
ನಟ ಕಮಲ್ ಹಾಸನ್ (Kamal Haasan) ನಟನೆಯ ‘ಥಗ್ ಲೈಫ್’ ಸಿನಿಮಾ ಇಂದು (ಜೂನ್ 5) ರಿಲೀಸ್ ಆಗುತ್ತಿದೆ. ಈ ಚಿತ್ರ ಕರ್ನಾಟಕದಲ್ಲಿ ಈಗಾಗಲೇ ತಾತ್ಕಾಲಿಕವಾಗಿ ಬ್ಯಾನ್ ಆಗಿದೆ. ಕೋರ್ಟ್ ಮುಂದಿನ ಆದೇಶದವರೆಗೂ ಸಿನಿಮಾ ರಿಲೀಸ್ ಆಗುತ್ತಿಲ್ಲ. ಈ ಮಧ್ಯೆ ಕಮಲ್ ಹಾಸನ್ ಅವರಿಗೆ ಬೆಂಗಳೂರಿಗರ ನೆನಪಾಗಿದೆ. ಇದಕ್ಕೆ ಕಾರಣ ಆಗಿದ್ದು ಬೆಂಗಳೂರಿನ ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಕಾಲ್ತುಳಿತದ ಘಟನೆ. ಈ ಘಟನೆ ಬಗ್ಗೆ ಅವರು ಸಂತಾಪ ಸೂಚಿಸಿದ್ದಾರೆ.
‘ಬೆಂಗಳೂರಿನಲ್ಲಿ ಹೃದಯ ವಿದ್ರಾವಕ ದುರಂತ ನಡೆದಿದೆ. ಈ ಘಟನೆಯಿಂದ ತೀವ್ರ ದುಃಖಿತನಾಗಿದ್ದೇನೆ. ಈ ದುಃಖದ ಕ್ಷಣದಲ್ಲಿ ಸಂತ್ರಸ್ತರ ಕುಟುಂಬಗಳಿಗೆ ನಾನು ಮಿಡಿಯುತ್ತೇನೆ. ಗಾಯಾಳುಗಳು ಬೇಗ ಚೇತರಿಸಿಕೊಳ್ಳಲಿ’ ಎಂದು ಕಮಲ್ ಹಾಸನ್ ಪೋಸ್ಟ್ ಮಾಡಿದ್ದಾರೆ. ಈ ಎಕ್ಸ್ (ಟ್ವಿಟರ್) ಪೋಸ್ಟ್ ವೈರಲ್ ಆಗಿದೆ.
Heart wrenching tragedy in Bangalore. Deeply distressed and my heart reaches out to the families of the victims in this moment of grief. May the injured recover soon.
— Kamal Haasan (@ikamalhaasan) June 4, 2025
ಕಮಲ್ ಹಾಸನ್ ಅವರು ಸದ್ಯ ಕನ್ನಡಿಗರ ದ್ವೇಷ ಕಟ್ಟಿಕೊಂಡಿದ್ದಾರೆ. ‘ಕನ್ನಡ ಹುಟ್ಟಿದ್ದು ತಮಿಳಿನಿಂದ ಎನ್ನುವ ಅಜ್ಞಾನದ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆಯಿಂದ ಇಡೀ ಕರ್ನಾಟಕ ಒಗ್ಗಟ್ಟಾಗಿ ನಿಂತಿದ್ದು, ಸಿನಿಮಾ ರಿಲೀಸ್ಗೆ ನಮ್ಮಲ್ಲಿ ಅವಕಾಶ ನೀಡಿಲ್ಲ. ಈ ಸಂದರ್ಭದಲ್ಲೇ ಕಮಲ್ ಹಾಸನ್ ಅವರು ಕಾಲ್ತುಳಿತದ ಘಟನೆ ಬಗ್ಗೆ ಪೋಸ್ಟ್ ಮಾಡಿರುವುದು ಚರ್ಚೆಗೆ ಕಾರಣ ಆಗಿದೆ. ಅನೇಕರು ಇದನ್ನು ಸಿಂಪತಿ ಗಿಟ್ಟಿಸಿಕೊಳ್ಳಲ ಮಾಡಿದ ಪೋಸ್ಟ್ ಎಂದು ಕರೆದಿದ್ದಾರೆ. ಇನ್ನೂ ಕೆಲವರು ಕಮಲ್ ಹಾಸನ್ ಅವರು ಸಿನಿಮಾ ಬ್ಯಾನ್ ಮಧ್ಯೆಯೂ ಬೆಂಗಳೂರಿನ ಬಗ್ಗೆ ಈ ರೀತಿ ಪೋಸ್ಟ್ ಮಾಡಿದರಲ್ಲ ಎಂದು ಸಂತಸ ಹೊರಹಾಕಿದ್ದಾರೆ.
ಇದನ್ನೂ ಓದಿ: ಕನ್ನಡಿಗರಿಂದ ವಿರೋಧ, ಆ ಮೂರು ಪದ ಹೇಳಿ ತಮಿಳರ ಪುಸಲಾಯಿಸಲು ಕಮಲ್ ಹಾಸನ್ ಯತ್ನ
ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆರ್ಸಿಬಿ ವಿಜಯೋತ್ಸವ ಪರೇಡ್ ಆಯೋಜನೆ ಮಾಡಿತ್ತು. ಈ ವೇಳೆ ಆರ್ಸಿಬಿ ಆಟಗಾರರನ್ನು ನೋಡಲು ಜನರು ಮುಗಿ ಬಿದ್ದರು. ಈ ವೇಳೆ ನಡೆದ ಕಾಲ್ತುಳಿತದಲ್ಲಿ 11 ಜನರು ಮೃತಪಟ್ಟರೆ, 47 ಮಂದಿ ಗಾಯಗೊಂಡಿದ್ದಾರೆ. ಅನೇಕರು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊನೆ ಆಗದೆ ನಿಧನ ಹೊಂದಿದ್ದಾರೆ. ಆಸ್ಪತ್ರೆಯಲ್ಲಿ ಅನೇಕರು ಚಿಕಿತ್ಸೆ ಪಡೆಯುತ್ತಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚುವ ಆತಂಕ ಎದುರಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.