
ಪಾರ್ವತಮ್ಮ ಅವರು ನಿರ್ಮಾಪಕಿ ಆಗಿ ಹೆಚ್ಚು ಗುರುತಿಸಿಕೊಂಡಿದ್ದರು. ಅವರನ್ನು ಅನೇಕರು ರಾಜ್ಕುಮಾರ್ ಪತ್ನಿ ಎಂದು ಗುರುತಿಸುತ್ತಿದ್ದರು. ಯಾವಾಗ ಶಿವರಾಜ್ಕುಮಾರ್ ಚಿತ್ರರಂಗದಲ್ಲಿ ಮಿಂಚಿದರೋ ಆಗ ‘ಶಿವರಾಜ್ಕುಮಾರ್ ಅಮ್ಮ ಇವರು’ ಎಂದು ಗುರುತಿಸಲು ಆರಂಭಿಸಿದರಂತೆ. ಈ ಬಗ್ಗೆ ಪಾರ್ವತಮ್ಮ ಅವರಿಗೆ ಖುಷಿ ಇತ್ತು. ಈ ಬಗ್ಗೆ ಹಳೆಯ ಸಂದರ್ಶನ ಒಂದರಲ್ಲಿ ಮಾತನಾಡಿದ್ದರು. ಇಂದು (ಜುಲೈ 12) ಶಿವರಾಜ್ಕುಮಾರ್ ಜನ್ಮದಿನ. ಈ ವೇಳೆ ಈ ಹಳೆಯ ಘಟನೆಯನ್ನು ನೆನಪಿಸಿಕೊಳ್ಳೋಣ.
ಆಗಿನ ಕಾಲದಲ್ಲಿ ಈ ರೀತಿ ಮಾಧ್ಯಮಗಳು, ಯೂಟ್ಯೂಬ್ ಇರಲಿಲ್ಲ. ಸೆಲೆಬ್ರಿಟಿಗಳು ನೀಡುವ ಸಂದರ್ಶನ ಟಿವಿಯಲ್ಲಿ ಪ್ರಸಾರ ಮಾಡಲು ಕೆಲವೇ ಮಾಧ್ಯಮಗಳು ಇದ್ದವು. ಈಗ ಶಿವರಾಜ್ಕುಮಾರ್ ಹಾಗೂ ಪಾರ್ವತಮ್ಮ ಅವರ ಅಪರೂಪದ ಸಂದರ್ಶನ ಒಂದು ಸಿಕ್ಕಿದೆ. ‘ಆನಂದ್’ ಹಿಟ್ ಆದ ಬಳಿಕ ಶಿವಣ್ಣ ಅವರು ಈ ಸಂದರ್ಶನ ನೀಡಿದ್ದರು.
‘ಶಿವರಾಜ್ಕುಮಾರ್ ತಾಯಿ ಎಂದು ಕೆಲವರು ಹೇಳಿದರು. ಶಿವರಾಜ್ಕುಮಾರ್ ತಾಯಿ ಅಂತೀರಲ್ಲೋ, ಅವರು ಮೊದಲು ರಾಜ್ಕುಮಾರ್ ಪತ್ನಿ ಎಂದು ಅವರಿಗೆ ಹೇಳಲಾಯಿತು. ನನಗೆ ಶಿವರಾಜ್ಕುಮಾರ್ ತಾಯಿ ಎಂದರೂ ಖುಷಿ ಆಗುತ್ತದೆ, ರಾಜ್ಕುಮಾರ್ ಪತ್ನಿ ಎಂದರೂ ಖುಷಿ ಆಗುತ್ತದೆ’ ಎಂದು ಪಾರ್ವತಮ್ಮ ಹೇಳಿದ್ದರು. ‘ಯಾವುದು ಹೆಚ್ಚು, ಯಾವುದು ಕಡಿಮೆ ಎಂದು ಹೇಳಲು ಸಾಧ್ಯವಿಲ್ಲ’ ಎಂದು ಪಾರ್ವತಮ್ಮ ಅವರು ವಿವರಿಸಿದ್ದರು.
ಶಿವರಾಜ್ಕುಮಾರ್ ಅವರು ಬಣ್ಣದ ಲೋಕದಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ. ಈ ಬಾರಿ ಅವರಿಗೆ ಬರ್ತ್ಡೇ ವಿಶೇಷ. ಏಕೆಂದರೆ ಅವರು ಕ್ಯಾನ್ಸರ್ನ ಎದುರಿಸಿ ಬಂದಿದ್ದಾರೆ. ಅವರು ಕ್ಯಾನ್ಸರ್ ಸಂಪೂರ್ಣ ಗೆದ್ದಿರುವುದರಿಂದ ಸಾವು ಗೆದ್ದು ಬಂದಂತೆ ಆಗಿದೆ ಆಗಿದೆ ಎನ್ನಬಹುದು. ಆದರೆ, ಅವರು ದೊಡ್ಡ ಮಟ್ಟದಲ್ಲಿ ಬರ್ತ್ಡೇ ಆಚರಿಸಿಕೊಳ್ಳಲು ಯಾವಾಗಲೂ ಆದ್ಯತೆ ನೀಡುವುದಿಲ್ಲ. ಈ ಬಾರಿಯೂ ಅದೇ ಮುಂದುವರಿಯುವ ಸಾಧ್ಯತೆ ಇದೆ ಎಂದು ಹೇಳಲಾಗಿತ್ತು. ಆದರೆ, ಹಾಗಾಗಿಲ್ಲ. ಅವರು ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಆಚರಿಸಿಕೊಳ್ಳಲಿದ್ದಾರೆ.
ಇದನ್ನೂ ಓದಿ: ಶಿವರಾಜ್ಕುಮಾರ್ ನಿಜಕ್ಕೂ ಬಾಗಿಲು ತೆರೆದಿಲ್ಲವೇ? ಆ ದಿನ ಆಗಿದ್ದನ್ನು ವಿವರಿಸಿದ ಮಡೆನೂರು ಮನು
ಶಿವರಾಜ್ಕುಮಾರ್ ಬರ್ತ್ಡೇ ಪ್ರಯುಕ್ತ ಹೊಸ ಹೊಸ ಸಿನಿಮಾಗಳು ಘೋಷಣೆ ಆಗುತ್ತಿವೆ. ಈ ವಿಚಾರ ಅಭಿಮಾನಿಗಳಿಗೆ ಖುಷಿ ಇದೆ. ಪರಭಾಷೆಯಲ್ಲೂ ಅವರು ನಟಿಸುತ್ತಿದ್ದಾರೆ ಅನ್ನೋದು ವಿಶೇಷ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:34 am, Sat, 12 July 25