ಫೆಬ್ರವರಿ 14ಕ್ಕೆ ‘ಪ್ರೇಮಂ ಪೂಜ್ಯಂ’ ಸೀಕ್ವೆಲ್ಗೆ ಚಾಲನೆ; ಚಿತ್ರತಂಡದಿಂದ ಹೊಸ ಅಪ್ಡೇಟ್
ಈ ಚಿತ್ರದ ನಿರ್ದೇಶಕ ಡಾ. ಬಿ.ಎಸ್. ರಾಘವೇಂದ್ರ ಅವರು ‘ಪ್ರೇಮಂ ಪೂಜ್ಯಂ’ನ ಸೀಕ್ವೇಲ್ ಮಾಡಲು ಮುಂದಾಗಿದ್ದಾರೆ. ಈಗಾಗಲೇ ಇದಕ್ಕೆ ಚಿತ್ರಕಥೆಯನ್ನೂ ಸಹ ರೆಡಿ ಮಾಡಿಕೊಂಡಿದ್ದಾರೆ.
ಲವ್ಲಿ ಸ್ಟಾರ್ ಪ್ರೇಮ್ (Prem) ನಟನೆಯ 25ನೇ ಚಿತ್ರವಾಗಿ ತೆರೆಕಂಡ ‘ಪ್ರೇಮಂ ಪೂಜ್ಯಂ’ ಸಿನಿಮಾ ಗೆಲುವು ಕಂಡಿತ್ತು. ಡಾ. ಬಿ.ಎಸ್. ರಾಘವೇಂದ್ರ (Dr Raghavendra BS) ಈ ಚಿತ್ರದ ಕಥೆ ಬರೆದು, ನಿರ್ದೇಶನದ ಜವಾಬ್ದಾರಿ ಹೊತ್ತಿದ್ದರು. ಈಗ ಈ ಚಿತ್ರದ ಸೀಕ್ವೆಲ್ಗೆ ಸಿದ್ಧತೆ ನಡೆದಿದೆ. ‘ಪ್ರೇಮಂ ಪೂಜ್ಯಂ’ ಸಿನಿಮಾದಲ್ಲಿ ನೆನಪಿರಲಿ ಪ್ರೇಮ್ ವೈದ್ಯಕೀಯ ವಿದ್ಯಾರ್ಥಿಯಾಗಿ ಕಾಣಿಸಿಕೊಂಡಿದ್ದರು. ಈ ಸಿನಿಮಾದಲ್ಲಿ ನವಿರಾದ ಪ್ರೇಮ ಕಥೆ ಹೈಲೈಟ್ ಆಗಿತ್ತು. ಈ ಚಿತ್ರ ಕೆಲ ಕಾಲೇಜು ವಿದ್ಯಾರ್ಥಿಗಳಿಗೆ ಇಷ್ಟವಾಗಿತ್ತು. ಸಿನಿಮಾ ರಿಲೀಸ್ ಆಗಿ 2 ತಿಂಗಳು ಪೂರ್ಣಗೊಳ್ಳುವ ಮೊದಲೇ ಸೀಕ್ವೆಲ್ ಬಗ್ಗೆ ಅಪ್ಡೇಟ್ ಬಂದಿದೆ. ಪ್ರೇಮ್ ಅವರ 26ನೇ ಚಿತ್ರವಾಗಿ ‘ಪ್ರೇಮಂ ಪೂಜ್ಯಂ 2′ ಬರಲಿದೆ.
ಈ ಚಿತ್ರದ ನಿರ್ದೇಶಕ ಡಾ. ಬಿ.ಎಸ್. ರಾಘವೇಂದ್ರ ಅವರು ‘ಪ್ರೇಮಂ ಪೂಜ್ಯಂ’ನ ಸೀಕ್ವೇಲ್ ಮಾಡಲು ಮುಂದಾಗಿದ್ದಾರೆ. ಈಗಾಗಲೇ ಇದಕ್ಕೆ ಚಿತ್ರಕಥೆಯನ್ನೂ ಸಹ ರೆಡಿ ಮಾಡಿಕೊಂಡಿದ್ದಾರೆ. ಮುಂದಿನ ಭಾಗದಲ್ಲಿ ಒಂದಷ್ಟು ಕುತೂಹಲಕರ ಕಥೆಯನ್ನು ಬಿಚ್ಚಿಡಲು ಅವರು ನಿರ್ಧರಿಸಿದ್ದಾರೆ ಎನ್ನಲಾಗುತ್ತಿದೆ. ಪ್ರೇಮಿಗಳ ದಿನವಾದ ಫೆಬ್ರವರಿ 14ರಂದು (2022) ‘ಪ್ರೇಮಂ ಪೂಜ್ಯಂ’ ಸೀಕ್ವೆಲ್ಗೆ ಚಾಲನೆ ನೀಡಲು ಚಿತ್ರತಂಡ ನಿರ್ಧರಿಸಿದೆ. ಇನ್ನು ಚಿತ್ರದ ಮೊದಲ ಭಾಗದಲ್ಲಿ ಕೆಲಸ ಮಾಡಿದ್ದ ಬಹುತೇಕ ಕಲಾವಿದರು, ತಂತ್ರಜ್ಞರು ಈ ಚಿತ್ರದಲ್ಲೂ ಮುಂದುವರಿಯಲಿದ್ದಾರೆ ಎನ್ನಲಾಗಿದೆ.
‘ಪ್ರೇಮಂ ಪೂಜ್ಯಂ’ ಚಿತ್ರವನ್ನು ವೀಕ್ಷಿಸಿದ ತಮಿಳು, ತೆಲುಗು ನಿರ್ಮಾಪಕರಿಂದ ರೀಮೇಕ್ ಹಕ್ಕಿಗೆ ಬೇಡಿಕೆ ಬರುತ್ತಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ. ಅಲ್ಲದೆ ಓಟಿಟಿಯಿಂದಲೂ ಉತ್ತಮ ಆಫರ್ ಬರುತ್ತಿದ್ದು, ನಿರ್ಮಾಪಕರು ಸದ್ಯ ಯಾವುದನ್ನೂ ಒಪ್ಪಿಕೊಂಡಿಲ್ಲವಂತೆ.
ಚಿತ್ರದಲ್ಲಿ ಬೃಂದಾ ಆಚಾರ್ಯ ಅವರು ಪ್ರೇಮ್ಗೆ ಜತೆಯಾಗಿಕಾಣಿಸಿಕೊಂಡಿದ್ದು, ಐಂದ್ರಿತಾ ರೇ ಕೂಡ ನಟಿಸಿದ್ದಾರೆ. ಚಿತ್ರದಲ್ಲಿ ಬಹುದೊಡ್ಡ ತಾರಾಗಣವಿದ್ದು ಮಾಸ್ಟರ್ ಆನಂದ್, ಟಿ.ಎಸ್.ನಾಗಾಭರಣ, ಅನು ಪ್ರಭಾಕರ್ ಸೇರಿದಂತೆ ಹಲವರು ನಟಿಸಿದ್ದಾರೆ.
ಚಿತ್ರ ನೋಡಿದ ಬಳಿಕ ಸೆಲೆಬ್ರಿಟಿಗಳು ಪ್ರೇಮ್ ಮತ್ತು ತಂಡದ ಪ್ರಯತ್ನಕ್ಕೆ ಎಲ್ಲರೂ ಮೆಚ್ಚುಗೆ ಸೂಚಿಸಿದ್ದರು. ನಟ ಶರಣ್, ದಿಯಾ ಖ್ಯಾತಿಯ ಖುಷಿ ರವಿ, ತರುಣ್ ಸುಧೀರ್ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಈ ಸಿನಿಮಾ ವೀಕ್ಷಿಸಿ, ಇಷ್ಟಪಟ್ಟಿದ್ದರು.
‘ಹಿಂಗೂ ಲವ್ ಮಾಡಬಹುದಾ? ಕ್ಲೈಮ್ಯಾಕ್ಸ್ನಲ್ಲಿ ಕಣ್ಣೀರು’; ‘ಪ್ರೇಮಂ ಪೂಜ್ಯಂ’ ನೋಡಿದ ಪ್ರೇಕ್ಷಕರ ಪ್ರತಿಕ್ರಿಯೆ
Published On - 4:37 pm, Tue, 21 December 21