AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Ek Love Ya: ಇಂದು ಬಿಡುಗಡೆಯಾಗುತ್ತಿಲ್ಲ ಪ್ರೇಮ್ ನಿರ್ದೇಶನದ ‘ಏಕ್ ಲವ್ ಯಾ’ ಟ್ರೈಲರ್; ಕಾರಣವೇನು?

Prem: ಪ್ರೇಮ್ ನಿರ್ದೇಶನದ ಬಹುನಿರೀಕ್ಷಿತ ‘ಏಕ್ ಲವ್ ಯಾ’ದ ಟ್ರೈಲರ್ ಇಂದು ಸಂಜೆ ಬಿಡುಗಡೆಯಾಗಬೇಕಿತ್ತು. ಆದರೆ ಪ್ರೇಕ್ಷಕರು ಟ್ರೈಲರ್​ಗೆ ಇನ್ನಷ್ಟು ಕಾಲ ಕಾಯಬೇಕಾಗಿದೆ. ಕಾರಣವೇನು?

Ek Love Ya: ಇಂದು ಬಿಡುಗಡೆಯಾಗುತ್ತಿಲ್ಲ ಪ್ರೇಮ್ ನಿರ್ದೇಶನದ ‘ಏಕ್ ಲವ್ ಯಾ’ ಟ್ರೈಲರ್; ಕಾರಣವೇನು?
‘ಏಕ್​ ಲವ್ ಯಾ’ ಪೋಸ್ಟರ್​
TV9 Web
| Edited By: |

Updated on: Jan 04, 2022 | 1:21 PM

Share

ರಕ್ಷಿತಾ ಪ್ರೇಮ್ (Rakshita Prem) ಸಹೋದರ ರಾಣಾ (Rana) ‘ಏಕ್ ಲವ್ ಯಾ’ (Ek Love Ya) ಚಿತ್ರದ ಮೂಲಕ ಸ್ಯಾಂಡಲ್​ವುಡ್​ಗೆ (Sandalwood) ಪದಾರ್ಪಣೆ ಮಾಡುತ್ತಿದ್ದಾರೆ. ಪ್ರೇಮ್ ನಿರ್ದೇಶನದ ಈ ಚಿತ್ರ ಈಗಾಗಲೇ ಹಾಡುಗಳಿಂದ ಬಹುದೊಡ್ಡ ನಿರೀಕ್ಷೆ ಹುಟ್ಟುಹಾಕಿದೆ. ವಾಸ್ತವವಾಗಿ ಇಂದು (ಮಂಗಳವಾರ, ಜ.4) ಚಿತ್ರದ ಟ್ರೈಲರ್ ಬಿಡುಗಡೆ ಮಾಡಲು ಚಿತ್ರತಂಡ ಪ್ಲಾನ್ ಹಾಕಿಕೊಂಡಿತ್ತು. ಮೈಸೂರಿನ ಡಿಆರ್​ಸಿ ಮಾಲ್​ನಲ್ಲಿ ಅದ್ದೂರಿ ಕಾರ್ಯಕ್ರಮ ನಡೆಯಲಿದೆ ಎಂದೂ ತಿಳಿಸಲಾಗಿತ್ತು. ಆದ್ದರಿಂದ ಅಭಿಮಾನಿಗಳು ಚಿತ್ರದ ಟ್ರೈಲರ್​ಗೆ ಕಾತರದಿಂದ ಕಾಯುತ್ತಿದ್ದರು. ಆದರೆ ಅಭಿಮಾನಿಗಳು ಇನ್ನಷ್ಟು ದಿನ ಕಾಯುವುದು ಅನಿವಾರ್ಯವಾಗಿದೆ. ಇದನ್ನು ಸ್ವತಃ ನಿರ್ದೇಶಕ ಪ್ರೇಮ್ (Prem) ಖಚಿತಪಡಿಸಿದ್ದು, ಟ್ರೈಲರ್ ಇಂದು ಬಿಡುಗಡೆಯಾಗುತ್ತಿಲ್ಲ ಎಂದಿದ್ದಾರೆ. 

ಟ್ರೈಲರ್ ಏಕೆ ಬಿಡುಗಡೆಯಾಗುತ್ತಿಲ್ಲ? ನಿರ್ದೇಶಕ ಪ್ರೇಮ್ ಚಿತ್ರದ ಟ್ರೈಲರ್ ಬಿಡುಗಡೆ ಮುಂದೂಡಲ್ಪಟ್ಟಿರುವುದರ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ. ಇದಕ್ಕೆ ತಾಂತ್ರಿಕ ದೋಷ ಕಾರಣ ಎಂದು ಅವರು ಹೇಳಿದ್ದಾರೆ. ‘‘ಜನವರಿ 4ರಂದು ತೆರೆಕಾಣಬೇಕಿದ್ದ ಏಕ್ ಲವ್ ಯಾ ಟ್ರೈಲರ್ ಬಿಡುಗಡೆಯನ್ನು ತಾಂತ್ರಿಕ ದೋಷದಿಂದ ಮುಂದೂಡಲಾಗಿದೆ. ನಿಮ್ಮ ಪ್ರೀತಿ, ನಿರೀಕ್ಷೆ ಹೀಗೆ ಇರಲಿ’’ ಎಂದು ಚಿತ್ರತಂಡ ಬರೆದುಕೊಂಡಿದೆ. ಟ್ರೈಲರ್ ಹಾಗೂ ಚಿತ್ರದ 6ನೇ ಹಾಡು ಸದ್ಯದಲ್ಲೇ ಎಲ್ಲರ ಮುಂದೆ ಬರಲಿದೆ ಎಂದು ಪ್ರೇಮ್ ಭರವಸೆಯನ್ನೂ ನೀಡಿದ್ದಾರೆ.

ಈ ಕುರಿತು ಪ್ರೇಮ್ ಹಂಚಿಕೊಂಡ ಟ್ವೀಟ್ ಇಲ್ಲಿದೆ:

ಜನವರಿ 21ರಂದು ‘ಏಕ್ ಲವ್ ಯಾ’ ತೆರೆಗೆ: ಈಗಾಗಲೇ ‘ಏಕ್ ಲವ್ ಯಾ’ ಚಿತ್ರವನ್ನು ಜನವರಿ 21ರಂದು ಬಿಡುಗಡೆ ಮಾಡುವುದಾಗಿ ಚಿತ್ರತಂಡ ಹೇಳಿಕೊಂಡಿತ್ತು. ಹೊಸ ಪೋಸ್ಟರ್​ನಲ್ಲೂ ಇದನ್ನು ಖಚಿತಪಡಿಸಲಾಗಿದೆ. ‘ಏಕ್ ಲವ್ ಯಾ’ ಚಿತ್ರದಲ್ಲಿ ರಾಣಾ ನಾಯಕನಾಗಿ ಕಾಣಿಸಿಕೊಂಡಿದ್ದು, ರಚಿತಾ ರಾಮ್ ಹಾಗೂ ರೀಷ್ಮಾ ನಾಣಯ್ಯ ಮುಖ್ಯಪಾತ್ರ ನಿಭಾಯಿಸಿದ್ದಾರೆ. ಈಗಾಗಲೇ ಚಿತ್ರದ ಹಾಡುಗಳು ಎಲ್ಲರ ಮನಗೆದ್ದಿದ್ದು, ನಿರೀಕ್ಷೆ ಹುಟ್ಟಿಸಿವೆ.

ಇದನ್ನೂ ಓದಿ:

‘ನಾನು ಸಿಗರೇಟ್​ ಸೇದಿದ್ದಕ್ಕೆ ಕಾರಣ ಇದೆ’; ಬೋಲ್ಡ್​ ದೃಶ್ಯಗಳ ಬಗ್ಗೆ ನೇರವಾಗಿ ಮಾತಾಡಿದ ರಚಿತಾ

ರಜನಿಕಾಂತ್​, ಪ್ರಭಾಸ್ ಸಿನಿಮಾ ಮಾಡೋಕೆ ಕರೆದಿದ್ರು, ನಾನು ಹೋಗಿಲ್ಲ; ಜೋಗಿ ಪ್ರೇಮ್​

Follow Us
ಸಲಾಲ್ ಡ್ಯಾಂನ ಗೇಟ್​ ಓಪನ್ ಮಾಡಿದ ಭಾರತ; ಪಾಕಿಸ್ತಾನ ಕಂಗಾಲು
ಸಲಾಲ್ ಡ್ಯಾಂನ ಗೇಟ್​ ಓಪನ್ ಮಾಡಿದ ಭಾರತ; ಪಾಕಿಸ್ತಾನ ಕಂಗಾಲು
ಗ್ಯಾರಂಟಿ ಪ್ರಾಧಿಕಾರದ ಸಭೆಯಲ್ಲಿ ಮಹತ್ವದ ತೀರ್ಮಾನ: ಚುನಾವಣೆಗೆ ತಯಾರಿ?
ಗ್ಯಾರಂಟಿ ಪ್ರಾಧಿಕಾರದ ಸಭೆಯಲ್ಲಿ ಮಹತ್ವದ ತೀರ್ಮಾನ: ಚುನಾವಣೆಗೆ ತಯಾರಿ?
ಗೃಹಜ್ಯೋತಿ ಫಲಾನುಭವಿಗಳಿಗೆ ಬಿಗ್​ ಅಪ್ಡೇಟ್​:ಪರಿಷ್ಕರಣೆಗೆ ಗಡುವು ವಿಸ್ತರಣೆ
ಗೃಹಜ್ಯೋತಿ ಫಲಾನುಭವಿಗಳಿಗೆ ಬಿಗ್​ ಅಪ್ಡೇಟ್​:ಪರಿಷ್ಕರಣೆಗೆ ಗಡುವು ವಿಸ್ತರಣೆ
ಉಜ್ಬೆಕಿಸ್ತಾನ್‌ ಮಕ್ಕಳ ಬಾಯಲ್ಲಿ ತಾವೇ ಬರೆದ ಕವಿತೆ ಕೇಳಿ ಭಾವುಕರಾದ ಮೋದಿ
ಉಜ್ಬೆಕಿಸ್ತಾನ್‌ ಮಕ್ಕಳ ಬಾಯಲ್ಲಿ ತಾವೇ ಬರೆದ ಕವಿತೆ ಕೇಳಿ ಭಾವುಕರಾದ ಮೋದಿ
BMTC,KSRTC ನಿಲ್ದಾಣಗಳಿಗೆ ದಿಢೀರ್ ಭೇಟಿ, ಪ್ರಯಾಣಿಕರ ಸಮಸ್ಯೆ ಆಲಿಸಿದ ಸಚಿವ
BMTC,KSRTC ನಿಲ್ದಾಣಗಳಿಗೆ ದಿಢೀರ್ ಭೇಟಿ, ಪ್ರಯಾಣಿಕರ ಸಮಸ್ಯೆ ಆಲಿಸಿದ ಸಚಿವ
ಬೆಂಗಳೂರಿನಲ್ಲಿ ಕಳಪೆ ಸಿಹಿ ತಿನಿಸುಗಳ ಮಾರಾಟಕ್ಕೆ ಲಗಾಮು
ಬೆಂಗಳೂರಿನಲ್ಲಿ ಕಳಪೆ ಸಿಹಿ ತಿನಿಸುಗಳ ಮಾರಾಟಕ್ಕೆ ಲಗಾಮು
ಕೆಪಿಎಸ್‌ಸಿ ಅಕ್ರಮದ ಮತ್ತಷ್ಟು ಸ್ಫೋಟಕ ವಿಚಾರಗಳನ್ನ ಬಹಿರಂಗಪಡಿಸಿದ HDK
ಕೆಪಿಎಸ್‌ಸಿ ಅಕ್ರಮದ ಮತ್ತಷ್ಟು ಸ್ಫೋಟಕ ವಿಚಾರಗಳನ್ನ ಬಹಿರಂಗಪಡಿಸಿದ HDK
ಕಿರ್ಗಿಸ್ತಾನದಲ್ಲಿ ಅರ್ಮೇನಿಯಾ ಪ್ರಧಾನಿ ಜೊತೆ ಪಿಎಂ ಮೋದಿ ದ್ವಿಪಕ್ಷೀಯ ಸಭೆ
ಕಿರ್ಗಿಸ್ತಾನದಲ್ಲಿ ಅರ್ಮೇನಿಯಾ ಪ್ರಧಾನಿ ಜೊತೆ ಪಿಎಂ ಮೋದಿ ದ್ವಿಪಕ್ಷೀಯ ಸಭೆ
ನೇಪಾಳ ಪ್ರವಾಹ: ತುಮಕೂರಿನ ರಂಗು ಸುಧೀರ್, ಕೀರ್ತಿ ಆಚಾರ್ಯ ನಾಪತ್ತೆ
ನೇಪಾಳ ಪ್ರವಾಹ: ತುಮಕೂರಿನ ರಂಗು ಸುಧೀರ್, ಕೀರ್ತಿ ಆಚಾರ್ಯ ನಾಪತ್ತೆ
ನೇಪಾಳ ಪ್ರವಾಹ: ಸಂಪರ್ಕಕ್ಕೆ ಸಿಗದ 13 ಕನ್ನಡಿಗರು, ಸಿಎಂ ಹೇಳಿದ್ದೇನು ನೋಡಿ
ನೇಪಾಳ ಪ್ರವಾಹ: ಸಂಪರ್ಕಕ್ಕೆ ಸಿಗದ 13 ಕನ್ನಡಿಗರು, ಸಿಎಂ ಹೇಳಿದ್ದೇನು ನೋಡಿ