Saravana Dhanapal Death: ಹಾಲೋಮ್ಯಾನ್​ ಶರವಣ ಧನಪಾಲ್​​ ನಿಧನ; ಜನಪ್ರಿಯ ಬಲೂನ್​ ಆಕ್ಟ್​ ಕಲಾವಿದ ಇನ್ನಿಲ್ಲ

Hollow Man Saravana Dhanapal: ಹಲವು ದಿನಗಳಿಂದ ಶರವಣ ಧನಪಾಲ್​ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು. ಕಿಡ್ನಿ ವೈಫಲ್ಯ ಮತ್ತು ಇನ್​ಫೆಕ್ಷನ್​ ಕಾರಣದಿಂದ ಅವರ ಆರೋಗ್ಯ ಸಾಕಷ್ಟು ಹದಗೆಟ್ಟಿತ್ತು.

Saravana Dhanapal Death: ಹಾಲೋಮ್ಯಾನ್​ ಶರವಣ ಧನಪಾಲ್​​ ನಿಧನ; ಜನಪ್ರಿಯ ಬಲೂನ್​ ಆಕ್ಟ್​ ಕಲಾವಿದ ಇನ್ನಿಲ್ಲ
ರಮೇಶ್​ ಮತ್ತು ಯಶ್​ ಜೊತೆ ಶರವಣ ಧನಪಾಲ್
TV9kannada Web Team

| Edited By: Madan Kumar

Sep 22, 2022 | 12:54 PM

ವಿಭಿನ್ನ ಪ್ರತಿಭೆ ಮೂಲಕ ಗುರುತಿಸಿಕೊಂಡಿದ್ದ ಕಲಾವಿದ ಹಾಲೋಮ್ಯಾನ್​ ಶರವಣ ಧನಪಾಲ್​ (Saravana Dhanapal) ನಿಧನರಾಗಿದ್ದಾರೆ. ಹಲವು ಕಡೆಗಳಲ್ಲಿ ವೇದಿಕೆ ಕಾರ್ಯಕ್ರಮ ನೀಡುವ ಮೂಲಕ ಅವರು ಫೇಮಸ್​ ಆಗಿದ್ದರು. ಅವರು ಮಾಡುವ ಬಲೂನ್​ ಆಕ್ಟ್​ ತುಂಬ ಜನಪ್ರಿಯವಾಗಿತ್ತು. ಕಿಡ್ನಿ ವೈಫಲ್ಯದಿಂದ (Kidney Failure) ಹಾಲೋಮ್ಯಾನ್​ ಶರವಣ ಧನಪಾಲ್​ ಇಹಲೋಕ ತ್ಯಜಿಸಿದ್ದಾರೆ ಎಂದು ತಿಳಿದುಬಂದಿದೆ. ಶರವಣ ಧನಪಾಲ್ ಸ್ಟೇಜ್ ಮೇಲೆ ಮಾಡುತ್ತಿದ್ದ ಮೋಡಿಗೆ ಡಾ. ರಾಜ್​ಕುಮಾರ್​, ವಿಷ್ಣುವರ್ಧನ್, ಅಂಬರೀಶ್, ರಜನಿಕಾಂತ್ ಮುಂತಾದ ಸ್ಟಾರ್​ ಹೀರೋಗಳು ಕೂಡ ಫಿದಾ ಆಗಿದ್ದರು. ಇಂಥ ಜನಪ್ರಿಯ ಕಲಾವಿದನ ನಿಧನದಿಂದ (Saravana Dhanapal Death) ಅಭಿಮಾನಿಗಳಿಗೆ ನೋವುಂಟಾಗಿದೆ. ಬುಧವಾರ (ಸೆ.21) ಮಧ್ಯರಾತ್ರಿ ಶರವಣ ಧನಪಾಲ್​ ಕೊನೆಯುಸಿರೆಳೆದರು. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಎಲ್ಲರೂ ಪ್ರಾರ್ಥಿಸುತ್ತಿದ್ದಾರೆ.

ಹಲವು ದಿನಗಳಿಂದ ಶರವಣ ಧನಪಾಲ್​ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು. ಕಿಡ್ನಿ ವೈಫಲ್ಯದ ಬಳಿಕ ಅವರಿಗೆ ಕಿಡ್ನಿ ಕಸಿ ಮಾಡಲಾಗಿತ್ತು. ಆ ನಂತರ ಇನ್​ಫೆಕ್ಷನ್​ ಆಗಿದ್ದರಿಂದ ಅವರ ಆರೋಗ್ಯ ಇನ್ನಷ್ಟು ಹದಗೆಟ್ಟಿತು. ಅದರಿಂದ ಸಾವು ಸಂಭವಿಸಿದೆ.

ಇದನ್ನೂ ಓದಿ

ಹೆಚ್ಚಿನ ಮಾಹಿತಿ ಪಡೆಯಲಾಗುತ್ತಿದೆ. ಅಪ್ಡೇಟ್ ತಿಳಿಯಲು ಪುಟ ರೀಫ್ರೆಶ್ ಮಾಡಿ…

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada