ನಾಗಭೂಷಣ್ ಕಾರು ಅಪಘಾತ, ಪ್ರಕರಣದ ಬಗ್ಗೆ ವಿವರ ನೀಡಿದ ಡಿಸಿಪಿ

Nagabhushan: ನಟ ನಾಗಭೂಷಣ್ ಕಾರು ಅಪಘಾತಕ್ಕೆ ಈಡಾಗಿದ್ದು, ಈ ಅಪಘಾತದಲ್ಲಿ ಪಾದಾಚಾರಿ ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ. ಒಬ್ಬ ವ್ಯಕ್ತಿ ತೀವ್ರವಾಗಿ ಗಾಯಗೊಂಡಿದ್ದಾರೆ. ಪ್ರಕರಣದ ಬಗ್ಗೆ ಡಿಸಿಪಿ ಶಿವಪ್ರಕಾಶ್ ದೇವರಾಜ್ ಮಾಹಿತಿ ನೀಡಿದ್ದಾರೆ.

ನಾಗಭೂಷಣ್ ಕಾರು ಅಪಘಾತ, ಪ್ರಕರಣದ ಬಗ್ಗೆ ವಿವರ ನೀಡಿದ ಡಿಸಿಪಿ
ನಾಗಭೂಷಣ್
Follow us
ಮಂಜುನಾಥ ಸಿ.
|

Updated on: Oct 01, 2023 | 3:52 PM

ನಟ ನಾಗಭೂಷಣ್ (Nagabhushan) ಕಾರು ನಿನ್ನೆ (ಸೆಪ್ಟೆಂಬರ್ 30) ರಾತ್ರಿ ಅಪಘಾತಕ್ಕೆ ಈಡಾಗಿದ್ದು ಮಹಿಳೆಯೋರ್ವರು ಸಾವಿಗೀಡಾಗಿದ್ದು ಮತ್ತೋರ್ವ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಸೆಪ್ಟೆಂಬರ್ 30ರಂದು ರಾತ್ರಿ 9-30 ಕ್ಕೆ ಉತ್ತರಹಳ್ಳಿಯ ವಸಂತಪುರ ಮುಖ್ಯರಸ್ತೆಯಲ್ಲಿ ನಾಗಭೂಷಣ್ ಕಾರು ಇಬ್ಬರು ಪಾದಾಚಾರಿಗಳಾದ ಕೃಷ್ಣ ಮತ್ತು ಪ್ರೇಮಾ ಎಂಬುವರಿಗೆ ಗುದ್ದಿತ್ತು. ಇವರಲ್ಲಿ ಪ್ರೇಮಾ ನಿಧನ ಹೊಂದಿದ್ದಾರೆ.

ಅತಿವೇಗ ಮತ್ತು ನಿರ್ಲಕ್ಷ್ಯತೆಯಿಂದ ಕಾರು ಚಾಲಕ ವಾಹನ ಓಡಿಸಿದ್ದು ಅಪಘಾತಕ್ಕೆ ಕಾರಣವಾಗಿದೆ ಎಂದಿರುವ ಡಿಸಿಪಿ ಶಿವಪಕ್ರಾಶ್ ದೇವರಾಜ್ ಕಾರು ಚಾಲಕ ಫಿಲಂ ಆ್ಯಕ್ಟರ್ ನಾಗಭೂಷಣ್ ರನ್ನ ಅರೆಸ್ಟ್ ಮಾಡಿ ಸ್ಟೇಷನ್ ಬೇಲ್​ ಮೇಲೆ ಬಿಡುಗಡೆ ಮಾಡಲಾಗಿದೆ. ಮುಂದಿನ ವಿಚಾರಣೆಗೆ ಮತ್ತೆ ಕರೆಯಲಾಗುತ್ತದೆ. ಅತಿ ವೇಗದಿಂದ ಕಾರು ಚಲಾವಣೆ ಮಾಡಿದ್ದೇ ಅಪಘಾತಕ್ಕೆ ಕಾರಣ ಎಂಬುದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ. ರಾತ್ರಿಯೇ ಆಲ್ಕೊ ಹಾಲ್ ಟೆಸ್ಟಿಂಗ್ ಮೀಟರ್ ನಲ್ಲಿ ನಾಗಭೂಷಣ್ ಮದ್ಯ ಸೇವಿಸಿಲ್ಲ ಎಂಬ ಅಂಶ ಪತ್ತೆಯಾಗಿದೆ ಎಂದಿದ್ದಾರೆ.

ಇದನ್ನೂ ಓದಿ: ನಟ ನಾಗಭೂಷಣ್​ ಕಾರು ಅಪಘಾತ; ಪಾದಚಾರಿ ಸಾವು; ಇನ್ನೊಬ್ಬರ ಸ್ಥಿತಿ ಗಂಭೀರ

ನಾಗಭೂಷಣ್​ರ ರಕ್ತದ ಮಾದರಿಯನ್ನು ಪರೀಕ್ಷೆಗೆ ಕಳಿಸಲಾಗಿತ್ತು. ಅಲ್ಲಿಯೂ ಸಹ ನಾಗಭೂಷಣ್ ಮದ್ಯ ಸೇವನೆ ಮಾಡಿಲ್ಲ ಎಂದೇ ವರದಿ ಬಂದಿದೆ. ಪ್ರಸ್ತುತ ಕುಮಾರಸ್ವಾಮಿ ಲೇಔಟ್ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನಾಗಭೂಷಣ್ ವಿರುದ್ಧ ಐಪಿಸಿ ಸೆಕ್ಷನ್ 279 , 337, 304A ಅಡಿ ಕೇಸ್, IPC 279 ನಿರ್ಲಕ್ಷ್ಯತೆ, ರ್ಯಾಷ್ ಡ್ರೈವಿಂಗ್, ಫುಟ್ಪಾತ್ ಮೇಲೆ ಚಾಲನೆ, ಐಪಿಸಿ ಸೆಕ್ಷನ್ 337-ಜೀವಕ್ಕೆ ಹಾನಿ ಮಾಡುವುದು, ಐಪಿಸಿ ಸೆಕ್ಷನ್ 304A ಪ್ರಕರಣಗಣನ್ನು ನಾಗಭೂಷಣ್ ವಿರುದ್ಧ ದಾಖಲಿಸಲಾಗಿದೆ. ಪ್ರಸ್ತುತ ಸ್ಪೇಷನ್ ಬೇಲ್ ಮೇಲೆ ನಾಗಭೂಷಣ್ ಬಿಟ್ಟು ಪೊಲೀಸರು ಕಳಿಸಿದ್ದು, ಮಂಗಳವಾರ ಮಂಗಳವಾರ ಠಾಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ