AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೇಶಭಕ್ತಿ ಗೀತೆಗೆ ಧ್ವನಿಯಾದ ನಟಿ ಪ್ರೇಮಾ; ‘ವರಾಹಚಕ್ರಂ’ ತಂಡದಿಂದ ಸರ್ಪ್ರೈಸ್​

ಪ್ರೇಮಾ, ಸಾಯಿಕುಮಾರ್ ಅವರು ‘ವರಾಹಚಕ್ರಂ’ ಸಿನಿಮಾದ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಯುವ ನಟ ಅರ್ಜುನ್ ದೇವ ಅವರು ಹೀರೋ ಆಗಿ ನಟಿಸಿದ್ದು, ರಾಣಾ, ಆರ್ಯನ್, ಇಮ್ರಾನ್ ಷರೀಫ್, ಪ್ರತೀಕ್ ಗೌಡ ಮುಂತಾದವರು ಇನ್ನುಳಿದ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದ ‘ಕಂದಾ ನಿಂದೇ ಹಿಂದುಸ್ತಾನಾ..’ ಹಾಡನ್ನು ಬಿಡುಗಡೆ ಮಾಡಲಾಗಿದೆ. ಆ ಗೀತೆಯ ಬಗ್ಗೆ ಇಲ್ಲಿದೆ ಮಾಹಿತಿ..

ದೇಶಭಕ್ತಿ ಗೀತೆಗೆ ಧ್ವನಿಯಾದ ನಟಿ ಪ್ರೇಮಾ; ‘ವರಾಹಚಕ್ರಂ’ ತಂಡದಿಂದ ಸರ್ಪ್ರೈಸ್​
‘ವರಾಹಚಕ್ರಂ’ ಸಿನಿಮಾದ ಹಾಡು ಬಿಡುಗಡೆ
ಮದನ್​ ಕುಮಾರ್​
|

Updated on: Feb 01, 2024 | 6:43 PM

Share

ಚಿತ್ರರಂಗದಲ್ಲಿ ನಟಿ ಪ್ರೇಮಾ (Prema) ಅವರು ತಮ್ಮದೇ ಛಾಪು ಮೂಡಿಸಿದ್ದಾರೆ. ಅವರ ಅಭಿನಯಕ್ಕೆ ಫ್ಯಾನ್ಸ್​ ಫಿದಾ ಆಗಿದ್ದಾರೆ. ಹಲವು ಸೂಪರ್​ ಹಿಟ್​ ಸಿನಿಮಾಗಳಲ್ಲಿ ನಟಿಸಿದ ಪ್ರೇಮಾ ಅವರು ಅತ್ಯುತ್ತಮ ಅಭಿನೇತ್ರಿ ಎಂಬುದರಲ್ಲಿ ಅನುಮಾನವೇ ಇಲ್ಲ. ಈಗ ಅವರು ‘ವರಾಹಚಕ್ರಂ’ (Varaha Chakram) ಸಿನಿಮಾದಲ್ಲಿ ನಟಿಸಿದ್ದಾರೆ. ಅಚ್ಚರಿ ಏನೆಂದರೆ, ನಟನೆಯ ಜೊತೆಗೆ ಈ ಸಿನಿಮಾದ ಒಂದು ಹಾಡಿಗೆ ಪ್ರೇಮಾ ಅವರು ಧ್ವನಿ ನೀಡಿದ್ದಾರೆ! ಅವರ ಕಂಠದಲ್ಲಿ ಮೂಡಿಬಂದಿರುವುದು ದೇಶಭಕ್ತಿ ಗೀತೆ ಎಂಬುದು ಮತ್ತೊಂದು ವಿಶೇಷ. ಆ ಹಾಡಿನ ಮೂಲಕ ಪ್ರೇಮಾ ಅವರು ಗಾಯಕಿಯಾಗಿಯೂ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಈ ಹಾಡು ಬಿಡುಗಡೆ ಆಗಿದೆ.

ಪ್ರೇಮಾ ಅವರೊಳಗೆ ಓರ್ವ ಗಾಯಕಿಯೂ ಇರುವುದು ಬಹುತೇಕರಿಗೆ ತಿಳಿದಿರಲಿಲ್ಲ. ಅದನ್ನು ನಿರ್ದೇಶಕ‌ ಮಂಜು ಮಸ್ಕಲ್ ಮಟ್ಟಿ ಅವರು ಪತ್ತೆಹಚ್ಚಿದ್ದಾರೆ. ಪ್ರೇಮಾ ಅವರಿಂದ ದೇಶಭಕ್ತಿ ಗೀತೆಯನ್ನು ಹಾಡಿಸಿದ್ದಾರೆ. ‘ವರಾಹ ಚಕ್ರಂ’ ಸಿನಿಮಾದಲ್ಲಿ ಪ್ರೇಮಾ ಹಾಡಿರುವ ‘ಕಂದಾ ನಿಂದೇ ಹಿಂದುಸ್ತಾನಾ..’ ಎಂಬ ಈ ಹಾಡನ್ನು ಧಾರವಾಡ ಹಬ್ಬ ವೇದಿಕೆಯಲ್ಲಿ ಬಿಡುಗಡೆ ಮಾಡಲಾಯಿತು. ಈ ಹಾಡನ್ನು ಬಸವ ಸಮರ್ಥ ಸಿದ್ದೇಶ್ವರ ಮಹಾಸ್ವಾಮಿಗಳು ಬಿಡುಗಡೆ ಮಾಡಿದ್ದಾರೆ.

ಇದನ್ನೂ ಓದಿ: ಫೆ.9ಕ್ಕೆ ಚಿತ್ರಮಂದಿರದಲ್ಲಿ ‘ಪ್ರಯಣಂ’; ಟ್ರೇಲರ್​ ಮೂಲಕ ಝಲಕ್​ ತೋರಿಸಿದ ಚಿತ್ರತಂಡ

ಮಂಜು ಮಸ್ಕಲ್ ಮಟ್ಟಿ ಅವರ ನಿರ್ದೇಶನ‌ದ ಈ ಸಿನಿಮಾದ ಪ್ರಮುಖ ಪಾತ್ರದಲ್ಲಿ ಪ್ರೇಮಾ ಕಾಣಿಸಿಕೊಂಡಿದ್ದಾರೆ. ವಾರಾಣಸಿಯಲ್ಲಿ ಈ ಹಾಡನ್ನು ಚಿತ್ರೀಕರಿಸಲಾಗಿದೆ. ಈ ಗೀತೆಯ ಇಡೀ ಸಿನಿಮಾ ಹೈಲೈಟ್ ಆಗಿರಲಿದೆ ಎಂದು ಚಿತ್ರತಂಡದವರು ಹೇಳಿದ್ದಾರೆ. ಸಾಯಿಕುಮಾರ್ ಅವರು ‘ವರಾಹಚಕ್ರಂ’ ಸಿನಿಮಾದ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಯುವ ನಟ ಅರ್ಜುನ್ ದೇವ ಅವರು ಹೀರೋ ಆಗಿ ನಟಿಸಿದ್ದು, ರಾಣಾ, ಆರ್ಯನ್, ಇಮ್ರಾನ್ ಷರೀಫ್, ಪ್ರತೀಕ್ ಗೌಡ ಮುಂತಾದವರು ಇನ್ನುಳಿದ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಶರತ್‌ ಕುಮಾರ್ ಜಿ. ಅವರ ಛಾಯಾಗ್ರಹಣ ಮತ್ತು ಭಾರ್ಗವ ಅವರ ಸಂಕಲನ ಈ ಸಿನಿಮಾಗಿದೆ.

ಪ್ರೇಮಾ ಹಾಡಿರುವ ‘ಕಂದಾ ನಿಂದೇ ಹಿಂದುಸ್ತಾನಾ..’ ಗೀತೆ:

ಬೆಂಗಳೂರು, ಹಿರಿಯೂರು, ನೆಲ್ಲೂರು, ಭಟ್ಕಳ ಮುಂತಾದ ಕಡೆಗಳಲ್ಲಿ ‘ವರಾಹಚಕ್ರಂ’ ಶೂಟಿಂಗ್​​ ಮಾಡಲಾಗಿದೆ. ‘ಮನ್ವಂತರಿ ಮೂವೀ ಮೇಕರ್ಸ್’ ಮೂಲಕ ಸ್ನೇಹಿತರೆಲ್ಲ ಜೊತೆಗೂಡಿ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ. ಲಾವಣ್ಯ ಗ್ರೂಪ್, ನಾಗಭೂಷಣ್ ಎಂ. ರಾವ್, ಮಂಜುನಾಥ್ ಸಿ. ಗೌಡ, ಕೆ.ಎಸ್. ಜೈ ಸುರೇಶ್ ಅವರು ಈ ಸಿನಿಮಾದ ನಿರ್ಮಾಣದಲ್ಲಿ ಜೊತೆಯಾಗಿದ್ದಾರೆ. ವಿ. ನಾಗೇಂದ್ರ ಪ್ರಸಾದ್ ಅವರು ಗೀತರಚನೆ, ಸಂಗೀತ ಸಂಯೋಜನೆ ಜೊತೆಗೆ ಒಂದು ಪಾತ್ರಕ್ಕೂ ಬಣ್ಣ ಹಚ್ಚಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ