ಸದ್ಯಕ್ಕಂತೂ ಸೆಟ್ಟೇರಲ್ಲ ಯಶ್​-ಶಂಕರ್ ಸಿನಿಮಾ; ಕಮಲ್ ಹಾಸನ್ ಟ್ವೀಟ್​ನಲ್ಲೇ ಅಡಗಿದೆ ಉತ್ತರ

ಶಂಕರ್ ಜತೆ ಯಶ್ ಸಿನಿಮಾ ಮಾಡಲಿದ್ದಾರೆ ಎಂಬ ಸುದ್ದಿ ಈ ಮೊದಲಿನಿಂದಲೂ ಹರಿದಾಡುತ್ತಿದೆ. ಆದರೆ, ಈ ವಿಚಾರವನ್ನು ಹೌದು ಎಂದವರು ಯಾರೂ ಇಲ್ಲ, ಅಲ್ಲ ಎಂದವರೂ ಯಾರು ಇಲ್ಲ.

ಸದ್ಯಕ್ಕಂತೂ ಸೆಟ್ಟೇರಲ್ಲ ಯಶ್​-ಶಂಕರ್ ಸಿನಿಮಾ; ಕಮಲ್ ಹಾಸನ್ ಟ್ವೀಟ್​ನಲ್ಲೇ ಅಡಗಿದೆ ಉತ್ತರ
ಯಶ್​-ಶಂಕರ್
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Sep 22, 2022 | 2:39 PM

ಯಶ್ (Yash) ನಟನೆಯ ‘ಕೆಜಿಎಫ್ 2’ ಸಿನಿಮಾ ತೆರೆಗೆ ಬಂದು ಹಲವು ತಿಂಗಳು ಕಳೆದಿದೆ. ಆದರೆ, ಈವರೆಗೆ ಅವರ ಮುಂದಿನ ಸಿನಿಮಾ ಘೋಷಣೆ ಆಗಿಲ್ಲ. ಈ ಬಗ್ಗೆ ಫ್ಯಾನ್ಸ್​ಗೆ ಬೇಸರ ಇದೆ. ಯಶ್ ಮುಂದಿನ ಸಿನಿಮಾ ಬಗ್ಗೆ ಅಪ್​​ಡೇಟ್ ಸಿಗಲಿ ಎಂದು ಫ್ಯಾನ್ಸ್ ನಿತ್ಯ ಕೋರಿಕೊಳ್ಳುತ್ತಿದ್ದಾರೆ. ಇದರ ಜತೆಗೆ ಹಲವು ವದಂತಿಗಳು ಈ ಚಿತ್ರದ ಬಗ್ಗೆ ಹುಟ್ಟಿಕೊಳ್ಳುತ್ತಿವೆ. ಈ ರೀತಿಯ ಸುದ್ದಿಗಳನ್ನು ಕೇಳಿ ಕೇಳಿ ಫ್ಯಾನ್ಸ್ ರೋಸಿ ಹೋಗಿದ್ದಾರೆ. ಈ ಮಧ್ಯೆ ಒಂದು ವಿಚಾರದ ಬಗ್ಗೆ ಫ್ಯಾನ್ಸ್​ಗೆ ಸ್ಪಷ್ಟನೆ ಸಿಕ್ಕಿದೆ. ಅದೂ ಕಮಲ್ ಹಾಸನ್ (Kamal Haasan) ಅವರ ಟ್ವೀಟ್ ಮೂಲಕ ಅನ್ನೋದು ವಿಶೇಷ.

ಶಂಕರ್ ಜತೆ ಯಶ್ ಸಿನಿಮಾ ಮಾಡಲಿದ್ದಾರೆ ಎಂಬ ಸುದ್ದಿ ಈ ಮೊದಲಿನಿಂದಲೂ ಹರಿದಾಡುತ್ತಿದೆ. ಆದರೆ, ಈ ವಿಚಾರವನ್ನು ಹೌದು ಎಂದವರು ಯಾರೂ ಇಲ್ಲ, ಅಲ್ಲ ಎಂದವರೂ ಯಾರು ಇಲ್ಲ. ಹೀಗಾಗಿ ಗಾಸಿಪ್ ಮಂದಿಯ ಬಾಯಲ್ಲಿ ಈ ಸುದ್ದಿ ಆಗಾಗ ಹೊರ ಬೀಳುತ್ತಲೇ ಇರುತ್ತದೆ. ಇತ್ತೀಚೆಗೆ ಈ ವಿಚಾರದ ಬಗ್ಗೆ ಹೆಚ್ಚು ಚರ್ಚೆ ನಡೆಯುತ್ತಿದೆ. ಹೀಗಿರುವಾಗಲೇ ಶಂಕರ್ ಅವರು ‘ಇಂಡಿಯನ್ 2’ ಸಿನಿಮಾದ ಶೂಟಿಂಗ್ ಆರಂಭಿಸಿದ್ದಾರೆ. ಈ ಮೂಲಕ ಯಶ್ ಫ್ಯಾನ್ಸ್​ಗೆ ಒಂದು ವಿಚಾರದಲ್ಲಿ ಸ್ಪಷ್ಟನೆ ಸಿಕ್ಕಂತೆ ಆಗಿದೆ.

‘ಇಂಡಿಯನ್’ ಸಿನಿಮಾ ಹಿಟ್ ಆಗಿತ್ತು. ಹಲವು ವರ್ಷಗಳ ಬಳಿಕ ಈ ಚಿತ್ರಕ್ಕೆ ಸೀಕ್ವೆಲ್ ಸಿದ್ಧವಾಗುತ್ತಿದೆ. ಶಂಕರ್ ನಿರ್ದೇಶನ ಇರುವ ಈ ಚಿತ್ರದಲ್ಲಿ ಕಮಲ್ ಹಾಸನ್ ಅವರು ಮುಖ್ಯಭೂಮಿಕೆಯಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದ ಶೂಟಿಂಗ್ ಕೆಲ ವರ್ಷಗಳ ಹಿಂದೇ ಆರಂಭ ಆಗಿತ್ತು. ಆದರೆ, ಸೆಟ್​ನಲ್ಲಿ ಕ್ರೇನ್ ಅಪಘಾತ ಉಂಟಾಗಿ ಕೆಲವರು ಮೃತಪಟ್ಟರು. ಆ ಬಳಿಕ ಚಿತ್ರದ ಶೂಟಿಂಗ್ ನಿಂತಿತ್ತು. ‘ವಿಕ್ರಮ್’ ಹಿಟ್ ಆದ ಬಳಿಕ ಕಮಲ್ ಹಾಸನ್​ ಅವರು ಈ ಚಿತ್ರವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಶೂಟಿಂಗ್​ನಲ್ಲಿ ತೊಡಗಿಕೊಂಡಿರುವ ಬಗ್ಗೆ ಅವರು ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: ಯಶ್​-ರಾಧಿಕಾ ಸುಂದರ ಫೋಟೋಗಳಲ್ಲಿದೆ ನಿರ್ದೇಶಕ ನಾಗರಾಜ್​ ಸೋಮಯಾಜಿ ಫೋಕಸ್​

ಸಾಮಾನ್ಯವಾಗಿ ಸ್ಟಾರ್ ನಿರ್ದೇಶಕರು ಅದರಲ್ಲೂ ಶಂಕರ್ ಅವರಂತಹ ನಿರ್ದೇಶಕರು ಏಕಕಾಲಕ್ಕೆ ಒಂದೇ ಸಿನಿಮಾ ಶೂಟಿಂಗ್ ಮಾಡೋಕೆ ಆದ್ಯತೆ ನೀಡುತ್ತಾರೆ. ಎರಡೆರಡು ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆದರೆ ಅವರಿಗೇ ತೊಂದರೆ. ಈ ಕಾರಣದಿಂದ ಶಂಕರ್ ಸದ್ಯದ ಮಟ್ಟಿಗಂತೂ ‘ಇಂಡಿಯನ್ 2’ ಶೂಟಿಂಗ್​ನಲ್ಲಿ ತೊಡಗಿಕೊಳ್ಳಲಿದ್ದಾರೆ. ಹೀಗಾಗಿ, ಯಶ್ ಜತೆಗೆ ಅವರು ಸಿನಿಮಾ ಮಾಡುತ್ತಾರೆ ಎಂದಾದರೂ ಅದು ಸದ್ಯಕ್ಕಂತೂ ಸೆಟ್ಟೇರುವುದಿಲ್ಲ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.

ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ