ಈ ಸಿನಿಮಾದ ಟೀಸರ್ ನೋಡಿದ ನಂತರ ಹುಡುಗರು ಹೆಮ್ಮೆಯಿಂದ ಶೇರ್ ಮಾಡಿಕೊಂಡು ನಗ್ತೀರಾ, ಹುಡುಗೀರು ಗುಟ್ಟಾಗಿ ಶೇರ್ ಮಾಡ್ತೀರಾ.. ಬರೆದು ಇಟ್ಕೊಳಿ ಎಂದು ಹೆಳಿರುವ ಒಳ್ಳೆ ಹುಡುಗ ಪ್ರಥಮ್ ತಮ್ಮ ಸಿನಿಮಾದ ಟೀಸರ್ನಲ್ಲಿ ಏನೋ ವೈಶಿಷ್ಟ್ಯ ಇದೆ ಎಂದು ಈ ಮೂಲಕ ಕುತೂಹಲ ಹುಟ್ಟುಹಾಕಿದ್ದಾರೆ. ಈ ಟೀಸರ್ ಬಗ್ಗೆ ಧ್ರುವಾ ಸರ್ಜಾ ಕೂಡ ಮಾತನಾಡಿದ್ದು, ಕರ್ನಾಟಕದ ಅಳಿಯ ತುಂಬಾ ಚೆನ್ನಾಗಿದೆ ಎಂದು ಹೇಳಿದ್ದಾರೆ.
ಅಂತೆಯೇ ಪ್ರಥಮ್ ಅಭಿನಯಿಸಿದ ನಟ ಭಯಂಕರ ಚಿತ್ರ ಜೂನ್ ತಿಂಗಳಲ್ಲಿ ತೆರೆ ಕಾಣಲಿದೆ ಎಂದು ಸ್ವತಃ ಒಳ್ಳೆ ಹುಡುಗ ಹೇಳಿಕೊಂಡಿದ್ದಾರೆ. ಚಿತ್ರದ ಮೂಲಕ ಕರ್ನಾಟಕದ ಅಳಿಯ ಆಗುತ್ತಿರುವ ಒಳ್ಳೆ ಹುಡುಗನನ್ನು ಕನ್ನಡ ಚಿತ್ರ ಪ್ರೇಮಿಗಳು ಹೇಗೆ ಸ್ವೀಕರಿಸುತ್ತಾರೆ. ಟೀಸರ್ ಹೇಗೆ ಮೂಡಿಬರಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಸದ್ಯ ಚಂದನವನದಲ್ಲಿ ಒಂದಾದ ಮೇಲೊಂದು ಸಿನಿಮಾ ಸುದ್ದಿ ಹರಿದಾಡುತ್ತಿದ್ದು, ಕೊರೊನಾ ನಂತರ ಚಂದನವನದಲ್ಲಿ ಚಿಗುರು ಮೂಡಿರುವುದು ಸ್ಪಷ್ಟವಾಗಿದೆ. ಇನ್ನು ನಾಳೆ ಪುನೀತ್ ರಾಜ್ಕುಮಾರ್ ಅಭಿನಯದ ಬಹುನಿರೀಕ್ಷಿತ ಚಿತ್ರ ಯುವರತ್ನದ ಊರಿಗೊಬ್ಬ ರಾಜ ವಿಡಿಯೋ ಸಾಂಗ್ ಸಹ ಬಿಡುಗಡೆಯಾಗುತ್ತಿದ್ದು, ಭಾರೀ ನಿರೀಕ್ಷೆ ಮೂಡಿಸಿದೆ.
ಇದನ್ನೂ ಓದಿ: ಯುವರತ್ನ ಸಿನಿಮಾದ ಊರಿಗೊಬ್ಬ ವಿಡಿಯೋ ಸಾಂಗ್ ಬಿಡುಗಡೆಗೆ ಸಜ್ಜು, ಪುನೀತ್ ಧ್ವನಿಯಲ್ಲೇ ಮೂಡಿಬಂದ ಹಾಡು