾಂಶಗಳು
- ತಾಯಿ ಹಾಡಿಗೆ ಧ್ವನಿಯಾದ ಜೋಗಿ ಪ್ರೇಮ್
- ದೇವಿ ಚಿತ್ರದ ಹಾಡು ಹಾಡಿದ ಪ್ರೇಮ್
- ಹೊಸ ತಂಡಕ್ಕೆ ನಿರ್ದೇಶಕನ ಬೆಂಬಲ
ಜೋಗಿ ಪ್ರೇಮ್ ಅವರ ನಿರ್ದೇಶನವನ್ನು ಜನರು ಎಷ್ಟು ಇಷ್ಟಪಡುತ್ತಾರೋ, ಅದೇ ರೀತಿ ಅವರ ಕಂಠವನ್ನು ಇಷ್ಟಪಡುವವರು ಅನೇಕರಿದ್ದಾರೆ. ಅವರು ಹಾಡಿರುವ ಅನೇಕ ಹಾಡುಗಳು ಈಗಾಗಲೇ ಸೂಪರ್ ಹಿಟ್ ಆಗಿವೆ. ಈಗ ಯುವ ರೈತ ಚೇತನ್ ಹಾಗೂ ಭವ್ಯಾ ಗೌಡ ನಟನೆಯ ‘ದೇವಿ’ ಚಿತ್ರದ ಹಾಡಿಗೆ ಧ್ವನಿ ಆಗಿದ್ದಾರೆ. ಈ ಹಾಡು ಯಾವ ರೀತಿಯಲ್ಲಿ ಮೋಡಿ ಮಾಡುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
ಜೋಗಿ ಪ್ರೇಮ್ ಅವರ ಕಂಠದಲ್ಲಿ ಮೂಡಿ ಬಂದ ತಾಯಿಗೆ ಸಂಬಂಧಿಸಿದ ಹಾಡುಗಳು ಗಮನ ಸೆಳೆದಿದ್ದು ಹೆಚ್ಚು. ಅದೇ ರೀತಿ ‘ದೇವಿ’ ಸಿನಿಮಾದ ‘ಜೋಗುಳವ ಹಾಡಿ ನೀನು ಕೈತುತ್ತು ಕೊಟ್ಟೋಳು ಹಾಡು ಗಮನ ಸೆಳೆದಿದೆ. ಪ್ಯಾಥೋ ಪ್ರಜ್ಜು ಸಾಹಿತ್ಯದ ಈ ಹಾಡು ‘ಬೇಡುವನು ವರವನ್ನು’ ಹಾಡನ್ನು ನೆನಪಿಸಿತು. ಜೋಗಿ ಪ್ರೇಮ್ ಗಾಯನದಲ್ಲಿ ಮೂಡಿ ಬಂದ ಈ ಹಾಡು ಸೂಪರ್ ಹಿಟ್ ಆಗಿತ್ತು.
‘ದೇವಿ’ ಸಿನಿಮಾಗೆ ಶ್ರೀಧರ್ ವಿ ಸಂಭ್ರಮ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಯುವ ರೈತ ಚೇತನ್ ಅವರದ್ದು ಮಂಡ್ಯ. ಜೋಗಿ ಪ್ರೇಮ್ ಅವರು ಹುಟ್ಟೂರು ಕೂಡ ಮಂಡ್ಯ. ಈ ಕಾರಣಕ್ಕೆ ಪ್ರೇಮ್ ಈ ಹಾಡು ಹಾಡಿದ್ದಾರೆ ಅನ್ನೋದು ವಿಶೇಷ. ಇತ್ತೀಚೆಗೆ ಪ್ರೇಮ್ ಅವರು ಕೃಷಿ ಕಡೆ ಒಲವು ತೋರಿಸುತ್ತಿದ್ದಾರೆ. ದನ-ಕರುಗಳನ್ನು ಸಾಕುತ್ತಿದ್ದಾರೆ. ಈ ಕಾರಣಕ್ಕೆ ಅವರಿಗೆ ಉಡುಗೊರೆಯಾಗಿ ಎರಡು ಕರುಗಳು ಸಿಕ್ಕಿವೆ. ಈ ಚಿತ್ರದ ನಿರ್ಮಾಪಕರೂ ಆಗಿರುವ ಚೇತನ್ ಅವರು ಈ ಉಡುಗೊರೆ ನೀಡಿದ್ದಾರೆ.
ಇದನ್ನೂ ಓದಿ:ಸುದೀಪ್-ಪ್ರೇಮ್ ಹೊಸ ಸಿನಿಮಾ ಪೋಸ್ಟರ್ಗೆ ಎಐ ಬಳಕೆ; ನೆಟ್ಟಿಗರ ಟೀಕೆ
ಸಿಆರ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಚೇತನ್ ಈ ಚಿತ್ರ ನಿರ್ಮಿಸಿದ್ದಾರೆ ಸಿನಿಮಾಗೆ ಕಥೆ, ಚಿತ್ರಕಥೆ ಬರೆದಿದ್ದಾರೆ. ಅವರು ಈ ಚಿತ್ರಕ್ಕಾಗಿ ಹಲವು ಜವಾಬ್ದಾರಿಗಳನ್ನು ವಹಿಸಿಕೊಂಡಿದ್ದಾರೆ. ಸದ್ಯ ಹಾಡುಗಳ ಶೂಟಿಂಗ್ಗೆ ತಂಡ ಸಜ್ಜಾಗಿದೆ ಹೊಸ ವರ್ಷದ ವೇಳೆಗೆ ಸಿನಿಮಾನ ರಿಲೀಸ್ ಮಾಡುವ ಆಲೋಚನೆಯಲ್ಲಿ ತಂಡ ಇದೆ. ಭವ್ಯಾ ಗೌಡ ಅವರು ‘ಕರ್ಣ’ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಕಿರುತೆರೆ ಹಾಗೂ ಹಿರಿತೆರೆ ಎರಡರಲ್ಲೂ ಅವರು ಬ್ಯುಸಿ ಇದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:10 pm, Sat, 31 October 26




