ಭಾರತದ ಟಾಪ್​ 10 ಹೀರೋ ಪಟ್ಟಿ ರಿಲೀಸ್; ಮಹೇಶ್ ಬಾಬು, ಅಕ್ಷಯ್​ರನ್ನು ಹಿಂದಿಕ್ಕಿದ ಯಶ್

Ormax ಸಂಸ್ಥೆ ಭಾರತದ ಟಾಪ್ 10 ಹೀರೋಗಳ ಪಟ್ಟಿ (ಆಗಸ್ಟ್) ರಿಲೀಸ್ ಮಾಡಿದೆ. ಈ ಪಟ್ಟಿಯಲ್ಲಿ ದಳಪತಿ ವಿಜಯ್ ಮೊದಲ ಸ್ಥಾನದಲ್ಲಿದ್ದಾರೆ. ಕಳೆದ ಕೆಲ ತಿಂಗಳಿಂದ ಅವರೇ ಟಾಪ್ ಒನ್​ನಲ್ಲಿದ್ದಾರೆ.

ಭಾರತದ ಟಾಪ್​ 10 ಹೀರೋ ಪಟ್ಟಿ ರಿಲೀಸ್; ಮಹೇಶ್ ಬಾಬು, ಅಕ್ಷಯ್​ರನ್ನು ಹಿಂದಿಕ್ಕಿದ ಯಶ್
Ormax
TV9kannada Web Team

| Edited By: Rajesh Duggumane

Sep 22, 2022 | 6:30 PM

ಭಾರತ ಒಂದರಲ್ಲೇ ಹಲವು ಚಿತ್ರರಂಗಗಳಿವೆ. ಸ್ಯಾಂಡಲ್​ವುಡ್, ಬಾಲಿವುಡ್, ಕಾಲಿವುಡ್, ಟಾಲಿವುಡ್ ಸೇರಿ ಹಲವು ಇಂಡಸ್ಟ್ರಿಗಳಿವೆ. ಪ್ರತಿ ಚಿತ್ರರಂಗದಲ್ಲೂ ಈಗ ಪ್ಯಾನ್ ಇಂಡಿಯಾ ಸಿನಿಮಾಗಳು ಸಿದ್ಧಗೊಳ್ಳುತ್ತಿವೆ. ಈ ಕಾರಣಕ್ಕೆ ಹಲವು ಸ್ಟಾರ್​​ಗಳು ದೇಶಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ. ‘ಕೆಜಿಎಫ್ 2’ (KGF Chapter 2) ಮೂಲಕ ಖ್ಯಾತಿ ಹೆಚ್ಚಿಸಿಕೊಂಡ ಯಶ್  (Yash) ಅವರನ್ನು ಆರಾಧಿಸುವ ಅನೇಕರು ವಿಶ್ವಾದ್ಯಂತ ಇದ್ದಾರೆ. ಅಲ್ಲು ಅರ್ಜುನ್​, ಪ್ರಭಾಸ್, ರಾಮ್ ಚರಣ್ ಕೂಡ ಅನೇಕರಿಗೆ ಇಷ್ಟ. ಈ ಕಾರಣಕ್ಕೆ ಅನೇಕ ಸಂಸ್ಥೆಗಳು ಸಮೀಕ್ಷೆ ನಡೆಸಿ ಭಾರತದ ಟಾಪ್ 10 ಸೆಲೆಬ್ರಿಟಿಗಳ ಪಟ್ಟಿಯನ್ನು ಬಿಡುಗಡೆ ಮಾಡುತ್ತಿವೆ.

Ormax ಸಂಸ್ಥೆ ಭಾರತದ ಟಾಪ್ 10 ಹೀರೋಗಳ ಪಟ್ಟಿ (ಆಗಸ್ಟ್) ರಿಲೀಸ್ ಮಾಡಿದೆ. ಈ ಪಟ್ಟಿಯಲ್ಲಿ ದಳಪತಿ ವಿಜಯ್ ಮೊದಲ ಸ್ಥಾನದಲ್ಲಿದ್ದಾರೆ. ಕಳೆದ ಕೆಲ ತಿಂಗಳಿಂದ ಅವರೇ ಟಾಪ್ ಒನ್​ನಲ್ಲಿದ್ದಾರೆ. ಅವರಿಗೆ ಹೆಚ್ಚು ವೋಟ್ ಬಿದ್ದಿರುವುದರಿಂದ ಮೊದಲ ಸ್ಥಾನವನ್ನು ಕಾಯ್ದುಕೊಂಡಿದ್ದಾರೆ.

ಇನ್ನು, ಪ್ರಭಾಸ್ ಅವರು ಈ ರೇಸ್​ನಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಪ್ರಭಾಸ್ ಅವರು ಸಾಲು ಸಾಲು ಸೋಲು ಕಾಣುತ್ತಿದ್ದಾರೆ. ಆದಾಗ್ಯೂ ಅವರ ಜನಪ್ರಿಯತೆ ಕಡಿಮೆ ಆಗಿಲ್ಲ. ಈ ಕಾರಣಕ್ಕೆ ಎರಡನೇ ಸ್ಥಾನದಲ್ಲಿ ಪ್ರಭಾಸ್ ಇದ್ದಾರೆ. ಮೂರನೇ ಸ್ಥಾನದಲ್ಲಿ ಜ್ಯೂ.ಎನ್​ಟಿಆರ್ ಹಾಗೂ ನಾಲ್ಕನೇ ಸ್ಥಾನದಲ್ಲಿ ಅಲ್ಲು ಅರ್ಜುನ್ ಇದ್ದಾರೆ. ಜ್ಯೂ.ಎನ್​ಟಿಆರ್​ ನಟನೆಯ ‘ಆರ್​ಆರ್​ಆರ್’ ಹಾಗೂ ಅಲ್ಲು ಅರ್ಜುನ್ ಅಭಿನಯದ ‘ಪುಷ್ಪ’ ಸಿನಿಮಾ ತೆರೆಗೆ ಬಂದು ಸೂಪರ್ ಹಿಟ್ ಆಗಿದೆ.

ಐದನೇ ಸ್ಥಾನದಲ್ಲಿ ರಾಕಿಂಗ್ ಸ್ಟಾರ್ ಯಶ್ ಇದ್ದಾರೆ. ‘ಕೆಜಿಎಫ್ 2’ ಮೂಲಕ ಹಲವು ದಾಖಲೆಗಳನ್ನು ಬರೆದ ಖ್ಯಾತಿ ಯಶ್​ಗೆ ಸಲ್ಲಿಕೆ ಆಗುತ್ತಿದೆ. ಈ ಚಿತ್ರದಿಂದ ಅವರು ಗೆದ್ದು ಬೀಗಿದ್ದಾರೆ. ಹೀಗಾಗಿ, ಟಾಪ್ 10 ಸ್ಥಾನದಲ್ಲಿ ಅವರಿಗೆ ಐದನೇ ಸ್ಥಾನ ಸಿಕ್ಕಿದೆ. ಇದು ಯಶ್ ಫ್ಯಾನ್ಸ್​ಗೆ ಖುಷಿ ನೀಡಿದೆ.

ಇದನ್ನೂ ಓದಿ: ಸದ್ಯಕ್ಕಂತೂ ಸೆಟ್ಟೇರಲ್ಲ ಯಶ್​-ಶಂಕರ್ ಸಿನಿಮಾ; ಕಮಲ್ ಹಾಸನ್ ಟ್ವೀಟ್​ನಲ್ಲೇ ಅಡಗಿದೆ ಉತ್ತರ

ಇದನ್ನೂ ಓದಿ

ಆರನೇ ಸ್ಥಾನದಲ್ಲಿ ಬಾಲಿವುಡ್ ನಟ ಅಕ್ಷಯ್ ಕುಮಾರ್, ಏಳನೇ ಸ್ಥಾನದಲ್ಲಿ ರಾಮ್ ಚರಣ್, ಎಂಟನೇ ಸ್ಥಾನದಲ್ಲಿ ಮಹೇಶ್ ಬಾಬು, 9ರಲ್ಲಿ ತಮಿಳು ನಟ ಸೂರ್ಯ ಹಾಗೂ ಹತ್ತರಲ್ಲಿ ಅಜಿತ್ ಕುಮಾರ್ ಇದ್ದಾರೆ.

Follow us on

Related Stories

Most Read Stories

Click on your DTH Provider to Add TV9 Kannada