KGF Chapter 1: ‘ಕೆಜಿಎಫ್’ ಚಿತ್ರಕ್ಕೆ 4 ವರ್ಷ; ಇತಿಹಾಸ ಸೃಷ್ಟಿಸಿದ ದಿನ ನೆನೆದ ಹೊಂಬಾಳೆ ಫಿಲ್ಮ್ಸ್
ಸಿನಿಮಾದ ಟೀಸರ್ ಹಾಗೂ ಟ್ರೇಲರ್ ನೋಡಿ ಪ್ರೇಕ್ಷಕರು ಥ್ರಿಲ್ ಆದರು. ಅನಂತ್ ನಾಗ್ ಧ್ವನಿಯಲ್ಲಿ ಮೂಡಿ ಬಂದ ನಿರೂಪಣೆ ಸಿನಿಮಾದ ತೂಕವನ್ನು ಮತ್ತಷ್ಟು ಹೆಚ್ಚಿಸಿತ್ತು. ಈ ಸಿನಿಮಾ ಎಲ್ಲರಿಂದ ಸೈ ಎನಿಸಿಕೊಂಡಿತು.
ಅದು 2018ರ ಡಿಸೆಂಬರ್ 21. ಸಿನಿಪ್ರಿಯರು ಆ ದಿನಕ್ಕಾಗಿ ಕಾದು ಕೂತಿದ್ದರು. ಅದು ಪ್ರಶಾಂತ್ ನೀಲ್ ನಿರ್ದೇಶನದ, ಯಶ್ (Yash) ನಟನೆಯ ‘ಕೆಜಿಎಫ್: ಚಾಪ್ಟರ್ 1’ (KGF: Chapter 1) ಸಿನಿಮಾ ರಿಲೀಸ್ ದಿನಾಂಕ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆದ ಈ ಸಿನಿಮಾ ಕೇವಲ ಕನ್ನಡ ಮಾತ್ರವಲ್ಲದೆ, ಇತರ ಭಾಷೆಯಲ್ಲೂ ಸುನಾಮಿ ಎಬ್ಬಿಸಿತು. ಈ ಚಿತ್ರಕ್ಕೆ ಈಗ ನಾಲ್ಕು ವರ್ಷ ತುಂಬಿದೆ. ಹಲವು ಮೊದಲುಗಳಿಗೆ ಸಾಕ್ಷಿಯಾದ ಈ ವಿಶೇಷ ದಿನವನ್ನು ಹೊಂಬಾಳೆ ಫಿಲ್ಮ್ಸ್ ನೆನಪಿಸಿಕೊಂಡಿದೆ.
‘ಉಗ್ರಂ’ ಚಿತ್ರವನ್ನು ಪ್ರಶಾಂತ್ ನೀಲ್ ನಿರ್ದೇಶನ ಮಾಡಿದ್ದರು. ಈ ಸಿನಿಮಾ ಹೆಚ್ಚು ಸದ್ದು ಮಾಡಿತು. ಪ್ರಶಾಂತ್ ನೀಲ್ ಅವರ ಕಸುಬುದಾರಿಕೆ ಏನು ಎಂಬುದು ಜನರಿಗೆ ಗೊತ್ತಾಯಿತು. ಹೀಗಿರುವಾಗಲೇ ‘ಕೆಜಿಎಫ್’ ಸಿನಿಮಾ ಘೋಷಣೆ ಮಾಡಿದರು ಪ್ರಶಾಂತ್ ನೀಲ್. ಈ ಚಿತ್ರಕ್ಕಾಗಿ ಹಲವು ವರ್ಷಗಳ ಕಾಲ ಕೆಲಸ ಮಾಡಿದ್ದರು ಅವರು.
ಸಿನಿಮಾದ ಟೀಸರ್ ಹಾಗೂ ಟ್ರೇಲರ್ ನೋಡಿ ಪ್ರೇಕ್ಷಕರು ಥ್ರಿಲ್ ಆದರು. ಅನಂತ್ ನಾಗ್ ಧ್ವನಿಯಲ್ಲಿ ಮೂಡಿ ಬಂದ ನಿರೂಪಣೆ ಸಿನಿಮಾದ ತೂಕವನ್ನು ಮತ್ತಷ್ಟು ಹೆಚ್ಚಿಸಿತ್ತು. ಈ ಸಿನಿಮಾ ಎಲ್ಲರಿಂದ ಸೈ ಎನಿಸಿಕೊಂಡಿತು. ಕನ್ನಡ ಚಿತ್ರರಂಗದಲ್ಲೇ ಈ ಸಿನಿಮಾ ನೂರಾರು ಕೋಟಿ ಬಿಸ್ನೆಸ್ ಮಾಡಿತು. ಬಾಲಿವುಡ್ನಲ್ಲೂ ಈ ಸಿನಿಮಾ ರಿಲೀಸ್ ಮಾಡಲಾಯಿತು. ಹಿಂದಿಯಲ್ಲಿ ಈ ಚಿತ್ರ 44 ಕೋಟಿ ರೂಪಾಯಿ ಬಾಚಿತ್ತು. ಕನ್ನಡದ ಸಿನಿಮಾವೊಂದು ಬಾಲಿವುಡ್ನಲ್ಲಿ ಇಷ್ಟು ದೊಡ್ಡ ಮಟ್ಟದಲ್ಲಿ ಕಲೆಕ್ಷನ್ ಮಾಡಿದ್ದು ಅದೇ ಮೊದಲು! ಹೀಗೆ ಈ ಚಿತ್ರದಿಂದ ದೊಡ್ಡ ಇತಿಹಾಸವೇ ಸೃಷ್ಟಿ ಆಯಿತು.
‘ಕೆಜಿಎಫ್’ ಚಿತ್ರದಲ್ಲಿ ಯಶ್ ಪಾತ್ರ ಸಖತ್ ಹೈಲೈಟ್ ಆಯಿತು. ರಾಕಿ ಆಗಿ ಅವರು ಮಿಂಚಿದರು. ಶ್ರೀನಿಧಿ ಶೆಟ್ಟಿ ಅವರು ಚೊಚ್ಚಲ ಚಿತ್ರದಲ್ಲೇ ಗಮನ ಸೆಳೆದರು. ಈ ಸಿನಿಮಾ ಮಾಡಿದ ಮೋಡಿ ನೋಡಿ ಎರಡನೇ ಚಾಪ್ಟರ್ನಲ್ಲಿ ನಟಿಸಲು ಬಾಲಿವುಡ್ನ ಖ್ಯಾತ ಕಲಾವಿದರಾದ ಸಂಜಯ್ ದತ್, ರವೀನಾ ಟಂಡನ್ ಒಪ್ಪಿಕೊಂಡರು.
ಇದನ್ನೂ ಓದಿ: Yash: ‘ಬಾಹುಬಲಿ 2’ ದಾಖಲೆಯನ್ನು ಮುರಿದ ‘ಕೆಜಿಎಫ್ 2’; ಇದು ಯಶ್ ಸಿನಿಮಾ ಸಾಧನೆ
ಈ ವಿಶೇಷ ದಿನಕ್ಕೆ ಈಗ ನಾಲ್ಕು ವರ್ಷ ತುಂಬಿದೆ. ಈ ವಿಶೇಷ ದಿನವನ್ನು ನೆನಪಿಸಿಕೊಳ್ಳಲು ಹೊಂಬಾಳೆ ಫಿಲ್ಮ್ಸ್ ವಿಡಿಯೋ ಒಂದನ್ನು ಮಾಡಿ ಹಂಚಿಕೊಂಡಿದೆ. ಈ ವಿಡಿಯೋಗೆ ಫ್ಯಾನ್ಸ್ ಪ್ರೀತಿ ತೋರುತ್ತಿದ್ದಾರೆ. ಈ ವಿಡಿಯೋಗೆ ಬಗೆಬಗೆಯಲ್ಲಿ ಕಮೆಂಟ್ ಮಾಡಲಾಗುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ