ಗಾಯಕ, ಸಂಗೀತ ನಿರ್ದೇಶಕ ಚಂದನ್ ಶೆಟ್ಟಿ ಹಾಗೂ ನಟಿ ನಿವೇದಿತಾ ಗೌಡ (Niveditha Gowda) ಅವರು ಸಿಹಿ ಸುದ್ದಿ ನೀಡಿದ್ದಾರೆ. ತಾವು ಮೊದಲ ಮಗುವಿನ ಆಗಮನದ ನಿರೀಕ್ಷೆಯಲ್ಲಿ ಇರುವ ಬಗ್ಗೆ ವಿಶೇಷ ವಿಡಿಯೋ ಮೂಲಕ ಅವರು ಸುಳಿವು ನೀಡಿದ್ದಾರೆ. Fat + Her ಅಂದರೆ ಏನು ಎಂದು ನಿವೇದಿತಾ ಗೌಡಗೆ ಚಂದನ್ ಶೆಟ್ಟಿ (Chandan Shetty) ಕೇಳಿದ್ದಾರೆ. ಅದಕ್ಕೆ ಉತ್ತರ ‘ಫಾದರ್’! ಹಾಗಾಗಿ ಚಂದನ್ ಶೆಟ್ಟಿ ತಂದೆ ಆಗುತ್ತಿದ್ದಾರೆ ಎಂದು ಫ್ಯಾನ್ಸ್ ಊಹಿಸಿದ್ದಾರೆ. ಕಮೆಂಟ್ಗಳ ಮೂಲಕ ಅವರಿಗೆ ಎಲ್ಲರೂ ಅಭಿನಂದನೆ ತಿಳಿಸುತ್ತಿದ್ದಾರೆ. ನಿವೇದಿತಾ ಗೌಡ ಹಾಗೂ ಚಂದನ್ ಶೆಟ್ಟಿ ಅಭಿಮಾನಿಗಳ ವಲಯದಲ್ಲಿ ಈ ವಿಡಿಯೋ ವೈರಲ್ ಆಗಿದೆ.
‘ಬಿಗ್ ಬಾಸ್ ಕನ್ನಡ ಸೀಸನ್ 5’ ರಿಯಾಲಿಟಿ ಶೋನಲ್ಲಿ ನಿವೇದಿತಾ ಗೌಡ ಹಾಗೂ ಚಂದನ್ ಶೆಟ್ಟಿ ಅವರು ಸ್ಪರ್ಧಿಸಿದ್ದರು. ಅಲ್ಲಿಯೇ ಅವರಿಗೆ ಮೊದಲ ಬಾರಿಗೆ ಪರಿಚಯ ಆಗಿದ್ದು. ನಂತರ ಇಬ್ಬರ ನಡುವೆ ಪ್ರೀತಿ ಚಿಗುರಿತು. 2020ರ ಫೆಬ್ರವರಿಯಲ್ಲಿ ಹಸೆಮಣೆ ಏರಿದರು. ಮೂರು ವರ್ಷಗಳ ಬಳಿಕ ಈ ಜೋಡಿ ಗುಡ್ ನ್ಯೂಸ್ ನೀಡಿದೆ.
ನಿವೇದಿತಾ ಅವರು ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಸಮಯ ಸಿಕ್ಕಾಗೆಲ್ಲ ಅವರು ರೀಲ್ಸ್ ಮಾಡುತ್ತಾರೆ. ಅವರು ಹಂಚಿಕೊಳ್ಳುವ ಫೋಟೋ ಹಾಗೂ ವಿಡಿಯೋಗಳನ್ನು ನೋಡೋಕೆ ಫ್ಯಾನ್ಸ್ಗೂ ಸಾಕಷ್ಟು ಇಷ್ಟ. ಈಗ ಚಂದನ್ ಶೆಟ್ಟಿ ಹಂಚಿಕೊಂಡಿರುವ ಈ ವಿಡಿಯೋ ನೋಡಿ ಅಭಿಮಾನಿಗಳಿಗೆ ಖುಷಿ ಆಗಿದೆ.
ಇದನ್ನೂ ಓದಿ: ವೈರಲ್ ಆಯ್ತು ಸುಂದರಿ ನಿವೇದಿತಾ ಗೌಡ ರೀಲ್ಸ್
ಸ್ಯಾಂಡಲ್ವುಡ್ನಲ್ಲಿ ಚಂದನ್ ಶೆಟ್ಟಿ ಅವರು ಬಹುಬೇಡಿಕೆಯ ಗಾಯಕ ಹಾಗೂ ಸಂಗೀತ ನಿರ್ದೇಶಕನಾಗಿ ಗುರುತಿಸಿಕೊಂಡಿದ್ದಾರೆ. ಅವರ ಮ್ಯೂಸಿಕ್ ವಿಡಿಯೋಗಳು ಸೂಪರ್ ಹಿಟ್ ಆಗಿವೆ. ಹೊಸ ವಿಡಿಯೋದಲ್ಲಿ ಅವರು ಪತ್ನಿ ನಿವೇದಿತಾ ಗೌಡ ಜೊತೆಗೂ ಸ್ಟೆಪ್ ಹಾಕಿದ್ದಾರೆ. ನಟನಾಗಿಯೂ ಅವರು ಬ್ಯುಸಿ ಆಗಿದ್ದಾರೆ. ಹೊಸ ಹೊಸ ಆಫರ್ಗಳು ಅವರನ್ನು ಹುಡುಕಿಕೊಂಡು ಬರುತ್ತಿವೆ.
ಇದನ್ನೂ ಓದಿ: ನಿವೇದಿತಾ ಗೌಡ ರೀಲ್ಸ್ ಕಂಡು ಫ್ಯಾನ್ಸ್ ಫಿದಾ
ಬಿಗ್ ಬಾಸ್ನಲ್ಲಿ ಸ್ಪರ್ಧಿಸಿದ ಬಳಿಕ ನಿವೇದಿತಾ ಗೌಡ ಅವರ ಜನಪ್ರಿಯತೆ ಹೆಚ್ಚಿತು. ಬಗೆಬಗೆಯ ರೀಲ್ಸ್ ಮಾಡುವ ಮೂಲಕ ಅವರು ಲಕ್ಷಾಂತರ ಫಾಲೋವರ್ಸ್ ಹೊಂದಿದ್ದಾರೆ. ‘ಗಿಚ್ಚಿ ಗಿಲಿ ಗಿಲಿ’ ಸೇರಿದಂತೆ ಕಿರುತೆರೆಯ ಅನೇಕ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ಕರುನಾಡಿನಲ್ಲಿ ನಿವೇದಿತಾ ಗೌಡ ಮನೆಮಾತಾಗಿದ್ದಾರೆ. ಈಗ ಅವರು ಗುಡ್ ನ್ಯೂಸ್ ನೀಡಿರುವುದರಿಂದ ಎಲ್ಲರೂ ಅಭಿನಂದನೆ ತಿಳಿಸುತ್ತಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:56 pm, Mon, 9 January 23