ಪದಗಳಲ್ಲೇ ಆಟ ಆಡೋ ಕವಿ; ಯೋಗರಾಜ್ ಭಟ್ ಬರೆದ ಈ ಹಾಡುಗಳನ್ನು ಮಿಸ್ ಮಾಡದೆ ಕೇಳಿ
ಯೋಗರಾಜ್ ಭಟ್ ನಿರ್ದೇಶನದ ‘ಮನದ ಕಡಲು’ ಚಿತ್ರವು ಮಾರ್ಚ್ 28 ರಂದು ಬಿಡುಗಡೆಯಾಗುತ್ತಿದೆ. ಸುಮುಖ, ರಾಶಿಕಾ ಶೆಟ್ಟಿ ಮತ್ತು ಅಂಜಲಿ ಅನೀಶ್ ನಟಿಸಿದ್ದಾರೆ. ಯೋಗರಾಜ್ ಭಟ್ ಅವರ ಸಂಗೀತ ಸಾಹಿತ್ಯಕ್ಕೆ ಚಿತ್ರ ವಿಶೇಷ ಖ್ಯಾತಿ ಪಡೆದಿದೆ. ‘ಮುಂಗಾರು ಮಳೆ’, ‘ಗಾಳಿಪಟ’ಮತ್ತು ಇತರ ಚಿತ್ರಗಳಲ್ಲಿನ ಅವರ ಹಾಡುಗಳು ಅತ್ಯಂತ ಜನಪ್ರಿಯವಾಗಿವೆ.

ಯೋಗರಾಜ್ ಭಟ್ (Yogaraj Bhat) ಅವರ ನಿರ್ದೇಶನದಲ್ಲಿ ‘ಮನದ ಕಡಲು’ ಸಿನಿಮಾ ರಿಲೀಸ್ ಆಗುತ್ತಿದೆ. ಈ ಚಿತ್ರಕ್ಕಾಗಿ ಫ್ಯಾನ್ಸ್ ಕಾದಿದ್ದಾರೆ. ಮಾರ್ಚ್ 28ರಂದು ಸಿನಿಮಾ ರಾಜ್ಯಾದ್ಯಂತ ತೆರೆ ಕಾಣಲಿದೆ. ಸುಮುಖ, ರಾಶಿಕಾ ಶೆಟ್ಟಿ, ಅಂಜಲಿ ಅನೀಶ್ ನಟಿಸಿದ್ದಾರೆ. ಈ ಚಿತ್ರದ ಟ್ರೇಲರ್ ಲಾಂಚ್ಗೆ ಯಶ್ ಬಂದು ಬೆಂಬಲ ಸೂಚಿಸಿದ್ದರು ಅನ್ನೋದು ವಿಶೇಷ. ಯೋಗರಾಜ್ ಭಟ್ ಅವರು ಒಳ್ಳೆಯ ನಿರ್ದೇಶಕ ಮಾತ್ರವಲ್ಲ, ಒಳ್ಳೆಯ ಗೀತ ಸಾಹಿತಿ ಕೂಡ ಹೌದು. ಅವರ ಬರಹದಲ್ಲಿ ಒಳ್ಳೊಳ್ಳೆಯ ಹಾಡುಗಳು ಮೂಡಿ ಬಂದಿವೆ.
ಯೋಗರಾಜ್ ಭಟ್ ಬರೆಯುವ ಹಾಡುಗಳು ಸಖತ್ ಭಿನ್ನ. ಅವರು ಶಬ್ದಗಳಲ್ಲೇ ಆಟ ಆಡುತ್ತಾರೆ. ಈ ಹಾಡುಗಳು ಕೇಳುಗರಿಗೆ ಇಂಪು ಕೊಡುತ್ತದೆ. ತಮ್ಮ ಸಿನಿಮಾಗಳ ಜೊತೆ ಇತರ ಸಿನಿಮಾಗಳಿಗೂ ಅವರು ಸಾಹಿತ್ಯ ಬರೆದಿದ್ದಾರೆ. ಅವರ ಈ ಹಾಡುಗಳನ್ನು ಮಿಸ್ ಮಾಡದೆ ಕೇಳಿ.
ಯೋಗರಾಜ್ ಭಟ್ ಸಾಹಿತ್ಯ ಬರೆದಿದ್ದು ‘ಮಣಿ’ ಸಿನಿಮಾಗೆ. ಈ ಚಿತ್ರಕ್ಕೆ ಎರಡು ಹಾಡನ್ನು ಬರೆದರು. ಆ ಬಳಿಕ ‘ಮುಂಗಾರು ಮಳೆ’ ಚಿತ್ರದ ‘ಮುಂಗಾರು ಮಳೆಯೇ, ಏನು ನಿನ್ನ ಹನಿಗಳ ಲೀಲೆ’ ಎಂದು ಹಾಡನ್ನು ಬರೆದು ಎಲ್ಲರ ಹೃದಯವನ್ನೂ ಭಾವನೆಗಳಲ್ಲಿ ಒದ್ದೆ ಮಾಡಿದ್ದರು ಅವರು. ಆ ಬಳಿಕ ‘ಗಾಳಿಪಟ’ ಚಿತ್ರದ ‘ನದೀಮ್ ಧೀಮ್ ತನ..’, ‘ಒಂದೇ ಸಮನೆ ನಿಟ್ಟುಸಿರು..’ ಹಾಡುಗಳನ್ನು ಅವರು ಬರೆದರು.
‘ಕಣ್ಣ ಹನಿಯೊಂದಿಗೆ’, ‘ನಾ ನಗುವ ಮೊದಲೇನೆ’, ‘ನಾನು ಮನಸಾರೆ’, ‘ಯಾರೆಗೆ ಹೇಳೋಣಾ ನಮ್ಮ ಪ್ರಾಬ್ಲಂ’, ‘ಮಾಯಾವಿ ಮಾಯಾವಿ’ ರೀತಿಯ ಹಾಡುಗಳನ್ನು ಯೋಗರಾಜ್ ಭಟ್ ಬರೆದಿದ್ದಾರೆ. ಅವರು ‘ಡ್ರಾಮ’ ಚಿತ್ರದಲ್ಲಿ ಬರೆದ ‘ಬೊಂಬೆ ಆಡ್ಸೋನು..’ ಹಾಡು ಎವರ್ಗ್ರೀನ್ ಎನಿಸಿಕೊಂಡಿದೆ. ಇದರ ಸಾಹಿತ್ಯಕ್ಕೆ ಕೇಳುಗರು ಫಿದಾ ಆಗಿದ್ದಾರೆ.
ಇದನ್ನೂ ಓದಿ: ರಾಧಿಕಾನ ಕೇರ್ ಮಾಡೋ ರೀತಿಗೆ ಯಶ್ನ ಜಂಟಲ್ಮನ್ ಎಂದು ಕರೆದ ಬಾಲಿವುಡ್ ಮಂದಿ
ಯೋಗರಾಜ್ ಭಟ್ ಅವರ, ‘ಖಾಲಿ ಕ್ವಾಟರ್ ಹಾಂಗೆ ಲೈಫು’, ‘ಫೋನು ಇಲ್ಲಾ..’, ‘ಒಪನ್ ದಿ ಬಾಟಲ್..’, ‘ಹಾಲು ಕುಡಿದ ಮಕ್ಕಳೇ ಬದುಕಲ್ಲ’, ‘ನಾ ಮನೆಗ್ ಹೋಗೋದಿಲ್ಲ’ ರೀತಿಯ ಎಣ್ಣೆ ಹಾಡುಗಳನ್ನು ಅವರು ಬರೆದಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 12:52 pm, Thu, 27 March 25