ಒಂದು ಕಾಲದಲ್ಲಿ ಬೇಡಿಕೆಯ ಹೀರೋ ಆಗಿದ್ದ ಅಜಯ್​ ರಾವ್​ಗೆ ಈಗ ಕೋಟಿ ಕೋಟಿ ರೂಪಾಯಿ ಸಾಲ

|

Updated on: Mar 29, 2025 | 7:41 AM

ಒಂದು ಕಾಲದ ಸೂಪರ್ ಹಿಟ್ ನಟ ಅಜಯ್ ರಾವ್ ಅವರು ಈಗ ಕೋಟಿ ಕೋಟಿ ರೂಪಾಯಿ ಸಾಲದಲ್ಲಿ ಸಿಲುಕಿದ್ದಾರೆ. 'ಎಕ್ಸ್​​​ಕ್ಯೂಸ್ ಮಿ' ಚಿತ್ರದ ಮೂಲಕ ಖ್ಯಾತಿ ಪಡೆದ ಅವರು, ಕಠಿಣ ಸಮಯವನ್ನು ಎದುರಿಸುತ್ತಿದ್ದಾರೆ. ಆದಾಗ್ಯೂ, ಅವರು ತಮ್ಮ ಸಮಸ್ಯೆಗಳನ್ನು ಮುಕ್ತವಾಗಿ ಹಂಚಿಕೊಂಡಿದ್ದು, ನಿರಾಶೆಯನ್ನು ಒಪ್ಪಿಕೊಳ್ಳದೆ ಜೀವನದಲ್ಲಿ ಮುಂದುವರೆಯುವ ಮನೋಭಾವವನ್ನು ತೋರಿಸಿದ್ದಾರೆ.

ಒಂದು ಕಾಲದಲ್ಲಿ ಬೇಡಿಕೆಯ ಹೀರೋ ಆಗಿದ್ದ ಅಜಯ್​ ರಾವ್​ಗೆ ಈಗ ಕೋಟಿ ಕೋಟಿ ರೂಪಾಯಿ ಸಾಲ
ಅಜಯ್ ರಾವ್
Follow us on

ಅಜಯ್ ರಾವ್ (Ajay Rao) ಒಂದು ಕಾಲದಲ್ಲಿ ಚಿತ್ರರಂಗದಲ್ಲಿ ಸಾಕಷ್ಟು ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿದ್ದರು. ಸುದೀಪ್ ನಟನೆಯ ‘ಕಿಚ್ಚ’ ಸಿನಿಮಾದಲ್ಲಿ ಕಥಾ ನಾಯಕನ ಗೆಳೆಯನ ಪಾತ್ರ ಮಾಡಿದ್ದರು. ಇದು ಅವರು ನಟಿಸಿದ ಮೊದಲ ಸಿನಿಮಾ. ಆ ಬಳಿಕ ‘ಎಕ್ಸ್​ಕ್ಯೂಸ್ ಮಿ’ ಅವರಿಗೆ ದೊಡ್ಡ ಮಟ್ಟದ ಯಶಸ್ಸು ತಂದುಕೊಟ್ಟಿತು. ಆ ಬಳಿಕ ಸಾಲು ಸಾಲು ಸಿನಿಮಾ ಆಫರ್​ಗಳು ಬಂದವು. ‘ತಾಜ್ ಮಹಲ್’, ‘ಕೃಷ್ಣನ್ ಲವ್​ ಸ್ಟೋರಿ’ ರೀತಿಯ ಸಿನಿಮಾಗಳನ್ನು ಅವರು ಮಾಡಿದರು. ಈಗ ಅವರಿಗೆ ಕೋಟಿ ಕೋಟಿ ರೂಪಾಯಿ ಸಾಲ ಇದೆ. ಈ ಬಗ್ಗೆ ಅವರು ರ‍್ಯಾಪಿಡ್ ರಶ್ಮಿ ಅವರ ಯೂಟ್ಯೂಬ್ ಚಾನೆಲ್​ಗೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

‘ಮುಜುಗರ ಇಲ್ಲದೆ ಹೇಳುತ್ತೇನೆ. ನನಗೆ ಕೋಟಿ ಕೋಟಿ ಸಾಲ ಇದೆ. ಇದಕ್ಕೆ ನನಗೆ ಬೇಸರ ಇಲ್ಲ. ನಾನು ಕೋಟಿ ರೂಪಾಯಿ ಸಾಲವನ್ನು ನಿಭಾಯಿಸಬಲ್ಲೆನಲ್ಲ ಎನ್ನುವ ಖುಷಿ ಇದೆ. ಮೊದಲು ಮೆಜೆಸ್ಟಿಕ್​ನಿಂದ ಬಸವೇಶ್ವರ ನಗರ ನಡೆದುಕೊಂಡು ಹೋಗುತ್ತಿದ್ದೆ. ಏಕೆಂದರೆ ಕೈಯಲ್ಲಿ ದುಡ್ಡು ಇರುತ್ತಾ ಇರಲಿಲ್ಲ. ಹೀಗೆ ಒಂದು ವರ್ಷ ಮಾಡಿದ್ದೇನೆ’ ಎಂದಿದ್ದಾರೆ ಅಜಯ್ ರಾವ್.

ಇದನ್ನೂ ಓದಿ
ಉತ್ತಮ TRP ಮಧ್ಯೆಯೂ ಕೊನೆಯಾಗಲಿದೆ ಕಲರ್ಸ್​ನ ಈ ಸೂಪರ್ ಹಿಟ್ ಧಾರಾವಾಹಿ?
ದಂಡಿಗೆ, ದಾಳಿಗೆ ಹೆದರಲಿಲ್ಲ, ಹಲ್ಲಿಗೆ ಹೆದರೋದಾ; ಪಾಪ ಗೌತಮಿ ಸ್ಥಿತಿ ನೋಡಿ
ಗಳಿಕೆಯಲ್ಲಿ ಇತಿಹಾಸ; ಮೊದಲ ದಿನ ಗರಿಷ್ಠ ಕಲೆಕ್ಷನ್ ಮಾಡಿದ ಎಲ್​2: ಎಂಪುರಾನ್
ಚಿತ್ರಮಂದಿರದ ಬಾಗಿಲು, ಕಿಟಕಿ, ಕುರ್ಚಿ ಒಡೆದು ಹಾಕಿದ ದರ್ಶನ್ ಫ್ಯಾನ್ಸ್​

‘ಮ್ಯಾನೇಜರ್, ಡೈರೆಕ್ಟರ್ ಸಿಕ್ಕಿದರೆ ನಾನೇ ಹೋಟೆಲ್​ಗೆ ಕರೆದುಕೊಂಡು ಹೋಗಿ ಟೀ ಕೊಡಿಸಬೇಕಿತ್ತು. ಚಿಕ್ಕಪೇಟೆಲಿ ಇಡ್ಲಿ ಮಾಡುತ್ತಾರೆ. ಅಲ್ಲಿ ರಾತ್ರಿ ಹೋಗಿ 2 ಇಡ್ಲಿ ತಿನ್ನುತ್ತಿದ್ದೆ. ಅದು ನನ್ನ ರಾತ್ರಿಯ ಊಟ. ಒಂದು ವರ್ಷ ಹೀಗೆ ಮಾಡಿದ್ದೇನೆ. ಮಧ್ಯಾಹ್ನ ಹಸಿವಾದರೆ ಎಷ್ಟು ದುಡ್ಡಿದೆ ಎಂದು ಎಣಿಸುತ್ತಿದೆ. ಬೀದಿ ಬದಿಯಲ್ಲಿ ಮಾರೋ ಹುರಿಗಡ್ಲೆ ತಿಂದು ಮಧ್ಯಾಹ್ನ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದೆ’ ಎಂದಿದ್ದಾರೆ ಅವರು.

ಇದನ್ನೂ ಓದಿ: ‘ಸೆಟ್​ನಲ್ಲಿ ಏನೇ ಆದರೂ ಹೀರೋ ಹೋಗಬೇಕು ಅಂತ ರೂಲ್ಸ್​ ಮಾಡಿಬಿಡಿ’; ಅಜಯ್​ ರಾವ್​

ಯಾವಾಗಲೂ ನಗುತ್ತಾ ಇರಬೇಕು ಎಂಬುದು ಅಜಯ್ ರಾವ್ ಪಾಲಿಸಿ. ಒಬ್ಬರ ನಗುವಿನಿಂದ ಮತ್ತೊಬ್ಬರು ನಗುತ್ತಾರೆ ಎಂಬುದನ್ನು ಅವರು ಬಲವಾಗಿ ನಂಬುತ್ತಾರೆ. ಇದುವೇ ಯಶಸ್ಸು ಎಂದು ಅವರು ಹೇಳಿದ್ದಾರೆ. 2022ರಲ್ಲಿ ರಿಲೀಸ್ ಆದ ‘ಶೋಕಿವಾಲ’ ಚಿತ್ರವೇ ಕೊನೆ. ಇದಾದ ಬಳಿಕ ಅಜಯ್ ರಾವ್ ಹೀರೋ ಆಗಿ ನಟಿಸಿದ ಯಾವ ಚಿತ್ರವೂ ರಿಲೀಸ್ ಆಗಿಲ್ಲ. ಸದ್ಯ ಅವರು ‘ಯುದ್ಧಕಾಂಡ’ ಹೆಸರಿನ ಸಿನಿಮಾದಲ್ಲಿ ನಟಿಸುತ್ತಿದ್ದು, ಏಪ್ರಿಲ್​ನಲ್ಲಿ ತೆರೆಗೆ ಬರಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:01 am, Sat, 29 March 25