AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸುದೀಪ್ ಮುಂದಿನ ಚಿತ್ರದ ಬಗ್ಗೆ ಸಿಕ್ತು ಅಪ್​ಡೇಟ್​; ಕೆಆರ್​ಜಿ ಜತೆ ಕಿಚ್ಚನ ಸಿನಿಮಾ?

Kichcha Sudeep Next Movie: ಸುದೀಪ್ ಅವರ ನಟನೆಯ ‘ವಿಕ್ರಾಂತ್ ರೋಣ’ ಸಿನಿಮಾ ಸಾಕಷ್ಟು ಸದ್ದು ಮಾಡಿತು. ಈ ಚಿತ್ರವನ್ನು ಫ್ಯಾನ್ಸ್ ಇಷ್ಟಪಟ್ಟರು. ಈಗ ಸುದೀಪ್ ಮತ್ತೊಂದು ಚಿತ್ರದ ಬಗ್ಗೆ ಅಪ್​ಡೇಟ್ ಸಿಕ್ಕಿದೆ.

ಸುದೀಪ್ ಮುಂದಿನ ಚಿತ್ರದ ಬಗ್ಗೆ ಸಿಕ್ತು ಅಪ್​ಡೇಟ್​; ಕೆಆರ್​ಜಿ ಜತೆ ಕಿಚ್ಚನ ಸಿನಿಮಾ?
ಕೆಆರ್​ಜಿ ಸ್ಟುಡಿಯೋದವರ ಜತೆ ಸುದೀಪ್
TV9 Web
| Updated By: ರಾಜೇಶ್ ದುಗ್ಗುಮನೆ|

Updated on:Jan 17, 2023 | 10:17 AM

Share

ಕಳೆದ ವರ್ಷ ತೆರೆಗೆ ಬಂದ ‘ವಿಕ್ರಾಂತ್​ ರೋಣ’ ಸಿನಿಮಾ (Vikrant Rona Movie)  ಬಳಿಕ ಕಿಚ್ಚ ಸುದೀಪ್ ಅವರು ಯಾವುದೇ ಹೊಸ ಚಿತ್ರ ಘೋಷಣೆ ಮಾಡಿಲ್ಲ. ಬಿಗ್ ಬಾಸ್ ಆ್ಯಂಕರಿಂಗ್​​ನಲ್ಲಿ ಅವರು ಬ್ಯುಸಿ ಆದರು. ಉಪೇಂದ್ರ ನಟನೆಯ ‘ಕಬ್ಜ’ (Kabza Movie) ಹೊರತುಪಡಿಸಿ ಮತ್ತಾವುದೇ ಸಿನಿಮಾ ಅವರ ಕೈಯಲ್ಲಿ ಇಲ್ಲ. ಸುದೀಪ್ ಮುಂದಿನ ಚಿತ್ರ ಯಾವುದು ಎಂಬ ಪ್ರಶ್ನೆ ಅಭಿಮಾನಿಗಳ ಮನದಲ್ಲಿ ಇತ್ತು. ಇದಕ್ಕೆ ಈಗ ಉತ್ತರ ಸಿಕ್ಕಿದೆ. ಖ್ಯಾತ ನಿರ್ಮಾಣ ಸಂಸ್ಥೆ ‘ಕೆಆರ್​ಜಿ ಸ್ಟುಡಿಯೋಸ್​’ ಜತೆ ಸುದೀಪ್ ಸಿನಿಮಾ ಮಾಡುತ್ತಿದ್ದಾರೆ ಎನ್ನಲಾಗಿದೆ. ಕೆಆರ್​ಜಿ ಸ್ಟುಡಿಯೋಸ್​​ನ ಕಾರ್ತಿಕ್ ಗೌಡ ಹಾಗೂ ಸುದೀಪ್ (Sudeep) ಒಟ್ಟಾಗಿ ಇರುವ ಫೋಟೋ ವೈರಲ್ ಆಗಿದೆ.

ಸುದೀಪ್ ಅವರ ನಟನೆಯ ‘ವಿಕ್ರಾಂತ್ ರೋಣ’ ಸಿನಿಮಾ ಸಾಕಷ್ಟು ಸದ್ದು ಮಾಡಿತು. ಈ ಚಿತ್ರವನ್ನು ಫ್ಯಾನ್ಸ್ ಇಷ್ಟಪಟ್ಟರು. ಈ ಸಿನಿಮಾ ಇತ್ತೀಚೆಗೆ ಸದ್ದು ಮಾಡಿದೆ. ಅದಕ್ಕೆ ಕಾರಣ ಈ ಚಿತ್ರ ಆಸ್ಕರ್​​ ಅರ್ಹತೆ ಸುತ್ತಿಗೆ ಆಯ್ಕೆ ಆಗಿದೆ. ಈ ಖುಷಿಯ ಬೆನ್ನಲ್ಲೇ ಸುದೀಪ್ ಮತ್ತೊಂದು ಚಿತ್ರದ ಬಗ್ಗೆ ಅಪ್​ಡೇಟ್ ಸಿಕ್ಕಿದೆ.

‘ಕೆಆರ್​ಜಿ ಸ್ಟುಡಿಯೋಸ್​​’ 2017ರಲ್ಲಿ ಸ್ಥಾಪನೆ ಆಯಿತು. ಹಲವು ಸಿನಿಮಾಗಳನ್ನು ಕೆಆರ್​ಜಿ ಹಂಚಿಕೆ ಮಾಡಿದೆ. ‘ಆಪರೇಷನ್ ಅಲಮೇಲಮ್ಮ’, ‘ಕೆಜಿಎಫ್ ಚಾಪ್ಟರ್ 1’, ‘ಕೆಜಿಎಫ್ ಚಾಪ್ಟರ್ 2’ ಸೇರಿ ಅನೇಕ ಚಿತ್ರಗಳನ್ನು ಹಂಚಿಕೆ ಮಾಡಿದ ಖ್ಯಾತಿ ಈ ಸಂಸ್ಥೆಗೆ ಇದೆ. ಧನಂಜಯ್ ನಟನೆಯ ‘ರತ್ನನ್ ಪ್ರಪಂಚ’ ಚಿತ್ರದ ಮೂಲಕ ಇವರು ನಿರ್ಮಾಣಕ್ಕೂ ಇಳಿದಿದ್ದಾರೆ. ಈಗ ಸುದೀಪ್ ಚಿತ್ರಕ್ಕೆ ಬಂಡವಾಳ ಹೂಡಲು ಕಾರ್ತಿಕ್ ಗೌಡ ಮುಂದೆ ಬಂದಿದ್ದಾರೆ ಎನ್ನಲಾಗುತ್ತಿದೆ.

ಇದನ್ನೂ ಓದಿ
Image
Kiccha Sudeep: ಜೋಸ್ ಬಟ್ಲರ್​ನಿಂದ ಸುದೀಪ್​ಗೆ ಬಂತು ಸರ್​​ಪ್ರೈಸ್ ಗಿಫ್ಟ್: ಥ್ರಿಲ್ ಆದ ಕಿಚ್ಚ
Image
‘83’ ಸಿನಿಮಾ ವೇದಿಕೆಯಲ್ಲಿ ರಣವೀರ್​ ಸಿಂಗ್​ಗೆ ಕನ್ನಡ ಡೈಲಾಗ್​ ಹೇಳಿಕೊಟ್ಟ ಕಿಚ್ಚ ಸುದೀಪ್​
Image
ಒಂದೇ ವೇದಿಕೆ ಮೇಲೆ ಸುದೀಪ್​, ರಣವೀರ್​, ಕಪಿಲ್​ ದೇವ್​; ‘83’ ಸುದ್ದಿಗೋಷ್ಠಿ ನೋಡಲು ಇಲ್ಲಿ ಕ್ಲಿಕ್​ ಮಾಡಿ
Image
Kichcha Sudeep: ಕ್ರಿಕೆಟ್​ ಮಾತ್ರವಲ್ಲ, ಚೆಸ್​ನಲ್ಲೂ ಘಟಾನುಘಟಿಗೆ ಪೈಪೋಟಿ ನೀಡಲು ರೆಡಿಯಾದ ಕಿಚ್ಚ ಸುದೀಪ್​

ಇದನ್ನೂ ಓದಿ: Kichcha Sudeep: ಸುದೀಪ್​ ರಾಜಕೀಯ ಎಂಟ್ರಿ ಬಗ್ಗೆ ಗುಸುಗುಸು; ಯಾವುದೇ ಪ್ರತಿಕ್ರಿಯೆ ನೀಡದ ಕಿಚ್ಚ

ಹಾಗಾದರೆ ಈ ಚಿತ್ರಕ್ಕೆ ಡೈರೆಕ್ಷನ್ ಯಾರದ್ದು? ಆ ಪ್ರಶ್ನೆಗೂ ಉತ್ತರ ಇದೆ. ಕಿಚ್ಚನ ಚಿತ್ರಕ್ಕೆ ನಂದ ಕಿಶೋರ್ ಅವರು ನಿರ್ದೇಶನ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಈ ಬಗ್ಗೆ ಚಿತ್ರತಂಡದಿಂದ ಅಧಿಕೃತ ಘೋಷಣೆ ಆಗಲಿ ಎಂದು ಫ್ಯಾನ್ಸ್ ಕಾಯುತ್ತಿದ್ದಾರೆ. ಈ ಮೊದಲು ‘ರನ್ನ’ ಹಾಗೂ ‘ಮುಕುಂದ ಮುರಾರಿ’ ಸಿನಿಮಾದಲ್ಲಿ ಸುದೀಪ್ ಹಾಗೂ ನಂದಕಿಶೋರ್ ಒಟ್ಟಾಗಿ ಕೆಲಸ ಮಾಡಿದ್ದರು. ಈಗ ಇವರ ಕಾಂಬಿನೇಷನ್​ ಮತ್ತೆ ಒಂದಾಗುತ್ತಿರುವುದು ಸಹಜವಾಗಿಯೇ ಕುತೂಹಲ ಮೂಡಿಸಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 10:16 am, Tue, 17 January 23

ಬಿಗ್​​ಬಾಸ್ 12: ರಕ್ಷಿತಾ ಶೆಟ್ಟಿಗೆ ಯೋಗ್ಯತೆ ಇಲ್ಲ, ರಿಯಾಕ್ಷನ್ ಹೇಗಿತ್ತು?
ಬಿಗ್​​ಬಾಸ್ 12: ರಕ್ಷಿತಾ ಶೆಟ್ಟಿಗೆ ಯೋಗ್ಯತೆ ಇಲ್ಲ, ರಿಯಾಕ್ಷನ್ ಹೇಗಿತ್ತು?
ಸುಳ್ಳು ಹೇಳಿದ್ರೆ ರಿಸೈನ್: ಡಿಕೆಶಿ ರಾಜೀನಾಮೆ ಸವಾಲ್ ಹಾಕಿದ್ಯಾರಿಗೆ?
ಸುಳ್ಳು ಹೇಳಿದ್ರೆ ರಿಸೈನ್: ಡಿಕೆಶಿ ರಾಜೀನಾಮೆ ಸವಾಲ್ ಹಾಕಿದ್ಯಾರಿಗೆ?
ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ